ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದರೆ ತಪ್ಪದೇ  ಸರಿ ಮಾಡಿ, ಪೋಷಕರು ತಿಳಿದುಕೊಳ್ಳಿ 

Picsart 25 03 19 00 21 52 298

WhatsApp Group Telegram Group

ಮಕ್ಕಳಲ್ಲಿ ಆತ್ಮಹತ್ಯೆಯ ಮುನ್ಸೂಚನೆಗಳು: ಆತ್ಮಹತ್ಯೆ ತಡೆಯಲು ಮಕ್ಕಳಿಗೆ ಮಾನಸಿಕ ಬೆಂಬಲ ಹೇಗೆ ನೀಡಬಹುದು?

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳ (Suicide cases) ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದು ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಖಾಸಗಿ ಸಮಸ್ಯೆಗಳು, ಮಾನಸಿಕ ಒತ್ತಡ, ಶಾಲಾ ಅಡಚಣೆಗಳು, ಕುಟುಂಬದ ಸಮಸ್ಯೆಗಳು, ಆಧುನಿಕ ಜೀವನಶೈಲಿಯ ಒತ್ತಡ, ಸಾಮಾಜಿಕ ಮಾಧ್ಯಮದ ಪ್ರಭಾವ ಇವೆಲ್ಲಾ ಮಕ್ಕಳಲ್ಲಿ ಖಿನ್ನತೆ ಹೆಚ್ಚಿಸುವ ಪ್ರಮುಖ ಕಾರಣಗಳಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವಿಶ್ವ ಆರೋಗ್ಯ ಸಂಸ್ಥೆ (World Health Organization) ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ಪ್ರತಿ ವರ್ಷ ಜಗತ್ತಿನಾದ್ಯಂತ 7.20 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಭಾರತದಲ್ಲಿ ಮಾತ್ರ ಈ ಸಂಖ್ಯೆ 1.75 ಲಕ್ಷದವರೆಗೆ ದಾಟಿದೆ. ಅಂದರೆ ಪ್ರತಿ 40 ಸೆಕೆಂಡುಗಳಿಗೊಮ್ಮೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ, ಮಕ್ಕಳಲ್ಲಿ ಮತ್ತು ಹದಿಹರೆಯದ ಯುವಕರಲ್ಲಿ ಇಂತಹ ಆತ್ಮಘಾತಕ ಆಲೋಚನೆಗಳು ಹುಟ್ಟಿದರೆ, ಅದನ್ನು ಗುರುತಿಸುವುದು ಮತ್ತು ತಕ್ಷಣ ಸರಿಯಾದ ಬೆಂಬಲ ನೀಡುವುದು ಅತ್ಯಗತ್ಯವಾಗಿದೆ. ಮಕ್ಕಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಬಂದರೆ ಅದನ್ನು ಗುರುತಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. 

ಚೈಲ್ಡ್‌ಲೈನ್ ನಿರ್ದೇಶಕ ಶಾನ್ ಪ್ರಿಯೆಲ್ (Childline Director Shaun Priel) ಅವರ ಅಭಿಪ್ರಾಯದ ಪ್ರಕಾರ, ಮಕ್ಕಳ ವರ್ತನೆಯಲ್ಲಿ ಕೆಲವು ಸ್ಪಷ್ಟ ಲಕ್ಷಣಗಳು ಕಂಡು ಬಂದರೆ, ಅವರು ಆತ್ಮಹತ್ಯೆಯಂತಹ ಆಲೋಚನೆ ಮಾಡುತ್ತಿರುವ ಸಾಧ್ಯತೆ ಇದೆ. ಪೋಷಕರು, ಶಿಕ್ಷಕರು ಮತ್ತು ಹತ್ತಿರದ ಸ್ನೇಹಿತರು ಈ ಲಕ್ಷಣಗಳನ್ನು ಗಮನಿಸಿ, ಅವರೊಂದಿಗೆ ಚರ್ಚಿಸಿ, ಸೂಕ್ತ ಸಮಯದಲ್ಲಿ ಕ್ರಮ ಕೈಕೊಂಡು ಆಗುವ ದುರಂತವನ್ನು ತಪ್ಪಿಸಬಹುದು

ಮಕ್ಕಳಲ್ಲಿ ಆತ್ಮಹತ್ಯೆಯ ಲಕ್ಷಣಗಳನ್ನು, (symptoms)  ಗುರುತಿಸುವುದು ಹೇಗೆ?:

1. ಓದು, ಶಾಲಾ ಚಟುವಟಿಕೆಯಲ್ಲಿ ಆಸಕ್ತಿ ಇಲ್ಲದೇ ಹೋಗುವುದು:
ಮಕ್ಕಳಲ್ಲಿ ಯಾವುದೇ ವಿಷಯಕ್ಕೂ ಸ್ಪಂದನೆ ಇಲ್ಲದಿರುವುದು.
ಶಾಲಾ ಪರೀಕ್ಷೆಯಲ್ಲಿ ಅತಿ ಕಡಿಮೆ ಅಂಕ ಗಳಿಸುವುದು.
ಶಿಕ್ಷಕರು ಅಥವಾ ಪೋಷಕರನ್ನು ನಿರ್ಲಕ್ಷಿಸುವುದು.

2. ಸ್ನೇಹಿತರು, ಕುಟುಂಬದಿಂದ ದೂರವಾಗುವುದು:

ಸ್ನೇಹಿತರಿಂದ, ಕುಟುಂಬದಿಂದ (Family) ದೂರ ಸರಿಯುವುದು.
ಯಾರೊಂದಿಗೂ ಹೆಚ್ಚು ಮಾತನಾಡದಿರುವುದು.
ಮುಂಚಿನಂತೆ ಆಟ ಅಥವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ ಒಂಟಿಯಾಗಿರುವುದು.

3. ನಿದ್ರಾ ಮತ್ತು ಆಹಾರದ ಸಮಸ್ಯೆ (Sleeping and food issues) :
ದಿನದ ಸಮಯದಲ್ಲಿ ಹೆಚ್ಚು ನಿದ್ರೆ ಮಾಡುವುದು ಅಥವಾ ರಾತ್ರಿ ವೇಳೆ ನಿದ್ರೆ ಇಲ್ಲದಿರುವುದು.
ಊಟ ಮಾಡಲು ಉತ್ಸಾಹ ಇಲ್ಲ ದಿರುವುದು ಅಥವಾ ಆಕಸ್ಮಿಕವಾಗಿ ಭಾರಿ ಪ್ರಮಾಣದಲ್ಲಿ ಊಟ ಮಾಡುವುದು.

4. ಮನಸ್ಸಿನಲ್ಲಿ ಭಯ, ಖಿನ್ನತೆ, ಬೇಸರ ಹೆಚ್ಚಾಗಿ ಕಾಣಿಸುವುದು:
ಮಕ್ಕಳು ಸದಾ ದುಃಖಿತ ಭಾವನೆಯಲ್ಲಿ ಇರುತ್ತಾರೆ.
“ನಾನು ಯಾರಿಗೂ ಬೇಡವಾದವನು/ನಾನು ಮನೆಗೆ ಹೊರೆ” ಎಂಬ ಭಾವನೆ.
ಜೀವ ಕಳೆದುಕೊಳ್ಳುವುದು ಅಥವಾ ಆತ್ಮಹತ್ಯೆ ಬಗ್ಗೆ ಮಾತನಾಡುವುದು.

5. ಅಪಾಯಕಾರಿ ಅಭ್ಯಾಸಗಳ (Dangerous habits) ಕಡೆಗೆ ಒಲವು:
ತುಂಬಾ ಬಾಲ್ಯದಲ್ಲಿಯೇ ಮಾದಕ ದ್ರವ್ಯ ಸೇವನೆ, ಮದ್ಯಪಾನ, ಅಥವಾ ಇತರ ಅಪಾಯಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ಇರುವುದು.

6. ಸ್ವಯಂ (Own) ಕಾಳಜಿ ವಹಿಸುವುದಿಲ್ಲ:
ಸ್ನಾನ, ಸ್ವಚ್ಛತೆ, ಊಟ ಇತ್ಯಾದಿಗಳನ್ನು ನಿರ್ಲಕ್ಷಿಸುವುದು.
“ನನಗೆ ಬದುಕಲು ಇಷ್ಟವಿಲ್ಲ” ಅಥವಾ “ನಾನು ಇಲ್ಲದಿದ್ದರೆ ಎಲ್ಲರಿಗೂ ಸುಖ” ಎಂಬಂತಹ ನೇರ ಅಥವಾ ಪರೋಕ್ಷ ವಾಕ್ಯಗಳನ್ನು ಬಳಸುವುದು.

7. ಆತ್ಮಹತ್ಯೆಯ ಕುರಿತು ಹೆಚ್ಚು ವಿಚಾರಣೆ ಮಾಡುವುದು:
ಗೂಗಲ್‌ನಲ್ಲಿ “ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ?” ಅಥವಾ “ನೋವಿಲ್ಲದೇ ಸಾಯುವ ಮಾರ್ಗಗಳು” ಎಂಬಂತಹ ವಿಷಯಗಳನ್ನು ಹುಡುಕುವುದು.

9. ಜೀವ ಕಳೆದುಕೊಳ್ಳಲು ತೀರ್ಮಾನಿಸಿರುವ ಸೂಚನೆಗಳು:
“ನಾನು ಸಾಯುವುದೇ ಒಳ್ಳೆಯದು,” “ನನಗೆ ಬದುಕಲು ಇಚ್ಛೆ ಇಲ್ಲ,” “ನನಗೆ ಏನಾದರೂ ಆದರೆ ಯಾರು ನನ್ನನ್ನು ಮಿಸ್ ಮಾಡಿಕೊಳ್ಳುವುದಿಲ್ಲ” ಇತ್ಯಾದಿ ಮಾತುಗಳನ್ನು ಪದೇ ಪದೇ ಹೇಳುವುದು.

10. ಸಂವಹನ ಶೈಲಿಯಲ್ಲಿ ಬದಲಾವಣೆ :
ಹಠಾತ್ ಶಾಂತವಾಗುವುದು, ಆಳವಾದ ಯೋಚನೆಗಳಲ್ಲಿ ಮುಳುಗುವುದು, ಇತರರೊಂದಿಗೆ ಮಾತುಕತೆ ಕಡಿಮೆ ಮಾಡುವುದು.
ಮಕ್ಕಳಲ್ಲಿ ಈ ರೀತಿಯ ಲಕ್ಷಣಗಳು ಕಂಡುಬಂದರೆ ಅವರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ ಎಂದರ್ಥ.

ಈ ಸಮಯದಲ್ಲಿ ಪೋಷಕರು ಮತ್ತು ಶಿಕ್ಷಕರು(Teachers) ಏನು ಮಾಡಬೇಕು?:
ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆದು, ಅವರಿಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡುವುದು.
ನಿಮ್ಮ ಮಗುವಿನ ಭಾವನೆಗಳನ್ನು ತಿರಸ್ಕಾರ ಮಾಡದೆ ಅವರ ಮಾತುಗಳನ್ನು ಕೇಳುವುದು. ಅವರ ಭಾವನೆಗಳಿಗೆ ಸ್ಪಂದಿಸುವುದು.
ಮಕ್ಕಳನ್ನು ಸಮೀಪಿಸಿ, ಅವರ ಮಾತು ಕೇಳಿ, ಏಕಾಂಗಿ ಭಾವನೆ ಹೋಗುವಂತೆ ನೋಡಿಕೊಳ್ಳಿ.
ಯಾವುದೇ ರೀತಿಯ ಗಂಭೀರ ಬದಲಾವಣೆ (Changes) ಕಂಡುಬಂದರೆ ತಕ್ಷಣ ಮಕ್ಕಳೊಂದಿಗೆ ಮಾತನಾಡಿ.
ಮಕ್ಕಳ ಆತ್ಮಹತ್ಯೆಯ ಬಗ್ಗೆ ಮಾತನಾಡುವುದರಿಂದ ಆಲೋಚನೆ ತೀವ್ರಗೊಳ್ಳುತ್ತದೆ ಎಂಬ ತಪ್ಪು ಕಲ್ಪನೆ ತ್ಯಜಿಸಿ, ಅವರ ಭಾವನೆಗಳನ್ನು ಗಮನಿಸಿ.
ಖಿನ್ನತೆ ಅಥವಾ ಮನೋವೈದ್ಯಕೀಯ ಸಮಸ್ಯೆಗಳ ಲಕ್ಷಣಗಳಿದ್ದರೆ ತಕ್ಷಣ ತಜ್ಞರ ಸಲಹೆ ಪಡೆಯಿರಿ.
ಶಾಲೆಯಲ್ಲಿ ಕೌನ್ಸೆಲಿಂಗ್ (Counselling) ವ್ಯವಸ್ಥೆಯನ್ನು ಕಲ್ಪಿಸಿ, ಮಕ್ಕಳಿಗೆ ಮಾನಸಿಕ ನೆಮ್ಮದಿಗಾಗಿ ನೆರವಾಗುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಒಳ್ಳೆಯದು.

ಮಕ್ಕಳ ಭಾವನಾತ್ಮಕ ಆರೋಗ್ಯದ (Emotional health) ಬಗ್ಗೆ ಹೆಚ್ಚಿನ ಎಚ್ಚರಿಕೆಯಿಂದ ಇರುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಕ್ಕಳಲ್ಲಿ ಆತ್ಮಹತ್ಯೆಯ ಮುನ್ಸೂಚನೆಗಳು ಕಂಡುಬಂದರೆ, ಅವರೊಂದಿಗೆ ಸ್ನೇಹಪೂರ್ಣವಾಗಿ ಮಾತನಾಡಿ, ಸೂಕ್ತ ನೆರವನ್ನು ಒದಗಿಸಿ. ಅವರ ಭಾವನೆಗಳಿಗೆ (Emotions) ಬೆನ್ನೆಲುಬಾಗುವುದರಿಂದ ಅವರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಮತ್ತು ಬದುಕಿನ ಕಡೆಗೆ ಒಲವು ಹೊಂದಲು ಸಹಾಯವಾಗುತ್ತದೆ.

ಮಕ್ಕಳ ಜೀವನ (Life) ಬಹಳ ಅಮೂಲ್ಯವಾದದ್ದು. ಅವರಲ್ಲಿ ಕಂಡುಬರುವ ಬದಲಾವಣೆಗಳಿಗೆ ಗಮನಹರಿಸುವುದು, ಅವರನ್ನು ಪ್ರೀತಿಯಿಂದ ಪ್ರೋತ್ಸಾಹಿಸುವುದು, ಮತ್ತು ಅವರಿಗೆ ಬೆಂಬಲ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಮನಸ್ಸಿನ ಒತ್ತಡ, ಖಿನ್ನತೆ ಮತ್ತು ಆತ್ಮಹತ್ಯೆಯ ಆಲೋಚನೆಗಳನ್ನು (Suicidal thoughts) ತಡೆಗಟ್ಟಲು ಅವರ ಜತೆಗೆ ನಿಂತು, ಮಾನಸಿಕ ಆರೋಗ್ಯವನ್ನು ಪ್ರೋತ್ಸಾಹಿಸುವುದು ಅಗತ್ಯ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!