2025ರ ಕೇಂದ್ರ ಬಜೆಟ್: ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ – ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ₹5 ಲಕ್ಷಕ್ಕೆ ಏರಿಕೆ
2025ರ ಕೇಂದ್ರ ಬಜೆಟ್ (Budget) ಮಂಡನೆಯಾಗುತ್ತಿದ್ದಂತೆ, ಭಾರತದ ಕೃಷಿ ವಲಯಕ್ಕೆ ಮಹತ್ತರ ಆದ್ಯತೆ ನೀಡಲಾಗಿದೆ. ದೇಶದ ಕೃಷಿ ಸಮುದಾಯಕ್ಕೆ ಬೆಂಬಲ ನೀಡಲು ವಿವಿಧ ಯೋಜನೆಗಳನ್ನು ಘೋಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿಶೇಷವಾಗಿ “ಪ್ರಧಾನಮಂತ್ರಿ ಧನಧಾನ್ಯ ಕೃಷಿ ಯೋಜನೆ” (PM Dhan Dhanaya Yojana) ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಮಿತಿಯ ಹೆಚ್ಚಳ ಮುಂತಾದ ಘೋಷಣೆಗಳನ್ನು ಮಾಡಿದ್ದಾರೆ. ಈ ಬಜೆಟ್‍ನ ಉದ್ದೇಶ ಕೃಷಿ ಕ್ಷೇತ್ರದ ಅಭಿವೃದ್ಧಿ, ಆಹಾರ ಸುರಕ್ಷತೆ, ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡುವಂತಿದೆ. ಕೃಷಿ ಕ್ಷೇತ್ರಕ್ಕೆ ಯಾವೆಲ್ಲ ಘೋಷಣೆಗಳನ್ನು ಮಾಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit Card) ಮಿತಿ ಹೆಚ್ಚಳ:
ರೈತರ ಹಣಕಾಸು ಸಾಮರ್ಥ್ಯವನ್ನು ಹೆಚ್ಚಿಸಲು, ಈ ಬಜೆಟ್‌ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ನ (KCC) ಸಾಲ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಸಣ್ಣ ಹಾಗೂ ಮಧ್ಯಮ ರೈತರಿಗೆ ಹೆಚ್ಚಿನ ಹಣಕಾಸು ನೆರವು ಲಭ್ಯವಾಗಲಿದೆ. ಉಳಿತಾಯದಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಕೃಷಿ ಚಟುವಟಿಕೆಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಪ್ರಧಾನಮಂತ್ರಿ ಧನಧಾನ್ಯ ಕೃಷಿ ಯೋಜನೆ (PM Dhan Dhanaya Yojana):
ಕೇಂದ್ರ ಸರ್ಕಾರ ಹೊಸ ಯೋಜನೆಗಳ ಮೂಲಕ ದ್ವಿದಳ ಧಾನ್ಯಗಳಲ್ಲಿ (Puls Crop) ಸ್ವಾವಲಂಬನೆ ಸಾಧಿಸಲು ಮುಂದಾಗಿದೆ. ಈ ಯೋಜನೆಯಡಿ ಮುಖ್ಯವಾಗಿ ತೊಗರಿ, ಉದ್ದು, ಮಸೂರ್ ಬೇಳೆಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ.
100 ಕಡಿಮೆ ಉತ್ಪಾದಕತೆ ಹೊಂದಿರುವ ಜಿಲ್ಲೆಗಳ ಅಭಿವೃದ್ಧಿ:
1.7 ಕೋಟಿ ರೈತರಿಗೆ ಸಹಾಯ ಮಾಡಲು ಕೃಷಿ ಕಾರ್ಯಕ್ರಮ ಯೋಜಿಸಲಾಗಿದ್ದು, ಈ ಯೋಜನೆಯಡಿ 100 ಕೃಷಿ ಉತ್ಪಾದನೆ ಕಡಿಮೆ ಇರುವ ಜಿಲ್ಲೆಗಳಿಗೆ ವಿಶೇಷ ಗಮನ ಹರಿಸಲಾಗಿದ್ದು, ಕಡಿಮೆ ಉತ್ಪಾದಕತೆ ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳಲು ಕೃಷಿ ಯೋಜನೆ (Agricultural scheme) ರೂಪಿಸಲಾಗುತ್ತಿದೆ.ಈ ಭಾಗದ ರೈತರನ್ನು ಉತ್ತೇಜಿಸುವ ಮೂಲಕ ದೇಶದ ಕೃಷಿ ಉತ್ಪಾದಕತೆಯನ್ನು ಒಟ್ಟಾರೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
1.7 ಕೋಟಿ ರೈತರಿಗೆ ಆರ್ಥಿಕ ನೆರವು:
ಈ ಯೋಜನೆಯಡಿ ಸುಮಾರು 1.7 ಕೋಟಿ ರೈತರಿಗೆ ಆರ್ಥಿಕ ಸಹಾಯ ಮತ್ತು ಬೆಂಬಲ ಒದಗಿಸಲಾಗುತ್ತಿದೆ. ಇದರಿಂದ ಅವರು ಉತ್ತಮ ಕೃಷಿ ಸಾಧನೆ ಮಾಡಬಹುದಾಗಿದೆ.
ದ್ವಿದಳ ಧಾನ್ಯಗಳ ಖರೀದಿ ಮತ್ತು ಸಂಗ್ರಹ:
ನಾಫೆಡ್ (NAFED) ಮತ್ತು ಎನ್‌ಸಿಸಿಎಫ್ (NCCF) ಸಂಸ್ಥೆಗಳು ಮುಂದಿನ ನಾಲ್ಕು ವರ್ಷಗಳೊಳಗೆ ಟರ್, ಉರಾದ್, ಮಸೂರ್ ಧಾನ್ಯಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರದಿಂದ (Central government) ನೇಮಕಗೊಂಡಿವೆ. ಇದು ಬೆಳೆಗಾರರಿಗೆ ಖಚಿತ ಮಾರುಕಟ್ಟೆ ಒದಗಿಸುವ ಜೊತೆಗೆ ಕೃಷಿ ಆರ್ಥಿಕತೆಯನ್ನು ಬಲಪಡಿಸುವ ನಿರೀಕ್ಷೆಯಿದೆ.
ಮಖಾನಾ ಮಂಡಳಿ ಸ್ಥಾಪನೆ :
ಬಿಹಾರದಲ್ಲಿ ಮಖಾನಾ ಬೆಳೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ “ಮಖಾನಾ ಮಂಡಳಿ” ಸ್ಥಾಪಿಸಲು ನಿರ್ಧರಿಸಿದೆ. ಮಖಾನಾ (Fox Nut) ಭಾರತದ ಪೋಷಕಾಂಶಗಳಿಂದ ಸಮೃದ್ಧ ಆಹಾರ ಉತ್ಪನ್ನವಾಗಿದ್ದು, ಇದಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹ ನೀಡುವ ಗುರಿಯೊಂದಿಗೆ ಈ ಮಂಡಳಿಯು ಕಾರ್ಯನಿರ್ವಹಿಸಲಿದೆ.
ಯೂರಿಯಾ ಪೂರೈಕೆ ಹೆಚ್ಚಿಸಲು ಹೊಸ ಯೋಜನೆಗಳು:
ರೈತರಿಗೆ ಸಮರ್ಥ ರಸಗೊಬ್ಬರ ಪೂರೈಕೆಯ ಅನುಕೂಲವಾಗುವಂತೆ ಅಸ್ಸಾಂನ ನಮ್ರಪ್‌ನಲ್ಲಿ 12.7 ಲಕ್ಷ ಮೆಟ್ರಿಕ್ ಟನ್ (Metric Tun) ಸಾಮರ್ಥ್ಯದ ಯೂರಿಯಾ ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ಪೂರ್ವ ಭಾರತದಲ್ಲಿ ರಸಗೊಬ್ಬರ ಲಭ್ಯತೆ ಸುಗಮಗೊಳ್ಳಲಿದೆ. ಜೊತೆಗೆ, ದೇಶದ ಪೂರ್ವ ಭಾಗದಲ್ಲಿ ಮೂರು ಮುಚ್ಚಲ್ಪಟ್ಟ ಯೂರಿಯಾ ಕಾರ್ಖಾನೆಗಳನ್ನು ಪುನರಾರಂಭ ಮಾಡಲಾಗುತ್ತಿದೆ.
ಹತ್ತಿ ಬೆಳೆಗೆ ಪ್ರೋತ್ಸಾಹ : 5 ವರ್ಷಗಳ ಮಿಷನ್ (Mission) ಘೋಷಣೆ:
ಭಾರತದ ಜವಳಿ ಉದ್ಯಮವನ್ನು ಪುನರ್‌ಜೀವನಗೊಳಿಸುವ ಸಲುವಾಗಿ, ಹತ್ತಿ ಬೆಳೆಗಾರರಿಗೆ ವಿಶೇಷ ಸಹಾಯ ಹಸ್ತ ನೀಡಲಾಗಿದೆ. ಉತ್ತಮ ಗುಣಮಟ್ಟದ ಹತ್ತಿ (Cotton) ಬೆಳೆಯನ್ನು ಉತ್ತೇಜಿಸಲು ಮುಂದಿನ 5 ವರ್ಷಗಳ ಕಾಲ ಹೊಸ ಮಿಷನ್ ಕಾರ್ಯಾಚರಿಸಲಿದ್ದು, ಇದರಿಂದ ಉತ್ಪಾದನೆ ಮತ್ತು ಜವಳಿ ಉದ್ಯಮಕ್ಕೆ ಹೊಸ ದಿಕ್ಕು ಸಿಗಲಿದೆ.
2025ರ ಕೇಂದ್ರ ಬಜೆಟ್‍ನಲ್ಲಿ ಕೃಷಿ ವಲಯಕ್ಕೆ ನೀಡಲಾದ ಪ್ರಮುಖ ಘೋಷಣೆಗಳು:
ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲ ಮಿತಿ ₹5 ಲಕ್ಷಕ್ಕೆ ಹೆಚ್ಚಳ.
100 ಕಡಿಮೆ ಉತ್ಪಾದಕತೆ ಹೊಂದಿರುವ ಜಿಲ್ಲೆಗಳ ಅಭಿವೃದ್ಧಿಗೆ ‘ಧನಧಾನ್ಯ ಕೃಷಿ ಯೋಜನೆ’ (Dhandanya Farming Scheme).
1.7 ಕೋಟಿ ರೈತರಿಗೆ ಆರ್ಥಿಕ ನೆರವು.
ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಗಾಗಿ 6 ವರ್ಷದ ಯೋಜನೆ.
ಮಖಾನಾ ಬೆಳೆ ಉತ್ತೇಜನೆಗಾಗಿ ಬಿಹಾರದಲ್ಲಿ ವಿಶೇಷ ಮಂಡಳಿ.
ಯೂರಿಯಾ ಪೂರೈಕೆಯನ್ನು ಸುಧಾರಿಸಲು ಅಸ್ಸಾಂನಲ್ಲಿ ಹೊಸ ಯೂರಿಯಾ ಸ್ಥಾವರ.
ಗುಣಮಟ್ಟದ ಹತ್ತಿ ಬೆಳೆಗೆ 5 ವರ್ಷಗಳ ವಿಶೇಷ ಮಿಷನ್ (Special Mission).
ಈ ಬಜೆಟ್‍ನನ್ನು ಕೃಷಿ ವಲಯದಲ್ಲಿ ಒಟ್ಟಾರೆ ಅಭಿವೃದ್ಧಿಯನ್ನು ಉಂಟುಮಾಡುವಂತೆ ರೂಪಿಸಲಾಗಿದೆ. ಹೊಸ ಯೋಜನೆಗಳು ಕೃಷಿ ಉತ್ಪಾದನೆ, ಆಹಾರ ಸುರಕ್ಷತೆ, ಹಾಗೂ ರೈತರ ಆರ್ಥಿಕ ಸ್ಥಿತಿಗೆ ಬಲ ನೀಡಲಿವೆ. ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತೆಯನ್ನು ಉತ್ತೇಜಿಸುವ ಮೂಲಕ ದೇಶದ ಆಹಾರ ಆಮದು ಅವಲಂಬನೆಯ ಪ್ರಮಾಣವನ್ನು ಕಡಿಮೆ ಮಾಡುವತ್ತ ಇದು ಸಹಕಾರಿಯಾಗಬಹುದು. ಜೊತೆಗೆ, ಖಾಸಗಿ ಹೂಡಿಕೆ ಮತ್ತು ತಂತ್ರಜ್ಞಾನ (Technology) ಬಳಕೆಯನ್ನು ಉತ್ತೇಜಿಸುವ ಮೂಲಕ ಕೃಷಿ ಕ್ಷೇತ್ರದ ಆಧುನೀಕರಣಕ್ಕೂ ಈ ಬಜೆಟ್ ಪ್ರೇರಕ ಶಕ್ತಿ ನೀಡಲಿದೆ.
ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




