ಚಿನ್ನದ ಬೆಲೆಗಳಲ್ಲಿ ಭರ್ಜರಿ ಏರಿಕೆ – ಬಂಗಾರದ ದರ 92,750 ರೂ ತಲುಪಿ, ಬೆಳ್ಳಿ ಬೆಲೆಯೂ ಜಿಗಿತ
ಭಾರತೀಯ ಬಂಗಾರದ ಮಾರುಕಟ್ಟೆಯಲ್ಲಿ (Gold market) ಏಪ್ರಿಲ್ 10, 2025 ರಂದು ಚಿನ್ನದಮೌಲ್ಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಜಾಗತಿಕ ಆರ್ಥಿಕ ಬೆಳವಣಿಗೆಗಳು, ವ್ಯಾಪಾರಯುದ್ಧದ ಆತಂಕ ಮತ್ತು ಚಿನ್ನದ ಬೆಲೆಗಳತ್ತ ಆಗುತ್ತಿರುವ ಹೂಡಿಕೆದಾರರ ಆಸಕ್ತಿಯ ಹಿನ್ನೆಲೆಯು ಚಿನ್ನ ಮತ್ತು ಬೆಳ್ಳಿ ಬೆಲೆಗಳಿಗೆ (Gold and Silver rate) ಗಂಭೀರ ಪರಿಣಾಮ ಬೀರಿದೆ. ಕಳೆದ ಕೆಲ ವಾರಗಳಿಂದ ಚಿನ್ನದ ಬೆಲೆಗಳಲ್ಲಿ ಅಲ್ಪಮಟ್ಟದ ಇಳಿಕೆ ಕಂಡು ಬಂದಿದ್ದರೂ, ಈಗ ಮತ್ತೆ ಭರ್ಜರಿಯಾಗಿ ಏರಿಕೆಯಾಗಿದೆ. ಬಂಗಾರ ಹಾಗೂ ಬೆಳ್ಳಿಯ ಬೆಲೆಗಳು ಹೂಡಿಕೆದಾರರಲ್ಲಿ (Investers) ಭವಿಷ್ಯದ ಹೂಡಿಕೆಯ ಭದ್ರತೆಯ ಸಂಕೇತವಾಗಿ ಕಾಣಲ್ಪಡುತ್ತಿವೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 11, 2025: Gold Price Today
ಭಾರತದ ಪ್ರಮುಖ ನಗರಗಳ ಚಿಲ್ಲರೆ ಮಾರುಕಟ್ಟೆಗಳಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ದಿನಗಳ ಕಾಲ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದ ಚಿನ್ನದ ಬೆಲೆ, ಬುಧವಾರದಿಂದ ಅಚಾನಕ್ ಏರಿಕೆಯಾಗಿದ್ದು (Suddenly Increased) ಗ್ರಾಹಕರಲ್ಲಿ ನಿರಾಸೆ ಉಂಟುಮಾಡಿದೆ. ದರ ಇಳಿಯಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಜನರಿಗೆ ಶಾಕ್ ಆಗಿದೆ. ಹಾಗಿದ್ದರೆ, ಏಪ್ರಿಲ್ 11, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,560 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,338 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,704 ಆಗಿದೆ. ನಿನ್ನಗೆ ಹೋಲಿಸಿದರೆ 269 ರೂ. ನಷ್ಟು ಏರಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 97, 000 ರೂ ನಷ್ಟಿದ್ದು. ನಿನ್ನಗೆ ಹೋಲಿಸಿದರೆ ಒಂದೇ ದಿನದಲ್ಲಿ 4100 ರೂ. ನಷ್ಟು ಏರಿಕೆಯಾಗಿದೆ.
ಹೌದು, ಇದೀಗ ಚಿನ್ನದ ದರ ಬದಲಾವಣೆ ಕುರಿತು ಉಂಟಾದ ಬೆಳವಣಿಗೆಗಳು ದೇಶದ ಹಣಕಾಸು ಮಾರುಕಟ್ಟೆಯಲ್ಲಿ (Financial market) ಪ್ರಮುಖ ಚರ್ಚೆಯ ವಿಷಯವಾಗಿದೆ. ಜಾಗತಿಕ ಮಟ್ಟದಲ್ಲಿ ವ್ಯಾಪಾರ ಮಾರುಕಟ್ಟೆಯಲ್ಲಿ ನಡೆದಿರುವ ಬೆಲೆ ಏರಿಳಿತಗಳು, ಟ್ಯಾರಿಫ್ ಸಮರ ಹಾಗೂ ಆರ್ಥಿಕ ಅಸ್ಥಿರತೆಗಳು (Tariff wars and economic instability) ಚಿನ್ನ ಮತ್ತು ಬೆಳ್ಳಿ ಬೆಲೆಗೆ ತೀವ್ರ ಪರಿಣಾಮ ಬೀರಿವೆ. ಬಂಡವಾಳ ಹೂಡಿಕೆದಾರರು ಮತ್ತು ಗ್ರಾಹಕರ ಆರ್ಥಿಕ ನಿಲುವಿಗೆ ಪ್ರಭಾವ ಬೀರುವಂತಹ ಈ ಬದಲಾವಣೆಗಳು ನಿತ್ಯಬಳಕೆದಾರರಿಂದ ದೊಡ್ಡ ಹೂಡಿಕೆದಾರರ ತನಕ ಎಲ್ಲರಿಗೂ ಪ್ರಾಮುಖ್ಯತೆಯ ವಿಷಯವಾಗಿದೆ. ವಿಶೇಷವಾಗಿ ಚಿನ್ನದ ದರ ಏರಿಕೆಯಾಗುತ್ತಿರುವ ಈ ಸಮಯದಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರು ಶ್ರದ್ದೆಯಿಂದ ಬೆಲೆಯನ್ನು ಗಮನಿಸುತ್ತಿದ್ದಾರೆ.
ಏಪ್ರಿಲ್ 10, 2025ರ ಚಿನ್ನದ ದರ: ಭರ್ಜರಿ ಏರಿಕೆ
ಏಪ್ರಿಲ್ 10ರಂದು ಚಿನ್ನದ ದರದಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದು, 10 ಗ್ರಾಂ 22 ಕ್ಯಾರಟ್ ಚಿನ್ನದ ದರ 85,600 ರೂಪಾಯಿ ತಲುಪಿದೆ. ಬುಧವಾರದ ದರ 91,360 ರೂಪಾಯಿಯಾಗಿದ್ದರೆ, ಗುರುವಾರ ಬಂಗಾರದ ದರದಲ್ಲಿ ಸುಮಾರು 1,390 ರೂ ಏರಿಕೆಯಾಗಿ ಅದು 92,750 ರೂಗೆ ಏರಿದೆ. ಒಂದು ದಿನದಲ್ಲಿ 1 ಗ್ರಾಂ ಚಿನ್ನದ ದರವೇ 270 ರೂ ಏರಿಕೆಯಾಗಿದೆ. ಇದರಿಂದ 100 ಗ್ರಾಂ ಚಿನ್ನದ ದರ ಬರೋಬ್ಬರಿ 27,000 ರೂ ಹೆಚ್ಚಳವಾಗಿದೆ.
ಏಪ್ರಿಲ್ 10, 2025ರ ಚಿನ್ನ ಹಾಗೂ ಬೆಳ್ಳಿ ದರ :
22 ಕ್ಯಾರಟ್ ಚಿನ್ನ (10 ಗ್ರಾಂ): ₹85,600
24 ಕ್ಯಾರಟ್ ಚಿನ್ನ (10 ಗ್ರಾಂ): ₹93,380
18 ಕ್ಯಾರಟ್ ಚಿನ್ನ (10 ಗ್ರಾಂ): ₹70,040
ಬೆಳ್ಳಿ (10 ಗ್ರಾಂ): ₹950 ಬೆಳ್ಳಿ ಒಂದು ದಿನದಲ್ಲಿ ಬೆಳ್ಳಿಯ ದರವೂ 2 ರೂ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ:
22 ಕ್ಯಾರಟ್: ₹85,600
24 ಕ್ಯಾರಟ್: ₹93,380
ಬೆಳ್ಳಿ: ₹950 (10 ಗ್ರಾಂಗೆ)
ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂಗೆ):
ಚೆನ್ನೈ: ₹85,600
ಮುಂಬೈ: ₹85,600
ದೆಹಲಿ: ₹85,750
ಕೋಲ್ಕತಾ: ₹85,600
ಕೇರಳ: ₹85,600
ಅಹ್ಮದಾಬಾದ್: ₹85,650
ಜೈಪುರ್, ಲಕ್ನೋ: ₹85,750
ಭುವನೇಶ್ವರ್: ₹85,600
ಭಾರತದ ವಿವಿಧ ನಗರಗಳಲ್ಲಿ 100 ಗ್ರಾಂ ಬೆಳ್ಳಿ ಬೆಲೆ:
ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ್, ಲಕ್ನೋ: ₹9,500
ಚೆನ್ನೈ, ಕೇರಳ, ಭುವನೇಶ್ವರ್: ₹10,400
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂಗೆ):
ಮಲೇಷ್ಯಾ: 4,350 ರಿಂಗಿಟ್ (₹84,010)
ದುಬೈ: 3,432.50 ಡಿರಾಮ್ (₹80,810)
ಅಮೆರಿಕ: 905 USD (₹78,260)
ಸಿಂಗಾಪುರ: 1,300 SGD (₹83,850)
ಕತಾರ್: 3,465 ರಿಯಾಲ್ (₹82,190)
ಸೌದಿ: 3,510 ರಿಯಾಲ್ (₹80,840)
ಓಮಾನ್: 365 ಒಮಾನಿ ರಿಯಾಲ್ (₹81,990)
ಕುವೇತ್: 283.80 ದಿನಾರ್ (₹79,740)
ಚಿನ್ನದ ಮೇಲಿನ ಬೇಡಿಕೆ (demand) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಈ ಪರಿಸ್ಥಿತಿಯಲ್ಲಿ ಹೂಡಿಕೆದಾರರು ಹಾಗೂ ಗ್ರಾಹಕರು ತಮ್ಮ ಖರೀದಿ ತೀರ್ಮಾನಗಳನ್ನು ಜಾಗರೂಕರಾಗಿ ತೆಗೆದುಕೊಳ್ಳುವುದು ಉತ್ತಮ.
ಇತ್ತೀಚಿನ ಗ್ಲೋಬಲ್ ಮಾರುಕಟ್ಟೆಯ (Global market) ಸ್ಥಿತಿಗೆ ಅನುಗುಣವಾಗಿ ಬಂಗಾರ ಮತ್ತು ಬೆಳ್ಳಿ ಬೆಲೆಯು ನಿರಂತರ ಬದಲಾಗಬಹುದು. ಆದ್ದರಿಂದ, ನಿತ್ಯದ ಬೆಲೆಗಳನ್ನು ಗಮನಿಸಿ ಹೂಡಿಕೆಗೆ ಮುಂದಾಗುವುದು ಸೂಕ್ತ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.