ಪರೀಕ್ಷೆಯ ದಿನಾಂಕ ಮತ್ತು ವೇಳಾಪಟ್ಟಿ
ಕರ್ನಾಟಕದ ವೃತ್ತಿಪರ ಕೋರ್ಸ್‍ಗಳಿಗೆ (ಇಂಜಿನಿಯರಿಂಗ್, ಫಾರ್ಮಸಿ, ಫಾರ್ಮಸಿ-ಡಿ, ಆಯುರ್ವೇದ ಮುಂತಾದವು) ಪ್ರವೇಶ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆ (CET) 2025 ಏಪ್ರಿಲ್ 16 ಮತ್ತು 17ರಂದು ನಡೆಯಲಿದೆ. ಪರೀಕ್ಷೆಯ ವಿವರಗಳು ಹೀಗಿವೆ: ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
- ಏಪ್ರಿಲ್ 16, 2025 (ಬುಧವಾರ)
- ಭೌತಶಾಸ್ತ್ರ: ಬೆಳಿಗ್ಗೆ 10:30 ರಿಂದ 11:50
- ರಸಾಯನಶಾಸ್ತ್ರ: ಮಧ್ಯಾಹ್ನ 2:30 ರಿಂದ 3:50
- ಏಪ್ರಿಲ್ 17, 2025 (ಗುರುವಾರ)
- ಗಣಿತಶಾಸ್ತ್ರ: ಬೆಳಿಗ್ಗೆ 10:30 ರಿಂದ 11:50
- ಜೀವಶಾಸ್ತ್ರ: ಮಧ್ಯಾಹ್ನ 2:30 ರಿಂದ 3:50
ಪರೀಕ್ಷಾ ಕೇಂದ್ರದ ನಿಯಮಗಳು
- ಪ್ರವೇಶ ಸಮಯ: ಪರೀಕ್ಷೆಗೆ ಒಂದು ಗಂಟೆ ಮುಂಚಿತವಾಗಿ (9:30 AM / 1:30 PM) ಕೇಂದ್ರವನ್ನು ತಲುಪಬೇಕು.
- ಮೊಬೈಲ್ & ಗಡಿಯಾರ ನಿಷೇಧ: ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಮೊಬೈಲ್ ಫೋನ್ ಅಥವಾ ಸ್ಮಾರ್ಟ್ ವಾಚ್ ತರುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ಸುರಕ್ಷತಾ ವ್ಯವಸ್ಥೆ:
- ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ನಿಷೇಧಿತ ವಲಯ ಘೋಷಿಸಲಾಗುತ್ತದೆ.
- ಜೆರಾಕ್ಸ್ ಮತ್ತು ಫೋಟೋಕಾಪಿ ಅಂಗಡಿಗಳು ಮುಚ್ಚಿರುತ್ತವೆ.
- ಪೊಲೀಸ್ ಬಂದೋಬಸ್ತು ಪರೀಕ್ಷೆಗೆ 1 ಗಂಟೆ ಮುಂಚೆ ಮತ್ತು 30 ನಿಮಿಷ ನಂತರ ಇರುತ್ತದೆ.
- ಸಿಸಿಟಿವಿ ಮಾನಿಟರಿಂಗ್: ಪ್ರಶ್ನೆ ಪತ್ರಿಕೆ ತೆರೆಯುವುದು ಮತ್ತು ಉತ್ತರ ಪತ್ರಿಕೆಗಳ ಸಂಗ್ರಹ ಸಿಸಿಟಿವಿ ಕ್ಯಾಮೆರಾಗಳ ಅಡಿಯಲ್ಲಿ ನಡೆಯುತ್ತದೆ.
ಶಿಕ್ಷಕರು ಮತ್ತು ನಿಯೋಜಿತ ಸಿಬ್ಬಂದಿಗೆ ಸೂಚನೆಗಳು
- ವಿಜ್ಞಾನ ವಿಷಯದ ಶಿಕ್ಷಕರು ಅಥವಾ ಸಂಬಂಧಿಕರು ಪರೀಕ್ಷೆಗೆ ಹಾಜರಾಗಿದ್ದರೆ, ಅವರನ್ನು ನಿರೀಕ್ಷಕರಾಗಿ ನಿಯೋಜಿಸಲಾಗುವುದಿಲ್ಲ.
- ಮುಖ್ಯ ಅಧೀಕ್ಷಕರಿಗೆ ಮಾತ್ರ ಬೇಸಿಕ್ ಸೆಟ್ (ಮೊಬೈಲ್) ಬಳಕೆಗೆ ಅನುಮತಿ ಇದೆ.
ವಿದ್ಯಾರ್ಥಿಗಳಿಗೆ ಸೂಚನೆಗಳು
- ಅಡ್ಮಿಟ್ ಕಾರ್ಡ್, ಫೋಟೋ ID (ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್) ಮತ್ತು ಬ್ಲೂ/ಬ್ಲಾಕ್ ಬಾಲ್ ಪೆನ್ ಕಡ್ಡಾಯ.
- ನಕಲಿ/ಅನಿಯಮಿತ ಚಟುವಟಿಕೆ ಕಂಡುಬಂದರೆ, ಪರೀಕ್ಷೆ ರದ್ದು ಮಾಡಲಾಗುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group




Leave a Reply