ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮುಕ್ತಾಯವಾಗಿದೆ ಎಂದು ಚಿಂತಿಸುತ್ತಿರುವ ಜನರಿಗೆ ರಾಜ್ಯ ಸರ್ಕಾರವು ಇಂದು ಖುಷಿಯ ವಿಷಯವನ್ನು ತಿಳಿಸಿದೆ ಅದೇನೆಂದರೆ, ರೇಷನ್ ಕಾರ್ಡ್ ತಿದ್ದುಪಡಿಯ ಗಡುವನ್ನು ವಿಸ್ತರಿಸಲಾಗಿದೆ. ಗೊಂದಲದಲ್ಲಿದ್ದ ಜನರಿಗೆ ಇದೊಂದು ಪರಿಹಾರ ಎಂದು ಹೇಳಬಹುದು. ಇಷ್ಟು ದಿನಗಳ ಕಾಲ ತಿದ್ದುಪಡಿಯನ್ನು ವಿಸ್ತರಿಸಲಾಗಿದೆ?, ರೇಷನ್ ಕಾರ್ಡ್ ತಿದ್ದುಪಡಿ(Ration card correction)ಯನ್ನು ಎಲ್ಲಿ ಮಾಡಿಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ತಿದ್ದುಪಡಿಗೆ ಎಷ್ಟು ದಿನಗಳ ಕಾಲ ಅವಕಾಶವನ್ನು ನೀಡಲಾಗಿದೆ?:
ಈಗಾಗಲೇ ಸರ್ಕಾರವು ರೇಷನ್ ಕಾರ್ಡನ್ನು(Ration card) ತಿದ್ದುಪಡಿ ಮಾಡಿಸಿಕೊಳ್ಳುವವರು ಡಿಸೆಂಬರ್ 31ರ ಒಳಗೆ ಮಾಡಿಸಿಕೊಳ್ಳಬೇಕು ಎಂದು ಬಡುವನ್ನು ನೀಡಿದ್ದರು. ಆದರೆ ಈಗ ರೇಷನ್ ಕಾರ್ಡ್ ತಿದ್ದುಪಡಿಯ ಸಮಯವನ್ನು ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ. ಹಾಗಾಗಿ ತಿದ್ದುಪಡಿಯನ್ನು ಮಾಡಿಸಿಕೊಳ್ಳುವವರಿಗೆ ಜನವರಿ ತಿಂಗಳಿನಲ್ಲಿಯೂ ಕೂಡ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಹಾಗಾಗಿ ಜನವರಿ 31ರ ವರೆಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ. ನಿಮ್ಮ ಪಡಿತರ ಚೀಟಿಯಲ್ಲಿ ಯಾವುದೇ ರೀತಿಯ ತಪ್ಪುಗಳಾಗಲಿ ಅಥವಾ ಪ್ರಮುಖ ವಿಷಯಗಳನ್ನು ಬದಲಾಯಿಸಿಕೊಳ್ಳಬೇಕಾದಲ್ಲಿ ಇದು ಒಂದು ಉತ್ತಮ ಅವಕಾಶ ಎಂದು ಹೇಳಬಹುದು. ಅಷ್ಟೇ ಅಲ್ಲದೆ ಹೆಸರನ್ನು ತೆಗೆಸುವುದು, ಹೆಸರನ್ನು ಸೇರಿಸುವುದು, ಫೋಟೋ ಬದಲಾವಣೆ ಮಾಡಿಸುವುದು, ನ್ಯಾಯಬೆಲೆ ಅಂಗಡಿಯನ್ನು ಬದಲಾಯಿಸುವುದು ಹೀಗೆ ಏನೇ ತಿದ್ದುಪಡಿ ಇದ್ದಲ್ಲಿ ಮಾಡಿಸಿಕೊಳ್ಳಬಹುದು.
ಯಾವೆಲ್ಲಾ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ?:
ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ.
ಆಧಾರ್ ಈ-ಕೆವೈಸಿ
ಹೆಸರು ತೆಗೆಯುವುದು
ವಿಳಾಸ ಬದಲಾವಣೆ
ನ್ಯಾಯಬೆಲೆ ಅಂಗಡಿ ಬದಲಾವಣೆ
ಹೆಸರು ತಿದ್ದುಪಡಿ ಮಾಡಬಹುದು
ಅರ್ಜಿ ಸಲ್ಲಿಸಬೇಕಾಗುವ ಅಗತ್ಯ ದಾಖಲಾತಿಗಳು(Documents):
ಅರ್ಜಿದಾರರ ಅಧಾರ್ ಕಾರ್ಡ ಪ್ರತಿ(Adhar card)
ಹೊಸ ಹೆಸರು ಸೇರ್ಪಡೆಗೆ ಜಾತಿ ಮತ್ತು ಅದಾಯ ಪ್ರಮಾಣ ಪತ್ರ(caste and Income certificate)
ಮೊಬೈಲ್ ಸಂಖ್ಯೆ
ಜನನ ಪ್ರಮಾಣ ಪತ್ರ(Birth Certificate).
ಆಧಾರ್ ಕಾರ್ಡ್
ಪಾಸ್ಪೋರ್ಟ್ ಸೈಜ್ ಫೋಟೋ
ಮತದಾರರ ಗುರುತಿನ ಚೀಟಿ(Voter ID)
ಡ್ರೈವಿಂಗ್ ಲೈಸೆನ್ಸ್
ಖಾಯಂ ನಿವಾಸದ ಪತ್ರ.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಪಡಿತರ ಚೀಟಿಯಲ್ಲಿ ಯಾವುದೇ ರೀತಿಯಲ್ಲಿ ತಿದ್ದುಪಡಿಯನ್ನು ಮಾಡಲು ನಿಮ್ಮ ಹತ್ತಿರದ ಯಾವುದೇ ಸಿಎಸ್ಸಿ ಕೇಂದ್ರ, ಗ್ರಾಮಒನ್ ಕೇಂದ್ರ, ಕರ್ನಾಟಕ ಒನ್, ಕೇಂದ್ರಕ್ಕೆ ಭೇಟಿ ನೀಡಿ ಅಥವಾ ನಾಡ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನೀವು ಹೋಗಿ ಈ https://ahara.kar.nic.in/home ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಗಮನಿಸಿ:
ಅರ್ಜಿದಾರನಿಗೆ ಈ ಕುರಿತಂತೆ ಯಾವುದೇ ರೀತಯ ಗೊಂದಲಗಳು ಇದ್ದರೆ ಕರ್ನಾಟಕ ಪಡಿತರ ಚೀಟಿ ಇಲಾಖೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ಪಡಿತರ ಚೀಟಿ ಸಹಾಯವಾಣಿ ಸಂಖ್ಯೆ ಟೋಲ್ ಫ್ರೀ : 18004259339 ಮತ್ತು ಸಹಾಯವಾಣಿ ಸಂಖ್ಯೆ: 1967 ಗೆ ಕರೆ ಮಾಡಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




