ಪ್ರಜಾಪ್ರಭುತ್ವದ ಹೃದಯಭಾಗದತ್ತ ನಡಿಗೆ: ವಿಧಾನಸೌಧದಲ್ಲಿ ಮಾರ್ಗದರ್ಶಿತ ಪ್ರವಾಸ ಆರಂಭ
ಬೆಂಗಳೂರು ನಗರದ ಕೇಂದ್ರಭಾಗದಲ್ಲಿರುವ ವಿಧಾನಸೌಧ, ಕನ್ನಡ ನಾಡಿನ ಗೌರವದ ಸಂಕೇತ. ತನ್ನ ಭವ್ಯ ವಾಸ್ತುಶಿಲ್ಪ, ರಾಜಕೀಯ ಮಹತ್ವ ಹಾಗೂ ನಿರ್ಣಯಾತ್ಮಕ ಚಟುವಟಿಕೆಗಳ ಕೇಂದ್ರವಿರುವ ಈ ಭವನವನ್ನು ನೂತನವಾಗಿ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗಿದೆ. ಇದುವರೆಗೆ ಶಿಕ್ಷಣಾತ್ಮಕ ಉದ್ದೇಶಗಳು ಅಥವಾ ವಿಶೇಷ ಅನುಮತಿಯೊಂದಿಗೆ ಮಾತ್ರ ಈ ಭವ್ಯ ಕಟ್ಟಡದೊಳಗೆ ಪ್ರವೇಶ ಸಾಧ್ಯವಾಗುತ್ತಿತ್ತು, ಇದೀಗ ಇನ್ನು ಮುಂದೆ ಸಾಮಾನ್ಯ ಪ್ರಜೆಗೂ ಈ ಇತಿಹಾಸದ ಪಾಲು ಅನುಭವಿಸುವ ಅವಕಾಶ ಸಿಕ್ಕಿದೆ. ಇದು ನಮ್ಮ ಪ್ರಜಾಪ್ರಭುತ್ವದ ಮತ್ತೊಂದು ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಕರ್ನಾಟಕದ ಪ್ರಜಾಪ್ರಭುತ್ವದ ಹೃದಯಭಾಗ, ಶಾಸಕರು ಮತ್ತು ಆಡಳಿತಗಾರರು ನಿರ್ಧಾರಗಳನ್ನು ತೆಗೆದುಕೊಳ್ಳುವ ಪವಿತ್ರ ಸ್ಥಳವಾದ ವಿಧಾನಸೌಧ ತನ್ನ ಬಾಗಿಲುಗಳನ್ನು ಸಾರ್ವಜನಿಕರಿಗೆ ತೆರೆಯುತ್ತಿದೆ. ಇದುವರೆಗೆ ಬಹುತೇಕ ಜನರಿಗೆ ಕೇವಲ ದೂರದಿಂದಲೇ ವೀಕ್ಷಿಸಬಹುದಾದ ಈ ಭವ್ಯ ಕಟ್ಟಡವನ್ನು, ಇನ್ನು ಮುಂದೆ ಸಾಮಾನ್ಯ ನಾಗರಿಕರೂ ಒಳಹೊಕ್ಕು ನೇರವಾಗಿ ಅನುಭವಿಸಬಹುದಾಗಿದೆ. ಈಗಾಗಲೇ ಅನೇಕ ಹಳ್ಳಿಗಳಲ್ಲಿಯೂ ಸಹ “ವಿಧಾನಸೌಧ ಎಂದರೆ ಅದನ್ನು ಹತ್ತಿರದಿಂದಲೂ ನೋಡಲು ಸಾಧ್ಯವಿಲ್ಲ” ಎಂಬ ನಂಬಿಕೆ ಇತ್ತು. ಆದರೆ ಜೂನ್ 1ರಿಂದ ಈ ನಂಬಿಕೆಗೆ ತೆರೆ ಬೀಳಲಿದೆ.
ಸಾರ್ವಜನಿಕ ವೀಕ್ಷಣೆಗೆ ಅವಕಾಶ:
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಹೊಸದೊಂದು ಅಧ್ಯಾಯ ಆರಂಭಿಸಿದೆ — ವಿಧಾನಸೌಧ ಮಾರ್ಗದರ್ಶಿತ ಪ್ರವಾಸ (guided tour) ವ್ಯವಸ್ಥೆ. ಇದನ್ನು ಕರ್ನಾಟಕ ವಿಧಾನಸಭೆ ಸ್ಪೀಕರ್ ಕಚೇರಿ (KLASO) ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ರೂಪಿಸಲಾಗಿದೆ. ಇದುವರೆಗೆ ಶಿಕ್ಷಣ ಅಥವಾ ಇತರೆ ಅಧಿಕೃತ ಕಾರಣಗಳಿಗೆ ಮಾತ್ರ ಸೀಮಿತವಾದ ಪ್ರವೇಶವನ್ನು, ಇದೀಗ ಸಾಮಾನ್ಯ ಸಾರ್ವಜನಿಕರಿಗೆ ಸಹ ನೀಡಲಾಗುತ್ತಿದೆ.
ಪ್ರವೇಶ ವಿವರಗಳು ಹೀಗಿವೆ:
ಪ್ರವೇಶ ಶುಲ್ಕ: ತಲಾ ₹50.
ವಯೋಮಿತಿ ವಿನಾಯಿತಿ: 15 ವರ್ಷದೊಳಗಿನ ಮಕ್ಕಳಿಗೆ (ಅಥವಾ 10ನೇ ತರಗತಿಯವರೆಗೆ) ಉಚಿತ ಪ್ರವೇಶ.
ಒಂದು ದಿನದ ಪ್ರವೇಶ ಸಂಖ್ಯೆ: ಸರ್ವೋಚ್ಛ 300 ಮಂದಿಗೆ.
ಪ್ರತಿದಿನದ ಸ್ಲಾಟ್‌ಗಳು: ತಲಾ 30 ಮಂದಿ ಸಾಮರ್ಥ್ಯದ ಮಾರ್ಗದರ್ಶಿತ ಗುಂಪುಗಳಾಗಿ ವಿಂಗಡನೆ.
ಮೌಲಿಕ ಭಾಷೆಗಳು: ಕನ್ನಡ ಮತ್ತು ಇಂಗ್ಲಿಷ್
ಸಮಯ: ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ.
ಪ್ರವಾಸದ ದಿನಗಳು ಬಗ್ಗೆ ನೋಡುವುದಾದರೆ?:
ಸಾರ್ವಜನಿಕರಿಗೆ ಮಾರ್ಗದರ್ಶಿತ ಪ್ರವಾಸವು ಲಭ್ಯವಿರುವ ದಿನಗಳು,
ಎಲ್ಲಾ ಭಾನುವಾರಗಳು.
ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಆದರೆ, ವಿಧಾನಸಭೆ ಅಥವಾ ವಿಧಾನಪರಿಷತ್ ಅಧಿವೇಶನ ನಡೆಯುವ ದಿನಗಳು ಮತ್ತು ಭದ್ರತಾ ಕಾರಣಗಳಿಂದ ಸೂಚಿಸಲಾದ ದಿನಗಳಲ್ಲಿ ಪ್ರವಾಸ ಕೈಗೊಳ್ಳಲಾಗದು.
ಪ್ರವಾಸದ ಮಾರ್ಗ ಮತ್ತು ನಿಯಮಗಳು ಹೀಗಿವೆ:
1.5 ಕಿ.ಮೀ ದೂರದ ಮಾರ್ಗದರ್ಶಿತ ನಡಿಗೆ.
ಸಭಾಂಗಣಗಳು, ಕಾರಿಡಾರ್‌ಗಳು, ಮತ್ತು ಇತಿಹಾಸಪೂರ್ಣ ಸ್ಥಳಗಳನ್ನು ವೀಕ್ಷಿಸುವ ಅವಕಾಶ.
ಸಂಕುಲದೊಳಗೆ ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷಿದ್ಧ.
ಪ್ರವಾಸದ ಟಿಕೆಟ್‌ಗಳನ್ನು ಕೆಳಗಿನ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು,
https://kstdc.co/activities
ಒಟ್ಟಾರೆಯಾಗಿ, ವಿಧಾನಸೌಧದ ಬಾಗಿಲುಗಳು ಈ ಮೊದಲು ಕೆಲವರಿಗೂ ಮಾತ್ರ ತೆರೆದಿದ್ದವು. ಆದರೆ ಈ ಹೊಸ ಉಪಕ್ರಮದೊಂದಿಗೆ, ಪ್ರತಿಯೊಬ್ಬ ನಾಗರಿಕನಿಗೂ ರಾಜ್ಯದ ಆಡಳಿತ, ಇತಿಹಾಸ, ಮತ್ತು ವಾಸ್ತುಶಿಲ್ಪದ ವೈಭವವನ್ನು ಆತ್ಮೀಯವಾಗಿ ಅನುಭವಿಸುವ ಅವಕಾಶ ಸಿಕ್ಕಿದೆ.
ವಿಧಾನಸೌಧವು ನಮ್ಮ ಪ್ರಜಾಪ್ರಭುತ್ವದ ಹೃದಯಭಾಗವಾಗಿದೆ. ಇದರ ಸಭಾಂಗಣಗಳು ಮತ್ತು ಕಾರಿಡಾರ್‌ಗಳನ್ನು ಸಾರ್ವಜನಿಕ ವೀಕ್ಷಣೆಗೆ ತೆರೆಯುವ ಮೂಲಕ, ನಾವು ಇತಿಹಾಸ, ವಾಸ್ತುಶಿಲ್ಪ ಮತ್ತು ಆಡಳಿತವನ್ನು ನೇರವಾಗಿ ಅನುಭವಿಸುವ ಅವಕಾಶವನ್ನು ನೀಡುತ್ತಿದ್ದೇವೆ. ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಇದು ಕೇವಲ ಪ್ರವಾಸವಲ್ಲ, ಇದು ಜನಸಾಮಾನ್ಯರು ತಮ್ಮ ರಾಜ್ಯದ ಆಡಳಿತವ್ಯವಸ್ಥೆಯನ್ನು ನೋಡುವ, ಅರಿಯುವ, ಅದರೊಂದಿಗೆ ಒಡನಾಟ ಸಾಧಿಸುವ ಹೊಸ ಅಧ್ಯಾಯವಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.