ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿಯಲ್ಲಿ ಏರಿಕೆ: ಬಂಗಾರದ ಮೌಲ್ಯ ಕುಸಿತದಿಂದ ಖರೀದಿದಾರರಿಗೆ ಅನುಕೂಲ
ಭಾರತೀಯ ಮಾರುಕಟ್ಟೆಯಲ್ಲಿ (Indian market) ಚಿನ್ನ ಮತ್ತು ಬೆಳ್ಳಿ ಬೆಲೆಯ (Gold and Silver rate) ವ್ಯತ್ಯಾಸವು ಆಭರಣ ಖರೀದಿದಾರರು ಹಾಗೂ ಹೂಡಿಕೆದಾರರಲ್ಲಿ ವಿಶೇಷ ಕುತೂಹಲ ಮೂಡಿಸಿದೆ. ಕಳೆದ ವಾರದ ವೇಳೆಯಲ್ಲಿ ಚಿನ್ನದ ಬೆಲೆ ನಿರಂತರವಾಗಿ ಕುಸಿತ ಕಂಡ ಬಳಿಕ, ಈ ವಾರದಲ್ಲಿ ಎರಡು ದಿನಗಳ ಕಾಲ ಏರಿಕೆಯಾಗಿತ್ತು. ಆದರೆ ಮಾರ್ಚ್ 6 ರಂದು ಅಂದರೆ ನಿನ್ನೆ ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾಗಿದ್ದು, ಈ ನಡುವೆಯೇ ಬೆಳ್ಳಿ ಬೆಲೆ (Silver rate) ಮಾತ್ರ ಕೆಜಿಗೆ ₹1,000 ಏರಿಕೆಗೊಂಡಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 7, 2025: Gold Price Today
ಕಳೆದ ಕೆಲವು ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇತ್ತು, ಆದರೆ ಈ ತಿಂಗಳ ಮೊದಲ ದಿನದಿಂದಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬರುತ್ತಿದ್ದವು, ಇನ್ನು ಈ ಬದಲಾವಣೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ (Gold and silver rate) ಸ್ವಲ್ಪ ಇಳಿಕೆಯಾಗಿರುವುದನ್ನು ನಾವು ಗಮನಿಸಿರುತ್ತೇವೆ. ಆದರೆ ಸೋಮವಾರದಿಂದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿರುವುದು ನಮಗೆ ತಿಳಿದಿದೆ. ಆದರೆ ನಿನ್ನೆ ಮತ್ತೆ ಚಿನ್ನ ಇಳಿಕೆಯಾಗಿದ್ದು, ಗ್ರಾಹಕರು ಸ್ವಲ್ಪ ಮಟ್ಟಿನ ಖುಷಿಯನ್ನು ಕಾಣುತ್ತಿದ್ದಾರೆ. ಹಾಗಿದ್ದರೆ, ಇಂದಿನ ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 019ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,748 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,561 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 99, 100 ತಲುಪಿದೆ. ಒಟ್ಟಾರೆಯಾಗಿ ನಿನ್ನೆಗೆ ಹೋಲಿಸಿದರೆಬೆಳ್ಳಿ ಬೆಲೆಯಲ್ಲಿ 1200 ರೂನಷ್ಟು ಏರಿಕೆಯನ್ನು ಕಾಣಬಹುದು.
ಸಾಧಾರಣವಾಗಿ ಚಿನ್ನದ ದರದಲ್ಲಿ ಏರುಪೇರಿನ ಪ್ರಮುಖ ಕಾರಣವೆಂದರೆ ಅಂತರರಾಷ್ಟ್ರೀಯ ಮಾರುಕಟ್ಟೆ (International market) ಪ್ರಭಾವ, ಅಮೇರಿಕಾದ ಡಾಲರ್ ಶಕ್ತಿ, ದೇಶೀಯ ಬೇಡಿಕೆ, ಹಾಗೂ ಭೌತಿಕ ಬಂಡವಾಳ ಹೂಡಿಕೆದಾರರ ತೀರ್ಮಾನಗಳು. ಕಳೆದ ವಾರದ ಬೆಳವಣಿಗೆಯಲ್ಲಿ ಹಳದಿ ಲೋಹದ (ಚಿನ್ನ) ಬೆಲೆ ನಿರಂತರವಾಗಿ ನಾಲ್ಕು ದಿನ ಕುಸಿದಿದ್ದರೆ, ಈ ವಾರದ ಪ್ರಾರಂಭದಲ್ಲಿ ಏರಿಕೆಯಾಗಿತ್ತು. ಆದರೆ, ನಿನ್ನೆ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡುಬಂದಿದ್ದು, ಆಭರಣ ಪ್ರಿಯರು ಸ್ವಲ್ಪ ಮಟ್ಟಿನ ತೃಪ್ತಿ ಪಡುತ್ತಿದ್ದಾರೆ.
ಚಿನ್ನದ ದರದಲ್ಲಿ ಇಳಿಕೆ: 24 ಕ್ಯಾರೆಟ್ ದರ ₹490 ರಷ್ಟು ಕುಸಿತ :
ಮಾರ್ಚ್ 6, 2025ರ ಹೊತ್ತಿಗೆ, 22 ಕ್ಯಾರೆಟ್ ಚಿನ್ನದ ದರವು 10 ಗ್ರಾಂಗೆ ₹450 ಕುಸಿತ ಕಂಡಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ₹490 ಇಳಿಕೆಯಾಗಿದೆ. ಪ್ರಮುಖ ನಗರಗಳಲ್ಲಿ ಚಿನ್ನದ ದರ ಈ ಕೆಳಗಿನಂತಿದೆ:
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ(10 ಗ್ರಾಂ):
ಬೆಂಗಳೂರು : ₹87,490
ನಾಗ್ಪುರ : ₹87,490
ಮುಂಬೈ: ₹87,490
ಚೆನ್ನೈ: ₹87,490
ಕೋಲ್ಕತ್ತಾ : ₹87,490
ಪಾಟ್ನಾ: ₹87,540
ಸೂರತ್: ₹87,540
ಚಂಡೀಗಢ : ₹87,640
ಲಕ್ನೋ : ₹87,640
ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂ ₹80,350ಕ್ಕೆ ವಹಿವಾಟು ನಡೆಯುತ್ತಿದ್ದರೆ, 24 ಕ್ಯಾರೆಟ್ ಚಿನ್ನ ₹87,640ಕ್ಕೆ ತಲುಪಿದೆ.
ಬೆಳ್ಳಿಯ ಬೆಲೆಯಲ್ಲೂ ಭಾರೀ ಏರಿಕೆಕಂಡಿದ್ದು, 1 ಕೆ.ಜಿ ₹1,000 ಹೆಚ್ಚಳವಾಗಿದೆ.
ಬೆಂಗಳೂರು (Bengaluru) ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ ಕೆಜಿಗೆ) ಎಷ್ಟಿದೆ?:
ದೆಹಲಿ : 99,000 ರೂಪಾಯಿ
ಬೆಂಗಳೂರು : 99,000 ರೂಪಾಯಿ
ಚೆನ್ನೈ: 1,07,000 ರೂಪಾಯಿ
ಮುಂಬೈ : 99,000 ರೂಪಾಯಿ
ಕೋಲ್ಕತ್ತಾ : 99,000 ರೂಪಾಯಿ
ಕೇರಳ : 1,07,000 ರೂಪಾಯಿ
ಪಾಟ್ನಾ : 99,000 ರೂಪಾಯಿ
ಸೂರತ್ : 99,000 ರೂಪಾಯಿ
ಚಂಡೀಗಢ: 99,000 ರೂಪಾಯಿ
ಲಕ್ನೋ : 99,000 ರೂಪಾಯಿ
ಚಿನ್ನದ ಬೆಲೆಯಲ್ಲಿ ಕುಸಿತ ಕಂಡಾಗ, ಬೆಳ್ಳಿ ಮಾತ್ರ ದುಬಾರಿಯಾಗುತ್ತಿದೆ. ನಿನ್ನೆ ಹೊತ್ತಿಗೆ ಬೆಳ್ಳಿ 1 ಕೆ.ಜಿಗೆ ₹1,000 ಏರಿಕೆಯಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿಯ ದರ ಮೇಲಿನಂತಿದೆ.
ಚಿನ್ನದ ಮೌಲ್ಯ ಸತತ ಏರುಪೇರಾಗುತ್ತಿದ್ದು, ಉತ್ಸವ ಹಾಗೂ ಮದುವೆ ಸೀಸನ್‌ನಲ್ಲಿ (Festival and marriage seasons) ಗ್ರಾಹಕರು ಚಿನ್ನ ಖರೀದಿ ಮಾಡಲು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೂಡಿಕೆದಾರರು ಬೆಳ್ಳಿ ಮೇಲೂ ಹೆಚ್ಚು ಗಮನ ಹರಿಸುತ್ತಿದ್ದಾರೆ, ಏಕೆಂದರೆ ಚಿನ್ನದ ಬೆಲೆಯಲ್ಲಿ ಅಸ್ಥಿರತೆ ಹೆಚ್ಚಾದರೂ, ಬೆಳ್ಳಿಯ ಮೌಲ್ಯ ನಿರಂತರ ಏರಿಕೆಯಾಗುತ್ತಿದೆ ಆದ್ದರಿಂದ ಎಚ್ಚರಿಕೆಯಿಂದ ಉತ್ತಮ ಹೆಜ್ಜೆ ಇಡುತ್ತಿದ್ದಾರೆ.
ಭಾರತದಲ್ಲಿ ಚಿನ್ನದ ಖರೀದಿ ಹೆಚ್ಚಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ (Religious and cultural) ಹಿನ್ನೆಲೆಯಿಂದ ಪ್ರಭಾವಿತವಾಗುತ್ತದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರುಪೇರಿ ಸಂಭವಿಸುವ ಸಾಧ್ಯತೆಗಳಿದ್ದು, ಮಾರುಕಟ್ಟೆ ಸ್ಥಿತಿಯನ್ನು (Market situation) ಸಂಪೂರ್ಣವಾಗಿ ವಿಶ್ಲೇಷಿಸಿ ಬುದ್ಧಿವಂತಿಕೆಯಿಂದ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




