ಕೇಂದ್ರದಿಂದ ಸ್ವಂತ ಮನೆ ಇಲ್ಲದವರಿಗೆ ಬಂಪರ್ ಗುಡ್ ನ್ಯೂಸ್ ; PMAY ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ.! 

Picsart 25 05 18 23 17 15 693

WhatsApp Group Telegram Group

ಸ್ವಂತ ಮನೆಯ ಕನಸು ಹೊತ್ತವರಿಗೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿ! ಡಿಸೆಂಬರ್ 2025ರವರೆಗೆ ವಿಸ್ತರಿಸಿದ PMAY ಯೋಜನೆ

ಮನುಷ್ಯನ ಬದುಕಿನಲ್ಲಿ ತನ್ನದೇ ಆದ ಮನೆಯ ಕನಸು ಎಲ್ಲಕ್ಕಿಂತ ದೊಡ್ಡದು. ಅದು ಕೇವಲ ಅಗತ್ಯವಷ್ಟೇ ಅಲ್ಲ, ಭದ್ರತೆಯ ಸಂಕೇತವೂ ಹೌದು. ಈ ಕನಸು ನೂರಾರು ಲಕ್ಷ ಮಂದಿಗೆ ನಿಜವಾಗುತ್ತಿರುವುದು ಕೇಂದ್ರ ಸರ್ಕಾರದ (Central government) ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಮೂಲಕ. ಈ ಯೋಜನೆ ದೇಶದ ಆರ್ಥಿಕವಾಗಿ ದುರ್ಬಲ ಮತ್ತು ಮನೆಯಿಲ್ಲದ ಕುಟುಂಬಗಳಿಗೆ ತಮ್ಮದೇ ಆದ ಪಕ್ಕಾ ನಿವಾಸ ಒದಗಿಸುವ ಉದ್ದೇಶದೊಂದಿಗೆ ರೂಪುಗೊಂಡಿದೆ. ಹಾಗಿದ್ದರೆ ಈ ಯೋಜನೆಯ ಪ್ರಮುಖ ಅಂಶಗಳು (Important elements) ಏನು? ಅನರ್ಹತೆಯ ಮಾನದಂಡಗಳು ಯಾವುವು? PMAY-G ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಭಾರತದಲ್ಲಿ ಲಕ್ಷಾಂತರ ಜನರು ಇನ್ನೂ ತಮ್ಮದೇ ಆದ ಸ್ವಂತ ಮನೆಯ ಕನಸನ್ನು ಸಾಕಾರಗೊಳಿಸಿಕೊಂಡಿಲ್ಲ. ಬಡತನ, ಆರ್ಥಿಕ ಅಸಮಾನತೆ, ನಗರೀಕರಣದ ಜಟಿಲತೆ ಹಾಗೂ ಇತರೆ ಹಲವಾರು ಕಾರಣಗಳಿಂದ ತಮ್ಮ ಕುಟುಂಬಗಳಿಗೆ ಪಕ್ಕಾ ಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರವು ಜನಸಾಮಾನ್ಯರ ವಾಸಸ್ಥಳದ ಅವಶ್ಯಕತೆ(The need for housing for the common people) ಪೂರೈಸುವ ಉದ್ದೇಶದಿಂದ ಆರಂಭಿಸಿದ್ದ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY), ನಿರಂತರವಾಗಿ ಲಕ್ಷಾಂತರ ಜನರ ಬದುಕಿನಲ್ಲಿ ಶಾಶ್ವತ ಬದಲಾವಣೆಯನ್ನೂ ತಂದಿದೆ.

ಇದೀಗ, ಈ ಮಹತ್ವಾಕಾಂಕ್ಷೆಯ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದ್ದು, PMAY ಯೋಜನೆಯ ನೋಂದಣಿ ಗಡುವನ್ನು ಡಿಸೆಂಬರ್ 2025ರವರೆಗೆ ವಿಸ್ತರಿಸಿದೆ. ಇದು ಸ್ವಂತ ಮನೆಯ ಕನಸು ಕಾಣುವ ಸಾವಿರಾರು ಕುಟುಂಬಗಳಿಗೆ ಮತ್ತೊಂದು ಅವಕಾಶ ನೀಡಿದೆ.

PMAY ಯೋಜನೆಯ ಪ್ರಮುಖ ಅಂಶಗಳು(Elements):

ಯೋಜನೆಯ ಪ್ರಗತಿ: ಅಧಿಕೃತ PMAY ವೆಬ್‌ಸೈಟ್ ಪ್ರಕಾರ ಈಗಾಗಲೇ 92.61 ಲಕ್ಷಕ್ಕೂ ಅಧಿಕ ಮನೆಗಳು ನಿರ್ಮಾಣಗೊಂಡಿವೆ. ಯೋಜನೆಯ ಪರಿಣಾಮದಿಂದ ಅನೇಕರು ನೈಸರ್ಗಿಕ ಹಾಗೂ ಆರ್ಥಿಕ(Natural and economic) ಅನಿಶ್ಚಿತತೆಯಿಂದ ಮುಕ್ತರಾಗಿದ್ದಾರೆ.

ಲಕ್ಷ್ಯ ಗುಂಪುಗಳು: ಈ ಯೋಜನೆ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಬಿಪಿಎಲ್ (Below Poverty Line) ಕುಟುಂಬಗಳಿಗೆ ಆದ್ಯತೆ ನೀಡುತ್ತದೆ. ಇವರಿಗೆ ಪಕ್ಕಾ ಮನೆಗಳ ಕನಸು ನಿಜವಾಗಲು ಸಹಾಯವಾಗುತ್ತಿದೆ.

PMAY-U (ನಗರ ವಸತಿ ಯೋಜನೆ) ಅರ್ಹತೆ:
ವಾರ್ಷಿಕ ಆದಾಯ ಶ್ರೇಣಿಗಳು,
₹3 ಲಕ್ಷದವರೆಗೆ
₹3-6 ಲಕ್ಷ
₹6-9 ಲಕ್ಷ
ಈ ಎಲ್ಲ ಶ್ರೇಣಿಯಲ್ಲಿದ್ದರೂ, ಮನೆಯಿಲ್ಲದವರು ಅರ್ಹರಾಗುತ್ತಾರೆ.

ಕೊಳೆಗೇರಿಗಳ ನಿವಾಸಿಗಳು(Slum dwellers): ನಗರ ಪ್ರದೇಶದ ಕೊಳೆಗೇರಿಗಳಲ್ಲಿ ಅಥವಾ ಅಸಂಗದ್ಧ ವಸತಿ ಪ್ರದೇಶಗಳಲ್ಲಿ ವಾಸಿಸುವವರಿಗೂ ಯೋಜನೆಯ ಲಾಭ ಸಿಗುತ್ತದೆ.

PMAY-G (ಗ್ರಾಮೀಣ ವಸತಿ ಯೋಜನೆ) ಅರ್ಹತೆ(Qualifications):

SECC ಡೇಟಾ ಆಧಾರಿತ ಆಯ್ಕೆ:
ಮನೆಯಿಲ್ಲದ ಅಥವಾ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವ, SECC (Socio-Economic Caste Census) ಡೇಟಾದಲ್ಲಿ ಪಟ್ಟಿ ಹೊಂದಿರುವವರು ಅರ್ಹರಾಗಿದ್ದಾರೆ.

ಅನರ್ಹತೆಯ ಮಾನದಂಡಗಳು(Disqualification criteria) :

ಪಕ್ಕಾ ಮನೆ ಇರುವವರು.
ವಾಹನ (ಬೈಕ್, ಕಾರು, ಟ್ರ್ಯಾಕ್ಟರ್) ಹೊಂದಿರುವವರು.
₹50,000ಕ್ಕಿಂತ ಹೆಚ್ಚಿನ ಕೃಷಿ ಕ್ರೆಡಿಟ್ ಕಾರ್ಡ್ ಹೊಂದಿರುವವರು.
ಸರ್ಕಾರದ ನೌಕರರು.
ಆದಾಯ ಅಥವಾ ವೃತ್ತಿ ತೆರಿಗೆ(Income or profession tax) ಪಾವತಿಸುವವರು.
ಲ್ಯಾಂಡ್‌ಲೈನ್, ಫ್ರಿಜ್, ದೊಡ್ಡ ಭೂಮಿಯ ಮಾಲೀಕರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

PMAY-G ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು(Documents):

ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್.
ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ವಿವರಗಳು.
ಮಾನ್ಯ ಆದಾಯದ ಪುರಾವೆ.
ಭೂಮಿ ಮಾಲೀಕತ್ವದ ದಾಖಲೆಗಳು.
MGNREGA ಜಾಬ್ ಕಾರ್ಡ್.
ಸ್ವಚ್ಛ ಭಾರತ್ ಮಿಷನ್ ಸಂಖ್ಯೆ.
ಪಕ್ಕಾ ಮನೆ ಇಲ್ಲ ಎಂಬ ಅಫಿಡವಿಟ್.

PMAY-Uಗೆ ನಗರಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ(Steps for applying application):

ಮೊದಲಿಗೆ PMAY-U ಅಧಿಕೃತ ವೆಬ್‌ಸೈಟ್ಗೆ ಭೇಟಿ ನೀಡಿ(https://pmaymis.gov.in).
ನಂತರ ‘Apply for PMAY-U 2.0’ ಕ್ಲಿಕ್ ಮಾಡಿ.
ಮಾರ್ಗಸೂಚಿ ಓದಿ ‘Click to Proceed’ ಆಯ್ಕೆಮಾಡಿ.
ಅರ್ಹತಾ ಫಾರ್ಮ್ ಭರ್ತಿ ಮಾಡಿ.
OTP ಮೂಲಕ ಆಧಾರ್ ಪರಿಶೀಲನೆ ಮಾಡಿ.
ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿ ಸಲ್ಲಿಸಿ.

PMAY-Gಗೆ ಗ್ರಾಮೀಣಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ (Online application) ಸಲ್ಲಿಸುವ ವಿಧಾನ:

ವೈಯಕ್ತಿಕ ಮಾಹಿತಿ ಹಾಗೂ ಒಪ್ಪಿಗೆ ಫಾರ್ಮ್ ಭರ್ತಿ ಮಾಡಿ.
‘Search’ ಆಯ್ಕೆಮಾಡಿ, ಹೆಸರನ್ನು ಹುಡುಕಿ.
‘Select to Register’ ಕ್ಲಿಕ್ ಮಾಡಿ.
ಬ್ಯಾಂಕ್ ಹಾಗೂ ಯೋಜನೆ ವಿವರ (Bank and Scheme information) ನಮೂದಿಸಿ.
ಅಂತಿಮವಾಗಿ ಕಚೇರಿ ಸಿಬ್ಬಂದಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.

ಪಕ್ಕಾ ಮನೆಯ ಕನಸು ಈಗ ದೂರದ ಕನಸಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯು (The Prime Minister’s Housing Scheme) ಕೇವಲ ಕಟ್ಟಡವನ್ನಷ್ಟೇ ಒದಗಿಸುತ್ತಿಲ್ಲ, ಭದ್ರತಾ ಭಾವನೆ, ಗೌರವದ ಬದುಕು, ಮತ್ತು ಭವಿಷ್ಯದ ವಿಶ್ವಾಸವನ್ನೂ ಕೊಡುತ್ತಿದೆ. ಡಿಸೆಂಬರ್ 2025ರೊಳಗೆ ಅರ್ಜಿ ಸಲ್ಲಿಸಿ, ಈ ಮಹತ್ವದ ಯೋಜನೆಯ ಸದುಪಯೋಗ ಪಡೆಯಿರಿ.

ಹೆಚ್ಚಿನ ಮಾಹಿತಿಗೆ: https://pmaymis.gov.in ಗೆ ಭೇಟಿ ನೀಡಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!