ಇಂದಿನ ದಿನಗಳಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸುವುದು ಪೋಷಕರ ಪ್ರಮುಖ ಹೊಣೆಗಾರಿಕೆ. ಹಿಂದಿನ ದಿನಗಳಲ್ಲಿ ಮಕ್ಕಳ ಮದುವೆಯಂತಹ ಗುರಿಗಳಿಗೆ ಪೋಷಕರು ಹಣವನ್ನು ಉಳಿಸುತ್ತಿದ್ದರು. ಆದರೆ, ಇಂದಿನ ಕಾಲದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೇ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಅಲ್ಲದೆ, ಆರೋಗ್ಯ ಸೇವೆಗಳು, ಕಲಿಕೆಗೆ ವಿದೇಶ ಪ್ರಯಾಣ ಇತ್ಯಾದಿಗಳ ಖರ್ಚುಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ, ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ. ಇಂತಹ ಹೂಡಿಕೆಗಳು ಗುರಿ ಆಧಾರಿತವಾಗಿದ್ದು, ದುಡ್ಡನ್ನು ಬೇರೆ ಖರ್ಚುಗಳಿಗೆ ಬಳಕೆಯಾಗದಂತೆ ನಿಗದಿತ ಉದ್ದೇಶಕ್ಕೆ ಕಟ್ಟಿ ಇಡಲು ಸಹಾಯಕವಾಗುತ್ತವೆ. ಆದರೆ, ಮೈನರ್ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವಲ್ಲಿ ಹಲವಾರು ನಿಯಮಗಳು, ಶರತ್ತುಗಳಿವೆ. ಹಾಗಿದ್ದರೆ ಮಕ್ಕಳ ಹೆಸರಲ್ಲಿ ಹೂಡಿಕೆ ಮಾಡುವ ವಿಧಾನ, ನಿಬಂಧನೆಗಳು ಮತ್ತು ಸರಿಯಾದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಶಾಲಾ ಶುಲ್ಕದಿಂದ ವೈದ್ಯಕೀಯ ಶಿಕ್ಷಣದವರೆಗೆ ಎಲ್ಲವೂ ದುಬಾರಿಯಾಗುತ್ತಿರುವ ಈ ದಿನಗಳಲ್ಲಿ, ಹೂಡಿಕೆಗಾಗಿ ಮೊತ್ತವನ್ನು ಹೊಂದುವುದು ಅತ್ಯಗತ್ಯ. ಆದ್ದರಿಂದ ಮಕ್ಕಳ ಹೆಸರಿನಲ್ಲಿ ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಬಹುದಾದ ಹೂಡಿಕೆಯನ್ನು ಮಾಡುವತ್ತ ಹೆಚ್ಚು ಪೋಷಕರ ಗಮನ ಹೋಗುತ್ತಿದೆ.
ಮೈನರ್ ಮಕ್ಕಳ(minor children) ಹೆಸರಲ್ಲಿ ಹೂಡಿಕೆ: ಪ್ರಾಥಮಿಕ ನಿಯಮಗಳು
ಹೀಗಿವೆ,
ಮೈನರ್ (18 ವರ್ಷಕ್ಕೆ ಒಳಪಡುವವರು) ತಮ್ಮ ಹೆಸರಿನಲ್ಲಿ ನೇರವಾಗಿ ಹೂಡಿಕೆ ಮಾಡಲಾಗದು. ಪೋಷಕರು ಅಥವಾ ಕಾನೂನುಬದ್ಧ ಗಾರ್ಡಿಯನ್(Legal guardian) ಹೂಡಿಕೆ ಪ್ರಕ್ರಿಯೆ ನಡೆಸಬೇಕು.
ಗಾರ್ಡಿಯನ್ ಸಾಮಾನ್ಯವಾಗಿ ತಂದೆ ಅಥವಾ ತಾಯಿ ಆಗಿರಬಹುದು. ಪೋಷಕರು ಇಲ್ಲದಿದ್ದರೆ, ಕೋರ್ಟ್ ನೇಮಿಸಿದ ಗಾರ್ಡಿಯನ್ ಅಗತ್ಯವಿರುತ್ತಾನೆ.
ಮಕ್ಕಳ ಜನನ ಪ್ರಮಾಣ ಪತ್ರ, ಗಾರ್ಡಿಯನ್ ಸಂಬಂಧದ ದಾಖಲೆ, ಪ್ಯಾನ್ ಮತ್ತು KYC ದಾಖಲೆಗಳನ್ನು ಸಲ್ಲಿಸುವುದು ಅವಶ್ಯಕ.
ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದಾದ ಪ್ರಮುಖ ಆಯ್ಕೆಗಳು ಕೆಳಗಿಂನಂತಿವೆ:
ಪಿಪಿಎಫ್ (Public Provident Fund) ಖಾತೆ:
ಮೈನರ್ ಹೆಸರಿನಲ್ಲಿ ಪೋಷಕರು ಶುರು ಮಾಡಬಹುದು.
ಒಂದು ಹಣಕಾಸು ವರ್ಷದ ಗರಿಷ್ಠ ಮಿತಿ ₹1.5 ಲಕ್ಷ.
ಲಾಕ್-ಇನ್ ಅವಧಿ 15 ವರ್ಷ.
ಮೈನರ್ ಮೇಜರ್ ಆದ್ಮೇಲೆ, ಖಾತೆಯನ್ನು ಸ್ಥಳಾಂತರಗೊಳಿಸಬೇಕು.
ಸುಕನ್ಯಾ ಸಮೃದ್ಧಿ ಯೋಜನೆ (SSY):
10 ವರ್ಷದೊಳಗಿನ 2 ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ಆರಂಭಿಸಬಹುದು.
ಮದುವೆ ಅಥವಾ ಶಿಕ್ಷಣ ಗುರಿಗಾಗಿ ಉತ್ತಮ ಬಡ್ಡಿದರ.
ಗರಿಷ್ಠ ಹೂಡಿಕೆ ₹1.5 ಲಕ್ಷ ಪ್ರತಿ ವರ್ಷ.
ತೆರಿಗಿ ವಿನಾಯಿತಿ ಸಹಿತ ಉತ್ತಮ ಬಡ್ಡಿದರ ಲಭ್ಯ
ಮ್ಯೂಚುಯಲ್ ಫಂಡ್ಗಳು(Mutual funds):
ಮೈನರ್ ಹೆಸರಿನಲ್ಲಿ ಹೂಡಿಕೆ ಸಾಧ್ಯ.
ಗಾರ್ಡಿಯನ್ ಮೂಲಕ ಹೂಡಿಕೆ ಮಾಡಬೇಕು.
ಜಾರಿಗೆ ಬರುವ ದಾಖಲೆಗಳು: ಜನನ ಪ್ರಮಾಣ ಪತ್ರ, ಪ್ಯಾನ್, ಗಾರ್ಡಿಯನ್ KYC.
ಗುರಿ ಆಧಾರಿತ ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡಬಹುದು (ಉದಾ: ಚೈಲ್ಡ್ ಎಜುಕೇಶನ್ ಫಂಡ್ಗಳು).
ಗೋಲ್ಡ್ ಬಾಂಡ್ ಮತ್ತು ಇಥಿಟಿಎಫ್ (SGB, ETF):
ಮೈನರ್ ಹೆಸರಿನಲ್ಲಿ Sovereign Gold Bonds ಖರೀದಿ ಸಾಧ್ಯ.
ಡಿಮ್ಯಾಟ್ ಖಾತೆ ಅಗತ್ಯ.
ಗಾರ್ಡಿಯನ್ ಅರ್ಜಿದಾರರಾಗಿರಬೇಕು.
ಶೇರು ಮಾರುಕಟ್ಟೆ (Stocks & Demat Account):
ಮೈನರ್ ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆದು ಹೂಡಿಕೆ ಮಾಡಬಹುದು(ಗಾರ್ಡಿಯನ್ ಸಹಕಾರದಿಂದ)..
ಇನ್ಟ್ರಾಡೇಡ್ ಅಥವಾ ಡೆರಿವೇಟಿವ್ ವ್ಯಾಪಾರಕ್ಕೆ ಅನುಮತಿ ಇಲ್ಲ.
ಡೆಲಿವರಿ ಆಧಾರಿತ ಹೂಡಿಕೆ ಮಾತ್ರ ಅನುಮತಿಸಲಾಗಿದೆ.
3-in-1 ಖಾತೆ (ಬ್ಯಾಂಕ್+ಡಿಮ್ಯಾಟ್+ಟ್ರೇಡಿಂಗ್) ಆರಂಭಿಸಬಹುದು.
ರಿಯಲ್ ಎಸ್ಟೇಟ್(Real estate):
ದೀರ್ಘಕಾಲಿಕ ಹೂಡಿಕೆ ಗುರಿಗೆ (10+ ವರ್ಷ) ಅನ್ವಯ.
ಮಕ್ಕಳ ಹೆಸರಿನಲ್ಲಿ ನೇರವಾಗಿ ಖರೀದಿಸುವುದು ಕಠಿಣ, ಪೋಷಕರ ಹೆಸರಿನಲ್ಲಿ ತೆಗೆದುಕೊಂಡು ನಂತರ ವರ್ಗಾವಣೆ ಮಾಡಿಕೊಳ್ಳಬಹುದು.
ಹೂಡಿಕೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಹೂಡಿಕೆ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳು ಯಾವುವು?:
ಗುರಿಯ ಅವಧಿ: ಮಕ್ಕಳ ಶಿಕ್ಷಣ ಅಥವಾ ಮದುವೆಗೆ 10 ವರ್ಷಕ್ಕಿಂತ ಹೆಚ್ಚು ಕಾಲವಿದ್ರೆ, ಇಕ್ವಿಟಿ ಶೇರುಗಳು, ಮಿಡ್ಕ್ಯಾಪ್, ಸ್ಮಾಲ್ಕ್ಯಾಪ್ ಫಂಡುಗಳು ಸೂಕ್ತ
ಹೆಚ್ಚು ಬಡ್ಡಿದರ ಬಯಸುವವರು: ಸುಕನ್ಯಾ ಸಮೃದ್ಧಿ, SGB, ಮ್ಯೂಚುಯಲ್ ಫಂಡ್ ಆಯ್ಕೆ ಮಾಡಬಹುದು.
ಹೂಡಿಕೆಯ ರಿಸ್ಕ್ ನಿಯಂತ್ರಣ: 5–8 ವರ್ಷಗಳ ಗುರಿಗೆ ಡೆಟ್ ಫಂಡ್, ಲಾರ್ಜ್ ಕ್ಯಾಪ್ ಫಂಡ್ಗಳು ಸೂಕ್ತ.
ತ್ವರಿತ ಗುರಿಗೆ: 5 ವರ್ಷದೊಳಗಿನ ಗುರಿಗೆ ಸ್ಟೇಬಲ್ ಡೆಟ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ.
ಗುರಿ ಸ್ಪಷ್ಟತೆ: ಮಕ್ಕಳ ಶಿಕ್ಷಣ, ಮದುವೆ, ವಿದೇಶಿ ವಿದ್ಯಾಭ್ಯಾಸ, ವೈದ್ಯಕೀಯ ನಿರ್ವಹಣೆಯಂತಹ ಗುರಿ ಪ್ರಕಾರ ಹೂಡಿಕೆ ಆಯ್ಕೆ ಮಾಡಿ.
ಗಾರ್ಡಿಯನ್ ಬದಲಾವಣೆ: ಗಾರ್ಡಿಯನ್ ಬದಲಾಗಿದರೆ ಅಗತ್ಯ ದಾಖಲೆಗಳು (ಮರಣ ಪ್ರಮಾಣಪತ್ರ, KYC, ಪ್ಯಾನ್) ಸಲ್ಲಿಸಬೇಕು.
ಮಕ್ಕಳ ಹೆಸರಲ್ಲಿ ಹೂಡಿಕೆ ಮಾಡುವುದು ಪೋಷಕರಿಗೆ ನಿಗದಿತ ಉದ್ದೇಶಕ್ಕಾಗಿ ಹಣವನ್ನು ಉಳಿಸಲು ಸಹಾಯಮಾಡುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ನಿಯಮಿತ ದಾಖಲೆಗಳು, ಸರಿಯಾದ ಯೋಜನೆ ಆಯ್ಕೆ, ಮತ್ತು ಹೂಡಿಕೆ ಅವಧಿಯನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ. ಯೋಜಿತ ಹೂಡಿಕೆಯಿಂದ ಮಕ್ಕಳು ತಮ್ಮ ಭವಿಷ್ಯವನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು.
ಭದ್ರ ಭವಿಷ್ಯಕ್ಕಾಗಿ ಇಂದೇ ಹೂಡಿಕೆ ಆರಂಭಿಸಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.