2025ರಲ್ಲಿ ಮಾಧ್ಯಮಿಕ ಫಲಿತಾಂಶದ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ಟಾಪ್ 5 ವಿದ್ಯಾರ್ಥಿವೇತನಗಳು: ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಪ್ರಯೋಜನಗಳ ಸಂಪೂರ್ಣ ವಿವರ
ಪ್ರತಿ ವಿದ್ಯಾರ್ಥಿಯ ವಿದ್ಯಾಭ್ಯಾಸದ (education) ಪಯಣದಲ್ಲಿ ಪ್ರಮುಖ ಘಟ್ಟ ಎಂದರೆ 10ನೇ ತರಗತಿಯ (ಮಾಧ್ಯಮಿಕ) ಪರೀಕ್ಷೆಯ ಫಲಿತಾಂಶ. ಪಶ್ಚಿಮ ಬಂಗಾಳ ಮಂಡಳಿಯಡಿಯಲ್ಲಿ 2025ರ ಮೇ 2 ರಂದು ಮಾಧ್ಯಮಿಕ ಫಲಿತಾಂಶಗಳು (results) ಪ್ರಕಟವಾಗಿವೆ. ಈ ಸಮಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಅಂಕಗಳು, ಮುಂದಿನ ಪಠ್ಯಕ್ರಮಗಳು ಹಾಗೂ ಉನ್ನತ ಶಿಕ್ಷಣದ ಯೋಜನೆಗಳ (Education Schemes) ಬಗ್ಗೆ ಆತಂಕದಲ್ಲಿರುವುದು ಸಹಜ. ಹೀಗಿರುವಾಗ, ಹಣಕಾಸಿನ ನೆರವು ಹುಡುಕುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ “ವಿದ್ಯಾರ್ಥಿವೇತನ” ಎಂಬ ಆಯ್ಕೆ ಬಹುಮುಖ್ಯವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಥಿವೇತನಗಳು ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ(Talented person from economically weak background), ವಿದ್ಯಾಭ್ಯಾಸದಲ್ಲಿ ನಿರಂತರತೆ ಮತ್ತು ಉನ್ನತಿಗೆ ನೂರರಷ್ಟು ನೆರವಾಗುವ ಉಪಕ್ರಮವಾಗಿದೆ. ಪಶ್ಚಿಮ ಬಂಗಾಳ ಹಾಗೂ ಕೇಂದ್ರ ಸರ್ಕಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಂಬಲಕ್ಕಾಗಿ ಹಲವು ರೂಪದಲ್ಲಿ ವಿದ್ಯಾರ್ಥಿವೇತನಗಳ ಯೋಜನೆಗಳನ್ನು (Schemes of scholarships) ರಚಿಸಿವೆ. ಹಾಗಿದ್ದರೆ ಮಾಧ್ಯಮಿಕದ ನಂತರ ಲಭ್ಯವಿರುವ ಟಾಪ್ 5 ವಿದ್ಯಾರ್ಥಿವೇತನಗಳ ಯಾವುವು? ಈ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
1. ಸ್ವಾಮಿ ವಿವೇಕಾನಂದ ಮೆರಿಟ್-ಕಮ್-ಮೀನ್ಸ್ ವಿದ್ಯಾರ್ಥಿವೇತನ (SVMCM) 2025:
ಪಶ್ಚಿಮ ಬಂಗಾಳ ಸರ್ಕಾರದ ಪ್ರಗತಿಶೀಲ ಯೋಜನೆಯಾದ ಈ ವಿದ್ಯಾರ್ಥಿವೇತನವು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತದೆ. ಇದು ಹೈಯರ್ ಸೆಕೆಂಡರಿ ಹಾಗೂ ವೃತ್ತಿಪರ ಕೋರ್ಸ್‌ಗಳಿಗೆ ಅನ್ವಯಿಸುತ್ತದೆ.
ಅರ್ಹತೆ (Qualification):
ಮಾಧ್ಯಮಿಕದಲ್ಲಿ ಕನಿಷ್ಠ 60% ಅಂಕಗಳು.
ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ.
ಬೇರೆ ಯಾವುದೇ ವಿದ್ಯಾರ್ಥಿವೇತನ ಪಡೆಯಬಾರದು.
ಲಾಭಗಳು (benefits) :
ಕೋರ್ಸ್ ಆಧಾರಿತ ಮಾಸಿಕ ಸ್ಟೈಫಂಡ್.
ವಿಜ್ಞಾನ, ಕಲೆ, ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಗಳಿಗೆ ಅನ್ವಯಿಸುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಅಕ್ಟೋಬರ್–ನವೆಂಬರ್ 2025 ರಲ್ಲಿ svmcm.wbhed.gov.in ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
ಅಧಿಕೃತ ವೆಬ್‌ಸೈಟ್: svmcm.wbhed.gov.in
2. ನಬನ್ನಾ ವಿದ್ಯಾರ್ಥಿವೇತನ 2025 (Nabanna Scholarship 2025) :
ಮುಖ್ಯಮಂತ್ರಿ ಪರಿಹಾರ ನಿಧಿಯಡಿಯಲ್ಲಿ ನೀಡಲ್ಪಡುವ ಈ ಸಹಾಯಧನವು ತುರ್ತು ಶೈಕ್ಷಣಿಕ ವೆಚ್ಚಗಳಿಗೆ ಉಪಯುಕ್ತವಾವುತ್ತದೆ.
ಅರ್ಹತೆ (Qualification) :
ಮಾಧ್ಯಮಿಕದಲ್ಲಿ ಕನಿಷ್ಠ 60% ಅಂಕಗಳು.
ವಾರ್ಷಿಕ ಆದಾಯ ₹60,000 ಮೀರಬಾರದು.
ಲಾಭಗಳು:
ಒಂದು ಬಾರಿಯ ಹಣಕಾಸು ನೆರವು (ಮೊತ್ತ ಬದಲಾಗಬಹುದು).
ಅರ್ಜಿ ವಿಧಾನ (Application process):
ಆಫ್‌ಲೈನ್ ಅರ್ಜಿ ಪ್ರಕ್ರಿಯೆ
ಹೌರಾದ ನಬನ್ನಾ ಕಚೇರಿಗೆ ಅರ್ಜಿ ಸಲ್ಲಿಸಬೇಕು.
3. ಐಕ್ಯಶ್ರೀ ವಿದ್ಯಾರ್ಥಿವೇತನ 2025(Aikyashree Scholarship 2025) :
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗಾಗಿ WBMDFC ನಡೆಸುವ ಯೋಜನೆ ಇದಾಗಿದೆ. ಈ ಯೋಜನೆಯಿಂದ ಅಲ್ಪಸಂಖ್ಯಾತ ಸಮುದಾಯಗಳಾದ ಕ್ರಿಶ್ಚಿಯನ್ನರು, ಮುಸ್ಲಿಮರು, ಬೌದ್ಧರು, ಸಿಖ್ಖರು, ಜೈನರು ಮತ್ತು ಪಾರ್ಸಿಗಳಿಗೆ ಶೈಕ್ಷಣಿಕ ಬೆಂಬಲವನ್ನು ಒದಗಿಸುತ್ತದೆ.
ಅರ್ಹತೆ(Qualification):
ಮಾಧ್ಯಮಿಕದಲ್ಲಿ ಕನಿಷ್ಠ 50% ಅಂಕಗಳು.
ವಾರ್ಷಿಕ ಆದಾಯ ₹2 ಲಕ್ಷದೊಳಗೆ ಇರಬೇಕು.
ಲಾಭಗಳು:
ಬೋಧನಾ ಶುಲ್ಕ, ನಿರ್ವಹಣಾ ಭತ್ಯೆ ಸೇರಿದಂತೆ ಸಂಪೂರ್ಣ ಬೆಂಬಲ.
ಮೆಟ್ರಿಕ್ ನಂತರದ ಅಧ್ಯಯನಕ್ಕೆ ಅನ್ವಯಿಸುತ್ತದೆ.
ಅರ್ಜಿ ವಿಧಾನ (Application process):
wbmdfcscholarship.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿ.
4. ಸೀತಾರಾಮ್ ಜಿಂದಾಲ್ ಫೌಂಡೇಶನ್ ವಿದ್ಯಾರ್ಥಿವೇತನ 2025(Sitaram Jindal Foundation Scholarship 2025):
ಖಾಸಗಿ ಸಂಸ್ಥೆಯ ವಿದ್ಯಾರ್ಥಿವೇತನ ಯೋಜನೆಯಾದ ಇದು ಭಾರತಾದ್ಯಂತ ವಿದ್ಯಾರ್ಥಿಗಳಿಗೆ ಲಭ್ಯವಿದೆ.
ಅರ್ಹತೆ (Qualification):
ಹುಡುಗರು: 60%, ಹುಡುಗಿಯರು: 55% ಅಂಕಗಳು.
ಆದಾಯ ₹2.5 ಲಕ್ಷಕ್ಕಿಂತ ಕಡಿಮೆ.
ವಯಸ್ಸು 30 ವರ್ಷಕ್ಕಿಂತ ಕಡಿಮೆ.
ಲಾಭಗಳು(Benefit’s):
ಮಾಸಿಕ ₹500–₹2,500 ವರೆಗೆ ಸ್ಟೈಫಂಡ್(Stipend).
ತಾಂತ್ರಿಕ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ಲಭ್ಯ.
ಅರ್ಜಿ ವಿಧಾನ:
sjfoundation.org ನಿಂದ ಫಾರ್ಮ್ ಡೌನ್‌ಲೋಡ್ ಮಾಡಿ
ಅಂಚೆ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
5. ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನ 2025(LIC Golden Jubilee Scholarship 2025):
ಎಲ್ಐಸಿ ವತಿಯಿಂದ ನೀಡಲಾಗುವ ಈ ಯೋಜನೆ, ಶ್ರೇಷ್ಠ ಶೈಕ್ಷಣಿಕ ಸಾಧನೆ ತೋರಿಸಿರುವ ದುರ್ಬಲ ಕುಟುಂಬದ ಮಕ್ಕಳಿಗೆ ಸಹಾಯ ಮಾಡುತ್ತದೆ.
ಅರ್ಹತೆ(Qualification):
ಮಾಧ್ಯಮಿಕ ಅಥವಾ ಹೈಯರ್ ಸೆಕೆಂಡರಿಯಲ್ಲಿ ಕನಿಷ್ಠ 60%.
ವಾರ್ಷಿಕ ಆದಾಯ ₹2.5 ಲಕ್ಷದೊಳಗೆ ಇರಬೇಕು.
ಲಾಭಗಳು(Benefits):
11ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ₹15,000.
ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು ಕೋರ್ಸ್‌ಗಳಿಗೂ ಲಭ್ಯ.
ಅರ್ಜಿ ವಿಧಾನ(Apllication process):
ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ licindia.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿ.
ವಿದ್ಯಾರ್ಥಿವೇತನಕ್ಕಾಗಿ ತಯಾರಿ ಹೇಗೆ ಮಾಡಬೇಕು?:
ಅಗತ್ಯ ದಾಖಲೆಗಳನ್ನು (Documents) ಮುಂಚಿತವಾಗಿ ಸಿದ್ಧಪಡಿಸಿ (ಅಂಕಪಟ್ಟಿ, ಆದಾಯ ಪ್ರಮಾಣಪತ್ರ, ಐಡಿಗಳು).
ಅಧಿಕೃತ ವೆಬ್‌ಸೈಟ್‌ಗಳನ್ನು ಬಳಸುವ ಬಗ್ಗೆ ಎಚ್ಚರಿಕೆ ಇರಲಿ.
ನವೀಕರಣಗಳಿಗಾಗಿ ಪೋರ್ಟಲ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ.
ಶಾಲಾ ಶಿಕ್ಷಕರ ಸಹಾಯವನ್ನು ಅಥವಾ ಸೈಬರ್ ಸೆಂಟರ್‌ಗಳನ್ನು (Cyber centers)ಬಳಸಿ.
ಒಟ್ಟಾರೆಯಾಗಿ ಹೇಳುವುದಾದರೆ, ವಿದ್ಯಾರ್ಥಿವೇತನಗಳ ಕುರಿತು ಮುಂಚಿತ ಅರಿವು ಹಾಗೂ ಸಕಾಲದಲ್ಲಿ ಅರ್ಜಿ ಸಲ್ಲಿಸಬೇಕು. ಇನ್ನು, ಈ ರೀತಿಯ ವಿದ್ಯಾರ್ಥಿವೇತನಗಳು ಆರ್ಥಿಕ ಸಹಾಯದ (Economic help) ದಾರಿ ಮಾತ್ರವಲ್ಲ, ನಿಮ್ಮ ವಿದ್ಯಾಭ್ಯಾಸದ ಕನಸುಗಳನ್ನು ಸಾಕಾರಗೊಳಿಸುವ ಸೌಲಭ್ಯವನ್ನು ಕಲ್ಪಿಸುತ್ತದೆ. ಈ ವಿದ್ಯಾರ್ಥಿವೇತನಗಳ ಬಗ್ಗೆ ಗಮನ ಹರಿಸಿ, ನಿಮ್ಮ ಭವಿಷ್ಯದ ಪಯಣಕ್ಕೆ ದೃಢನಿಶ್ಚಯದಿಂದ ಮುಂದಾಗಿರಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.