ನೈಸರ್ಗಿಕವಾಗಿ ತೂಕ ಹೆಚ್ಚಿಸುವ 5 ಆರೋಗ್ಯಕರ ಆಹಾರದ ಪಟ್ಟಿ ಇಲ್ಲಿದೆ.!

Picsart 25 04 17 17 15 34 875

WhatsApp Group Telegram Group

ಆರೋಗ್ಯಕರ ಆಹಾರ ಪದ್ಧತಿಗಳ ಮೂಲಕ ನೈಸರ್ಗಿಕವಾಗಿ ತೂಕ ಹೆಚ್ಚಿಸುವ(Weight Gain Foods) ಮಾರ್ಗಗಳು ಹೀಗಿವೆ.

ಇಂದಿನ ಜೀವನಶೈಲಿ, ಆಹಾರದ ಪದ್ಧತಿಯಲ್ಲಿ ನಡೆಯುತ್ತಿರುವ ಬದಲಾವಣೆಗಳು, ಕಾರ್ಯಪದ್ಧತಿಯಲ್ಲಿನ ಬದಲಾವಣೆ ಮತ್ತು ವೇಗವಾದ ದಿನಚರಿಯ ಪರಿಣಾಮವಾಗಿ ಹಲವಾರು ಜನರು ತೂಕದ ಸಮಸ್ಯೆ(Weight problem) ಎದುರಿಸುತ್ತಿದ್ದಾರೆ. ಹೆಚ್ಚು ತೂಕವಿರುವವರಷ್ಟು ಕಡಿಮೆ ತೂಕ ಹೊಂದಿರುವವರಿಗೂ ದೈಹಿಕ, ಮಾನಸಿಕ ಆರೋಗ್ಯದ ಸಮಸ್ಯೆಗಳು ಕಾಣಿಸುತ್ತಿವೆ. ಬಹುಮಂದಿಗೆ ತೂಕ ಹೆಚ್ಚಿಸಲು ಯತ್ನಿಸುವುದು ಕಷ್ಟದ ಕೆಲಸವಾಗಿದೆ. ಆಯಾಸವಿಲ್ಲದಿರುವಷ್ಟು ತರಬೇತಿ ಮಾಡಿದರೂ, ಕೆಲವೊಮ್ಮೆ ಅದು ಯಾವುದೇ ಪರಿಣಾಮವನ್ನೂ ತರದೆ ಹೋಗುತ್ತದೆ. ಈ ಸ್ಥಿತಿಯಲ್ಲಿ ಸರಿಯಾದ ಆಹಾರದ ಆಯ್ಕೆ ಅತ್ಯಂತ ಮುಖ್ಯ. ಹಾಗಿದ್ದರೆ ಯಾವ ರೀತಿಯ ಆಹಾರ ಪದ್ಧತಿಗಳನ್ನು(Dietary habits) ಅನುಸರಿಸಿ ತೂಕ ಇಳಿಸಿಕೊಳ್ಳಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ತೂಕ ಹೆಚ್ಚಿಸಲು ಇಚ್ಛಿಸುವವರು ಕೆಲವೊಮ್ಮೆ ವೇಗವಾಗಿ ಫಲಿತಾಂಶ ಪಡೆಯಬೇಕೆಂಬ ಆಸೆಯಲ್ಲಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದಾದ ಕ್ರಮಗಳನ್ನು ಅನುಸರಿಸುತ್ತಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ತೂಕ ಹೆಚ್ಚಿಸುವ ಪೌಡರ್‌ಗಳು(Powders), ಪ್ಯಾಕ್ ಆಹಾರಗಳು ಅಥವಾ ಪಿಲ್ಸ್‌ಗಳು ತಕ್ಷಣದ ಪರಿಣಾಮವನ್ನು ನೀಡಬಹುದು ಎನಿಸಿದರೂ, ಅವು ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ಅನೇಕ ಹಾನಿಕರ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಆದರೆ, ತೂಕ ಹೆಚ್ಚಿಸುವುದು ಸಹ ಒಂದು ವೈಜ್ಞಾನಿಕ ಪ್ರಕ್ರಿಯೆ.

ತೂಕ ಹೆಚ್ಚಿಸಲು ಬೇಕಾದ ಆಹಾರವು ಹಸಿವನ್ನು ತಣಿಸಲು ಮಾತ್ರವಲ್ಲದೇ, ಪೋಷಕಾಂಶಗಳನ್ನು(nutrients) ಕೂಡ ನೀಡಬೇಕಾಗುತ್ತದೆ. ಕಾರ್ಬೋಹೈಡ್ರೆಟ್‌ಗಳು(Carbohydrates), ಉತ್ತಮ ಗುಣಮಟ್ಟದ ಕೊಬ್ಬುಗಳು, ಪ್ರೋಟೀನ್‌ಗಳು(proteins) ಹಾಗೂ ವಿಟಮಿನ್‌ಗಳು(Vitamins) ಇರುವ ಆಹಾರಗಳು ದೇಹದ ತೂಕವನ್ನೂ, ಸ್ನಾಯು ಬಲವನ್ನೂ ಉತ್ತಮಗೊಳಿಸುತ್ತವೆ. ಇವು ದೇಹಕ್ಕೆ ಶಕ್ತಿಯ ಜೊತೆಗೆ ಆರೋಗ್ಯವನ್ನು ಕಾಪಾಡುತ್ತವೆ.

ಕೆಳಕಂಡ ಆರು ಆರೋಗ್ಯಕರ ಆಹಾರಗಳು ತೂಕ ಹೆಚ್ಚಿಸಲು ಬಹುಪಾಲು ತಜ್ಞರ ಸಹಮತ ಪಡೆದ ಆಹಾರಗಳಾಗಿವೆ:

1. ಅಕ್ಕಿ(rice):
ಅಕ್ಕಿ ಕಾರ್ಬೋಹೈಡ್ರೇಟ್‌ಗಳಿಂದ(carbohydrates) ತುಂಬಿದ ಆಹಾರವಾಗಿದ್ದು, ತ್ವರಿತವಾಗಿ ಮತ್ತು ನೈಸರ್ಗಿಕವಾಗಿ ತೂಕ ಹೆಚ್ಚಿಸಲು(gain weight naturally) ಇದು ಉಪಯುಕ್ತ. ಒಂದು ಕಪ್ ಬೆಂದ ಅಕ್ಕಿಯಲ್ಲಿ ಸುಮಾರು 200 ಕ್ಯಾಲೊರಿಗಳು(200 calories) ಮತ್ತು 44 ಗ್ರಾಂ ಕಾರ್ಬೋಹೈಡ್ರೇಟ್‌ಗಳು(44 grams of carbohydrates) ಇರುತ್ತವೆ. ಕಡಿಮೆ ಕೊಬ್ಬಿನ ಪ್ರಮಾಣ ಹೊಂದಿರುವ ಅಕ್ಕಿ ಬೇಗನೇ ಜೀರ್ಣವಾಗುತ್ತದೆ ಮತ್ತು ಯಾವುದೇ ತರಕಾರಿಗಳೊಂದಿಗೆ ತಿನ್ನಬಹುದಾದ ಬಹುಮುಖ ಆಹಾರವಾಗಿದೆ. ಇದು ದೇಹಕ್ಕೆ ತಕ್ಷಣ ಶಕ್ತಿ ನೀಡುವ ಆಹಾರವಾಗಿದ್ದು, ತೂಕ ಹೆಚ್ಚಿಸಲು ಪರಿಣಾಮಕಾರಿ.

2. ಬೀಜಗಳು ಮತ್ತು ಒಣಹಣ್ಣುಗಳು(Nuts and dried fruits):
ಗೋಡಂಬಿ, ಬಾದಾಮಿ, ವಾಲ್‌ನಟ್ ಮತ್ತು ಒಣದ್ರಾಕ್ಷಿ ಹೀಗೆ ಹಲವಾರು ಬೀಜ ಹಾಗೂ ಒಣಹಣ್ಣುಗಳು ಆರೋಗ್ಯಕರ ಕೊಬ್ಬುಗಳ ಸಮೃದ್ಧ ಮೂಲಗಳಾಗಿವೆ. ಇವು ತೂಕ ಹೆಚ್ಚಿಸಲು ಮಾತ್ರವಲ್ಲದೇ, ದೇಹಕ್ಕೆ ಅಗತ್ಯವಿರುವ ವಿಟಮಿನ್‌ಗಳು, ಮಿನರಲ್‌ಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳನ್ನು(Minerals and anti-oxidants) ಕೂಡ ಒದಗಿಸುತ್ತವೆ. ದಿನಕ್ಕೆ ಒಂದು ಲೋಟ ಹಾಲಿನೊಂದಿಗೆ(glass of milk) ಸೇವಿಸಿದರೆ ಹೆಚ್ಚುವರಿ ಕ್ಯಾಲೊರಿಗಳನ್ನು ಶರೀರಕ್ಕೆ ಪೂರೈಸುತ್ತವೆ. ಸ್ನಾಯು ಶಕ್ತಿಯನ್ನು(Muscle strength) ಹೆಚ್ಚಿಸಲು ಸಹ ಸಹಾಯಕವಾಗುತ್ತವೆ.

3. ಚಿಕನ್ ಮತ್ತು ಇತರೆ ಮಾಂಸಾಹಾರಗಳು(Chicken and other meats):
ಚಿಕನ್ ಹಾಗೂ ಇತರೆ ಮಾಂಸಗಳಲ್ಲಿ ಪ್ರೋಟೀನ್‌ಗಳ ಉತ್ತಮ ಪ್ರಮಾಣವಿದ್ದು, ಸ್ನಾಯು ಬೆಳವಣಿಗೆಗೆ(muscle growth) ಸಹಾಯ ಮಾಡುತ್ತದೆ. ಪ್ರೋಟೀನ್ ದೇಹದ ತೂಕ ಹೆಚ್ಚಿಸಲು ಅಗತ್ಯವಿರುವ ಮೂಲ ಪೋಷಕಾಂಶಗಳಲ್ಲಿ ಪ್ರಮುಖವಾದದ್ದು. ಕೋಳಿ ಮಾಂಸವು(Chicken meat) ಹೆಚ್ಚು ಪ್ರೋಟೀನ್ ಹೊಂದಿರುವ ಆಹಾರವಾಗಿದ್ದು, ಇಡೀ ಶರೀರದ ತೂಕವನ್ನು(Body weight) ಉತ್ತಮ ರೀತಿಯಲ್ಲಿ ಹೆಚ್ಚಿಸಲು ನೆರವಾಗುತ್ತದೆ.

4. ಮೀನುಗಳು(fishes):
ಸ್ಯಾಲ್ಮನ್, ಪಾಪ್ಲೆಟ್, ಹಾ (ಬಟರ್‌ಫಿಶ್) ಮುಂತಾದ ಕೊಬ್ಬಿನ ಮೀನುಗಳು ಓಮೆಗಾ-3 ಕೊಬ್ಬುಗಳು ಹಾಗೂ ಪ್ರೋಟೀನ್‌ಗಳ ಸಮೃದ್ಧ ಮೂಲಗಳಾಗಿವೆ. ಇವು ತೂಕವನ್ನಷ್ಟೆ ಅಲ್ಲದೆ, ಹೃದಯದ ಆರೋಗ್ಯವನ್ನೂ(Heart health ) ಉತ್ತಮಗೊಳಿಸುತ್ತವೆ. ಸ್ಯಾಲ್ಮನ್‌ನಲ್ಲಿ ಸುಮಾರು 240 ಕ್ಯಾಲೊರಿಗಳು(240 calories) ಇರುತ್ತದೆ ಮತ್ತು ಇದು ಸ್ನಾಯುಗಳ ಬೆಳವಣಿಗೆಗೆ ಬಹುಮುಖ್ಯವಾಗಿರುತ್ತದೆ. ಇದನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ತೂಕದೊಂದಿಗೆ ಹೃದಯದ ಆರೋಗ್ಯವೂ ಉತ್ತಮವಾಗುತ್ತದೆ.

5. ಸ್ಟಾರ್ಚ್‌ ಅಂಶ ಇರುವ ತರಕಾರಿಗಳು(Starchy vegetables):
ಆಲೂಗಡ್ಡೆ(potato), ಸಿಹಿ ಆಲೂಗಡ್ಡೆ(sweet potato), ಮೊಳಕೆಕಾಳುಗಳು(Seedlings) ಮತ್ತು ಜೋಳದಂತಹ ತರಕಾರಿಗಳು ಹೆಚ್ಚಿನ ಕಾರ್ಬೋಹೈಡ್ರೆಟ್‌ಗಳನ್ನು ಒದಗಿಸುತ್ತವೆ. ಇವು ದೇಹದಲ್ಲಿ ಗ್ಲೈಕೋಜನ್‌(Glycogen) ಮಟ್ಟವನ್ನು ಹೆಚ್ಚಿಸುತ್ತವೆ, ಇದರಿಂದ ಸ್ನಾಯುಗಳಲ್ಲಿ ಶಕ್ತಿ ಸಂಗ್ರಹವಾಗುತ್ತದೆ. ಇವು ಪೋಷಕಾಂಶಗಳ ಒಳ್ಳೆಯ ಮೂಲವಾಗಿದ್ದು, ಜಠರದ ಆರೋಗ್ಯವನ್ನೂ(Stomach health) ಸುಧಾರಿಸುತ್ತವೆ.

6. ಹಾಲು(milk):
ಶತಮಾನಗಳಿಂದಲೂ ಆರೋಗ್ಯದ ಪರ್ಯಾಯವಾಗಿರುವ ಹಾಲು, ತೂಕ ಹೆಚ್ಚಿಸಲು(gain weight) ಸಹ ಸಹಾಯಕವಾಗಿದೆ. ಇದು ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೆಟ್ ಮತ್ತು ಕೊಬ್ಬುಗಳಿಂದ(carbohydrates and fats) ಸಮೃದ್ಧವಾಗಿದೆ. ಪ್ರತಿದಿನವೂ ಹಾಲು ಸೇವನೆಯಿಂದ ಸ್ನಾಯು ಬಲ ಹೆಚ್ಚಿಸಿ, ತೂಕವನ್ನು ಸ್ಥಿರವಾಗಿ ಹೆಚ್ಚಿಸಬಹುದು. ಇದಲ್ಲದೆ, ಮೂಳೆ ಹಾಗೂ ಹಲ್ಲುಗಳ ಬಲವರ್ಧನೆಗೆ(strengthen teeth) ಸಹಾಯವಾಗುತ್ತದೆ.

ತೂಕ ಹೆಚ್ಚಿಸಲು ಆರೋಗ್ಯವಂತಾದ ಮಾರ್ಗಗಳನ್ನು ಅನುಸರಿಸುವುದು ಬಹಳ ಮುಖ್ಯ. ಮೇಲೆ ನೀಡಿರುವ ಆಹಾರಗಳು ನೈಸರ್ಗಿಕವಾಗಿ ತೂಕ ಹೆಚ್ಚಿಸಲು(gain weight naturally) ಸಹಕಾರಿಯಾಗುತ್ತವೆ. ಮಾತ್ರವಲ್ಲದೆ, ಸರಿಯಾದ ನಿದ್ರೆ, ಯೋಗ ಅಥವಾ ವ್ಯಾಯಾಮ(Yoga or exercise), ನೀರಿನ ಸೇವನೆ ಇವುಗಳನ್ನೂ ಪಾಲಿಸಿಕೊಂಡು ಹೋಗುವುದು ಹೆಚ್ಚು ಪರಿಣಾಮಕಾರಿ. ತೂಕ ಹೆಚ್ಚಿಸುವ ಪ್ರಯತ್ನದ ವೇಳೆ ವೈದ್ಯರ ಸಲಹೆ(Doctor’s advice) ಪಡೆದು ಕ್ರಮ ಕೈಗೊಳ್ಳುವುದು ಸೂಕ್ತ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!