ಮೇ 15ರಿಂದ ಜೂನ್ 14ರವರೆಗೆ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಆರಂಭ?
ರಾಜ್ಯ ಸರ್ಕಾರದ (State government) ನೌಕರರ ವರ್ಗಾವಣೆ ಪ್ರಕ್ರಿಯೆ ಬಹುಷಃ ಹೊಸ ತಿರುವು ಪಡೆಯಲಿದೆ. ವರ್ಷದಿಂದ ವರ್ಷಕ್ಕೆ ನೌಕರ ವರ್ಗಾವಣೆ ಸಂಬಂಧ ಹಲವು ನಿರೀಕ್ಷೆಗಳು, ಮನವಿಗಳು ಸರ್ಕಾರದ (Government) ಗಮನಸೆಳೆಯುತ್ತಲೇ ಇವೆ. ಇದೀಗ ಈ ನಿರೀಕ್ಷೆಗೆ ಉತ್ತರವಾಗಿ, ಮೇ 15 ರಿಂದ ಜೂನ್ 14ರ ವರೆಗೆ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಗೆ ಅವಕಾಶ ನೀಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವುದು ಮಹತ್ವದ್ದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವತಿಯಿಂದ (By the Department of Personnel and Administrative Reforms) ತಯಾರಿಸಲಾದ ಪ್ರಸ್ತಾವನೆ ಈಗಾಗಲೇ ಸಚಿವ ಸಂಪುಟದ ಅನುಮೋದನೆಗೆ ಮಂಡಿಸಲಾಗಿದೆ. ನಿನ್ನೆ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ವರ್ಗಾವಣೆ ಪ್ರಕ್ರಿಯೆಯು ಸುಗಮವಾಗಿ ಹಾಗೂ ನಿಯಮಬದ್ಧವಾಗಿ ಜರುಗುವಂತೆ ನಿರ್ಧಾರಗಳನ್ನು ರೂಪಿಸಲಾಗಿದ್ದು, ಗ್ರೂಪ್ ಎ, ಬಿ, ಸಿ ಮತ್ತು ಡಿ (Group A, B, C and D) ವರ್ಗದ ಅಧಿಕಾರಿಗಳು ಹಾಗೂ ನೌಕರರನ್ನು, ಕಾರ್ಯನಿರತ ವೃಂದಬಲದ ಶೇಕಡ 6ರಷ್ಟು ಮೀರದಂತೆ ವರ್ಗಾವಣೆ ಮಾಡಬಹುದಾಗಿದೆ.
ಎ ಮತ್ತು ಬಿ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಕಾರ ಆಯಾ ಇಲಾಖೆಯ ಸಚಿವರಿಗೆ ನೀಡಲಾಗುತ್ತದೆ.
ಸಿ ಮತ್ತು ಡಿ ವೃಂದದ ನೌಕರರ ವರ್ಗಾವಣೆಗೆ ಸಂಬಂಧಿಸಿದ ಅಧಿಕಾರವನ್ನು ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ನೀಡಲು ಪ್ರಸ್ತಾವಿಸಲಾಗಿದೆ.
ವರ್ಗಾವಣೆಗೆ ಅರ್ಹತೆಯು ಕರ್ತವ್ಯದ ಅವಧಿಯನ್ನು ಆಧಾರಿತವಾಗಿರುತ್ತದೆ. ಅದರಂತೆ,
ಗ್ರೂಪ್ ಎ ಮತ್ತು ಬಿ ಅಧಿಕಾರಿಗಳು ಕುರಿತ ಸ್ಥಳದಲ್ಲಿ 2 ವರ್ಷ ಪೂರೈಸಿದರೆ,
ಸಿ ವರ್ಗದ ನೌಕರರು 4 ವರ್ಷ,
ಡಿ ವರ್ಗದ ನೌಕರರು 7 ವರ್ಷ ಸೇವೆ ಸಲ್ಲಿಸಿದ್ದರೆ, ಅವರು ವರ್ಗಾವಣೆಗೆ ಅರ್ಹರಾಗುತ್ತಾರೆ.
ವಿಶೇಷವಾಗಿ, ಎ ಮತ್ತು ಬಿ ವರ್ಗದ ಅಧಿಕಾರಿಗಳ ವರ್ಗಾವಣೆ ಪ್ರಸ್ತಾವನೆಗಳು ಆಡಳಿತ ಇಲಾಖೆಯ (Administration Department) ಮೂಲಕವೇ ಸಂಬಂಧಿತ ಸಚಿವರಿಗೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.
ಈ ತೀರ್ಮಾನದಿಂದ ಸಾವಿರಾರು ನೌಕರರಿಗೆ ಸ್ಥಳಾಂತರದ ಅವಕಾಶ ಸಿಗಲಿದ್ದು, ಆಡಳಿತದ ಸುಧಾರಣೆಗೂ ಸಹಕಾರಿಯಾಗಲಿದೆ. ಇದು ಸರಕಾರದ ಆಡಳಿತ ಧೋರಣೆಯಲ್ಲಿನ ಒಂದು ಪ್ರಜ್ಞಾಪೂರ್ವಕ (Conscious) ಹೆಜ್ಜೆಯಾಗಿ ಪರಿಗಣಿಸಬಹುದು.
ಈ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲಿ ಅಂಕಿತ ಬಿದ್ದಲ್ಲಿ, ಮುಂದಿನ ತಿಂಗಳಲ್ಲಿ ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ (State government departments) ಪ್ರಮುಖ ವರ್ಗಾವಣೆ ಕಾರ್ಯಚರಣೆ ಪ್ರಾರಂಭವಾಗುವ ಸಾಧ್ಯತೆ ಇದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.