ಭೂಹೀನ ರೈತರಿಗೂ PM-KISAN ಯೋಜನೆಯ ಲಾಭ: ಕೇಂದ್ರ ಸರ್ಕಾರದ ಮಹತ್ವದ ಘೋಷಣೆ!
ಭಾರತ (India) ಕೃಷಿ ಪ್ರಧಾನ ದೇಶವಾಗಿದ್ದು, ಲಕ್ಷಾಂತರ ರೈತರ ಜೀವನ ಕ್ರಮ ಕೃಷಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಆದರೆ ಭೂಹೀನ ರೈತರು ಹಲವು ವರ್ಷಗಳಿಂದ ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಅಸಾಧ್ಯವಾಗಿತ್ತು. ಇದೀಗ ಕೇಂದ್ರ ಸರ್ಕಾರವು ಭೂಹೀನ ರೈತರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM -Kisan) ಯೋಜನೆಗೆ ಈವರೆಗೆ ಸೇರದ ಎಲ್ಲ ಅರ್ಹ ರೈತರನ್ನು ಕೂಡಲೇ ಸೇರ್ಪಡೆಗೊಳಿಸಿ, ಅವರಿಗೆ ಈ ಯೋಜನೆಯ ಲಾಭಗಳನ್ನು ತಲುಪಿಸುವುದಾಗಿ ಘೋಷಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಕೃಷಿ ಸಚಿವರ ಮಹತ್ವದ ಘೋಷಣೆ :
ಈ ಮಹತ್ವದ ನಿರ್ಧಾರವನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Union Minister for Agriculture Shivraj Singh Chouhan) ಅವರು ಲೋಕಸಭೆಯಲ್ಲಿ ಪ್ರಕಟಿಸಿದರು. “ನಾವು ಯಾವುದೇ ರೈತನನ್ನು ಈ ಯೋಜನೆಯಿಂದ ಹೊರಗಿಟ್ಟಿಲ್ಲ. ಆದ್ದರಿಂದ, ರಾಜ್ಯ ಸರ್ಕಾರಗಳು (State governments) ಕೂಡಲೇ ಈ ಯೋಜನೆಯೊಂದಿಗೆ ಅವರ ಹೆಸರು ಲಿಂಕ್ ಮಾಡಲು ಮತ್ತು ಲಾಭ ನೀಡಲು ಕ್ರಮ ತೆಗೆದುಕೊಳ್ಳಬೇಕು” ಎಂದು ಸಚಿವರು ಹೇಳಿದ್ದಾರೆ. ಇದರಿಂದಾಗಿ, ಈವರೆಗೆ ಯೋಜನೆಯ ಲಾಭ ಪಡೆಯದೇ ಉಳಿದ ರೈತರು ಲಾಭ ಪಡೆಯುವಂತೆ ಆಗುತ್ತದೆ.
ಕೇಂದ್ರ ಸರ್ಕಾರವು (Central government) ಈ ಯೋಜನೆ ಅಡಿಯಲ್ಲಿ ಅರ್ಹ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ ವ್ಯವಸ್ಥೆ ಮಾಡಿರುವುದರಿಂದ, ಯಾವುದೇ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ. ಈ ನಿರ್ಧಾರವು ರೈತರ ಆರ್ಥಿಕ ಸ್ಥಿತಿಗೆ ಮಹತ್ತರ ಸಹಾಯ ನೀಡಲಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎಂದರೇನು?:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2019ರ ಫೆಬ್ರವರಿ ತಿಂಗಳಲ್ಲಿ ಪ್ರಾರಂಭಗೊಂಡ ಕೃಷಿಗೆ ಸಹಾಯ ಮಾಡುವ ಒಂದು ಮಹತ್ವದ ಯೋಜನೆಯಾಗಿದೆ. ಇದರ ಉದ್ದೇಶ ಕೃಷಿಕರ ಆರ್ಥಿಕ ಸ್ಥಿತಿಯನ್ನು (Formers Economic situation) ಸುಧಾರಿಸುವುದು. ಈ ಯೋಜನೆಯಡಿ, ಪ್ರತಿ ಅರ್ಹ ರೈತರಿಗೆ ವರ್ಷಕ್ಕೆ ₹6,000 ಹಣ ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ಕಂತುಗಳಾಗಿ – ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000 ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಈ ಯೋಜನೆಗೆ ಅರ್ಹರಾಗಲು, ರೈತರು ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಬೇಕು, ಮತ್ತು PM-KISAN ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರಬೇಕು. ಹಾಗೆ ಪ್ರತಿ ರೈತರ ಬಳಿ ಭೂ ಮಾಲೀಕತ್ವ ದಾಖಲೆ ಇರಬೇಕು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಕೊನೆಯ ಕಂತಿನಲ್ಲಿ ಎಷ್ಟು ಹಣ ಬಿಡುಗಡೆ ಮಾಡಲಾಯಿತು? :
ಪಿಎಂ-ಕಿಸಾನ್ ಯೋಜನೆಯಡಿ 2024ರ ಫೆಬ್ರವರಿ 24ರಂದು ಕೇಂದ್ರ ಸರ್ಕಾರವು ₹22,000 ಕೋಟಿ ಹಣವನ್ನು ನೇರ ಲಾಭ ವರ್ಗಾವಣೆ (DBT) ಮೂಲಕ ರೈತರ ಖಾತೆಗೆ (Formers bank account) ಜಮೆ ಮಾಡಿದೆ. ಇದರಲ್ಲಿ 9.8 ಕೋಟಿ ರೈತರು ಲಾಭ ಪಡೆದಿದ್ದು, 2.41 ಕೋಟಿ ಮಹಿಳಾ ರೈತರಿಗೂ ಈ ಹಣ ಜಮೆಯಾಗಿಯಾಗಿದೆ. ಇದರಿಂದಾಗಿ, ರೈತರ ಹಣಕಾಸಿನ ಸ್ಥಿತಿ ಸುದೃಢಗೊಂಡಿದೆ ಎಂದರೆ ತಪ್ಪಾಗಲಾರದು.
ಯಾರು ಈ ಯೋಜನೆಯ ಪ್ರಯೋಜನ ಪಡೆಯಬಹುದು?:
ಯಾರ ಹೆಸರಿನಲ್ಲಿ ಕೃಷಿ ಭೂಮಿ ದಾಖಲೆ (Land document) ಇದೆಯೋ ಅವರು ಈ ಯೋಜನೆಗೆ ಅರ್ಹರು.
ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿರುವವರು.
PM-KISAN ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ನೊಂದಾಯಿಸಿರುವವರು.
ಹಿಂದಿನ ಯಾವುದೇ ಕಂತುಗಳನ್ನು ಪಡೆಯದೆ ಉಳಿದ ರೈತರು ಕೂಡ ಇದರ ಲಾಭ ಪಡೆಯಬಹುದು.
ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರದ ಸೂಚನೆ :ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರದ ಸೂಚನೆ :
ಈ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು, ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೆ ತ್ವರಿತ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ಈವರೆಗೆ ಅರ್ಹ ರೈತರು (Qualified Formers) ಯೋಜನೆಯ ಲಾಭ ಪಡೆಯದೆ ಇದ್ದರೆ, ತಕ್ಷಣವೇ ಅವರ ಹೆಸರನ್ನು PM-KISAN ಪೋರ್ಟಲ್‌ಗೆ ಲಿಂಕ್ ಮಾಡಿ, ಹಣ ನೀಡುವ ಕಾರ್ಯವನ್ನು ರಾಜ್ಯ ಸರ್ಕಾರಗಳು ನಿರ್ವಹಿಸಬೇಕು. ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸದ್ದಾರೆ.
ಇನ್ನು, “ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ರೈತರ ಹಿತಾಸಕ್ತಿಗೆ ಸಂಪೂರ್ಣವಾಗಿ ಸಮರ್ಪಿತವಾಗಿದೆ. ನಾವು ಯಾವುದೇ ರೈತರನ್ನು ಯೋಜನೆಯ ಲಾಭದಿಂದ ವಂಚಿತರಾಗಲು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರದಿಂದ, ಭೂಹೀನ ಮತ್ತು ಹಿಂದಿನ ಕಂತು ಪಡೆಯದೆ ಉಳಿದ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯುವ ಅವಕಾಶ ಪಡೆಯಲಿದ್ದಾರೆ. ಸರ್ಕಾರದ ಈ ತೀರ್ಮಾನವು, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ರೈತರಿಗೆ ಆರ್ಥಿಕ ಸುಧಾರಣೆಯನ್ನು (Economic reform for small and medium farmers) ತರಲು ಸಹಾಯ ಮಾಡಲಿದೆ. ರಾಜ್ಯ ಸರ್ಕಾರಗಳು ಕೂಡಲೇ ಈ ಯೋಜನೆಗೆ ಹೊಸ ಅರ್ಹ ರೈತರನ್ನು ಲಿಂಕ್ ಮಾಡಬೇಕು ಮತ್ತು ರೈತರಿಗೂ ಇದರ ಮಹತ್ವವನ್ನು ತಿಳಿಸಬೇಕು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




