ಹಾಸನ: ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಮಾರ್ಗದಲ್ಲಿ ಜೂನ್ 1, 2025 ರಿಂದ ನವೆಂಬರ್ 1, 2025 ರವರೆಗೆ ರೈಲ್ವೆ ಸುರಕ್ಷತೆ ಮತ್ತು ವಿದ್ಯುದೀಕರಣ ಕೆಲಸಗಳು ನಡೆಯಲಿರುವುದರಿಂದ, ಕೆಲವು ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ರದ್ದಾದ ರೈಲುಗಳ ವಿವರ ಮತ್ತು ಹೆಚ್ಚಿನ ಮಾಹಿತಿಯನ್ನು ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರದ್ದಾದ ರೈಲುಗಳ ವಿವರ:
ಯಶವಂತಪುರ-ಮಂಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್ (16539)
- ರದ್ದು ದಿನಾಂಕ: ಮೇ 31, 2025 ರಿಂದ ನವೆಂಬರ್ 1, 2025 ರವರೆಗೆ (ಪ್ರತಿ ಶನಿವಾರ).
ಮಂಗಳೂರು-ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ (16540)
- ರದ್ದು ದಿನಾಂಕ: ಜೂನ್ 1, 2025 ರಿಂದ ನವೆಂಬರ್ 2, 2025 ರವರೆಗೆ (ಪ್ರತಿ ಭಾನುವಾರ).
ಯಶವಂತಪುರ-ಮಂಗಳೂರು ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (16575)
- ರದ್ದು ದಿನಾಂಕ: ಜೂನ್ 1, 2025 ರಿಂದ ಅಕ್ಟೋಬರ್ 30, 2025 ರವರೆಗೆ (ಮಂಗಳವಾರ, ಗುರುವಾರ ಮತ್ತು ಭಾನುವಾರ).
ಮಂಗಳೂರು-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (16576)
- ರದ್ದು ದಿನಾಂಕ: ಜೂನ್ 2, 2025 ರಿಂದ ಅಕ್ಟೋಬರ್ 31, 2025 ರವರೆಗೆ (ಸೋಮವಾರ, ಬುಧವಾರ ಮತ್ತು ಶುಕ್ರವಾರ).
ಯಶವಂತಪುರ-ಕಾರವಾರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (16515)
- ರದ್ದು ದಿನಾಂಕ: ಜೂನ್ 2, 2025 ರಿಂದ ಅಕ್ಟೋಬರ್ 31, 2025 ರವರೆಗೆ (ಸೋಮವಾರ, ಬುಧವಾರ ಮತ್ತು ಶುಕ್ರವಾರ).
ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (16516)
- ರದ್ದು ದಿನಾಂಕ: ಜೂನ್ 3, 2025 ರಿಂದ ನವೆಂಬರ್ 1, 2025 ರವರೆಗೆ (ಮಂಗಳವಾರ, ಗುರುವಾರ ಮತ್ತು ಶನಿವಾರ).
ಯಾತ್ರಿಕರಿಗೆ ಸೂಚನೆ:
ರೈಲ್ವೆ ಇಲಾಖೆಯು ಈ ಬದಲಾವಣೆಗಳ ಬಗ್ಗೆ ಮುಂಚಿತವಾಗಿ ಸೂಚಿಸಿದ್ದು, ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೈಲ್ವೆ ಅಧಿಕೃತ ವೆಬ್ಸೈಟ್ ಅಥವಾ ಹೆಲ್ಪ್ಲೈನ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.