ಚಿನ್ನದ ದರ ಇಳಿಕೆ: ಅಮೆರಿಕ-ಚೀನಾ ಸುಂಕ ಸಮರ ಅಂತ್ಯದಿಂದ ಬಂಗಾರದ ಮೌಲ್ಯದಲ್ಲಿ ದಿನದಿಂದ ದಿನಕ್ಕೆ ಕುಸಿತ
ವಿಶ್ವ ಮಾರುಕಟ್ಟೆಯಲ್ಲಿ (World market) ಆರ್ಥಿಕ ಬದಲಾವಣೆಗಳು ಮತ್ತು ರಾಜಕೀಯ ಸ್ಥಿರತೆಯ ನಡುವಿನ ಬದಲಾವಣೆಗಳು ಮೌಲ್ಯವತ್ತಾದ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯ ದರದ (Gold and silver rate) ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಇತ್ತೀಚೆಗೆ, ಚಿನ್ನದ ದರದಲ್ಲಿ ಕಂಡುಬರುತ್ತಿರುವ ನಿರಂತರ ಕುಸಿತ ಇಂತಹ ಒಂದು ಬೆಳವಣಿಗೆಯ ಪರಿಣಾಮವಾಗಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರ ಗಮನ ಸೆಳೆಯುತ್ತಿದೆ. ಒಂದು ಕಾಲದಲ್ಲಿ ಸುರಕ್ಷಿತ ಹೂಡಿಕೆಯ ಪ್ರತೀಕವಾಗಿದ್ದ ಚಿನ್ನವು ಈಗ ಜಾಗತಿಕ ರಾಜಕೀಯ ಹಾಗೂ ಆರ್ಥಿಕ ಸಮತೋಲನಗಳ ಪಾಠವನ್ನೂ ಕಲಿಸುತ್ತಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 17, 2025: Gold Price Today
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ಮತ್ತಷ್ಟು ಇಳಿಕೆಗೆ ಕಾರಣವಾಗಬಹುದಾದ ಅಂತರರಾಷ್ಟ್ರೀಯ ಆರ್ಥಿಕ (International economic) ಬೆಳವಣಿಗೆಗಳು ಏನೆಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ, ಗ್ರಾಹಕರಿಗೆ ಚಿನ್ನದ ಖರೀದಿಗೆ ಉತ್ತಮ ಅವಕಾಶ ಒದಗಿಸಿದಂತಾಗುತ್ತದೆ. ಹಾಗಿದ್ದರೆ, ಮೇ 17, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,721 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,514 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,136 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 96,900 ರೂ. ನಷ್ಟಿದೆ.
ಅಮೆರಿಕ-ಚೀನಾ (America-China) ನಡುವಿನ ಸುಂಕ ಸಮರದ ಅಂತ್ಯ:
ಚಿನ್ನದ ದರ ಕುಸಿತಕ್ಕೆ ಪ್ರಮುಖ ಕಾರಣವೆಂದರೆ ಅಮೆರಿಕ ಮತ್ತು ಚೀನಾದ ನಡುವಿನ ವ್ಯಾಪಾರ ಸಂಘರ್ಷದ ಶಮನ. ಈ ಎರಡು ಅರ್ಥಿಕ ಮಹಾಶಕ್ತಿಗಳ ನಡುವಿನ ಸುಂಕ ಸಮರ ಕೊನೆಗೊಂಡಿದ್ದು, ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಮತ್ತೊಮ್ಮೆ ಉತ್ತೇಜನ ಸಿಕ್ಕಿದೆ. ಇದರಿಂದಾಗಿ ಬಂಡವಾಳ ಹೂಡಿಕೆದಾರರು ಈಗ ಹೆಚ್ಚಾಗಿ ಷೇರು ಮಾರುಕಟ್ಟೆಯತ್ತ (Stock market) ಆಕರ್ಷಿತರಾಗುತ್ತಿದ್ದಾರೆ. ಇದು ಚಿನ್ನದ ಮೇಲಿನ ಹೂಡಿಕೆಯಲ್ಲಿ ಕಡಿತ ಉಂಟುಮಾಡುತ್ತಿದೆ.
ಭಾರತ-ಪಾಕಿಸ್ತಾನ ನಡುವಿನ ಶಾಂತಿಯ ಸನ್ನಿವೇಶ:
ಅಲ್ಲದೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯೂ ಶಮನಗೊಂಡಿರುವುದರಿಂದ ಜಾಗತಿಕ ಮಟ್ಟದಲ್ಲಿ (Global level) ರಾಜಕೀಯ ಸ್ಥಿರತೆ ಕಂಡುಬರುತ್ತಿದೆ. ಇದು ಚಿನ್ನದಂತ ಸಾಂಪ್ರದಾಯಿಕ ಸುರಕ್ಷಿತ ಹೂಡಿಕೆ ಆಯ್ಕೆಗಳಿಂದ ಷೇರುಗಳತ್ತ ಜನರು ತಿರುಗಿಕೊಳ್ಳಲು ಕಾರಣವಾಗಿದೆ.
ಹೂಡಿಕೆದಾರರ ಮನೋಭಾವ ಮತ್ತು ಮಾರುಕಟ್ಟೆಯ ಪ್ರತಿಕ್ರಿಯೆ:
ಹೂಡಿಕೆದಾರರು ಈಗ ಆರಾಮದಾಯಕ ವಲಯದಿಂದ ಷೇರುಗಳಲ್ಲಿ ಹೆಚ್ಚಿನ ಹೂಡಿಕೆ (High Investment) ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿಯಂತಹ ಲೋಹಗಳ ಬೆಲೆಗಳಲ್ಲಿ ಇಳಿಕೆ ಕಂಡುಬರುತ್ತಿದೆ. ತಜ್ಞರ (Specilalist) ಅಭಿಪ್ರಾಯದಂತೆ ಈ ತಿಂಗಳ ಅಂತ್ಯದೊಳಗೆ ಚಿನ್ನದ ಬೆಲೆಯು ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ.
ಮೇ 16, ರಂದು ತಾಜಾ ಬೆಲೆ ವಿವರಗಳು ಹೀಗಿವೆ:
24 ಕ್ಯಾರೆಟ್ ಚಿನ್ನ (10 ಗ್ರಾಂ): 2,130 ರೂ. ಇಳಿಕೆ
22 ಕ್ಯಾರೆಟ್ ಚಿನ್ನ (10 ಗ್ರಾಂ): 1,950 ರೂ. ಇಳಿಕೆ
ಬೆಳ್ಳಿ (1 ಕೆಜಿ): 1,000 ರೂ. ಇಳಿಕೆ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ (ಔನ್ಸ್ಗೆ): ಚಿನ್ನ ಔನ್ಸ್ಗೆ (31.10 ಗ್ರಾಂ) 40 ಡಾಲರ್ ಕುಸಿತಗೊಂಡು 3,147 ಡಾಲರ್ಗೆ ತಲುಪಿದೆ. ಬೆಳ್ಳಿ ದರವೂ ಇಳಿಕೆಯಾಗಿದ್ದು, 31.91 ಡಾಲರ್ಗಳಲ್ಲಿ ವಹಿವಾಟು ನಡೆಯುತ್ತಿದೆ.
ಮದುವೆ ಸೀಸನ್ ಆರಂಭದ ಈ ಹಂತದಲ್ಲಿ ಚಿನ್ನದ ದರ ಕುಸಿತವು ಗ್ರಾಹಕರಲ್ಲಿ ಖುಷಿ ಮೂಡಿಸಿತು. ನಿಕಟ ಭವಿಷ್ಯದಲ್ಲಿಯೂ ಈ ದರ ಇಳಿಕೆ (Rate decrease) ಮುಂದುವರಿಯುವ ನಿರೀಕ್ಷೆಯಿರುವುದರಿಂದ, ಬಂಗಾರದ ಖರೀದಿ ಬಗ್ಗೆ ಗ್ರಾಹಕರಲ್ಲಿ ಹೊಸ ಚೈತನ್ಯ ಉಂಟಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.