ಚಿನ್ನದ ಬೆಲೆಯಲ್ಲಿ ಏರಿಕೆ: ಬಜೆಟ್ ಬಳಿಕವೂ ಬಂಗಾರದ ಮಾರುಕಟ್ಟೆ ಶಾಕ್, ಬೆಳ್ಳಿಗೆ ಕುಸಿತ!
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ (Gold and silver) ಮಾರುಕಟ್ಟೆ ಸದಾ ಅಸ್ಥಿರವಾಗಿರುತ್ತದೆ. ಬಂಗಾರದ ಬೆಲೆ ಯಾವಾಗ ಏರಿಕೆ ಆಗುತ್ತದೋ ಅಥವಾ ಯಾವಾಗ ಇಳಿಕೆ ಆಗುತ್ತದೋ ಎಂಬುದು ಜನ ಸಾಮಾನ್ಯರ ಕುತೂಹಲದ ವಿಷಯವಾಗಿದೆ. ಚಿನ್ನದ ಮಾರುಕಟ್ಟೆ ಪ್ರಭಾವಿತವಾಗಲು ಅಂತಾರಾಷ್ಟ್ರೀಯ (International) ಆರ್ಥಿಕ ಪರಿಸ್ಥಿತಿಗಳು, ಡಾಲರ್ ಮತ್ತು ರೂಪಾಯಿ (Dollar and rupees) ವಿನಿಮಯ ದರ, ಸೀಜನ್‌ವಾರಿ ಬೇಡಿಕೆ, ಸರ್ಕಾರದ ತೆರಿಗೆ ನೀತಿಗಳು, ಮತ್ತು ವಿವಿಧ ಜಾಗತಿಕ ಘಟನೆಗಳು ಪ್ರಮುಖ ಕಾರಣಗಳಾಗಿರುತ್ತವೆ.
ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ. ಹಾಗಾದರೆ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Central financial Minister Nirmala Sitharaman) ಮಂಡಿಸಿದ 2024-25ರ ಬಜೆಟ್ ನಂತರ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 15 ರಿಂದ ಶೇಕಡಾ 6ಕ್ಕೆ ಇಳಿಸಲಾಗಿತ್ತು. ಇದರಿಂದಾಗಿ ಮುಂಬರುವ ತಿಂಗಳುಗಳಲ್ಲಿ ಚಿನ್ನದ ಬೆಲೆ ಇಳಿಯುವ ಸಾಧ್ಯತೆ ಇತ್ತು. ಆದರೆ ತಕ್ಷಣದ ಪರಿಣಾಮವಾಗಿ, ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ, ಇದು ಆಭರಣ ಪ್ರಿಯರನ್ನು ನಿರಾಸೆಗೊಳಿಸಿದೆ. ಚಿನ್ನದೆ ಬೆಲೆ ಎಷ್ಟಕ್ಕೆ ಏರಿಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಖರೀದಿದಾರರಿಗೆ ಆಘಾತ ಉಂಟುಮಾಡಿದೆ.!
ಸದ್ಯ ಭಾರತದಲ್ಲಿ (in India) 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹78,100 ಆಗಿದ್ದು, 24 ಕ್ಯಾರೆಟ್ ಅಪರಂಜಿ ಚಿನ್ನದ ದರ ₹85,200 ಆಗಿದೆ. ಇದು ಹಿಂದಿನ ದಿನದ ದರಗಳೊಂದಿಗೆ ಹೋಲಿಸಿದರೆ ಭಾರೀ ಏರಿಕೆಯಾಗಿದ್ದು, ಈ ಬೆಳವಣಿಗೆ ಚಿನ್ನ ಖರೀದಿಸಲು ಯೋಜಿಸುತ್ತಿರುವವರ ಆತಂಕ ಹೆಚ್ಚಿಸಿದೆ.
ವಿವಿಧ ತೂಕದ ಚಿನ್ನದ ಬೆಲೆಗಳು (gold rate) :
22 ಕ್ಯಾರೆಟ್ ಚಿನ್ನ:
1 ಗ್ರಾಂ – ₹7,810
10 ಗ್ರಾಂ – ₹78,100
100 ಗ್ರಾಂ – ₹7,81,000
24 ಕ್ಯಾರೆಟ್ ಅಪರಂಜಿ ಚಿನ್ನ:
1 ಗ್ರಾಂ – ₹8,520
10 ಗ್ರಾಂ – ₹85,200
100 ಗ್ರಾಂ – ₹8,52,000
18 ಕ್ಯಾರೆಟ್ ಚಿನ್ನ:
10 ಗ್ರಾಂ – ₹63,900
24 ಕ್ಯಾರೆಟ್ ಚಿನ್ನದ ದರದಲ್ಲಿ ₹11,500 ಏರಿಕೆಯಾಗಿರುವುದು ಗಮನಾರ್ಹ. ಇದರಿಂದಾಗಿ ಚಿನ್ನ ಖರೀದಿಸಲು ಯೋಚಿಸುತ್ತಿದ್ದವರು ಇನ್ನಷ್ಟು ದಿನಗಳ ನಂತರ ಚಿನ್ನ ಖರೀದಿಸಬಹುದು.
ಆದರೆ ಬೆಳ್ಳಿಯ (Silver) ಬೆಲೆಯಲ್ಲಿ ಇಳಿಕೆಯಾಗಿದ್ದು, ಹೂಡಿಕೆದಾರರಿಗೆ ಸಂತೋಷವಾಗಿದೆ :
ಚಿನ್ನದ ಬೆಲೆ ಏರಿಕೆಯಾದರೆ, ಬೆಳ್ಳಿಯ ಮಾರುಕಟ್ಟೆ ಸಂಪೂರ್ಣ ವಿರುದ್ಧವಾಗಿದೆ . ಪ್ರಸ್ತುತ ಒಂದು ಕಿಲೋಗ್ರಾಂ ಬೆಳ್ಳಿಯ ದರ ₹98,500 ಆಗಿದ್ದು, ಒಟ್ಟಾರೆಯಾಗಿ ₹1,000 ಇಳಿಕೆಯಾಗಿದೆ.
ವಿವಿಧ ತೂಕದ ಬೆಳ್ಳಿಯ ದರ:
1 ಗ್ರಾಂ – ₹98.50
10 ಗ್ರಾಂ – ₹985
100 ಗ್ರಾಂ – ₹9,850
1 ಕೆಜಿ – ₹98,500
ಬೆಳ್ಳಿ ಹೂಡಿಕೆದಾರರಿಗೆ ಇದು ಉತ್ತಮ ಅವಕಾಶವಾಗಿದ್ದು, ಹೂಡಿಕೆಗೆ ಸೂಕ್ತ ಸಮಯ ಎನ್ನಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೀಗಿವೆ :
ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ:
1. ಬೆಂಗಳೂರು : 22 ಕ್ಯಾರೆಟ್(7810) 24 ಕ್ಯಾರೆಟ್(8520)
2. ಚೆನೈ : 22 ಕ್ಯಾರೆಟ್(7810) 24 ಕ್ಯಾರೆಟ್(8520)
3. ಮುಂಬೈ : 22 ಕ್ಯಾರೆಟ್(7810) 24 ಕ್ಯಾರೆಟ್(8520)
4. ದೆಹಲಿ : 22 ಕ್ಯಾರೆಟ್(7825) 24 ಕ್ಯಾರೆಟ್(8535)
5.ಕೊಲ್ಕತ್ತಾ : 22 ಕ್ಯಾರೆಟ್(7810) 24 ಕ್ಯಾರೆಟ್(8520)
6. ಪುಣೆ : 22 ಕ್ಯಾರೆಟ್(7810) 24 ಕ್ಯಾರೆಟ್(8520)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್):
ಬೆಂಗಳೂರು : 9,850 ರೂ.
ಚೆನೈ : 10,600
ಮುಂಬೈ : 9,850
ದೆಹಲಿ : 9,850
ಕೋಲ್ಕತಾ: 9,850ರೂ
ಹೈದರಾಬಾದ್: 10,600ರೂ
ಪುಣೆ :9,850
MCX ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ (International market) ಚಿನ್ನದ ಸ್ಥಿತಿ ಹೇಗಿದೆ :
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (Multi commodity Exchange) ನಲ್ಲಿ, ಚಿನ್ನದ ದರ ಸತತ ನಾಲ್ಕನೇ ದಿನವೂ ಏರಿಕೆಯಾಗಿದೆ. MCX ಗೋಲ್ಡ್ 83,500 ಪಾಯಿಂಟ್ ಗಿಂತ ಹೆಚ್ಚಾದರೆ, ಮುಂದಿನ ಗುರಿಗಳು 83,800-84,000 ಮಟ್ಟಗಳಲ್ಲಿ ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಅದೇ ರೀತಿ ಬೆಂಬಲದ ಮಟ್ಟ 81,800-82,250 ರಷ್ಟಿರಬಹುದು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ :
ಸ್ಪಾಟ್ ಚಿನ್ನ: $2,820.69 (0.3% ಏರಿಕೆ)
ಚಿನ್ನ ಫ್ಯೂಚರ್ಸ್: $2,852.70 (0.2% ಕುಸಿತ)
ಸ್ಪಾಟ್ ಬೆಳ್ಳಿ: $31.61 (0.2% ಏರಿಕೆ)
ಪಲ್ಲಾಡಿಯಮ್: $1,019.31 (1% ಏರಿಕೆ)
ಪ್ಲಾಟಿನಂ: $970.80 (0.7% ಏರಿಕೆ)
ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯ ನಿರೀಕ್ಷೆ:
ನೂತನ ಬಜೆಟ್ ಪ್ರಕಾರ, ಏಪ್ರಿಲ್ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆ ಗಣನೀಯವಾಗಿ ಇಳಿಯುವ ಸಾಧ್ಯತೆ ಇದೆ. ಚಿನ್ನದ ಕಸ್ಟಮ್ಸ್ ಡ್ಯೂಟಿ (Custom Duty) ಕಡಿತ ಮಾಡಿರುವುದರಿಂದ, ನಾಳೆ ಅಥವಾ ಮುಂದಿನ ತಿಂಗಳು ಖರೀದಿ ಮಾಡುವವರಿಗಿಂತ ಏಪ್ರಿಲ್‌ವರೆಗೆ ಕಾಯುವವರು ಹೆಚ್ಚಿನ ಲಾಭ ಪಡೆಯಬಹುದು.
ಗಮನಿಸಿ (Notice) :
ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ
ಚಿನ್ನದ ಬೆಲೆಯಲ್ಲಿ ಏರಿಕೆ:
ಫೆಬ್ರವರಿ 5, 2025 ರಂದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,905 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,624 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6468 ಆಗಿದೆ. ಇದು ಹಿಂದಿನ ದಿನಕ್ಕೆ ಹೋಲಿಸಿದರೆ ಕ್ರಮವಾಗಿ ₹95 ಮತ್ತು ₹104 ರಷ್ಟು ಏರಿಕೆಯನ್ನು ಸೂಚಿಸುತ್ತದೆ.
ಬೆಳ್ಳಿಯ ಬೆಲೆಯಲ್ಲಿ ಇಳಿಕೆ:
ಇನ್ನೊಂದೆಡೆ, ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಪ್ರತಿ ಕಿಲೋಗ್ರಾಂ ಬೆಳ್ಳಿ ಬೆಲೆ ₹98,500 ಆಗಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ₹1,000 ರಷ್ಟು ಇಳಿಕೆಯನ್ನು ಸೂಚಿಸುತ್ತದೆ.
ಚಿನ್ನದ ಬೆಲೆಗಳ ಏರಿಕೆ ಮತ್ತು ಬೆಳ್ಳಿಯ ಬೆಲೆ ಇಳಿಕೆಯ ಮಧ್ಯೆ, ಹೂಡಿಕೆದಾರರು (Investor’s) ಸೂಕ್ತ ಸಮಯ ಮತ್ತು ಯೋಜನೆ ಮಾಡಿಕೊಂಡು ಹೂಡಿಕೆ ಮಾಡುವುದು ಒಳಿತು. ಚಿನ್ನ ಖರೀದಿಸಲು ಬಯಸುವವರು ಏಪ್ರಿಲ್‌ನಿಂದ ಬೆಲೆ ಇಳಿಯುವ ನಿರೀಕ್ಷೆ ಇದ್ದು ಕಾಯಬಹುದು. ಬೆಳ್ಳಿ ಹೂಡಿಕೆ ಬಯಸುವವರಿಗೆ ಇಂದೇ ಉತ್ತಮ ಅವಕಾಶವಾಗಿದೆ. ಆಭರಣ ಪ್ರಿಯರು ಮತ್ತು ಹೂಡಿಕೆದಾರರು ತಜ್ಞರ ಸಲಹೆ ಪಡೆದು ಮುಂದಿನ ತೀರ್ಮಾನಗಳನ್ನು ಕೈಗೊಳ್ಳುವುದು ಸೂಕ್ತ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




