ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ: ಚಿನ್ನಪ್ರಿಯರಿಗೆ ಅಕ್ಷಯ ತೃತೀಯದ ನಂತರ ಭರ್ಜರಿ ಖುಷಿ!
ಚಿನ್ನದ ಮಾರುಕಟ್ಟೆಯಲ್ಲಿ (In gold market) ಈವತ್ತಿನ ಬೆಳವಣಿಗೆಗೆ ಚಿನ್ನಪ್ರಿಯರು ಅಚ್ಚರಿ ಪಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಿತ್ಯ ಏರುತ್ತಿದ್ದ ಚಿನ್ನದ ಬೆಲೆ, ಅಕ್ಷಯ ತೃತೀಯದ ಮೂರನೇ ದಿನವೇ ಭಾರಿ ಇಳಿಕೆಯನ್ನು ಕಂಡಿದ್ದು, ಗ್ರಾಹಕರಲ್ಲಿ ಹೊಸ ಉತ್ಸಾಹ ಹುಟ್ಟಿಸಿದೆ. ಚಿನ್ನವೆಂದರೆ ಭಾರತೀಯರ ಅಸ್ತಿತ್ವದ ಭಾಗ. ಅದು ಸಂಪ್ರದಾಯ, ಗೌರವ ಮತ್ತು ಹೂಡಿಕೆಯ ಸಂಕೇತ. ಈ ಸಂದರ್ಭದಲ್ಲಿ ಚಿನ್ನದ ಮೌಲ್ಯದಲ್ಲಿ ಸಂಭವಿಸಿದ ಉಲ್ಟಾ ತಿರುವು, ಎಲ್ಲಾ ವರ್ಗದ ಗ್ರಾಹಕರ ಗಮನ ಸೆಳೆಯುತ್ತಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 2, 2025: Gold Price Today
ಮೇ ತಿಂಗಳ ಮೊದಲ ದಿನದಿಂದಲೇ ಚಿನ್ನದ ದರದಲ್ಲಿ ಬಾರಿ ಇಳಿಕೆಯನ್ನು ಕಾಣುತ್ತಿದ್ದಾರೆ ಗ್ರಾಹಕರು. ಈ ಇಳಿಕೆಯಿಂದ ಕೊಂಚ ನೀರಳತೆಯನ್ನು ಕೂಡ ಅವರು ಅನುಭವಿಸುತ್ತಿದ್ದಾರೆ. ಈ ಏರಿಕೆ ಮುಂದೆ ಹೀಗೆ ಇರುತ್ತದಾ ಅಥವಾ ಇಲ್ಲವಾ ಎಂಬ ಗೊಂದಲದಲ್ಲೂ ಕೂಡ ಗ್ರಾಹಕರು ಇದ್ದಾರೆ. ಒಟ್ಟಾರೆಯಾಗಿ ನಿನ್ನೆ ಚಿನ್ನದ ದರ ಗ್ರಾಹಕರಲ್ಲಿ ಕೊಂಚ ಸಂತೋಷವನ್ನು ತಂದುಕೊಟ್ಟಿದೆ. ಹಾಗಿದ್ದರೆ, ಮೇ 2, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 774 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,572 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,179 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 97,900 ರೂ. ನಷ್ಟಿದ್ದು.
ಹೌದು, ಇತ್ತೀಚೆಗೆ ಜಾಗತಿಕ ಆರ್ಥಿಕ ಸ್ಥಿತಿಗತಿಗಳ ಪ್ರಭಾವದಿಂದ ಚಿನ್ನದ ಬೆಲೆಗಳಲ್ಲಿ ನಿರಂತರ ಏರಿಳಿತ ಕಂಡುಬಂದಿದೆ. ಅಮೆರಿಕದ ಡಾಲರ್ ಮೌಲ್ಯದ ಬದಲಾವಣೆ (Changes in dollar value), ಫೆಡ್‌ರಿಸರ್ವ್ ಬಡ್ಡಿದರ ನಿರ್ಧಾರ, ಜಿಯೋಪೊಲಿಟಿಕಲ್ ಒತ್ತಡಗಳು ಇತ್ಯಾದಿ ಅಂಶಗಳು ಚಿನ್ನದ ದರದ ಮೇಲೆ ನೇರ ಪರಿಣಾಮ ಬೀರುತ್ತವೆ. ಅಂತಹ ಸಮಯದಲ್ಲಿ, ಈ ದಿನದ ಬೆಳವಣಿಗೆ ಖಂಡಿತವಾಗಿ ವಿಶಿಷ್ಟವಾಗಿದೆ.
ಮೇ 1, 2025 ಚಿನ್ನದ ದರ ಹೀಗಿದೆ:
22 ಕ್ಯಾರಟ್ ಚಿನ್ನ:
1 ಗ್ರಾಂ – ₹8,775 (ಇಳಿಕೆ ₹200)
10 ಗ್ರಾಂ – ₹87,750 (ಇಳಿಕೆ ₹2,000)
100 ಗ್ರಾಂ – ₹8,77,500 (ಇಳಿಕೆ ₹20,000)
24 ಕ್ಯಾರಟ್ ಚಿನ್ನ:
1 ಗ್ರಾಂ – ₹9,573 (ಇಳಿಕೆ ₹218)
10 ಗ್ರಾಂ – ₹95,730 (ಇಳಿಕೆ ₹2,180)
100 ಗ್ರಾಂ – ₹9,57,300 (ಇಳಿಕೆ ₹21,800)
18 ಕ್ಯಾರಟ್ ಚಿನ್ನ:
1 ಗ್ರಾಂ – ₹7,180 (ಇಳಿಕೆ ₹164)
10 ಗ್ರಾಂ – ₹71,800 (ಇಳಿಕೆ ₹1,640)
100 ಗ್ರಾಂ – ₹7,18,000 (ಇಳಿಕೆ ₹16,400)
ಪ್ರಮುಖ ನಗರಗಳಲ್ಲಿ ಮೇ 1, 2025 ರಂದು ಪ್ರತಿ 1 ಗ್ರಾಂ ಚಿನ್ನದ ದರ ಹೀಗಿದೆ:
ಬೆಂಗಳೂರು/ಹೈದರಾಬಾದ್/ಮುಂಬೈ/ಕೋಲ್ಕತಾ/ಪುಣೆ:
22 ಕ್ಯಾರಟ್: ₹8,775
24 ಕ್ಯಾರಟ್: ₹9,573
18 ಕ್ಯಾರ್ಟ್: ₹7,180
ದೆಹಲಿ:
22 ಕ್ಯಾರಟ್: ₹8,790
24 ಕ್ಯಾರ್ಟ್: ₹9,588
18 ಕ್ಯಾರ್ಟ್: ₹7,192
ಅಹಮದಾಬಾದ್/ಬರೋಡಾ:
22 ಕ್ಯಾರಟ್: ₹8,780
24 ಕ್ಯಾರ್ಟ್: ₹9,578
18 ಕ್ಯಾರ್ಟ್: ₹7,184
ಮೇ 1, 2025 ರಂದು ಬೆಳ್ಳಿ ದರ ಯಾವರೀತಿಯಿದೆ:
1 ಗ್ರಾಂ – ₹98 (ಇಳಿಕೆ ₹2.40)
10 ಗ್ರಾಂ – ₹980 (ಇಳಿಕೆ ₹24)
100 ಗ್ರಾಂ – ₹9,800 (ಇಳಿಕೆ ₹240)
1 ಕೆ.ಜಿ – ₹98,000 (ಇಳಿಕೆ ₹2,400)
ಜಾಗತಿಕ ಮಾರುಕಟ್ಟೆ ಸ್ಥಿತಿ – ಸ್ಪಾಟ್ ಗೋಲ್ಡ್:
ಸ್ಪಾಟ್ ಗೋಲ್ಡ್ ಬೆಲೆ $3,228.70ಕ್ಕೆ ಇಳಿಕೆಯಾಗಿದೆ, ಕಳೆದ ತಿಂಗಳಿಗಿಂತ 1.8% ಇಳಿಕೆಯಾಗಿದೆ. ಅಮೆರಿಕನ್ ಡಾಲರ್ ಬಲಿಷ್ಠಗೊಂಡಿರುವುದು ಮತ್ತು ಜಾಗತಿಕ ವ್ಯಾಪಾರ (Global business) ಯುದ್ಧದ ಆತಂಕ ತಗ್ಗಿರುವುದು ಈ ಇಳಿಕೆಗೆ ಕಾರಣಗಳಾಗಿವೆ.
ಚಿನ್ನದ ದರದ ಏರಿಳಿತಗಳ ಹಿಂದಿನ ಪ್ರಮುಖ ಕಾರಣಗಳು ಹೀಗಿವೆ:
- ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರಭಾವ.
- ಅಮೆರಿಕದ ಬಡ್ಡಿದರ ನೀತಿ.
- ಭಾರತೀಯ ರೂಪಾಯಿಯ ಮೌಲ್ಯ.
- ಚಿನ್ನದ ಉತ್ಪಾದನೆ ಹಾಗೂ ಹೂಡಿಕೆದಾರರ ಮನೋಭಾವ.
- ಜಿಯೋಪೊಲಿಟಿಕಲ್ (Jiopolitical) ಸ್ಥಿತಿಗತಿ ಹಾಗೂ ಯುದ್ಧಾತ್ಮಕ ಪರಿಸ್ಥಿತಿ.
- ಭಯಭೀತಿಯಿಂದ ಹೂಡಿಕೆದಾರರು ಚಿನ್ನದತ್ತ ಮುಖ ಮಾಡುವುದು.
ಒಟ್ಟಾರೆಯಾಗಿ, ಇಂದಿನ ಚಿನ್ನದ ಬೆಲೆಯಲ್ಲಿ ಕಂಡುಬಂದ ಇಳಿಕೆ, ಅಕ್ಷಯ ತೃತೀಯದ ಖರೀದಿಗಳಿಗೆ ಮುಂದಾಗದಿದ್ದವರಿಗೆ ಮತ್ತೊಂದು ಅವಕಾಶ ನೀಡಿದಂತಾಗಿದೆ. ಇದು ಚಿನ್ನ ಖರೀದಿಸಲು (Buying Buying) ಸೂಕ್ತ ಸಮಯವಾಗಿರಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಎಲ್ಲಾ ದರಗಳನ್ನು ಗಮನದಲ್ಲಿಟ್ಟುಕೊಂಡು, ಬುದ್ಧಿವಂತಿಕೆಯ ಹೂಡಿಕೆಗೆ ಮುಂದಾಗುವುದು ಉತ್ತಮ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.