ಗೃಹಿಣಿಯರು ಮನೆಯ ಎಲ್ಲಾ ಹೊಣೆಗಾರಿಕೆಗಳನ್ನು ನಿರ್ವಹಿಸಿದರೂ, ಆರ್ಥಿಕ ಅಗತ್ಯಗಳಿಗಾಗಿ ಪತಿ ಅಥವಾ ಕುಟುಂಬದ ಇತರ ಸದಸ್ಯರನ್ನು ಅವಲಂಬಿಸಬೇಕಾದ ಪರಿಸ್ಥಿತಿಯನ್ನು ಬದಲಾಯಿಸಲು ಕರ್ನಾಟಕ ರಾಜ್ಯ ಸರ್ಕಾರವು “ಗೃಹಲಕ್ಷ್ಮಿ ಯೋಜನೆ”ಯನ್ನು ಪ್ರಾರಂಭಿಸಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಈ ಯೋಜನೆ ಪ್ರಮುಖವಾದುದು. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಹಣ ಜಮಾ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗ್ರಾಮೀಣ ಪ್ರದೇಶಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದು ಮತ್ತು ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಪ್ರೋತ್ಸಾಹಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ. ಇತ್ತೀಚೆಗೆ, ಯೋಜನೆಯ 14 ಮತ್ತು 15ನೇ ಕಂತುಗಳ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂಬ ತಾಜಾ ಮಾಹಿತಿ ಬಂದಿದೆ. ನೇರ ಲಾಭ ವರ್ಗಾವಣೆ (DBT) ವ್ಯವಸ್ಥೆಯ ಮೂಲಕ ಪ್ರತಿ ತಿಂಗಳು ₹2,000 ರೂಪಾಯಿಯನ್ನು ಅರ್ಹ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ. ಇದು ಗೃಹಿಣಿಯರ ದೈನಂದಿನ ಅಗತ್ಯಗಳು ಮತ್ತು ಸಣ್ಣ-ಸಣ್ಣ ಆರ್ಥಿಕ ಗುರಿಗಳನ್ನು ಪೂರೈಸಲು ಸಹಾಯಕವಾಗಿದೆ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಯ ಮಹಿಳೆಯರಿಗೆ 13 ಮತ್ತು 14 ಕಂತಿನ 4000 ಜಮಾ ಆಗಿದ್ದು 15ನೇ ಕಂತಿನ ಹಣಕ್ಕೆ ಕಾಯುತ್ತಿದ್ದಾರೆ. ಹಾವೇರಿ ಜಿಲ್ಲೆಯ ಹಲವು ಮಹಿಳೆಯರ ಖಾತೆಗೆ ದಿನಾಂಕ 30 ಮಾರ್ಚ್.2025 ಮತ್ತು 02 ಏಪ್ರಿಲ್ 2025 ರಂದು 2000 ಅಂತೆ ಒಟ್ಟು 4000 ಈಗಾಗಲೇ ಜಮಾ ಆಗಿದ್ದು. ಕೆಳಗಿನ DBT ಸ್ಟೇಟಸ್ ನೀವು ಗಮನಿಸಬಹುದು. ನೀವು ಕೂಡ ನಿಮ್ಮ ಖಾತೆಯ ಜಮಾ ಸ್ಟೇಟಸ್ ಮಾಡಿಕೊಳ್ಳಿ. ಅಥವಾ ನಿಮ್ಮ ಬ್ಯಾಂಕ್ ಖಾತೆಯ ಅಕೌಂಟ್ ಚೆಕ್ ಮಾಡಿಕೊಳ್ಳಿ.

ಇನ್ನು ಕೂಡ ಹಣ ಬರದೆ ಇರುವ ಜಿಲ್ಲೆಯ ಮಹಿಳೆಯರ ಖಾತೆಗೆ 20 ಮೇ 2025ರಂದು ಹೊಸಪೇಟೆಯಲ್ಲಿ ಈ ಯೋಜನೆಯ ಎರಡು ವರ್ಷಗಳ ಸಾಧನೆಯನ್ನು ಸಂಭ್ರಮಿಸಲು ಏರ್ಪಡಿಸಿದ ಕಾರ್ಯಕ್ರಮದ ನಂತರ, ಫಲಾನುಭವಿಗಳ ಖಾತೆಗಳಿಗೆ ಮೂರು ಕಂತುಗಳಲ್ಲಿ ಒಟ್ಟು ₹6,000 ಹಣವನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ರಾಜ್ಯದ ಲಕ್ಷಾಂತರ ಮಹಿಳೆಯರು ಈಗಾಗಲೇ ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. ಇದು ಕೇವಲ ಹಣದ ವಿತರಣೆಯಷ್ಟೇ ಅಲ್ಲ, ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ಉನ್ನತಗೊಳಿಸುವ ದಿಶೆಯಲ್ಲಿ ಸರ್ಕಾರದ ಬದ್ಧತೆಯ ಪ್ರತೀಕವಾಗಿದೆ. ಯೋಜನೆಯ ವಿವರಗಳು, ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆಗಳನ್ನು ಸರ್ಕಾರಿ ಅಧಿಕೃತ ವೆಬ್ಸೈಟ್ ಅಥವಾ ಸೇವಾ ಕೇಂದ್ರಗಳಲ್ಲಿ ಪರಿಶೀಲಿಸಬಹುದು.
ಉತ್ತರಕನ್ನಡದಲ್ಲಿ ಆರ್ಥಿಕ ಸಹಾಯದ ಹಂಚಿಕೆ:
ಈ ಜಿಲ್ಲೆಯಲ್ಲಿ ಇದುವರೆಗೆ 1,095 ಕೋಟಿ ರೂಪಾಯಿಗಳನ್ನು ಅರ್ಹ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ 3,61,481 ರೇಷನ್ ಕಾರ್ಡ್ ಹಿಡುವಳಿದಾರರಲ್ಲಿ 99.9% ರಷ್ಟು ಮಹಿಳೆಯರು ಪ್ರತಿ ತಿಂಗಳು ₹2,000 ಸಹಾಯಧನವನ್ನು ಪಡೆಯುತ್ತಿದ್ದಾರೆ. ಆದರೆ, ಆದಾಯ ತೆರಿಗೆ ದಾತರು (10,377), GST ಪಾವತಿದಾರರು (4,875), ಮರಣಿಸಿದವರು (7,503), ವಲಸೆಗಾರರು (1,779), ಮತ್ತು ನಿಷ್ಕ್ರಿಯ ರೇಷನ್ ಕಾರ್ಡ್ ಹಿಡುವಳಿದಾರರು (1,440) ಸೇರಿ 25,676 ಜನರು ಯೋಜನೆಯಿಂದ ವಂಚಿತರಾಗಿದ್ದಾರೆ.
ತಾಲ್ಲೂಕು ವಾರು ಫಲಾನುಭವಿ ಸಂಖ್ಯೆ:
ತಾಲ್ಲೂಕು-ವಾರು ಫಲಾನುಭವಿ ಸಂಖ್ಯೆ:
| ತಾಲ್ಲೂಕು | ಫಲಾನುಭವಿಗಳು |
|---|---|
| ಅಂಕೋಲಾ | 26,973 |
| ಭಟ್ಕಳ | 33,858 |
| ದಾಂಡೇಲಿ | 13,931 |
| ಹಳಿಯಾಳ | 29,739 |
| ಹೊನ್ನಾವರ | 39,853 |
| ಕಾರವಾರ | 32,728 |
| ಕುಮಟಾ | 37,299 |
| ಮುಂಡಗೋಡ | 24,450 |
| ಸಿದ್ದಾಪುರ | 23,720 |
| ಶಿರಸಿ | 41,326 |
| ಸೂಪಾ | 12,886 |
| ಯಲ್ಲಾಪುರ | 18,735 |
ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆಯುವ ಮಹಿಳೆಯರು “DBT Karnataka” ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ತಮ್ಮ ಖಾತೆಗೆ ಜಮಾ ಆದ ಹಣದ ವಿವರಗಳನ್ನು ನೋಡಬಹುದು. ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




