ಎಲ್ಲರಿಗೂ ನಮಸ್ಕಾರ. ಕರ್ನಾಟಕ ಜನತೆಗೆ ನಾವು ರೇಷನ್ ಕಾರ್ಡನ್ನು ಆನ್ಲೈನ್ ಮುಖಾಂತರ ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗುವುದು. ಹೌದು ಪಡಿತರ ಚೀಟಿ ಅಥವಾ ರೇಷನ್ ಕಾರ್ಡನ್ನು ನಾವು ಆನ್ಲೈನ್ ಮುಖಾಂತರ ತಮ್ಮ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್, ಲ್ಯಾಪ್ಟಾಪ್ ಗಳಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಮೊದಲಿಗೆ ಆಹಾರ ಇಲಾಖೆಯ ವತಿಯಿಂದ ಒಂದು ಅಫಿಶಿಯಲ್ ವೆಬ್ಸೈಟ್ ಚಲಾವಣೆಯಲ್ಲಿದೆ ಅದನ್ನು ನೀವು ಓಪನ್ ಮಾಡಿಕೊಳ್ಳಬೇಕು. ನಂತರ ಇ-ಸೇವೆಗಳು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಇ -ಪಡಿತರ ಚೀಟಿ, ಇ-ಸ್ಥಿತಿ, ಇ-ನ್ಯಾಯಬೆಲೆ ಅಂಗಡಿ, ಸಾರ್ವಜನಿಕರ ದೂರು ಮತ್ತು ಬಹುಮಾನ ಯೋಜನೆ, ಸೌಕರ್ಯ ಕೇಂದ್ರಗಳು, ಅಂಕಿ ಅಂಶ, ಟೆಂಡರ್ ದರಗಳು, ಹೀಗೆ ಹಲವಾರು ಆಪ್ಷನ್ಗಳು ದೊರೆಯುತ್ತವೆ ಅದರಲ್ಲಿ ನೀವು ಈ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ನಂತರ ಹೊಸ ಅಥವಾ ಹಾಲಿ ಪಡಿತರ ಚೀಟಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಎಂಬ ಮುಖ್ಯಾಂಶವಿರುವ ಪೇಜ್ ಓಪನ್ ಆಗುವುದು.ಅದರಲ್ಲಿ ನಿಮ್ಮ ಜಿಲ್ಲೆ ಇರುವ ಬ್ಲಾಕ್ ಅನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಬೇಕು.ಮುಂದುವರೆದು ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ, ಪಡಿತರ ಚೀಟಿ ವಿವರ, ಪಡಿತರ ಚೀಟಿಯ ಬದಲಾವಣೆ ಕೋರಿಕೆ, ಅರ್ಜಿಯ ಸ್ಥಿತಿ, ಪಡಿತರ ನಿರಾಕರಣೆ ನೋಂದಣಿ ಹೀಗೆ ಹಲವಾರು ಆಪ್ಷನ್ಗಳು ದೊರೆಯುತ್ತವೆ. ಅದರಲ್ಲಿ ನೀವು ಪಡಿತರ ಚೀಟಿ ವಿವರ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
ನಂತರ ನಿಮಗೆ ಒಂದು ವಿನೋಪನಾಗುವುದು ಅದರಲ್ಲಿ ನೀವು ಓಟಿಪಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು ರೇಷನ್ ನಂಬರ್ ಅನ್ನು ಎಂಟರ್ ಮಾಡಲು ಒಂದು ಕಾಲಮ್ ದೊರೆಯುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಎಂಟರ್ ಮಾಡಿಕೊಂಡು ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಹೀಗೆ ಕ್ಲಿಕ್ ಮಾಡಿದ ನಂತರ ನಿಮ್ಮ ರೇಷನ್ ಕಾರ್ಡ್ ಅಲ್ಲಿರುವ ಸದಸ್ಯರ ಹೆಸರುಗಳು ನಿಮಗೆ ಕಾಣುತ್ತದೆ. ಯಾರ ಆಧಾರ್ ಕಾರ್ಡಿಗೆ ನಿಮ್ಮ ರಿಜಿಸ್ಟರ್ ಫೋನ್ ನಂಬರ್ ಲಿಂಕ್ ಆಗಿದಿಯೋ ಆ ಸದಸ್ಯರ ಹೆಸರನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಬೇಕು. ಹೀಗೆ ಸೆಲೆಕ್ಟ್ ಮಾಡಿದ್ದ ನಂತರ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಮುಂದುವರೆದು ಆಧಾರ್ ಕಾರ್ಡಿಗೆ ಲಿಂಕ್ ಆಗಿರುವಂತಹ ಒಂದು ಮೊಬೈಲ್ ನಂಬರಿಗೆ ಆ ಒಟಿಪಿ ಹೋಗಿರುತ್ತದೆ ಆ ಒಟಿಪಿಯನ್ನು ನೀವು ಇಲ್ಲಿ ಎಂಟರ್ ಮಾಡಬೇಕು.
ಸಾಮಾನ್ಯವಾಗಿ ಪಡಿತರ ಚೀಟಿಗೆ ಸಂಬಂಧಿಸಿದ ವಿಷಯದಲ್ಲಿ ಓಟಿಪಿಯು 6 ಸಂಕೇತವಾಗಿರುತ್ತದೆ. ಆ ಆರು ಸಂಖ್ಯೆಯ ಓಟಿಪಿಯನ್ನು ಎಂಟರ್ ಮಾಡಿದ ನಂತರ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ರೇಷನ್ ಕಾರ್ಡಿನ ಸ್ಥಿತಿ ಓಪನ್ ಆಗುವುದು ಅಂದರೆ ರೇಷನ್ ಕಾರ್ಡ್ ಹೇಗೆ ಇರುತ್ತದೆ ಎಂಬ ಸಂಕ್ಷಿಪ್ತ ಮಾಹಿತಿ ದೊರೆಯುತ್ತದೆ ಅದರಲ್ಲಿ ಎಲ್ಲಾ ಸದಸ್ಯರ ಹೆಸರು ಕೂಡ ನೋಂದಾವಣೆ ಆಗಿರುತ್ತದೆ. ನಂತರ ಕೆಳಗಿದ ಭಾಗದಲ್ಲಿ ವ್ಯೂ ರೇಷನ್ ಕಾರ್ಡ್ ಡೀಟೇಲ್ಸ್ ಎಂಬ ಆಪ್ಷನ್ ದೊರೆಯುತ್ತದೆ ಅಂದರೆ ಪಡಿತರ ಚೀಟಿ ವಿವರ ನಿಮಗೆ ದೊರೆಯುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಪಡಿತರ ಚೀಟಿ ನಿಮಗೆ ಕಾಣಿಸುತ್ತದೆ ಆ ಪಡಿತರ ಚೀಟಿಯನ್ನು ನೀವು ಪ್ರಿಂಟ್ ಅಥವಾ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ಸ್ಕ್ರೀನ್ಶಾಟ್ ತೆಗೆದುಕೊಂಡು ನಿಮ್ಮ ಫೋನಿನಲ್ಲಿ ಸೇವ್ ಮಾಡಿಕೊಳ್ಳಬಹುದು ಹೀಗೆ ನೀವು ಪಡಿತರ ಚೀಟಿಯನ್ನು ಅಥವಾ ರೇಷನ್ ಕಾರ್ಡನ್ನು ಯಾವುದೇ ರೀತಿಯ ಖರ್ಚಿಲ್ಲದೆ ಡೌನ್ಲೋಡ್ ಅಥವಾ ಸೇವ್ ಮಾಡಿಕೊಂಡು ಉಪಯೋಗಿಸಬಹುದು.
ಹೀಗೆ ಡೌನ್ಲೋಡ್ ಮಾಡಿಟ್ಟುಕೊಂಡ ರೇಷನ್ ಕಾರ್ಡ್ಗಳನ್ನು ನೀವು ಆನ್ಲೈನ್ ಅರ್ಜಿ ಸಲ್ಲಿಸುವಾಗ ಸರಳವಾಗಿ ಉಪಯೋಗಿಸಬಹುದು. ಹೊಸ ಪಡಿತರ ಚೀಟಿ ಗಾಗಿ ಆನ್ಲೈನ್ ನಲ್ಲಿಯೂ ಕೂಡ ಇತ್ತೀಚಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸರ್ಕಾರವು ಬಡವರಿಗಾಗಿ ರಾಜ್ಯ ಸರ್ಕಾರ ಕಡಿಮೆ ಬೆಲೆಯ ದರ ಇಲ್ಲವೇ ಉಚಿತವಾಗಿ ನೀಡುವ ಈ ಪಡಿತರ ಚೀಟಿಯನ್ನು ನೀವೆಲ್ಲರೂ ಕೂಡ ಡೌನ್ಲೋಡ್ ಮಾಡಿಕೊಳ್ಳುವುದು ಅವಶ್ಯವಾಗಿದೆ. ಇದರ ಜೊತೆಗೆ ಜನರು ಕರ್ನಾಟಕ ಪಡಿತರ ಚೀಟಿ ಫಾರ್ಮ್ ಪಿಡಿಎಫ್ ಡೌನ್ಲೋಡ್ ಅನ್ನು ಮಾಡಬಹುದು.
ಇದು ಇ-ಪಡಿತರ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ. ಇದು ಎಲ್ಲರಿಗೂ ತುಂಬಾ ಉಪಯೋಗವಾಗಿದೆ. ಆದ್ದರಿಂದ ಈ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವ ವಿಧಾನವನ್ನು ಈ ಲೇಖನದ ಮೂಲಕ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಈ ಕೂಡಲೇ ಶೇರ್ ಮಾಡಿ. ಧನ್ಯವಾದಗಳು.
ಇ-ಪಡಿತರ ಚೀಟಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ