ರಾಜ್ಯದಲ್ಲಿ ಮತ್ತೆ ಕೊರೋನಾ ಆತಂಕ, ಸರ್ಕಾರದಿಂದ ಮಾರ್ಗಸೂಚಿ ಪ್ರಕಟ. 

Picsart 25 05 25 08 23 36 0241

WhatsApp Group Telegram Group

ದೇಶಾದ್ಯಂತ ಮತ್ತೆ ಕೊರೊನಾ ಆತಂಕ: ವೃದ್ಧರು, ಗರ್ಭಿಣಿಯರು ಮನೆಯೊಳಗೆ ಇರುವಂತೆ ಆಂಧ್ರ ಸರ್ಕಾರದ ಸೂಚನೆ

ಕೊರೊನಾ ವೈರಸ್ (Corona Virus) ಎಂಬ ಮಹಾಮಾರಿಗೆ ವಿಶ್ವ ಸಾಕ್ಷಿಯಾಗಿದ್ದು ಈಗಾಗಲೇ ಮೂರು ಹಂತಗಳಲ್ಲಿಯೂ ಜನಜೀವನವನ್ನು ತೀವ್ರವಾಗಿ ಪ್ರಭಾವಿಸಿದೆ. ಆತಂಕದ ಹೊಳೆ ಮಾಸಿಕೊಂಡು ಕೆಲ ತಿಂಗಳುಗಳು ಕಳೆದಿದ್ದರೂ, ಇತ್ತೀಚಿನ ಬೆಳವಣಿಗೆಗಳು (Recent changes) ಮತ್ತೆ ದೇಶದಾದ್ಯಂತ ಆತಂಕದ ಮೋಡ ಕವಿದಂತಾಗಿವೆ. ಭಾರತದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ನೋಂದಣಿ ಆಗುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು (State and Central government) ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆಂಧ್ರಪ್ರದೇಶ ಸರ್ಕಾರವು(Andrapradesh government) ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಮುಖ್ಯವಾಗಿ ವೃದ್ಧರು ಮತ್ತು ಗರ್ಭಿಣಿಯರ ಆರೋಗ್ಯವನ್ನು ಕಾಪಾಡುವುದು ಮುಖ್ಯ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೂ (For public) ಹಲವಾರು ಎಚ್ಚರಿಕೆಗಳನ್ನು ನೀಡಲಾಗಿದೆ. ಆಂಧ್ರಪ್ರದೇಶ ಸರ್ಕಾರ ನೀಡಿರುವ ಎಚ್ಚರಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಆಂಧ್ರಪ್ರದೇಶ ಸರ್ಕಾರದ ಪ್ರಕಾರ, 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಹಾಗೂ ಗರ್ಭಿಣಿಯರು ಮನೆಯೊಳಗೆ ಬದ್ಧರಾಗಿರಬೇಕು. ಅವರಿಗೆ ಅನಾವಶ್ಯಕವಾಗಿ ಹೊರಗೆ ಹೋಗದಂತೆ ಸಲಹೆ ನೀಡಲಾಗಿದೆ. ಕೋವಿಡ್‌-19 ಸೋಂಕು (Covid -19 Virus) ಮತ್ತೆ ತಲೆ ಎತ್ತುತ್ತಿರುವ ಹಿನ್ನಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಅನಿವಾರ್ಯವಾಗಿದೆ.

ಸಾಮೂಹಿಕ ಕಾರ್ಯಕ್ರಮಗಳ ಕುರಿತು ಮುನ್ನೆಚ್ಚರಿಕೆ:

ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ (Public places) ನೆರೆದ ಕೂಟಗಳನ್ನು ನಿಲ್ಲಿಸಲು ಸಲಹೆ ನೀಡಿದ್ದು, ಪ್ರಾರ್ಥನಾ ಸಭೆಗಳು, ವೈಯಕ್ತಿಕ ಅಥವಾ ಸಮುದಾಯದ ಸಮಾರಂಭಗಳು, ಪಾರ್ಟಿಗಳು, ಸಾಮಾಜಿಕ ಸಂಭ್ರಮಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಕೋರಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣ ಮತ್ತು ವಿಮಾನ ನಿಲ್ದಾಣದಂತಹ ಭಾರೀ ಜನಸಂಚಾರ ಇರುವ ಪ್ರದೇಶಗಳಲ್ಲಿ ಮಾರ್ಗಸೂಚಿಗಳನ್ನು (guidelines) ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸಲಾಗಿದೆ.

ವೃದ್ಧರು ಹಾಗೂ ಗರ್ಭಿಣಿಯರಿಗಾಗಿ(For the elderly and pregnant women) ವಿಶೇಷ ಸೂಚನೆಗಳು:

ಮನೆಯೊಳಗೆ ಇರಬೇಕು, ಅನಿವಾರ್ಯವಾದ ಸಂದರ್ಭದಲ್ಲಷ್ಟೇ ಹೊರಗೆ ಹೋಗಬೇಕು.
ಕೈಗಳನ್ನು ನಿಯಮಿತವಾಗಿ ಸಾಬೂನು ಅಥವಾ ಸ್ಯಾನಿಟೈಸರ್ (Soap or sanitizer) ಬಳಸಿ ತೊಳೆಯುವುದು.
ಕೆಮ್ಮುವಾಗ ಅಥವಾ ಸೀನುವಾಗ ಬಾಯಿಮುಚ್ಚುವುದು.
ಮುಖವನ್ನು ಕೈಯಿಂದ ಮುಟ್ಟಬಾರದು.
ಜನಸಂಚಾರ ಇರುವ ಸ್ಥಳಗಳಲ್ಲಿ ಮಾಸ್ಕ್(Mask) ಧರಿಸುವುದು ಅನಿವಾರ್ಯ.
ಶ್ವಾಸಕೋಶ ಸಮಸ್ಯೆ ಅಥವಾ ಥಂಡಿ, ಜ್ವರದ ಲಕ್ಷಣಗಳಿದ್ದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು.

ಕೊರೊನಾ ಲಕ್ಷಣಗಳ (Corona symptoms) ಕುರಿತು ಅರಿವು:

ಕೊರೊನಾ ಸೋಂಕಿನ ಪ್ರಮುಖ ಲಕ್ಷಣಗಳು ಹೀಗಿವೆ,
ಜ್ವರ ಅಥವಾ ಶೀತ.
ನಿರಂತರ ಕೆಮ್ಮು.
ಆಯಾಸ.
ಗಂಟಲು ನೋವು.
ರುಚಿ ಅಥವಾ ವಾಸನೆಯ ನಷ್ಟ.
ತಲೆನೋವು, ದೇಹದ ನೋವು.
ಮೂಗು ಹರಿವು ಅಥವಾ ಉಸಿರಾಟದ ತೊಂದರೆ.
ವಾಂತಿ ಅಥವಾ ಅತಿಸಾರ

ಈ ಲಕ್ಷಣಗಳಲ್ಲಿ ಯಾವುದಾದರೂ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ಸಲಹೆ (Medical advice) ಪಡೆಯುವಂತೆ ಸರ್ಕಾರ ಸೂಚಿಸಿದೆ. ಇತರರಿಗೂ ವೈರಸ್ ಹರಡುವ ಮೊದಲು ತಡೆಗಟ್ಟಲು ಈ ಕ್ರಮ ಅವಶ್ಯಕವಾಗಿದೆ.

ಆರೋಗ್ಯ ಇಲಾಖೆಯ ಸಿದ್ಧತೆಗಳು:

ವೈರಸ್ ಮತ್ತೆ ತಲೆದೋರಿದರೆ ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (State government) ಈಗಾಗಲೇ ಸಜ್ಜಾಗಿದ್ದು, ಆಸ್ಪತ್ರೆಗಳಿಗೆ ಪಿಪಿಇ ಕಿಟ್‌ಗಳು, ತ್ರಿಸ್ತರ ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು ಮುಂತಾದ ತುರ್ತು ವಸ್ತುಗಳ ಪೂರೈಕೆ ನಡೆಯುತ್ತಿದೆ. ವೈದ್ಯಕೀಯ ಸಿಬ್ಬಂದಿಗೂ ಮುನ್ನೆಚ್ಚರಿಕೆ ಸೂಚನೆ ನೀಡಲಾಗಿದೆ.

ಪ್ರಸ್ತುತ ಪರಿಸ್ಥಿತಿ ಯಾವರೀತಿಯಿದೆ?:

ಮೇ 19, 2025ರ ಹೊತ್ತಿಗೆ, ಭಾರತದಲ್ಲಿ 257 ಸಕ್ರಿಯ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಆರೋಗ್ಯ ಇಲಾಖೆ(Health department) ದಿನನಿತ್ಯದ ಆಧಾರದ ಮೇಲೆ ಪರಿಸ್ಥಿತಿಯ ಬಗ್ಗೆ ನಿಗಾ ಇಡುತ್ತಿದೆ. ಹೀಗಾಗಿ ಸಾರ್ವಜನಿಕರಲ್ಲಿ ಭೀತಿಗೊಳ್ಳದೆ, ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದರ ಮೂಲಕ ವೈರಸ್ ಹರಡುವಿಕೆಯನ್ನು ತಡೆಹಿಡಿಯಬಹುದು.

ಕೊರೊನಾ ತಡೆಗೆ ಸರ್ಕಾರ ಮತ್ತು ಆರೋಗ್ಯ ಇಲಾಖೆ (Government and Health Department) ಕೈಗೊಳ್ಳುತ್ತಿರುವ ಕ್ರಮಗಳೊಂದಿಗೆ ಸಾರ್ವಜನಿಕರೂ ಸಹಕರಿಸುವುದು ಅಗತ್ಯ. ನಿರ್ಲಕ್ಷ್ಯ(Negligence) ಮರಣಕ್ಕೆ ಕರೆದೊಯ್ಯಬಲ್ಲದು. ಸಹಜ ಜೀವನಕ್ಕೆ ಧಕ್ಕೆಯಾಗದಂತೆ, ಜಾಗೃತೆಯಿಂದ ಮತ್ತು ಸಹಕಾರದಿಂದ ಈ ಸವಾಲಿನ ಸಂದರ್ಭದಲ್ಲಿ ನಾವು ಸಾಗಬೇಕು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!