ಮನೆ ಕರೆಂಟ್ ಬಿಲ್ 200 ಯುನಿಟ್‌ ಗಿಂತ ಹೆಚ್ಚಿಗೆ ಬರುತ್ತಿದೆಯಾ? ಈ 10 ಸಿಂಪಲ್ ಟಿಪ್ಸ್ ಫಾಲೋ ಮಾಡಿ ಹಣ ಉಳಿಸಿ!- Electricity Saving Tips

WhatsApp Image 2025 06 06 at 11.42.57 AM

WhatsApp Group Telegram Group

ಪ್ರತಿ ತಿಂಗಳು ಮನೆಯ ವಿದ್ಯುತ್ ಬಿಲ್ ಹೆಚ್ಚಾಗಿ ಬರುವುದು ಅನೇಕರಿಗೆ ತೊಂದರೆಯಾಗಿದೆ. ವಿದ್ಯುತ್ ದರಗಳು ಏರಿಕೆಯಾಗುತ್ತಿರುವಾಗ, ಸರಿಯಾದ ಬಳಕೆಯಿಂದ ನಾವು ಹಣ ಉಳಿಸಬಹುದು. ಕೆಲವು ಸರಳ ಮತ್ತು ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿ, ನೀವು ಪ್ರತಿ ತಿಂಗಳು ವಿದ್ಯುತ್ ಬಿಲ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.ಇವುಗಳನ್ನು ಒಮ್ಮೆ ಅನುಸರಿಸಿ ನೋಡಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

  • ಕೆಲವೊಮ್ಮೆ ನಮ್ಮ ಬೇಜವಾಬ್ದಾರಿಯಿಂದ ಇಂದ ಕೂಡ ಕರೆಂಟ್ ಬಿಲ್ ಹೆಚ್ಚಾಗಲು ಕಾರಣವಾಗುತ್ತದೆ! ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ, ಮನೆಯಲ್ಲಿ ಬಿಸಿ ನೀರು ಕಾಯಿಸಲು, ನೀರಿನ ಬಕೆಟ್‌ನಲ್ಲಿ ವಾಟರ್ ಹೀಟರ್ ಆನ್ ಮಾಡಿ, ಬೇರೆ ಕೆಲಸದಲ್ಲಿ ತೊಡಗಿಬಿಡುತ್ತೀರಿ. ಹಾಗೆಯೇ ಟಿವಿ ನೋಡುತ್ತಾ ಟೈಮ್‌ ಪಾಸ್ ಮಾಡುತ್ತಾ ಇರುತ್ತೇವೆ.
  • ಅಲ್ಲಿ ನೀರು ಬಿಸಿಯಾಗಿ ಹೊಗೆ ಆಡುತ್ತಿದ್ದರೂ ಕೂಡಾ, ನಮಗೆ ಅದರ ಕಡೆ ಗಮನವೇ ಇರುವುದಿಲ್ಲ! ಆದರೆ ನಿಮಗೆ ಗೊತ್ತಿರಲಿ, ಇಂತಹ ಎಲೆಕ್ಟ್ರಾನಿಕ್ ಹೀಟರ್ ಬಹಳ ವಿದ್ಯುತ್ ಬಿಲ್ ಹೆಚ್ಚಾಗಲು ಕಾರಣವಾಗುವುದು ಅಲ್ಲದೆ, ಕೆಲವೊಮ್ಮೆ ಆಘಾತ ಕೂಡ ಸಂಭವಿಸಲು ಕಾರಣವಾಗಿ ಬಿಡುತ್ತದೆ.
  • ಇನ್ನು ಕೆಲವೊಮ್ಮೆ ನಮಗೆ ಅರಿವಿಲ್ಲದೇ ಲೈಟ್, ಫ್ಯಾನ್ ಮತ್ತು ಎಸಿಯನ್ನು ಎಲ್ಲರೂ ಹಾಗೆ ಬಿಟ್ಟು, ಮನೆಯ ಮನೆಯಿಂದ ಹೊರಗೆ ಬಂದು ನಿಲ್ಲುತ್ತೇವೆ…ಇದೇ ಎಲ್ಲಾ ನಿರ್ಲಕ್ಷ್ಯದಿಂದ, ತಿಂಗಳಿಗೆ ಬರುವ ಮನೆಯ ಕರೆಂಟ್ ಬಿಲ್ ಗಗನಕ್ಕೆ ಹೋಗಿರುತ್ತದೆ.

ಹಾಗೇಯೇ ಮನೆಯ ಕರೆಂಟ್ ಬಿಲ್ ಜಾಸ್ತಿ ಬರುತ್ತಿದ್ದರೇ ತಪ್ಪದೇ ಈ ಕೇಳಗಿರುವ 10 ಪ್ರಮುಖ ಮುಖ್ಯವಾದ ಟ್ರಿಕ್ಸ್ ಗಳನ್ನು ತಪ್ಪದೇ ಅನುಸರಿಸಿ….

1. ಹಳೆಯ ಬಲ್ಬ್‌ಗಳ ಬದಲಿಗೆ LED ಬಳಸಿ

ಮನೆಯಲ್ಲಿ ಆದಷ್ಟು ಹಳೆ ಬಲ್ಬ್‌ಗಳ ಬದಲು ಆದಷ್ಟು ಎಲ್‌ಇಡಿ ಬಲ್ಬ್‌ಗಳನ್ನು ಬಳಸಿ ಹಳೆಯದಾದ ಬಲ್ಬ್‌ಗಳು ಹೆಚ್ಚು ವಿದ್ಯುತ್ ಬಳಸುತ್ತವೆ. ಹೊಸ LED ಬಲ್ಬ್‌ಗಳು 75% ರಷ್ಟು ಕಡಿಮೆ ವಿದ್ಯುತ್ ಬಳಸುತ್ತವೆ ಮತ್ತು ಹೆಚ್ಚು ಕಾಲ ಕೂಡಾ ಬಾಳಿಕೆ ಬರುತ್ತವೆ. ಇವುಗಳನ್ನು ಬಳಸುವುದರಿಂದ ಪ್ರತಿ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಗಮನಾರ್ಹವಾದ ಉಳಿತಾಯ ಸಾಧ್ಯತೆ ಕಂಡಿತಾ ಇದ್ದೇ ಇರುತ್ತದೆ.

ಇಲ್ಲಿ ಎಲ್‌ಇಡಿ ಬಲ್ಬ್‌ಗಳು, ಈಗಿನ ಕಾಲಮಾನದಲ್ಲಿ ಸ್ವಲ್ಪ ದುಬಾರಿಯಾದರೂ ಕೂಡ, ಮುಂದಿನ ದಿನಗಳಲ್ಲಿ ಇದರಿಂದ ಸಾಕಷ್ಟು ಲಾಭಗಳು ಖಂಡಿತ ನಿಮಗೆ ಸಿಕ್ಕೆ ಸಿಗುತ್ತದೆ. ಹೀಗಾಗಿ ಮನೆಯಲ್ಲಿ ಹಳೆಯ ಬಲ್ಬ್ ಗಳು ಹಾಳಾದ ಕೂಡಲೇ ಎಲ್‌ಇಡಿ ಬಲ್ಬ್‌ಗಳನ್ನು ಹಾಕಿಕೊಳ್ಳಿ.

OLD AND NEW

2. 5-ಸ್ಟಾರ್ ರೇಟೆಡ್ ಉಪಕರಣಗಳನ್ನು ಖರೀದಿಸಿ

ಎಲೆಕ್ಟ್ರಿಕ್ ಉಪಕರಣಗಳನ್ನು ಖರೀದಿಸುವಾಗ, 5-ಸ್ಟಾರ್ ಎನರ್ಜಿ ರೇಟಿಂಗ್ ಹೊಂದಿರುವವುಗಳನ್ನು ಗಮನಿಸಿ ಖರೀದಿ ಮಾಡಿ . ಯಾಕೆಂದರೆ ಕಡಿಮೆ ರೇಟಿಂಗ್ ಇರುವ ಯಾವುದೇ ಎಲೆಕ್ಟ್ರಿಕ್ ಉಪಕರಣಗಳು ಜಾಸ್ತಿ ಪ್ರಮಾಣದಲ್ಲಿ ವಿದ್ಯುತ್ ತೆಗೆದುಕೊಳ್ಳುತ್ತದೆ

ಆದ್ದರಿಂದ 5-ಸ್ಟಾರ್ ಎನರ್ಜಿ ರೇಟಿಂಗ್ ಇರುವ ಉಪಕರಂಗಳು ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸಿ, ದೀರ್ಘಕಾಲದಲ್ಲಿ ವಿದ್ಯುತ್ ಉಳಿತಾಯ ಮಾಡುತ್ತವೆ.

RATING

3. ಬಳಕೆಯಿಲ್ಲದಾಗ ಉಪಕರಣಗಳನ್ನು ಆಫ್ ಮಾಡಿ

ಟಿವಿ, ಫ್ಯಾನ್, ಲೈಟ್‌ಗಳನ್ನು ಬಳಸದಿದ್ದರೆ ಸ್ವಿಚ್ ಆಫ್ ಮಾಡಿ. ರಿಮೋಟ್‌ನಿಂದ ಆಫ್ ಮಾಡಿದರೆ ಸ್ಟ್ಯಾಂಡ್ಬೈ ಮೋಡ್‌ನಲ್ಲಿ ವಿದ್ಯುತ್ ವ್ಯಯವಾಗುತ್ತದೆ. ಆದ್ದರಿಂದ, ಮುಖ್ಯ ಸ್ವಿಚ್ ತೆಗೆಯುವುದು ಉತ್ತಮ.

ಟಿವಿ ಆಗಲಿ, ಫ್ಯಾನ್‌ ಆಗಲಿ ಯಾವುದೇ ಎಲೆಕ್ಟ್ರಿಕ್ ಉಪಕರಣಗಳು ರಿಮೋಟ್‌ ನಲ್ಲಿ ಆಫ್‌ ಮಾಡಿದರೂ ಕೂಡಾ ವಿದ್ಯುತ್ ಸರಾಗಮವಾಗಿ ಚಾಲಿಯಲ್ಲಿರುತ್ತದೆ ಈ ಕಾರಣಕ್ಕೆ ನಿಮ್ಮ ವಿದ್ಯುತ್ ಬಿಲ್‌ ಹೆಚ್ಚಿಗೆ ಬರಬಹುದು ಅದಕ್ಕೆ ಡೈರೆಕ್ಟಾಗಿ ಮುಖ್ಯ ಸ್ವಿಚ್ ತೆಗೆಯುವುದು ಉತ್ತಮ ಅಥವಾ ಆಫ್‌ ಮಾಡಿ.

WhatsApp Image 2025 06 05 at 7.11.43 PM

4. ಎಸಿಯನ್ನು 24°C ತಾಪಮಾನದಲ್ಲಿ ನಡೆಸಿ

ಎಸಿಯನ್ನು 24°C ಗೆ ಸೆಟ್ ಮಾಡಿ. ಇದು ಹೆಚ್ಚು ತಂಪಾಗಿರಿಸುವುದಲ್ಲದೆ, ವಿದ್ಯುತ್ ಉಳಿತಾಯಕ್ಕೂ ತುಂಬಾನೆ ಸಹಾಯ ಮಾಡುತ್ತದೆ. ಟೈಮರ್ ಬಳಸಿ, ಅಗತ್ಯವಿರುವ ಸಮಯದಲ್ಲಿ ಮಾತ್ರ ಎಸಿ ಕಾರ್ಯನಿರ್ವಹಿಸುವಂತೆ ಮಾಡಬಹುದು.

ಕೆಲವೊಬ್ಬರು ಮನೆಯಲ್ಲಿ ಫ್ಯಾನ್ ಇದ್ದರೂ ಕೂಡ, ರಾತ್ರಿ ಮಲಗುವಾಗ ಏಸಿ ಹಾಕಿಯೇ ಮಲಗುತ್ತಾರೆ. ಆದರೆ ನಿಮಗೆ ಗೊತ್ತಿರಲಿ, ಏಸಿ ಬಳಕೆಯಿಂದ ಕರೆಂಟ್ ಬಿಲ್ ಜಾಸ್ತಿ ಬರುವುದರ ಜೊತೆಗೆ, ಆರೋಗ್ಯದ ಮೇಲೆ ಇನ್ನಿಲ್ಲದ ಅನಾರೋಗ್ಯದ ಸಮಸ್ಯೆಗಳು ಬರುವ ಅಪಾಯ ತುಂಬಾನೆ ಹೆಚ್ಚಿಗೆ ಇರುತ್ತದೆ. ಹೀಗಾಗಿ ಕೋಲು ಕೊಟ್ಟು ಪೆಟ್ಟು ತಿನ್ನುವ ಬದಲು, ಸಾಧ್ಯವಾದಷ್ಟು ಮಟ್ಟಿಗೆ ಫ್ಯಾನ್ ಬಳಸಿ.

WhatsApp Image 2025 06 06 at 11.23.18 AM

5. ಪವರ್ ಸಾಕೆಟ್ ಬಳಸಿ

ಒಂದೇ ಸಾಕೆಟ್‌ನಲ್ಲಿ ಅನೇಕ ಸಾಧನಗಳನ್ನು ಸಂಪರ್ಕಿಸಬೇಕಾದರೆ, ಪವರ್ ಸ್ಟ್ರಿಪ್ ಬಳಸಿ. ಬಳಕೆಯಿಲ್ಲದಾಗ ಇಡೀ ಸ್ಟ್ರಿಪ್ ಅನ್ನು ಆಫ್ ಮಾಡುವುದರಿಂದ ವಿದ್ಯುತ್ ತುಂಬಾನೆ ಉಳಿತಾಯವಾಗುತ್ತದೆ. ಗಮನಿಸಿ ಸಾಕೇಟ್‌ ಸ್ವಿಚ್‌ ಆಫ್‌ ಮಾಡೋದನ್ನು ಮರಿಯಬೇಡಿ.

WhatsApp Image 2025 06 05 at 7.11.43 PM 1

6. ಎಸಿ ಯುನಿಟ್ ಅನ್ನು ನೆರಳಿನಲ್ಲಿ ಇಡಿ

ಹೊರಗಿನ ಎಸಿ ಯುನಿಟ್ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಂಡರೆ, ಹೆಚ್ಚು ವಿದ್ಯುತ್ ಬಳಸುತ್ತದೆ. ನೆರಳಿನ ಪ್ರದೇಶದಲ್ಲಿ ಅದನ್ನು ಸ್ಥಾಪಿಸುವುದರಿಂದ ವಿದ್ಯುತ್‌ ಉಳಿತಾಯದ ಲಾಭಾಂಶ ಹೆಚ್ಚುತ್ತದೆ.

AC UNIT

7. ಸ್ವಯಂಚಾಲಿತ ಹೀಟ್ ಕಟ್ ಆಫ್ ಇರುವ ಇಸ್ತ್ರಿ ಬಳಸಿ

ಆಟೋಮ್ಯಾಟಿಕ್ ಹೀಟ್ ಕಟ್ ಆಫ್ ವೈಶಿಷ್ಟ್ಯವಿರುವ ಇಸ್ತ್ರಿ ಬಳಸಿದರೆ, ಬಟ್ಟೆಗಳು ಇಸ್ರಿ ಆದ ನಂತರ ಅದು ಸ್ವತಃ ಆಫ್ ಆಗುತ್ತದೆ. ಇದು ವಿದ್ಯುತ್ ವ್ಯಯವನ್ನು ಹೆಚ್ಚಾಗಿ ತಡೆಗಟ್ಟುತ್ತದೆ.

ಆಟೋಮ್ಯಾಟಿಕ್ ಹೀಟ್ ಕಟ್ ಆಫ್ ವೈಶಿಷ್ಟ್ಯವಿರುವ ಇಸ್ತ್ರಿ ಬಳಸಿದ ನಂತರ ಸ್ವಿಚ್‌ ತಗೆಯುವುದನ್ನು ಮರೆಯಬೇಡಿ.

IRON BOX

8. ನೈಸರ್ಗಿಕ ಬೆಳಕು ಮತ್ತು ಗಾಳಿಯನ್ನು ಬಳಸಿ

ಹಗಲಿನಲ್ಲಿ ಕಿಟಕಿಗಳನ್ನು ತೆರೆದಿಡಿ. ಇದರಿಂದ ಲೈಟ್ ಮತ್ತು ಫ್ಯಾನ್ ಬಳಕೆ ಕಡಿಮೆ ಆಗುತ್ತದೆ. ಸೂರ್ಯನ ಬೆಳಕು ಮತ್ತು ಗಾಳಿಯನ್ನು ಹೆಚ್ಚು ಬಳಸುವುದು ಶಕ್ತಿ ಉಳಿತಾಯದ ಉತ್ತಮ ಮಾರ್ಗ.

ಹೊರಗಿನ ತಂಪಾದ ಗಾಳಿಯನ್ನು ತೆಗೆದುಕೊಳ್ಳುವುದರಿಂದ ಆರೋಗ್ಯವು ಕೂಡಾ ಚೆನ್ನಾಗಿರುತ್ತದೆ.

HOME INSIDE

9. ಫ್ರಿಜ್ ಅನ್ನು ಸರಿಯಾಗಿ ನಿರ್ವಹಿಸಿ

  • ಫ್ರಿಜ್ ಅನ್ನು ಗೋಡೆಯಿಂದ ಕನಿಷ್ಠ 6 ಇಂಚು ದೂರದಲ್ಲಿ ಇಡಿ.
  • ಅತಿಯಾಗಿ ತುಂಬಿಸಬೇಡಿ.
  • ತುಂಬಾ ಬಿಸಿ ಆಹಾರವನ್ನು ಫ್ರಿಜ್‌ನಲ್ಲಿ ಇಡಬೇಡಿ.
FRIDGYAA

10. ಸೋಲಾರ್ ಪ್ಯಾನಲ್‌ಗಳನ್ನು ಪರಿಗಣಿಸಿ

ದೀರ್ಘಕಾಲದ ಉಳಿತಾಯಕ್ಕಾಗಿ ಸೋಲಾರ್ ಪ್ಯಾನಲ್‌ಗಳನ್ನು ನಿಮ್ಮ ಮನೆಯ ಮೇಲೆ ಅಳವಡಿಸಿಕೊಳ್ಳಬಹುದು. ಇವು ಹೆಚ್ಚು ಹೂಡಿಕೆ ಬೇಕಾದರೂ, ದೀರ್ಘಾವಧಿಯಲ್ಲಿ ವಿದ್ಯುತ್ ಬಿಲ್‌ಗಳನ್ನು ಹೆಚ್ಚಾಗಿ ಕಡಿಮೆ ಮಾಡುತ್ತವೆ.

PANELL

ಹೀಗಾಗಿ ಸದಾ ನೆನೆಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯ ಏನೆಂದರೆ ನಮ್ಮ ಕೆಲಸ ಮುಗಿದ ಬಳಿಕ ಅಥವಾ ಹೊರಗೆ ಹೋಗುವ ವೇಳೆ, ಮನೆಯ ಫ್ಯಾನ್, ಫ್ರಿಡ್ಜ್ ಆಫ್ ಮಾಡಲು ಮರೆಯದಿರಿ. ಇದರಿಂದ ವಿದ್ಯುತ್‌ ಬಿಲ್‌ ನ ಉಳಿತಾಯ ಆಗುವುದು, ಜೊತೆಗೆ ತಿಂಗಳ ಕೊನೆಗೆ ಕೈ ಸೇರುವ ಕರೆಂಟ್ ಬಿಲ್ ಕೂಡ ಕಡಿಮೆ ಬರುವುದಂತು ಪಕ್ಕಾ

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!