ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರಭಾವದಿಂದ ಚಿನ್ನದ ಬೆಲೆ ಏರಿಕೆ – ಬೆಳ್ಳಿ ದರದಲ್ಲಿ ₹1,000 ಇಳಿಕೆ!
ಇದೀಗ ಕರ್ನಾಟಕ (Karnataka) ಸೇರಿದಂತೆ ಭಾರತದೆಲ್ಲೆಡೆ ಚಿನ್ನದ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗಳು ಸಂಭವಿಸಿವೆ. ಈ ನಡುವೆ ಮೌಲ್ಯವರ್ಧಿತ ವಸ್ತುವಾದ ಬಂಗಾರದ ಬೆಲೆ (Gold rate) ಮತ್ತೆ ಮೇಲಕ್ಕೆ ಹೋಗಿದ್ದು, ಗ್ರಾಹಕರಿಗೆ ಮತ್ತೆ ಒಂದು ಬಾರಿಯ ಆರ್ಥಿಕ ಹೊರೆ ಬಿದ್ದಂತಾಗಿದೆ. ಚಿನ್ನವು ಭಾರತದ ಸಂಸ್ಕೃತಿ, ಸಂಪ್ರದಾಯ ಮತ್ತು ಆರ್ಥಿಕತೆಯ ಒಂದು ಅವಿಭಾಜ್ಯ ಅಂಗವಾಗಿದ್ದು, ಮದುವೆ, ಹಬ್ಬ, ಧಾರ್ಮಿಕ ಆಚರಣೆ, ಹಾಗೂ ಹೂಡಿಕೆಗೆ ಪ್ರಾಮುಖ್ಯ ಸ್ಥಾನ ಪಡೆದಿದೆ. ಅಂತಹ ಬಂಗಾರದ ಬೆಲೆ ಏರಿಕೆ (Gold rate increased) ವಿಚಾರದಲ್ಲಿ ಪ್ರತಿ ಚಲನೆಯೂ ಜನರ ಗಮನ ಸೆಳೆಯುತ್ತದೆ. ಮೇ 5, 2025ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಬದಲಾವಣೆಗಳು ಕಂಡುಬಂದಿವೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 6, 2025: Gold Price Today
ಇತ್ತೀಚಿಗೆ ಇಳಿಕೆಯನ್ನು ಕಾಣುತ್ತಿದ್ದ ಚಿನ್ನದ ದರ ನಿನ್ನೆಯಿಂದ ಏರಿಕೆಯತ್ತ ಮುಖ ಮಾಡಿದೆ. ನೆನ್ನೆ ಬೆಳಗ್ಗೆ ಇಳಿಕೆಯನ್ನು ಕಂಡಂತಹ ಚಿನ್ನದ ದರದಲ್ಲಿ ಸಂಜೆಯೊಳಗೆ ಭಾರಿ ಏರಿಕೆಯತ್ತ ಸಾಗಿದೆ. ದರದಲ್ಲಿ ಇಳಿಕೆಯಾಗಿದೆ ಎಂದು ಚಿನ್ನ ಖರೀದಿಸಲು ಮುಂದಾದ ಗ್ರಾಹಕರು ಏರಿಕೆಯನ್ನು ಕಂಡು ದಿಬ್ರಮೆಗೊಳ್ಳಗಾಗಿದ್ದಾರೆ. ಹಾಗಿದ್ದರೆ, ಮೇ 6, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 776 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,574 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,181 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 96,900 ರೂ. ನಷ್ಟಿದ್ದು.

ಮೇ 5, 2025 ರಂದು ಬೆಂಗಳೂರು ಹಾಗೂ ಇತರ ನಗರಗಳ ಚಿನ್ನದ ಮತ್ತು ಬೆಳ್ಳಿ ಬೆಲೆಗಳು ಹೀಗಿವೆ:
ಬೆಂಗಳೂರಿನಲ್ಲಿ ಚಿನ್ನದ ಬೆಲೆ (ಮೇ 5):
22 ಕ್ಯಾರೆಟ್ ಚಿನ್ನ 1 ಗ್ರಾಂಗೆ ₹8,775
10 ಗ್ರಾಂಗೆ ₹87,750 ( ₹200 ಏರಿಕೆಯಾಗಿದೆ).
100 ಗ್ರಾಂಗೆ ₹8,77,500
24 ಕ್ಯಾರೆಟ್ ಚಿನ್ನ 1 ಗ್ರಾಂಗೆ ₹9,573,
10 ಗ್ರಾಂಗೆ ₹95,730 ( ₹220 ಏರಿಕೆಯಾಗಿದೆ).
100 ಗ್ರಾಂಗೆ ₹9,57,300
18 ಕ್ಯಾರೆಟ್ ಚಿನ್ನ 1 ಗ್ರಾಂಗೆ ₹7,109
10 ಗ್ರಾಂಗೆ ₹71,800, 100 ಗ್ರಾಂಗೆ ₹7,18,000
ಬೆಳ್ಳಿಯ ದರದಲ್ಲಿ ಇಳಿಕೆ:
1 ಗ್ರಾಂ ಬೆಳ್ಳಿ – ₹97
10 ಗ್ರಾಂ – ₹970
1 ಕೆಜಿ – ₹97,000
₹1,000 ಇಳಿಕೆಯನ್ನು ನಾವು ಕಾಣಬಹುದು.
ಕರ್ಣಾಟಕದ ಪ್ರಮುಖ ನಗರಗಳಲ್ಲಿ ಪ್ರತಿ ಗ್ರಾಂ ಚಿನ್ನದ ದರಗಳು ಹೀಗಿವೆ:
ಮೈಸೂರು, ಮಂಗಳೂರು, ಗದಗ, ಮಂಡ್ಯ, ಚಿತ್ರದುರ್ಗ,
18K – ₹7,10
22K – ₹8,775
24K – ₹9,573
ಚಿನ್ನದ ದರ ಏರಿಕೆಗೆ ಕಾರಣಗಳು (Causes) ಏನು?:
ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರಭಾವ: ಅಮೆರಿಕಾದ ಡಾಲರ್ ಬೆಲೆ, ಇತರ ದೇಶಗಳ ಚಿನ್ನ ಖರೀದಿ ಪ್ರಮಾಣ ಇತ್ಯಾದಿ ಪ್ರಮುಖ ಕಾರಣಗಳಾಗಿವೆ.
ಹಬ್ಬ-ಮದುವೆ ಸೀಸನ್: ದೇಶೀಯ ಬೇಡಿಕೆ ಏರಿಕೆಯಾಗಿ ದರ ಮೇಲಕ್ಕೆ ಏರಿಕೆಯಾಗಿದೆ.
ಹೂಡಿಕೆದಾರರ ವಿಶ್ವಾಸ: ಬಂಗಾರವನ್ನು ಸುರಕ್ಷಿತ ಹೂಡಿಕೆ (Safety investment) ಎಂದು ಪರಿಗಣಿಸುವ ಹಿನ್ನಲೆಯಲ್ಲಿ ಚಿನ್ನದ ಕೊಳ್ಳುವಿಕೆಯಲ್ಲಿ ಹೆಚ್ಚಳ.
ಯುದ್ಧ, ಭೀತಿಯ ಪರಿಸ್ಥಿತಿಗಳು: ಜಾಗತಿಕ ಅಸ್ಥಿರತೆಯಿಂದ ಚಿನ್ನದ ಬೆಲೆ ಏರಿಕೆ ಕಾಣುತ್ತದೆ.
ಸ್ಪಾಟ್ ಚಿನ್ನದ ದರ (Spot gold rate) :
ಸ್ಪಾಟ್ ಚಿನ್ನದ ದರವು ಶೇ.0.5 ಏರಿಕೆಯಾಗಿದ್ದು, ಪ್ರತಿ ಔನ್ಸ್‌ಗೆ $3,256.85 ಆಗಿದೆ. ಇದು ಜಾಗತಿಕ ಹೂಡಿಕೆದಾರರ ಭರವಸೆ ಮತ್ತು ಬಂಡವಾಳ ಹೂಡಿಕೆಯಲ್ಲಿ ಚಿನ್ನದ ಆಕರ್ಷಣೆಯ ನಿರಂತರತೆಯನ್ನು ಸೂಚಿಸುತ್ತದೆ.
ಭಾರತೀಯ ಸಮಾಜದಲ್ಲಿ ಚಿನ್ನವನ್ನು ಶ್ರೇಷ್ಟತೆಯ, ಸಮೃದ್ಧಿಯ ಮತ್ತು ಧಾರ್ಮಿಕ ಶುದ್ಧತೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಮದುವೆ, ಹಬ್ಬಗಳಲ್ಲಿ ಮಾತ್ರವಲ್ಲದೆ ಕಷ್ಟದ ದಿನಗಳಿಗೆ ಸಹಾಯವಾಗುವ ಹೂಡಿಕೆಯ ರೂಪದಲ್ಲೂ ಚಿನ್ನವನ್ನು ಖರೀದಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಬೆಲೆ ಏರಿಕೆಯು ಆರ್ಥಿಕವಾಗಿ (Economically) ಸಾಮಾನ್ಯ ಜನರಿಗೆ ನೇರವಾಗಿ ತಟ್ಟುತ್ತಿರುವುದು ಸಹಜ.
ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗಬಹುದೇ? ಅಥವಾ ಇಳಿಕೆಯಾಗುತ್ತದೆಯೇ ಎಂಬುದನ್ನು ಅಂತಾರಾಷ್ಟ್ರೀಯ ಪರಿಸ್ಥಿತಿಗಳು (International changes) ಮತ್ತು ದೇಶೀಯ ಬೇಡಿಕೆ ನಿರ್ಧರಿಸಲಿದೆ. ಹೀಗಾಗಿ ಬಂಗಾರ ಕೊಳ್ಳಲು ಉದ್ದೇಶಿಸಿದವರು ಸುಧಾರಿತ ಬೆಲೆ ಇದ್ದಾಗ ಕೊಂಡುಕೊಳ್ಳುವುದು ಉತ್ತಮ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.