ವಾಹನ ಮಾಲೀಕರಿಗೆ ಸಿಹಿಸುದ್ದಿ: ಈಗ ₹3,000 ಪಾವತಿಸಿ, ವರ್ಷಪೂರ್ತಿ ಟೋಲ್ ಮುಕ್ತ ಪ್ರಯಾಣ!
ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Higways) ಪ್ರಯಾಣಿಸುವವರಿಗಾಗಿ ಕೇಂದ್ರ ಸರ್ಕಾರವು ಬಂಪರ್ ಕೊಡುಗೆಯನ್ನು ನೀಡಲು ಮುಂದಾಗಿದೆ. ಲಕ್ಷಾಂತರ ಕಾರು ಮಾಲೀಕರಿಗೆ ಟೋಲ್ (Toll) ಪಾವತಿಯ ಹಣವನ್ನು ಕಡಿಮೆ ಮಾಡುವ ಹೊಸ ಯೋಜನೆಯ ಬಗ್ಗೆ ಚರ್ಚೆಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ. ಈ ಹೊಸ ಯೋಜನೆಯ ಮೂಲಕ, ವಾಹನ ಮಾಲೀಕರು ಕೇವಲ ₹3,000 ಪಾವತಿಸಿದರೆ ವರ್ಷಪೂರ್ತಿ ಟೋಲ್ ಮುಕ್ತ ಪ್ರಯಾಣ ಮಾಡಬಹುದಾಗಿದೆ. ಈ ಹೊಸ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಈಗಾಗಲೇ, ದೇಶದ ಹಲವಾರು ಹೆದ್ದಾರಿಗಳಲ್ಲಿ ಫಾಸ್ಟ್ಟ್ಯಾಗ್ (FASTag) ಬಳಕೆ ಅಗತ್ಯತೆಯಾಗಿದೆ. ಹೊಸ ಪಾಸ್ ವ್ಯವಸ್ಥೆಯು ಫಾಸ್ಟ್ಟ್ಯಾಗ್ಗೂ ಲಿಂಕ್ ಮಾಡಲಾಗುತ್ತಿದ್ದು, ಯಾವುದೇ ಪ್ರತ್ಯೇಕ ಕಾರ್ಡ್ (Seperate Card) ಅಥವಾ ಟೋಕನ್ (Token) ಪಡೆಯಬೇಕಾದ ಅವಶ್ಯಕತೆ ಇರುವುದಿಲ್ಲ. ಈ ಕ್ರಮವು ಹೆದ್ದಾರಿಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲಿದ್ದು, ಟೋಲ್ ಪ್ಲಾಜಾಗಳ ಬಳಿ ಉಂಟಾಗುವ ಟ್ರಾಫಿಕ್ ಜಾಮ್ (Traffic Jam) ಸಮಸ್ಯೆಗೂ ಪರಿಹಾರ ನೀಡಲಿದೆ.
ಯೋಜನೆಯ ಮುಖ್ಯ ಅಂಶಗಳು ಹೀಗಿವೆ :
ಕೇವಲ ₹3,000 ಪಾವತಿಸಿದರೆ, ಒಂದು ವರ್ಷಪೂರ್ತಿ ಟೋಲ್ ಮುಕ್ತ ಪ್ರಯಾಣ ಮಾಡಬಹುದು.
₹30,000 ಪಾವತಿಸಿದರೆ 15 ವರ್ಷಗಳ ಅನುಕೂಲ ಪಡೆಯಬಹುದು.
ಹೊಸ ಪಾಸ್ಗಾಗಿ ಪ್ರತ್ಯೇಕ ಕಾರ್ಡ್ ಅಗತ್ಯವಿಲ್ಲ, ಇದನ್ನು ಫಾಸ್ಟ್ಟ್ಯಾಗ್ಗೆ(FASTag) ಲಿಂಕ್ ಮಾಡಲಾಗುತ್ತದೆ.
ಪ್ರತಿ ಕಿಲೋಮೀಟರ್ಗೆ ಟೋಲ್ ದರ ಕಡಿತ ಮಾಡುವ ಬಗ್ಗೆ ಸರ್ಕಾರ ಯೋಚನೆ ಮಾಡುತ್ತಿದೆ.
ಈ ಪಾಸ್ ಯೋಜನೆಯಿಂದ ಟೋಲ್ ಪ್ಲಾಜಾಗಳಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗುವ ನಿರೀಕ್ಷೆ ಇದೆ.
ಪ್ರಸ್ತುತ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳು ಹೀಗಿವೆ?:
ಪ್ರಸ್ತುತ, ಟೋಲ್ ಪ್ಲಾಜಾಗಳಲ್ಲಿ (Troll Plaza) ಪ್ರಯಾಣಿಕರು ಪ್ರತಿಯೊಂದು ಪಾಯಿಂಟ್ನಲ್ಲಿ ಹಣ ಪಾವತಿಸಬೇಕಾಗುತ್ತದೆ. ಇದರಿಂದ ಹೆದ್ದಾರಿಗಳಲ್ಲಿ ದಟ್ಟಣೆ ಹೆಚ್ಚಾಗುತ್ತದೆ ಮತ್ತು ಸಮಯ ವ್ಯರ್ಥವಾಗುತ್ತದೆ. ಪ್ರಸ್ತುತ, ಒಂದು ಮಾಸಿಕ ಪಾಸ್ (Monthly Pass) ಪಡೆಯಲು ₹340 ಪಾವತಿಸಬೇಕಾದರೆ, ವಾರ್ಷಿಕ ಪಾಸ್ಗಾಗಿ ₹4,080 ದರ ನಿಗದಿಯಾಗಿದೆ. ಆದರೆ, ಹೊಸ ಪಾಸ್ ವ್ಯವಸ್ಥೆಯೊಂದಿಗೆ ಈ ಮೊತ್ತವು ಹೆಚ್ಚು ಅನುಕೂಲಕರವಾಗಲಿದೆ.
ಕೇಂದ್ರ ರಸ್ತೆ ಸಾರಿಗೆ (Central Road Transport) ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಹೊಸ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾ, ವಾಹನ ಮಾಲೀಕರಿಗೆ ಅನುಕೂಲವಾಗುವಂತೆ ಟೋಲ್ ಪಾವತಿ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಹೊಸ ಯೋಜನೆ (New Scheme) ಜಾರಿ ಯಾಗುತ್ತಿದ್ದಂತೆ, ಭಾರತದ ಹೆದ್ದಾರಿಗಳಲ್ಲಿ ಪ್ರಯಾಣ ಮತ್ತಷ್ಟು ಸುಗಮವಾಗಲಿದ್ದು, ಖರ್ಚು ತಗ್ಗಲಿದೆ.
ಈ ಹೊಸ ನಿಯಮ ನಂತರದ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಆಗಲಿದ್ದು, ಈ ಬಗ್ಗೆ ಸಚಿವಾಲಯ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಇದು ದೇಶದ ಅನೇಕ ವಾಹನ ಮಾಲೀಕರಿಗೆ ಬಹುದಿನಗಳ ನಿರೀಕ್ಷಿತ ಸಿಹಿಸುದ್ದಿಯಾಗಲಿದೆ!.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




