Picsart 25 01 26 05 43 25 699 scaled

Gruhalakshmi :  16ನೇ ಕಂತಿನ ಹಣ 2000/- ರೂ ಈ ಮಹಿಳೆಯರಿಗೆ ಜಮಾ.? ಇಲ್ಲಿದೆ ಬಿಗ್ ಅಪ್ಡೇಟ್ 

WhatsApp Group Telegram Group

ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ ಯೋಜನೆಯು ರಾಜ್ಯದಲ್ಲಿ ನಿಗಿಪಡಿಸಿದ್ದ ಗುರಿ ಪೈಕಿ ಶೇಕಡಾ 96.95 ಮಹಿಳೆಯರು ಸರ್ಕಾರದಿಂದ ಪ್ರತಿ ತಿಂಗಳು 2000 ರೂ. ಆರ್ಥಿಕ ನೆರವು ಪಡೆಯುತ್ತಿದ್ದಾರೆ. 16ನೇ ಕಂತಿನ ಹಣ ಯಾವಾಗ ಜಮೆ ಆಗುತ್ತದೆ ಎಂದು ರಾಜ್ಯದ ಯಜಮಾನಿಯರು ಕಾಯುತ್ತಿದ್ದಾರೆ. ಹಣ ಜಮಾ ವಿಳಂಬ ವಾಗುತ್ತಿದ್ದಂತೆ ಗೃಹ ಲಕ್ಷ್ಮಿ ಯೋಜನೆ ಬಂದ್ ಆಗುತ್ತಾ ಎಂದು ಹಲವು ಮಹಿಳೆಯರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮಿ 16ನೇ ಕಂತಿನ ಹಣ ಜಮಾ ಯಾವಾಗ..?

ರಾಜ್ಯದಲ್ಲಿ 1.25 ಕೋಟಿ ಮಹಿಳೆಯರು ಈ ಯೋಜನೆ ಅಡಿ ನೋಂದಣಿ ಮಾಡಿಕೊಂಡಿದ್ದು, 1.21 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ಹಣ (ಕಂತುಗಳಲ್ಲಿ) ಹಣ ಪಾವತಿಯಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ 15 ಕಂತಿನ ಒಟ್ಟು 30,000 ರೂಪಾಯಿ ಗಳು ಮಹಿಳೆಯರ ಖಾತೆಗೆ ಜಮಾ ಆಗಿದ್ದು, 16ನೇ ಕಂತಿನ ಹಣ ಈ ತಿಂಗಳ 31ನೇ ತಾರೀಕಿನೊಳಗೆ ಯಜಮಾನಿಯರ ಖಾತೆಗೆ ಜಮಾ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗುತ್ತಿರುವುದು ಸಂತೋಷದ ವಿಚಾರ. ಆದ್ದರಿಂದ ಮಹಿಳೆಯರನ್ನು ಸಶಕ್ತಗೊಳಿಸುವ ಈ ಯೋಜನೆಯನ್ನು ಮುಂದುವರಿಸಲಿದ್ದೇವೆ ಎಂದು ಮುಖ್ಯಮಂತ್ರಿಗಳು ಈಗಾಗಲೇ ಕಳೆದವಾರ ಬೆಳಗಾವಿಯಲ್ಲಿ ಸುದ್ದಿಗಾರರಿಗೆ ಸ್ಪಷ್ಟ ಪಡಿಸಿದ್ದಾರೆ.

ಹಾಗಾಗಿ 16ನೇ ಕಂತಿನ ಹಣಕ್ಕೆ ಕಾಯುತ್ತಿರುವ ಮಹಿಳೆಯರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಹೌದು ಸಿಎಂ ಸಿದ್ದರಾಮಯ್ಯ ಅವರು ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಸಿಎಂ ಹೇಳಿದ್ದಾರೆ.

ಗೃಹಲಕ್ಷ್ಮಿಯ ಯೋಜನೆಯ ಡಿಸೆಂಬರ್ ತಿಂಗಳ ಕಂತಿನ ಹಣ ಫಲಾನುಭವಿಗಳಿಗೆ ಈಗಾಗಲೇ ವರ್ಗಾವಣೆ ಆಗಿದೆ. ಜನವರಿ 14ರಿಂದ ಹಣ ಜಮಾ ಮಾಡಲು ಆರಂಭ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಳಾರ್ ರವರು ತಿಳಿಸಿದ್ದಾರೆ. ಹಾಗಾಗಿ ಈ ತಿಂಗಳ 2000 ರೂಪಾಯಿ ಪೆಂಡಿಂಗ್ ಹಣ ಈ ತಿಂಗಳು 31ನೇ ತಾರೀಕಿನೊಳಗೆ ಜಮಾ ಆಗುವ ಸಾಧ್ಯತೆ ಇದೆ.

ಹಣ ಬರದೇ ಇದ್ರೆ ಈ ಕೆಲಸ ಕಡ್ಡಾಯ.

ಗೃಹಲಕ್ಷ್ಮಿ ಯೋಜನೆಯ ಯಾವುದೇ ಕಂತಿನ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದೇ ಇರುವ ಫಲಾನುಭವಿಗಳು ಮೊದಲು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕು. ಜೊತೆಗೆ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.

ಆದಾಯ ತೆರಿಗೆ ಮತ್ತು ಜಿಎಸ್‍ಟಿ ಪಾವತಿದಾರರು ಹೊರತುಪಡಿಸಿ ಐಟಿ ಮತ್ತು ಜಿಎಸ್‍ಟಿಯಡಿ ಸೇರ್ಪಡೆಯಾಗದ ಫಲಾನುಭವಿಗಳಿಗೆ ನಗದು ಪಾವತಿಯಾಗದೇ ಸಮಸ್ಯೆ ಇದ್ದಲ್ಲಿ ಅಂತಹ ಫಲಾನುಭವಿಗಳು ತಮ್ಮ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories