ಮೇ 25: ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ – 24 ಕ್ಯಾರಟ್ ಚಿನ್ನ ₹9,808ಕ್ಕೆ ಏರಿಕೆ
ನಿನ್ನೆ ಚಿನ್ನದ ಬೆಲೆಯಲ್ಲಿ (Gold rate) ಉಂಟಾದ ಭಾರೀ ಏರಿಕೆ ಭಾರತದ ಹೂಡಿಕೆದಾರರು ಹಾಗೂ ಗ್ರಾಹಕರಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಹೂಡಿಕೆಯಲ್ಲಿ(Investment) ಸುರಕ್ಷತಾ ಆಶ್ರಯವಾಗಿ ಪರಿಗಣಿಸಬಹುದಾದ ಚಿನ್ನದ ಬೆಲೆ ನಿನ್ನೆ ಏಕಾಏಕಿ ₹5,500 ದಿಂದ ಏರಿಕೆಯಾಗಿದ್ದು, 24 ಕ್ಯಾರಟ್ ಚಿನ್ನದ 100 ಗ್ರಾಂ ಬೆಲೆ ₹10 ಲಕ್ಷದ ಸೀಮೆಯತ್ತ ಸಾಗುತ್ತಿದೆ. ಜಾಗತಿಕ ರಾಜಕೀಯ ಬೆಳವಣಿಗೆಗಳು, ಆರ್ಥಿಕ ಅಸ್ಥಿರತೆ ಮತ್ತು ಬದಲಾವಣೆಯಲ್ಲಿರುವ ಬಡ್ಡಿದರ ನೀತಿಗಳು ಈ ಭಾರೀ ಬೆಲೆ ಬದಲಾವಣೆಗೆ ಪ್ರಮುಖ ಕಾರಣಗಳಾಗಿ ಕಾಣಿಸುತ್ತಿವೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 25, 2025: Gold Price Today
ಚಿನ್ನದ ದರದಲ್ಲಿ ಬದಲಾವಣೆಗಳು ಸರ್ವೇಸಾಮಾನ್ಯ. ಈ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಇಳಿಕೆಯತ್ತ ಮುಖ ಮಾಡುವಂತಹ ಚಿನ್ನದ ದರ ಮತ್ತೆರಡು ದಿನ ಏರಿಕೆಯತ್ತ ಮುಖ ಮಾಡುತ್ತದೆ. ಹೌದು ನೆನ್ನೆ ಇಳಿಕೆಯಾದಂತಹ ಚಿನ್ನದ ದರ ಇದೀಗ ದಿಢೀರ್ ಏರಿಕೆಯತ್ತ ಮುಖ ಮಾಡಿದೆ. ಇದರಿಂದ ಗ್ರಾಹಕರು ಚಿಂತೆಗೀಡಾಗಿದ್ದಾರೆ. ಯಾವ ಸಮಯದಲ್ಲಿ ಚಿನ್ನದ ದರ ಯಾವ ರೀತಿ ಇರುತ್ತದೆ ಎಂದು ಊಹಿಸುವುದು ಕೂಡ ಕಷ್ಟವಾಗುತ್ತಿದೆ. ಹಾಗಿದ್ದರೆ, ಮೇ 25, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,990 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,808 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,356 ಆಗಿದೆ. ಒಟ್ಟಾರೆಯಾಗಿ, 56ರೂ. ನಷ್ಟು ಏರಿಕೆಯನ್ನು ಕಂಡಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ:, 99,900 ರೂ. ನಷ್ಟಿದೆ.
ಚಿನ್ನದ ಬೆಲೆ ಏರಿಕೆಯ ಹಿನ್ನಲೆ ಏನು?:
ಇತ್ತೀಚೆಗೆ ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ತೀವ್ರತೆ ಕಡಿಮೆಯಾಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ(Global market) ಚಿನ್ನದ ಬೆಲೆ ತೀವ್ರ ಏರಿಳಿತ ಕಾಣುತ್ತಿದೆ. ಅಮೆರಿಕ ಹಾಗೂ ಚೀನಾ ನಡುವಿನ ವ್ಯಾಪಾರ ಸಂಬಂಧದಲ್ಲಿ ಸುಂಕದ (Tax) ಸಡಿಲಿಕೆಗೂ ಸಹ ಚಿನ್ನದ ಮೌಲ್ಯದಲ್ಲಿ ಬದಲಾವಣೆಗಳು ಸಂಭವಿಸುತ್ತಿವೆ. ಇವುಗಳ ಜೊತೆಗೆ ರೂಪಾಯಿ ಮೌಲ್ಯ ಕುಸಿತವೂ ಚಿನ್ನದ ಬೆಲೆಗೆ ತೀವ್ರ ಪ್ರಭಾವ ಬೀರುತ್ತಿದೆ. ಈ ಎಲ್ಲ ಅಂಶಗಳು ಹೂಡಿಕೆದಾರರಲ್ಲಿ ಗೊಂದಲ ಮತ್ತು ನಿರ್ಧಾರಾತ್ಮಕ ಭೀತಿಯನ್ನು ಉಂಟುಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಹೂಡಿಕೆ ಮಾಡಬೇಕೆ ಅಥವಾ ಕಾಯಬೇಕೆ ಎಂಬ ಪ್ರಶ್ನೆ ಗ್ರಾಹಕರಲ್ಲಿ ಕಾಡುತ್ತಿದೆ.
ಮೇ 24, 2025ರ ಚಿನ್ನದ ದರ:
24 ಕ್ಯಾರಟ್ ಚಿನ್ನದ ಬೆಲೆ,
1 ಗ್ರಾಂ – ₹9,808
10 ಗ್ರಾಂ – ₹98,080
100 ಗ್ರಾಂ – ₹9,80,800 (₹5,500 ಏರಿಕೆ)
22 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ – ₹8,990
10 ಗ್ರಾಂ – ₹89,900
100 ಗ್ರಾಂ – ₹8,99,000
(₹5,000 ಏರಿಕೆ)
18 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ – ₹7,356
10 ಗ್ರಾಂ – ₹73,560
100 ಗ್ರಾಂ – ₹7,35,600
(₹4,100 ಏರಿಕೆ)
ಪ್ರಮುಖ ನಗರಗಳಲ್ಲಿ 1 ಗ್ರಾಂ ಚಿನ್ನದ ದರ :
ಬೆಂಗಳೂರು/ಹೈದರಾಬಾದ್/ಚೆನ್ನೈ/ಮುಂಬೈ/ಕೋಲ್ಕತಾ:
24 ಕ್ಯಾರಟ್: ₹9,808
22 ಕ್ಯಾರಟ್: ₹8,990
18 ಕ್ಯಾರ್ಟ್: ₹7,356
ದೆಹಲಿ:
24 ಕ್ಯಾರಟ್: ₹9,823
22 ಕ್ಯಾರಟ್: ₹9,005
18 ಕ್ಯಾರಟ್: ₹7,368
ಬರೋಡಾ/ಅಹಮದಾಬಾದ್:
24 ಕ್ಯಾರಟ್: ₹9,813
22 ಕ್ಯಾರಟ್: ₹8,995
18 ಕ್ಯಾರಟ್: ₹7,360
ಬೆಳ್ಳಿಯ ದರ ಇಳಿಕೆ:
1 ಗ್ರಾಂ – ₹99.90
10 ಗ್ರಾಂ – ₹999
100 ಗ್ರಾಂ – ₹9,990
1 ಕೆ.ಜಿ – ₹99,900
(₹100 ಇಳಿಕೆ)
ಸ್ಪಾಟ್ ಚಿನ್ನದ (Spot gold) ಮೌಲ್ಯ:
ಮೇ 23ರಂದು ಸ್ಪಾಟ್ ಚಿನ್ನದ ದರವು 0.80% ಏರಿಕೆಯಾಗಿ ಪ್ರತಿ ಔನ್ಸ್‌ಗೆ $3,320.49 ಆಗಿದೆ.
ಒಂದು ವಾರ ಹಿಂದಿನ ವಿವರ ಪ್ರಕಾರ (ಮೇ 16), ಸ್ಪಾಟ್ ಚಿನ್ನದ ದರವು 0.8% ಇಳಿಕೆಯಾಗಿದ್ದು, $3,213.56ಗೆ ವ್ಯಾಪಾರವಾಗುತ್ತಿತ್ತು.
ಚಿನ್ನದ ಬೆಲೆ ಏರಿಕೆ-ಇಳಿಕೆಯ ಪ್ರಮುಖ ಕಾರಣಗಳು (Causes) ಏನು?:
1. ಆರ್ಥಿಕ ಅಸ್ಥಿರತೆ: ಆರ್ಥಿಕ ಭದ್ರತೆಗಾಗಿ ಹೂಡಿಕೆದಾರರು ಚಿನ್ನವನ್ನು ಆರಿಸುತ್ತಾರೆ.
2. ಜಿಯೋಪಾಲಿಟಿಕಲ್ ಅಶಾಂತಿ: ಯುದ್ಧಗಳು, ವ್ಯಾಪಾರ ತಕರಾರುಗಳು ಇವುಗಳು ನೇರವಾಗಿ ಬೆಲೆ ಮೇಲೆ ಪರಿಣಾಮ ಬೀರುತ್ತವೆ.
3. ಕರೆನ್ಸಿ (Currency) ಮೌಲ್ಯ ಕುಸಿತ: ರೂಪಾಯಿ ಅಥವಾ ಡಾಲರ್ ಮೌಲ್ಯ ಕುಸಿತದಿಂದ ಚಿನ್ನದ ಮೌಲ್ಯ ಏರುತ್ತದೆ.
4. ಅಂತರರಾಷ್ಟ್ರೀಯ (International) ಬೇಡಿಕೆ ಮತ್ತು ಉತ್ಪಾದನೆ ಕಡಿತ: ಜಾಗತಿಕ ಬೇಡಿಕೆ ಹೆಚ್ಚಾದರೆ ಅಥವಾ ಚಿನ್ನ ಉತ್ಪಾದನೆ ಕಡಿಮೆಯಾದರೆ ಬೆಲೆ ಏರಿಕೆ ಖಚಿತ.
ಹೂಡಿಕೆದಾರರಿಗೆ ಸಲಹೆ:
ಇಂತಹ ಪರಿಸ್ಥಿತಿಯಲ್ಲಿ ಹೂಡಿಕೆದಾರರು ಬಹು ಎಚ್ಚರಿಕೆಯಿಂದ ಚಿನ್ನದ ಹೂಡಿಕೆಗೆ (Gold investment) ಮುಂದಾಗಬೇಕು. ಬೆಲೆ ಇನ್ನಷ್ಟು ಏರಬಹುದು ಎಂಬ ನಿರೀಕ್ಷೆ ಇದ್ದು, ಹೂಡಿಕೆಗೆ ಮುನ್ನುಡಿ ಇಡುವ ಮುನ್ನ ಜಾಗತಿಕ ಬೆಳವಣಿಗೆಗಳು, ಬಡ್ಡಿದರ ನೀತಿಗಳು (Interest values) ಹಾಗೂ ರೂ. ಮೌಲ್ಯ ಗಮನದಲ್ಲಿಟ್ಟುಕೊಳ್ಳುವುದು ಬಹು ಮುಖ್ಯ.
2025ರ ಮೇ 24ರಂದು ಚಿನ್ನದ ಮೌಲ್ಯದಲ್ಲಿ ಉಂಟಾದ ಈ ತೀವ್ರ ಬದಲಾವಣೆ, ದೇಶೀಯ ಹೂಡಿಕೆ ತಂತ್ರಗಳ ಮೇಲೆ ಸ್ಪಷ್ಟವಾಗಿ ತನ್ನ ಪ್ರಭಾವ ಬೀರಲಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




