ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್, 2 ಸರ್ಕಾರಿ ಭತ್ಯೆಗಳಲ್ಲಿ ಭಾರಿ ಹೆಚ್ಚಳ, ಇಲ್ಲಿದೆ ಸಂಪೂರ್ಣ ಮಾಹಿತಿ…!
ಸರ್ಕಾರಿ ನೌಕರರು ಇದೀಗ 7ನೇ ವೇತನವನ್ನು ಪಡೆದಿದ್ದು, ಇದೀಗ 8ನೇ ವೇತನ ಆಯೋಗದ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರಿ ನೌಕರರು ತಮ್ಮ 8ನೇ ವೇತನ ಆಯೋಗದ (8th pay commission) ವೇತನದ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. 8ನೇ ವೇತನವು 2026 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ನಿರ್ದಿಷ್ಟ ಹೆಚ್ಚಳವನ್ನು ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ. ದೇಶಾದ್ಯಂತ ಒಂದು ಕೋಟಿಗೂ ಹೆಚ್ಚು ಇರುವ ಕೇಂದ್ರ ಸರ್ಕಾರಿ ನೌಕರರ ಹಣದುಬ್ಬರವನ್ನು 7ನೇ ವೇತನ ಆಯೋಗದ (7th pay commission) ಭತ್ಯೆ ಏರಿಕೆಗಳು ನಿಭಾಯಿಸುತ್ತಿವೆ. ನೌಕರರು ಹಣದುಬ್ಬರ ನಿರ್ವಹಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಗಾಗ ಮಹತ್ವದ ನಿರ್ಧಾರ ಕೈಗೊಳ್ಳುತ್ತದೆ. ಹಾಗೆಯೇ ಇದೀಗ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದಿಂದ ಮತ್ತೊಂದು ಗುಡ್ ನ್ಯೂಸ್ ತಿಳಿದು ಬಂದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರಿ ನೌಕರರ ಜೀವನವನ್ನು ರೂಪಿಸುವಲ್ಲಿ ಸರ್ಕಾರದ ಮತ್ತೊಂದು ಹೆಜ್ಜೆ :
ಇಂದು ಹಣದುಬ್ಬರದ ಪರಿಣಾಮವಾಗಿ ಸರ್ಕಾರಿ ನೌಕರರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉದ್ಯೋಗಿಗಳು ಹಾಗೂ ನೌಕರರ ಜೀವನವನ್ನು ಉತ್ತಮ ರೀತಿಯಲ್ಲಿ ಸಾಗಿಸಲು ಸರ್ಕಾರವು (government) ಮಹತ್ತರದ ಕೆಲಸವನ್ನು ತೆಗೆದುಕೊಂಡಿದೆ. ಸರ್ಕಾರಿ ನೌಕರರ ಜೀವನವನ್ನು ರೂಪಿಸುವಲ್ಲಿ ಸರ್ಕಾರದ ಮತ್ತೊಂದು ಹೆಜ್ಜೆ ಇದಾಗಿದೆ. ಉಡುಗೆ ಭತ್ಯೆ ಮತ್ತು ನರ್ಸಿಂಗ್ (Dress allowance and nursing) ಎಂಬ ಭತ್ಯೆಗಳಲ್ಲಿ ಸರ್ಕಾರವು 25% ಹೆಚ್ಚಳವನ್ನು ಘೋಷಿಸಿದೆ. ಈ ಒಂದು ವಿಚಾರ ಸರ್ಕಾರಿ ನೌಕರರ ಮುಖದಲ್ಲಿ ಸಂತೋಷವನ್ನುಂಟು ಮಾಡಿದೆ.
ಉದ್ಯೋಗಿಗಳಿಗೆ ಸಕಾಲದಲ್ಲಿ ಭತ್ಯೆಗಳ ಪ್ರಯೋಜನಗಳನ್ನು ಒದಗಿಸಲು ಒತ್ತು :
ಹೊಸ ಭತ್ಯೆಗಳನ್ನು ತಕ್ಷಣವೇ ಜಾರಿಗೊಳಿಸಲು ಮತ್ತು ಆಗಸ್ಟ್ 2017 ರ ನಿಯಮಗಳನ್ನು ಅನುಸರಿಸಲು ಸರ್ಕಾರವು ಎಲ್ಲಾ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಇದರೊಂದಿಗೆ ಉದ್ಯೋಗಿಗಳಿಗೆ ಸಕಾಲದಲ್ಲಿ ಭತ್ಯೆಗಳ ಪ್ರಯೋಜನಗಳನ್ನು ಒದಗಿಸಲು ಒತ್ತು ನೀಡಲಾಗುತ್ತದೆ. ಈ ಬದಲಾವಣೆಯು ನೌಕರರು ಮತ್ತು ಪಿಂಚಣಿದಾರರಿಗೆ ಹಣದುಬ್ಬರದ ಪ್ರಭಾವದಿಂದ ಪರಿಹಾರ ಮತ್ತು ಅವರ ಜೀವನಶೈಲಿಯನ್ನು ಸುಧಾರಿಸುವಲ್ಲಿ ಸರ್ಕಾರವು ಬಹಳ ಸಹಾಯ ಮಾಡಿದೆ. ಇದು ಉದ್ಯೋಗಿಗಳಿಗೆ ಹೆಚ್ಚಿನ ಪರಿಹಾರವನ್ನು ನೀಡುತ್ತದೆ.
ಉಡುಗೆ ಭತ್ಯೆ ಮತ್ತು ನರ್ಸಿಂಗ್ ಭತ್ಯೆಯಲ್ಲಿ 25% ಹೆಚ್ಚಳ :
ಕೇಂದ್ರ ಸರ್ಕಾರವು ಜುಲೈ 2024 ರಲ್ಲಿ 7 ನೇ ವೇತನ ಆಯೋಗದ ಅಡಿಯಲ್ಲಿ ನೌಕರರ ತುಟ್ಟಿಭತ್ಯೆಯನ್ನು (ಡಿಎ) 53% ಕ್ಕೆ ಹೆಚ್ಚಿಸಿದೆ. ಡಿಎ 50% ಹೆಚ್ಚಾದಾಗ ನಿಯಮಗಳ ಪ್ರಕಾರ ಕೆಲವು ಇತರ ಭತ್ಯೆಗಳನ್ನು ಸಹ ಹೆಚ್ಚಿಸಲಾಗುತ್ತದೆ. ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇತ್ತೀಚೆಗೆ ಅರ್ಹ ಉದ್ಯೋಗಿಗಳಿಗೆ ಉಡುಗೆ ಭತ್ಯೆ ಮತ್ತು ನರ್ಸಿಂಗ್ ಭತ್ಯೆಯಲ್ಲಿ 25% ಹೆಚ್ಚಳವನ್ನು ಘೋಷಿಸಿದೆ. ಈ ನಿರ್ಧಾರದಿಂದ ಒಂದು ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರು ದೊಡ್ಡ ಲಾಭವನ್ನು ಪಡೆಯಲಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




