ಮೇ 14, 2025ರ ಚಿನ್ನದ ದರದಲ್ಲಿ ಇಳಿಕೆ: 22 ಕ್ಯಾರೆಟ್ ಚಿನ್ನಕ್ಕೆ ಗ್ರಾಂಗೆ ₹8,856
ಇತ್ತೀಚಿಗೆ ಚಿನ್ನದ ಮಾರುಕಟ್ಟೆಯಲ್ಲಿ (Gold market) ಗಮನಾರ್ಹ ಬದಲಾವಣೆ ಕಂಡುಬಂದಿದೆ. ಎರಡು ದಿನಗಳ ಅವಧಿಯಲ್ಲಿ ಚಿನ್ನದ ಬೆಲೆ ಗ್ರಾಂಗೆ 280 ರೂ ಇಳಿಕೆ ಕಂಡಿದ್ದು, ಬಂಡವಾಳ ಹೂಡಿಕೆದಾರರು (Capital investors) ಮತ್ತು ಗ್ರಾಹಕರಲ್ಲಿ ನೂತನ ಆಸಕ್ತಿ ಮತ್ತು ಚರ್ಚೆಗೆ ಕಾರಣವಾಗಿದೆ. ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಮತ್ತು ಟ್ಯಾರಿಫ್ ಸಂಬಂಧಿತ ವಿವಾದಕ್ಕೆ 90 ದಿನಗಳ ತಾತ್ಕಾಲಿಕ ವಿರಾಮ ಸಿಕ್ಕಿರುವುದು, ಚಿನ್ನದ ಹೂಡಿಕೆದಾರರ (Gold investers) ಭಾವನೆ ಮೇಲೆ ಪ್ರಭಾವ ಬೀರಿದ್ದು, ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ. ಇದರಿಂದಾಗಿ ಬೃಹತ್ ಮಟ್ಟದಲ್ಲಿ ಚಿನ್ನದ ಬೆಲೆ ಮೇಲೆ ಬದಲಾವಣೆ ಕಂಡುಬಂದಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 14, 2025: Gold Price Today
ಹೌದು, ಇತ್ತೀಚಿಗೆ ಚಿನ್ನದ ದರದಲ್ಲಿ ಇಳಿಕೆಯನ್ನು ಗ್ರಾಹಕರು (Buyer’s) ಕಾಣುತ್ತಿದ್ದಾರೆ. ಇಳಿಕೆ ತಾತ್ಕಾಲಿಕವಾಗಿದ್ದರು ಕೂಡ ಚಿನ್ನವನ್ನು ಕೊಂಡುಕೊಳ್ಳಲು ಬಯಸುವವರಿಗೆ ಸ್ವಲ್ಪ ಪ್ರಮಾಣದ ನಿರಾಳತೆ ದೊರಕಿದಂತಾಗಿದೆ. ಆದರೆ ನಾವು ಚಿನ್ನದ ದರದಲ್ಲಿ (Gold rate)ಪ್ರತಿಕ್ಷಣವೂ ಏರಿಳಿತವನ್ನು ಕಾಣುತ್ತಿದ್ದೇವೆ. ಆದ್ದರಿಂದ ಚಿನ್ನದ ದರ ಕಡಿಮೆಯಾದ ಕ್ಷಣ ಖರೀದಿಸುವುದು ಸೂಕ್ತ. ಹಾಗಿದ್ದರೆ, ಮೇ 14, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,856 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,661 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,246 ಆಗಿದೆ. ಒಟ್ಟಾರೆಯಾಗಿ, 23 ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 97,800 ರೂ. ನಷ್ಟಿದ್ದು.
ಮಾರುಕಟ್ಟೆ ಸ್ಥಿತಿ (Market situation) ಯಾವ ರೀತಿಯಿದೆ?
ಸತತವಾಗಿ ಇಳಿಯುತ್ತಿರುವ ಚಿನ್ನದ ಬೆಲೆ ಭಾರತೀಯ ಬುಲ್ಲಿಯನ್ ಮಾರುಕಟ್ಟೆಯಲ್ಲಿಯೂ (Bullion market) ಪ್ರಭಾವ ಬೀರುತ್ತಿದೆ. ನಿನ್ನೆ 22 ಕ್ಯಾರಟ್ ಆಭರಣ ಚಿನ್ನದ ದರವು ರೂ. 87,650 ಆಗಿದ್ದು, ಈ ಹಿಂದೆ ಇದು ರೂ. 8,880 (ಗ್ರಾಂಗೆ) ಇತ್ತು. ಇದು ಈಗ ರೂ. 8,765 ಗೆ ಇಳಿದಿದೆ. ಕಳೆದ ವಾರಾಂತ್ಯದಲ್ಲಿ ಇದು ರೂ. 9,045 ಆಗಿತ್ತು.
ಮೇ 13, 2025 ರಂದು ಚಿನ್ನ ಮತ್ತು ಬೆಳ್ಳಿ ದರಗಳು ಯಾವರೀತಿಯಾಗಿವೆ?:
22 ಕ್ಯಾರಟ್ ಚಿನ್ನ (10 ಗ್ರಾಂ): ₹87,650
24 ಕ್ಯಾರಟ್ ಚಿನ್ನ (10 ಗ್ರಾಂ): ₹95,620
18 ಕ್ಯಾರ್ಟ್ ಚಿನ್ನ (10 ಗ್ರಾಂ): ₹71,720
ಬೆಳ್ಳಿ (10 ಗ್ರಾಂ): ₹980
ಬೆಂಗಳೂರು ಮಾರುಕಟ್ಟೆಯಲ್ಲಿ (Bangalore market) ದರಗಳನ್ನು ನೋಡುವುದಾದರೆ:
22 ಕ್ಯಾರಟ್ ಚಿನ್ನ (10 ಗ್ರಾಂ): ₹87,650
24 ಕ್ಯಾರ್ಟ್ ಚಿನ್ನ (10 ಗ್ರಾಂ): ₹95,620
ಬೆಳ್ಳಿ (100 ಗ್ರಾಂ): ₹9,900
ವಿಭಿನ್ನ ನಗರಗಳಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರಗಳು ಹೀಗಿವೆ?:
ಬೆಂಗಳೂರು: ₹87,650
ಚೆನ್ನೈ: ₹87,650
ಮುಂಬೈ: ₹87,650
ದೆಹಲಿ: ₹87,800
ಕೋಲ್ಕತ್ತಾ: ₹87,650
ಕೇರಳ: ₹87,650
ಅಹ್ಮದಾಬಾದ್: ₹87,700
ಜೈಪುರ್: ₹87,800
ಲಕ್ನೋ: ₹87,800
ಭುವನೇಶ್ವರ್: ₹87,650
ಚೀನಾ-ಅಮೆರಿಕ (China and America) ನಡುವಿನ ವ್ಯಾಪಾರ ಸಂಘರ್ಷ ತಾತ್ಕಾಲಿಕವಾಗಿ ಶಮನಗೊಂಡಿರುವುದರಿಂದ ಜಾಗತಿಕ ಹೂಡಿಕೆದಾರರು (Global Inveaters) ಚಿನ್ನದ ಹೂಡಿಕೆಯಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮವಾಗಿ ಚಿನ್ನದ ಬೇಡಿಕೆ ಕಡಿಮೆಯಾಗಿ, ಬೆಲೆ ಇಳಿಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಸಾಧ್ಯತೆಗಳಿವೆ ಎಂಬ ನಿರೀಕ್ಷೆ ಕೂಡ ಇದೆ.
ಹೂಡಿಕೆದಾರರು ಮತ್ತು ಚಿನ್ನ ಖರೀದಿಸುವ ಗ್ರಾಹಕರು ತಮ್ಮ ಮುಂದಿನ ನಿರ್ಧಾರಗಳನ್ನು ಹೂಡಿಕೆಯ ಭವಿಷ್ಯದ ದೃಷ್ಟಿಯಿಂದ ಪರಿಗಣಿಸುವುದು ಉತ್ತಮ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.