LPG ಗ್ರಾಹಕರಿಗೆ ಸಂತಸದ ಸುದ್ದಿ: ಸಿಲಿಂಡರ್ ಡೆಲಿವರಿ ಉಚಿತ, ಹೊಸ ಮಾರ್ಗಸೂಚಿ ಪ್ರಕಟ
ಗೃಹ ಬಳಕೆಯ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಿಲಿಂಡರ್‌ಗಳ ಸರಬರಾಜು ಕುರಿತು ಮಹತ್ವದ ಘೋಷಣೆ ಹೊರಬಿದ್ದಿದೆ. ಇದರಲ್ಲಿ LPG ಗ್ರಾಹಕರಿಗೆ ಸರಬರಾಜು ಸಂಬಂಧಿತ ಕೆಲವು ಸೌಲಭ್ಯಗಳು ಮತ್ತು ಕಡ್ಡಾಯ ಸುರಕ್ಷತಾ ತಪಾಸಣೆ (Safety checkup) ಸಂಬಂಧಿತ ನಿಯಮಗಳನ್ನು ತಿಳಿಸಲಾಗಿದೆ. ಖಾಸಗಿ ಮತ್ತು ಸರ್ಕಾರಿ LPG ವಿತರಣೆ ಸಂಸ್ಥೆಗಳು ಹೊಸ ನಿಯಮಗಳನ್ನು ಅನುಸರಿಸಬೇಕಾಗಿದ್ದು, ಆಹಾರ, ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆ ಹೊರಡಿಸಿರುವ ಈ ಹೊಸ ಮಾರ್ಗಸೂಚಿಗಳು LPG ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ಉದ್ದೇಶ ಹೊಂದಿವೆ. ಹೊಸ ಹೊಸ ಮಾರ್ಗಸೂಚಿಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಆಹಾರ ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆ(Department of Food Civil Supplies and Affairs)ಯ ಉಪನಿರ್ದೇಶಕ ಸಕೀನಾ ಅವರು ಈ ಸಂಬಂಧ ಮಾಹಿತಿ ನೀಡಿದ್ದು, ಎಲ್ಲಾ ಅನಿಲ ವಿತರಕರು 5 ಕಿ.ಮೀ. ವ್ಯಾಪ್ತಿಯೊಳಗಿನ ಗೃಹ ಬಳಕೆದಾರರಿಗೆ ಉಚಿತವಾಗಿ ಸಿಲಿಂಡರ್ ಪೂರೈಕೆ ಮಾಡಬೇಕು ಎಂದು ತಿಳಿಸಿದ್ದಾರೆ.
5 ಕಿ.ಮೀ ಒಳಗೆ ಉಚಿತ ಸರಬರಾಜು (Free supplies) :
ಹೊಸ ನಿಯಮದ ಪ್ರಕಾರ, LPG ವಿತರಕರು 5 ಕಿ.ಮೀ. ಒಳಗಿನ ಗೃಹ ಬಳಕೆದಾರರಿಗೆ ಸಿಲಿಂಡರ್ ಉಚಿತವಾಗಿ (free cylinder) ಸರಬರಾಜು ಮಾಡಬೇಕು. ಈ ನಿಯಮವು ಗ್ರಾಹಕರಿಗೆ ಹೆಚ್ಚುವರಿ ಭಾರವನ್ನು ತಪ್ಪಿಸಲು ಸಹಾಯಕವಾಗಲಿದೆ. ಆದರೆ 5 ಕಿ.ಮೀ. ದಾಟಿದ ಪ್ರತಿ ಕಿ.ಮೀ.ಗೆ ರೌಂಡ್‌ಟ್ರಿಪ್ ಪ್ರತಿ ಸಿಲಿಂಡರ್‌ಗೆ 1.60 ರೂ. ಶುಲ್ಕ ವಿಧಿಸಲಾಗುತ್ತದೆ.
ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಜಾರಿ :
ನಿಯಮ ಉಲ್ಲಂಘನೆ ಮಾಡುವ LPG ವಿತರಕರ ವಿರುದ್ಧ ದ್ರವೀಕೃತ ಪೆಟ್ರೋಲಿಯಂ ಅನಿಲ (ಪೂರೈಕೆ ಮತ್ತು ವಿತರಣೆಯ ನಿಯಂತ್ರಣ) ಆದೇಶ 2000ರ ಅನ್ವಯ ಕಾನೂನು ಕ್ರಮ (legal action) ಕೈಗೊಳ್ಳಲಾಗುವುದು. ಇದರಿಂದ ಗ್ರಾಹಕರು ಯಾವುದೇ ಅಕ್ರಮ ವೆಚ್ಚವನ್ನು ಭರಿಸಬೇಕಾಗಿಲ್ಲ ಎಂದು ತಿಳಿಸಲಾಗಿದೆ.
ಸಿಲಿಂಡರ್ ಸಂಪರ್ಕದ ಕಡ್ಡಾಯ ತಪಾಸಣೆ ಮಾಡಬೇಕು :
ಈ ಹೊಸ ಮಾರ್ಗಸೂಚಿಗಳ ಅನ್ವಯ, ಪ್ರತಿಯೊಂದು ಗೃಹ ಬಳಕೆದಾರರ LPG ಸಂಪರ್ಕವನ್ನು ಕಡ್ಡಾಯವಾಗಿ ಪರಿಶೀಲಿಸಲಾಗುವುದು.
ಪ್ರತಿ ಎರಡು ವರ್ಷಕ್ಕೊಮ್ಮೆ LPG ಸಂಪರ್ಕವನ್ನು ಪರಿಶೀಲಿಸಿ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ದೃಢೀಕರಿಸಲಾಗುತ್ತದೆ.
ಪಂಚವಾರ್ಷಿಕ ತಪಾಸಣೆ ಮಾಡುವ ಮೂಲಕ, ಗ್ರಾಹಕರ ಮನೆಗಳಲ್ಲಿ ಅನಿಲ ಸೋರಿಕೆಯ ಅಪಾಯ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು.
ತಪಾಸಣಾ ಪ್ರಕ್ರಿಯೆಯನ್ನು ಹೇಗೆ ಮಾಡಲಾಗುತ್ತದೆ :
ನುರಿತ ಸಿಬ್ಬಂದಿ LPG ಬಳಕೆದಾರರ ಮನೆಗಳಿಗೆ ಭೇಟಿ ನೀಡಿ, ಅನಿಲ ಸಂಪರ್ಕವನ್ನು ಪರಿಶೀಲಿಸುತ್ತಾರೆ. ಈ ವೇಳೆ, ಗ್ರಾಹಕರ ಸ್ಟವ್ ಮತ್ತು ರಬ್ಬರ್ ಟ್ಯೂಬ್ ಅನ್ನು ಪರೀಕ್ಷಿಸಲಾಗುತ್ತದೆ.
ಹಸಿರು ಬಣ್ಣದ ಅಥವಾ ಪ್ಲಾಸ್ಟಿಕ್ ಟ್ಯೂಬ್‌ಗಳನ್ನು (plastic tubes) ನಿಷೇಧಿಸಲಾಗಿದ್ದು, ಅವುಗಳ ಬದಲಿಗೆ ಕಂಪನಿಯಿಂದ ಶಿಫಾರಸ್ಸು ಮಾಡಿದ ಸುರಕ್ಷಾ ರಬ್ಬರ್ ಟ್ಯೂಬ್ (Rubber tube) ಅಳವಡಿಸಲಾಗಿದೆ.
ಗ್ರಾಹಕರ ಸ್ಟವ್ ದುರಸ್ತಿ ಅಗತ್ಯವಿದ್ದರೆ, ಅವರ ಒಪ್ಪಿಗೆಯ ಮೇರೆಗೆ ಅದನ್ನು ಕೂಡ ಸರಿಪಡಿಸಲಾಗುತ್ತದೆ.
ತಪಾಸಣಾ ಸಿಬ್ಬಂದಿಯವರಿಂದ ಗ್ರಾಹಕರಿಗೆ ಗುರುತಿನ ಚೀಟಿ ನೀಡಲಾಗುತ್ತದೆ
ಈ ಹೊಸ ನಿಯಮಗಳು LPG ಬಳಕೆದಾರರಿಗೆ ಆರ್ಥಿಕ ಸೌಲಭ್ಯವನ್ನು ನೀಡುವುದಷ್ಟೇ ಅಲ್ಲ, ಅನಿಲ ಬಳಕೆಯಲ್ಲಿ ಹೆಚ್ಚಿನ ಸುರಕ್ಷತೆಯನ್ನು (More safety) ಒದಗಿಸುತ್ತವೆ. ಹೆಚ್ಚುವರಿ ಭಾರವಿಲ್ಲದೇ 5 ಕಿ.ಮೀ. ಒಳಗಿನ ವಿತರಣೆ ಉಚಿತವಾಗಿರುವುದು, ಇನ್ನು ಗ್ರಾಮೀಣ ಹಾಗೂ ನಗರ ಗ್ರಾಹಕರಿಗೆ ನೇರವಾಗಿ ಪ್ರಯೋಜನ ನೀಡಲಿದ್ದು, ಸಹಜವಾಗಿ ಈ ನಿಯಮಗಳ ಪರಿಣಾಮವಾಗಿ, ಅನಿಲ ಸರಬರಾಜು ಪ್ರಕ್ರಿಯೆ ಹೆಚ್ಚು ಶಿಸ್ತುಬದ್ಧವಾಗಲಿದೆ.
ಗ್ರಾಹಕರ ಸುರಕ್ಷತೆ ಮತ್ತು ಅನುಕೂಲವನ್ನೊಳಗೊಂಡ ಈ ಹೊಸ ನಿಯಮಗಳು(New rules), LPG ಬಳಕೆಯ ಸರಬರಾಜು ಪ್ರಕ್ರಿಯೆಯ ಉಚಿತತೆ, ನಿಯಮಿತ ತಪಾಸಣೆ ಮತ್ತು ಕಾನೂನುಬದ್ಧ ನಿಯಂತ್ರಣಗಳ ಮೂಲಕ, LPG ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಲಾಗುತ್ತಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




