ರಾಜ್ಯ ಸರ್ಕಾರಿ ನೌಕರರ(State Government Employees) ಮಕ್ಕಳಿಗೆ ವಿಶೇಷ ಶಿಷ್ಯವೃತ್ತಿ: ‘ಪ್ರತಿಭಾ ಪುರಸ್ಕಾರ’ಕ್ಕೆ ಅರ್ಜಿ ಆಹ್ವಾನ.! ಅರ್ಹತೆ, ಅವಧಿ, ಹಾಗೂ ಅರ್ಜಿ ವಿಧಾನ ನೋಡೋಣ
ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿವರ್ಷವೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (KSGEA) “ಪ್ರತಿಭಾ ಪುರಸ್ಕಾರ”ವನ್ನು ಘೋಷಿಸುತ್ತಿದೆ. ಇದು ಕೇವಲ ಶೈಕ್ಷಣಿಕ ಉತ್ತೇಜನೆ ನೀಡುವ ಯೋಜನೆಯಷ್ಟೇ ಅಲ್ಲದೆ, ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯದ ಕನಸು ಕಟ್ಟುತ್ತಿರುವ ಸರ್ಕಾರಿ ನೌಕರರ ಹೆಮ್ಮೆಗೂ ಕಾರಣವಾಗಿದೆ. ಹಾಗಿದ್ದರೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜಿಗೆ ಅಗತ್ಯವಿರುವ ದಾಖಲೆಗಳು ಯಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
2025ನೇ ಸಾಲಿನ SSLC ಹಾಗೂ PUC ಫಲಿತಾಂಶದ ಬಳಿಕ ಗುಡ್ ನ್ಯೂಸ್!
2025ರ SSLC ಮತ್ತು PUC ಪರೀಕ್ಷೆಗಳಲ್ಲಿ ಶೇ.90% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ. ವಿದ್ಯಾರ್ಥಿಯು ರಾಜ್ಯ ಸರ್ಕಾರದ ಖಾಯಂ ನೌಕರರ ಮಗ ಅಥವಾ ಮಗಳು ಆಗಿರಬೇಕು ಎಂಬುದು ಮುಖ್ಯ. ಖಾಸಗಿ, ಅನುದಾನಿತ ಸಂಸ್ಥೆಗಳು, ನಿಗಮಗಳು, ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಈ ಅವಕಾಶ ಅನ್ವಯಿಸುವುದಿಲ್ಲ.
ಅರ್ಜಿಯನ್ನು ಹೇಗೆ ಸಲ್ಲಿಸಬೇಕು?:
ಆಸಕ್ತರು ಕೆಳಗಿನ ಲಿಂಕ್ ಮೂಲಕ Online ಮೂಲಕ ಅರ್ಜಿಯನ್ನು ಸಲ್ಲಿಸಬಹುದು:
ಲಿಂಕ್: https://ksgeanews.blogspot.com
ಕೊನೆಯ ದಿನಾಂಕ: 31-05-2025
ಅರ್ಜಿಗೆ ಅಗತ್ಯವಿರುವ ದಾಖಲೆಗಳು (JPG ಫಾರ್ಮ್ಯಾಟ್, 1MB ಒಳಗಾಗಿ):
ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
ದೃಢೀಕೃತ ಅಂಕಪಟ್ಟಿ (SSLC ಅಥವಾ PUC)
ಪೋಷಕರ ಸೇವಾ ದೃಢೀಕರಣ ಪತ್ರ
ಸಂಘದ ಜಿಲ್ಲಾ/ತಾಲ್ಲೂಕು/ಯೋಜನಾ ಶಾಖೆಯ ಅಧ್ಯಕ್ಷರು ಅಥವಾ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರಿಂದ ಪಡೆದ ದೃಢೀಕರಣ ಪತ್ರ.
ಯಾವುದೇ ದೋಷವಿಲ್ಲದೆ ಅರ್ಜಿ ಸಲ್ಲಿಸಿದ ನಂತರ, ನೊಂದಾಯಿತ ಇ-ಮೇಲ್ ವಿಳಾಸಕ್ಕೆ ಸ್ವೀಕೃತಿ ಪತ್ರವನ್ನು ಕಳುಹಿಸಲಾಗುತ್ತದೆ. ಆಯ್ಕೆಗೆ ಶೇಕಡಾವಾರು ಅಂಕಗಳನ್ನು ಆಧಾರಮಾಡಿಕೊಳ್ಳಲಾಗುವುದು. ಅಂತಿಮ ನಿರ್ಧಾರ ಸಂಪೂರ್ಣವಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಆದೇಶಕ್ಕೆ ಒಳಪಟ್ಟಿರುತ್ತದೆ.
ಹೆಚ್ಚಿನ ಮಾಹಿತಿ ಅಥವಾ ಸಹಾಯಕ್ಕಾಗಿ ಸಂಪರ್ಕಿಸಿ:
ಕಾಲ್ ಸಮಯ: ಬೆಳಿಗ್ಗೆ 10.30 ರಿಂದ ಸಂಜೆ 6.00ರವರೆಗೆ
ದೂರವಾಣಿ ಸಂಖ್ಯೆ: 080-22354784 / 080-22354783
ಸಂಪರ್ಕ ವ್ಯಕ್ತಿ: ಸಿ.ಎಸ್. ಷಡಾಕ್ಷರಿ
ಇದು ನಿಮ್ಮ ಮಗುವಿನ ಸಾಧನೆಗೆ ಪುರಸ್ಕಾರವಾಗಬಹುದಾದ ಉತ್ತಮ ಅವಕಾಶ. ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳನ್ನು ಈಗಲೇ ತಯಾರಿಸಿ, ಕೊನೆಯ ದಿನಾಂಕಕ್ಕೂ ಮುಂಚೆಯೇ ಅರ್ಜಿ ಸಲ್ಲಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.