ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿ ಹೆಚ್ಚಾಗಿದ್ದು, ಇವುಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕರ್ನಾಟಕದಲ್ಲಿ ಇನ್ನು ಮುಂದೆ ಅಸ್ತಿತ್ವಕ್ಕೆ ಬರಲಿದೆ ಫೈನಾನ್ಸ್ ನೋಂದಣಿ ಪ್ರಾಧಿಕಾರ. ಹಾಗಾಗಿ , ಪೈನಾನ್ಸ್ ವ್ಯವಹಾರ ನಡೆಸಲು ಮುಚ್ಚಳಿಕೆ ಸಹಿತ ನೋಂದಣಿ ಕಡ್ಡಾಯ ಎಂಬ ನಿಯಮ ಜಾರಿಗೆ ಬರಲಿದೆ. ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದ್ದು . ಈ ಕುರಿತು ಸಂಪೂರ್ಣ ವಿವರ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮೈಕ್ರೋ ಫೈನಾನ್ಸ್ ಗಳಿಗೆ ಹೊಸ ರೂಲ್ಸ್ :
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ ಕಂಪನಿಗಳಿಗೆ ಕಡಿವಾಣ ಹಾಕಲು ಇನ್ನೇನು ಹೊಸ ರೂಲ್ಸ್ ಜಾರಿಗೆ ಬರಲಿದೆ ಕರ್ನಾಟಕದಲ್ಲಿ ಇನ್ನು ಮುಂದೆ ಸಾಲದ ವಹಿವಾಟು ನಡೆಸುವ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರ ನೋಂದಣಿಗಾಗಿ ಹೊಸ ‘ನೋಂದಣಿ ಪ್ರಾಧಿಕಾರ’ ರಚಿಸಲು ಸರಕಾರ ನಿರ್ಧರಿಸಿದೆ. ನೋಂದಣಿ ಮಾಡದೆ ವಹಿವಾಟು ನಡೆಸಿದ್ರೆ 3 ವರ್ಷ ಜೈಲು 1 ಲಕ್ಷ ರೂ ದಂಡ ವಿಧಿಸುವ ಕಾನೂನು ಜಾರಿಗೆ ಮುಂದಾಗಿದೆ.
ಹೊಸ ವಿಧೇಯಕದಲ್ಲಿ ಏನಿದೆ.?
ರಾಜ್ಯದೊಳಗೆ ಸಾಲದ ವಹಿವಾಟು ನಡೆಸುವ ಎಲ್ಲಮೈಕ್ರೋ ಫೈನಾನ್ಸ್ ಕಂಪನಿಗಳ ನೋಂದಣಿ ಕಡ್ಡಾಯ. ಅದಕ್ಕಾಗಿ ನೋಂದಣಿ ಪ್ರಾಧಿಕಾರ ರಚನೆ.
ನೋಂದಣಿ ಮಾಡದೇ ವಹಿವಾಟು ನಡೆಸಿದರೆ 3 ವರ್ಷಗಳ ವರೆಗೆ ವಿಸ್ತರಿಸಬಹುದಾದ ಜೈಲು ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶ.
ನೋಂದಣಿ ಸಂದರ್ಭದಲ್ಲಿ ಸಾಲಕ್ಕೆ ವಿಧಿಸುವ ಬಡ್ಡಿ ಹಾಗೂ ಸಾಲ ವಸೂಲಿ ಪದ್ಧತಿ ಸೇರಿ ಸಮಗ್ರ ವಿವರ ಒದಗಿಸಬೇಕು.
ಯಾವುದೇ ದೂರು ಬಂದಲ್ಲಿ ನೋಟಿಸ್ ನೀಡದೆ ಸಂಬಂಧಪಟ್ಟ ಸಂಸ್ಥೆಯ ನೋಂದಣಿಯನ್ನು ರದ್ದುಪಡಿಸಲು ಪ್ರಾಧಿಕಾರಕ್ಕೆ ಕಾನೂನಿನಲ್ಲಿಅವಕಾಶ ಕಲ್ಪಿಸಲಾಗಿದೆ.
ನೋಂದಾಯಿತ ಸಂಸ್ಥೆ, ಲೇವಾದೇವಿದಾರ ಮಾಸಿಕ ವ್ಯವಹಾರದ ವಿವರಗಳನ್ನು ಪ್ರತಿ ತಿಂಗಳ 10 ರೊಳಗೆ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
ಸಾಲ ನೀಡಲು ಶರತ್ತುಗಳು ಅನ್ವಯ
ಈ ಹೊಸ ಕಾಯ್ದೆಯಲ್ಲಿ ಸರ್ಕಾರದ ಕೆಲವು ಹೊಸ ಯೋಜನೆಗಳನ್ನು ರೂಪಿಸಿದ್ದು ಕೆಲವು ಷರತ್ತುಗಳನ್ನು ನಿಗದಿಪಡಿಸಲಾಗಿದೆ. ಒಬ್ಬ ವ್ಯಕ್ತಿ ಎರಡು ಸಂಸ್ಥೆಗಳಿಂದ ಮಾತ್ರ ಸಾಲ ಪಡೆಯಬಹುದು ಹಾಗೂ ಸಾಲದ ಮೊತ್ತ 2 ಲಕ್ಷಕ್ಕಿಂತ ಹೆಚ್ಚಿಗೆ ಇರಬಾರದು. ಈ ಪ್ರಮುಖ ಷರತ್ತಿಗೆ ಪೂರಕ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಹೇಳಲಾಗಿದೆ.
ಸಾಲ ಒಪ್ಪಂದ ಕಡ್ಡಾಯವಾಗಿದ್ದು, ವಿಧಿಸುವ ಬಡ್ಡಿ ದರದ ಮಾಹಿತಿ ಒಳಗೊಂಡ ಸಾಲ ನೀಡಬೇಕು.
ಗ್ರಾಹಕರಿಗೆ ಸಾಲ ನೀಡುವಾಗ ಒಪ್ಪಂದ ಪತ್ರವನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಈ ಪತ್ರದಲ್ಲಿ ಬಡ್ಡಿದರ, ಮತ್ತು ಇತರೆ ಎಲ್ಲಾ ಮಾಹಿತಿಯನ್ನು ಒಳಗೊಂಡ ಮಂಜೂರಾತಿ ಕಾರ್ಡ್ ಅನ್ನು ಸಾಲಗಾರರಿಗೆ ಒದಗಿಸಬೇಕು
ವಿಳಂಬ ಮೀರಿದ ಇಎಮ್ಐ ಪಾವತಿಗೆ ನಿಯಮ ಮೀರಿ ದಂಡ ವಿಧಿಸುವಂತಿಲ್ಲ. ಮತ್ತು ಹಣ ವಸೂಲಾತಿಗೆ ಹೊರಗುತ್ತಿಗೆ ಏಜೆಂಟರನ್ನು ನೇಮಿಸುವಂತಿಲ್ಲ.
ಸಾಲ ತೆಗೆದುಕೊಂಡ ವ್ಯಕ್ತಿಯ ಕುಟುಂಬದವರನ್ನು ಯಾವುದೇ ಕಾರಣಕ್ಕೂ ನಿಂದಿಸುವುದಿಲ್ಲ ಮತ್ತು ಅಪಮಾನ ಮಾಡುವುದಿಲ್ಲ. ಈ ನಿಯಮಗಳನ್ನು ಮೂಲಂಗಿಸಿ ಮೈಕ್ರೋ ಫೈನಾನ್ಸ್ ರವರು ಗ್ರಾಹಕರಿಗೆ ತೊಂದರೆ ಕೊಟ್ಟಲ್ಲಿ ವಿವಿಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ಗಳನ್ನು ದಾಖಲಿಸಿ 6 ತಿಂಗಳವರೆಗೆ ಕಾರಾಗೃಹ ವಾಸ ಮತ್ತು 10 ಸಾವಿರ ರೂ. ದಂಡ ವಿಧಿಸಲು ಹೊಸ ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಸಂಸ್ಥೆಗಳ ಲೈಸೆನ್ಸ್ ರದ್ದತಿಗೂ ಅವಕಾಶ ಕಲ್ಪಿಸಲಾಗಿದೆ. ಈ ಹೊಸ ಕಾನೂನು ಜಾರಿಗೆ ಬರಲು ಅಧಿವೇಶನದ ವರೆಗೂ ಕಾಯಲು ತುಂಬಾ ತಡವಾಗುತ್ತದೆ ಹಾಗಾಗಿ ಸಂಪುಟ ಸಭೆಯಲ್ಲಿ ಚರ್ಚಿಸಿ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ರಾಜ್ಯದ ಗೃಹ ಸಚಿವರಾದ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ.
.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




