ಭಾರತೀಯ ಸೇನೆ ಸೇರಲು ಸುವರ್ಣಾವಕಾಶ: ಅಗ್ನಿವೀರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಭಾರತೀಯ ಸೇನೆ ಅಗ್ನಿಪಥ್ ಯೋಜನೆ ಯಡಿ ಅಗ್ನಿವೀರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ದೇಶ ಸೇವೆ ಮಾಡುವ ಇಚ್ಛೆ ಇರುವ ಯುವಕರು ಮತ್ತು ಯುವತಿಯರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಕೆಳಗಿನ ಮಾಹಿತಿಯನ್ನು ಗಮನಿಸಿ, ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗಳ ವಿವರ:
– ಹುದ್ದೆಯ ಹೆಸರು: ಇಂಡಿಯನ್ ಆರ್ಮಿ ಅಗ್ನಿವೀರ್
– ಒಟ್ಟು ಹುದ್ದೆಗಳು: ಅಧಿಕೃತ ಸಂಖ್ಯೆಯನ್ನು ಸೇನೆ ಘೋಷಿಸಿಲ್ಲ
ಹುದ್ದೆಗಳ ವಿಭಾಗಗಳು:
– ಅಗ್ನಿವೀರ್ ಜನರಲ್ ಡ್ಯೂಟಿ
– ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್
– ಅಗ್ನಿವೀರ್ ಟೆಕ್ನಿಕಲ್
– ಅಗ್ನಿವೀರ್ ಟ್ರೇಡ್ಸ್‌ಮನ್ (10ನೇ & 8ನೇ ತರಗತಿ)
– ಅಗ್ನಿವೀರ್ ನರ್ಸಿಂಗ್ ಅಸಿಸ್ಟೆಂಟ್
ಅರ್ಹತಾ ಮಾನದಂಡ:
ವಿದ್ಯಾರ್ಹತೆ:
1. ಅಗ್ನಿವೀರ್ ಜನರಲ್ ಡ್ಯೂಟಿ:
– SSLC/10ನೇ ತರಗತಿ ಪಾಸಾಗಿರಬೇಕು
– 45% ಒಟ್ಟು ಅಂಕಗಳು & ಪ್ರತಿ ವಿಷಯದಲ್ಲಿ ಕನಿಷ್ಠ 33% ಅಗತ್ಯ
2. ಅಗ್ನಿವೀರ್ ಟೆಕ್ನಿಕಲ್:
– PUC/12ನೇ ತರಗತಿ ವಿಜ್ಞಾನ (PCM & English)
– 50% ಒಟ್ಟು ಅಂಕಗಳು & ಪ್ರತಿ ವಿಷಯದಲ್ಲಿ 40% ಅಂಕಗಳು ಅಗತ್ಯ
3. ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್:
– PUC/12ನೇ ತರಗತಿ ಯಾವುದೇ ವಿಭಾಗದಲ್ಲಿ ಪಾಸಾಗಿರಬೇಕು
– 60% ಒಟ್ಟು ಅಂಕಗಳು & ಪ್ರತಿ ವಿಷಯದಲ್ಲಿ 50% ಅಗತ್ಯ
4. ಅಗ್ನಿವೀರ್ ಟ್ರೇಡ್ಸ್‌ಮನ್:
– 10ನೇ/8ನೇ ತರಗತಿ ಪಾಸಾಗಿರಬೇಕು
ಯಾವುದೇ ನಿರ್ದಿಷ್ಟ ಅಂಕಗಳ ಅವಶ್ಯಕತೆ ಇಲ್ಲ.
ವಯೋಮಿತಿ:
ಕನಿಷ್ಠ: 17 ವರ್ಷ 6 ತಿಂಗಳು
ಗರಿಷ್ಠ: 21 ವರ್ಷ
ಸಂಬಳದ ವಿವರ:
1ನೇ ವರ್ಷ : ₹30,000
2ನೇ ವರ್ಷ : ₹33,000
3ನೇ ವರ್ಷ: ₹36,500
4ನೇ ವರ್ಷ: ₹40,000
ಸೇವಾ ಅವಧಿಯ ನಂತರ ‘ಸೇವಾ ನಿಧಿ ಪ್ಯಾಕೇಜ್’ ಸೌಲಭ್ಯ ಲಭ್ಯವಿರುತ್ತದೆ.
ಅರ್ಜಿ ಶುಲ್ಕ:
₹250/- ಜೊತೆಗೆ ಜಿಎಸ್‌ಟಿ (ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಸಮಾನ)
ಆಯ್ಕೆ ಪ್ರಕ್ರಿಯೆ:
1. ಲಿಖಿತ ಪರೀಕ್ಷೆ – ಸಾಮಾನ್ಯ ಜ್ಞಾನ, ಗಣಿತ, ಸಾಮಾನ್ಯ ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳ ಮೇಲಿನ ಪ್ರಶ್ನೆಗಳು.
2. ದೈಹಿಕ ಸಾಮರ್ಥ್ಯ ಪರೀಕ್ಷೆ – ಓಟ, ಪುಲ್-ಅಪ್, ಲಾಂಗ್ ಜಂಪ್ ಮುಂತಾದವು.
3. ವೈದ್ಯಕೀಯ ಪರೀಕ್ಷೆ – ಸೇನೆಯ ಆರೋಗ್ಯ ಮಾನದಂಡಗಳಿಗೆ ಅನುಗುಣವಾದ ಪರೀಕ್ಷೆ.
4. ದಾಖಲಾತಿ ಪರಿಶೀಲನೆ – ಎಲ್ಲಾ ದಾಖಲೆಗಳ ದೃಢೀಕರಣ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ: 12 ಮಾರ್ಚ್ 2025
ಅರ್ಜಿ ಸಲ್ಲಿಕೆ ಕೊನೆ ದಿನ: 10 ಏಪ್ರಿಲ್ 2025
ಲಿಖಿತ ಪರೀಕ್ಷೆ: ಜೂನ್ 2025 (ಸೂಚನೆ ನಂತರ ಪ್ರಕಟ)
ಪ್ರಮುಖ ದಿನಾಂಕಗಳು:
1. ಅಧಿಕೃತ ವೆಬ್‌ಸೈಟ್: www.joinindianarmy.nic.in ಗೆ ಭೇಟಿ ನೀಡಿ.
2. ಹೆಚ್ಚಿನ ಮಾಹಿತಿ ಪಡೆಯಲು ವೆಬ್‌ಸೈಟ್‌ನಲ್ಲಿ ‘ಅಗ್ನಿಪಥ್’ ವಿಭಾಗವನ್ನು ಕ್ಲಿಕ್ ಮಾಡಿ.
3. ‘Apply/Login’ ಆಯ್ಕೆಯನ್ನು ಆಯ್ಕೆ ಮಾಡಿ.
4. ಹೊಸ ಅಭ್ಯರ್ಥಿಗಳು ಹೊಸ ಖಾತೆ ತಯಾರಿಸಿ ಅಥವಾ ಇದ್ದ ಖಾತೆಗೆ ಲಾಗಿನ್ ಆಗಿ.
5. ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
6. ಅರ್ಜಿ ಶುಲ್ಕ ₹250/- ಪಾವತಿಸಿ.
7. ಅರ್ಜಿ ಪರಿಶೀಲಿಸಿ ಮತ್ತು ‘Submit’ ಬಟನ್ ಒತ್ತಿ.
8. ಅರ್ಜಿ ಯಶಸ್ವಿಯಾಗಿ ಸಲ್ಲಿಸಿದ ನಂತರ, ಇದನ್ನು ಡೌನ್‌ಲೋಡ್ ಮಾಡಿ ಹಾಗೂ ಪ್ರಿಂಟ್ ತೆಗೆದುಕೊಳ್ಳಿ.
ಹೆಚ್ಚಿನ ಮಾಹಿತಿಗೆ:
– ಅಧಿಕೃತ ವೆಬ್‌ಸೈಟ್: www.joinindianarmy.nic.in
– ಸೇನೆಯ ನೇಮಕಾತಿ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ಸಂಪರ್ಕಿಸಿ.
ಈ ಅವಕಾಶವನ್ನು ಉಪಯೋಗಿಸಿ, ದೇಶ ಸೇವೆಗೆ ನಿಮ್ಮ ಕೊಡುಗೆ ನೀಡಿ! ಭಾರತೀಯ ಸೇನೆಯ ಭಾಗವಾಗಲು ಈ ಅವಕಾಶವನ್ನು ಕೈ ತಪ್ಪಿಸಿಕೊಳ್ಳಬೇಡಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




