ಏಪ್ರಿಲ್ 13, 2025 ಚಿನ್ನದ ದರದಲ್ಲಿ ಭಾರಿ ಏರಿಕೆ : ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ಸ್ಥಿತಿ
ಚಿನ್ನವು ಭಾರತದ ಸಂಸ್ಕೃತಿಯಲ್ಲಿ (Indian culture) ಕೇವಲ ಆಭರಣವಷ್ಟೇ ಅಲ್ಲ, ಅದು ಶ್ರೇಯಸ್ಸು ಮತ್ತು ಆರ್ಥಿಕ ಭದ್ರತೆಯ ಸಂಕೇತವಾಗಿದೆ. ಹಬ್ಬಗಳು, ಮದುವೆಗಳು, ಅಥವಾ ಯಾವುದೇ ಶುಭ ಸಂದರ್ಭದಲ್ಲಿ ಚಿನ್ನದ ಖರೀದಿ ಸಾಮಾನ್ಯವಾಗಿದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ (Increased) ಕಾರಣ, ಆಭರಣಪ್ರಿಯರು ಹಾಗೂ ಚಿನ್ನದಲ್ಲಿ ಹೂಡಿಕೆ ಮಾಡುವವರು ಚಿಂತಾಜನಕರಾಗಿದ್ದಾರೆ. ಭಾರತದಲ್ಲಿಯೂ ಅಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲೂ (Global market) ಚಿನ್ನ ಮತ್ತು ಬೆಳ್ಳಿ ದರದ ಮೇಲೆ ಭಾರಿ ಪ್ರಭಾವ ಬೀರುವಂಥಾ ಆರ್ಥಿಕ ಮತ್ತು ಭೌಗೋಳಿಕ ಘಟನೆಯು ಚಿನ್ನದ ದರದಲ್ಲಿ ಬದಲಾವಣೆ ತರುತ್ತಿದೆ. ಇತ್ತೀಚೆಗೆ ವಿಶ್ವದಾದ್ಯಂತ ಭದ್ರತೆಗಾಗಿ ಚಿನ್ನವನ್ನು ಹೆಚ್ಚು ಹೂಡಿಕೆ ಮಾಧ್ಯಮವನ್ನಾಗಿ ಪರಿಗಣಿಸಲಾಗುತ್ತಿರುವುದು, ಚಿನ್ನದ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 13, 2025: Gold Price Today
ಏಪ್ರಿಲ್ ಆರಂಭದಲ್ಲಿ ಚಿನ್ನದ ದರ ಏರಿದರೂ, ನಂತರ ಕೆಲ ದಿನಗಳಲ್ಲಿ ಇಳಿಕೆ ಕಂಡಿತು. ಮೂರ್ನಾಲ್ಕು ದಿನಗಳ ಇಳಿಕೆಯ ಬಳಿಕ ಚಿನ್ನದ ದರ (Gold rate) ಇತ್ತೀಚೆಗೆ ಭಾರಿ ಏರಿಕೆ ಕಾಣುತ್ತಿದೆ. ಈ ಏರಿಕೆಯಿಂದ ಗ್ರಾಹಕರು ಹಾಗೂ ಹೂಡಿಕೆದಾರರು ಚಿನ್ನ ಖರೀದಿಗೆ ಮುನ್ನ ಮೂರ್ನಾಲ್ಕು ಬಾರಿ ಯೋಚಿಸುತ್ತಿದ್ದು, ಪ್ರತಿದಿನ ದರಗಳನ್ನು ಗಮನಿಸುತ್ತಿದ್ದಾರೆ. ಹಾಗಿದ್ದರೆ, ಏಪ್ರಿಲ್ 13, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 770 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,567 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,176 ಆಗಿದೆ. ನಿನ್ನಗೆ ಹೋಲಿಸಿದರೆ 34 ರೂ. ನಷ್ಟು ಏರಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,00,000. ರೂ ನಷ್ಟಿದ್ದು. ನಿನ್ನಗೆ ಹೋಲಿಸಿದರೆ 2, 800 ರೂ. ನಷ್ಟು ಏರಿಕೆಯಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ, ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ದರವು ಮತ್ತೊಂದು ದಾಖಲೆಯ ಮಟ್ಟಕ್ಕೇರಿದೆ. ಕಳೆದ ಕೆಲವು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಕಂಡುಬಂದಿರುವ ಸ್ಥಿರ ಏರಿಕೆಯಿಂದಾಗಿ ಆಭರಣ ಖರೀದಿದಾರರು (Gold buyer’s) ಖರೀದಿಗೆ ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಏಪ್ರಿಲ್ 12 ರಂದು ದೇಶದ ಪ್ರಮುಖ ನಗರಗಳು ಹಾಗೂ ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಹೇಗಿವೆ ಎಂಬ ವಿವರಗಳು ಹೀಗಿವೆ.
ಏಪ್ರಿಲ್ 12, 2025 ರಂದು ಭಾರತದಲ್ಲಿರುವ ಚಿನ್ನದ ದರಗಳು ಹೀಗಿವೆ:
22 ಕ್ಯಾರಟ್ ಚಿನ್ನ (10 ಗ್ರಾಂ): ₹87,770
24 ಕ್ಯಾರಟ್ ಚಿನ್ನ (10 ಗ್ರಾಂ): ₹95,670
18 ಕ್ಯಾರಟ್ ಚಿನ್ನ (10 ಗ್ರಾಂ): ₹71,550
ಬೆಳ್ಳಿ (10 ಗ್ರಾಂ): ₹970
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ:
ಬೆಂಗಳೂರು: ₹87,770
ಚೆನ್ನೈ: ₹87,770
ಮುಂಬೈ: ₹87,770
ದೆಹಲಿ: ₹87,690
ಕೋಲ್ಕತಾ: ₹87,770
ಕೇರಳ: ₹87,540
ಅಹ್ಮದಾಬಾದ್: ₹87,770
ಜೈಪುರ್: ₹87,690
ಲಕ್ನೋ: ₹87,770
ಭುವನೇಶ್ವರ್: ₹87,540
ವಿದೇಶಗಳಲ್ಲಿರುವ 22 ಕ್ಯಾರಟ್ ಚಿನ್ನದ ದರ (ಭಾರತೀಯ ರೂಪಾಯಿಯಲ್ಲಿ):
ಮಲೇಷ್ಯಾ: ₹87,450
ದುಬೈ: ₹82,540
ಅಮೆರಿಕ: ₹82,700
ಸಿಂಗಾಪುರ: ₹86,240
ಕತಾರ್: ₹83,780
ಸೌದಿ ಅರೇಬಿಯಾ: ₹82,840
ಓಮನ್: ₹83,580
ಕುವೇತ್: ₹81,390
ಪ್ರಮುಖ ನಗರಗಳ ಬೆಳ್ಳಿ ದರಗಳು (100 ಗ್ರಾಂಗೆ):
ಬೆಂಗಳೂರು: ₹9,700
ಚೆನ್ನೈ: ₹10,800
ಮುಂಬೈ: ₹9,700
ದೆಹಲಿ: ₹9,700
ಕೋಲ್ಕತಾ: ₹9,700
ಕೇರಳ: ₹10,800
ಅಹ್ಮದಾಬಾದ್: ₹9,700
ಜೈಪುರ್: ₹9,700
ಲಕ್ನೋ: ₹9,700
ಭುವನೇಶ್ವರ್: ₹10,800
ಚಿನ್ನದ ಬೆಲೆ ಏರಿಕೆಗೆ ಕಾರಣವೇನು (Causes) ?
ಚಿನ್ನದ ಬೆಲೆಯಲ್ಲಿ ಇತ್ತೀಚಿನ ಏರಿಕೆಗೆ ಹಲವಾರು ಅಂಶಗಳು ಕಾರಣವಾಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ (International level) ದ್ರವ್ಯವಿನಿಮಯ ದರದ ಬದಲಾವಣೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಹಾಗೂ ಭದ್ರ ಹೂಡಿಕೆ ಆಯ್ಕೆಯಾಗಿ ಚಿನ್ನದ ಬೇಡಿಕೆ ಹೆಚ್ಚಿರುವುದು ಪ್ರಮುಖ ಕಾರಣಗಳಾಗಿವೆ. ಈ ಪರಿಸ್ಥಿತಿಯಲ್ಲಿ ಬಡ್ಡಿದರ, ಮೌಲ್ಯವರ್ಧಿತ ತೆರಿಗೆಗಳು, ಮಾರುಕಟ್ಟೆ ತೀವ್ರತೆ ಇತ್ಯಾದಿಗಳು ಕೂಡ ಪ್ರಭಾವ ಬೀರುತ್ತಿವೆ.
ಏಪ್ರಿಲ್ 12 ರಂದು ಚಿನ್ನದ ಮತ್ತು ಬೆಳ್ಳಿ ಬೆಲೆಯಲ್ಲಿ ಕಂಡುಬರುವ ಉಲ್ಲೇಖನೀಯ ಏರಿಕೆ ಹೂಡಿಕೆದಾರರು ಹಾಗೂ ಖರೀದಿದಾರರಲ್ಲಿ (Investers and buyers) ಆತಂಕವನ್ನುಂಟು ಮಾಡಿದ್ದು, ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಆದ್ದರಿಂದ, ಚಿನ್ನ ಖರೀದಿಸುವ ಮುನ್ನ ಮಾರುಕಟ್ಟೆ ದರದ ಬಗ್ಗೆ ಪರಿಶೀಲನೆ ಮಾಡುವುದು ಸೂಕ್ತ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.