ನೀವು ಕೂಡ ಪ್ಯಾನ್ ಕಾರ್ಡ್(PAN card) ಅನ್ನು ಆಧಾರ್ ಕಾರ್ಡ್(Aadhaar card) ನೊಂದಿಗೆ ಲಿಂಕ್ ಮಾಡಿಸಿಲ್ವಾ.! ಹಾಗಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಬಹುದು(cancelled) ಎಚ್ಚರ.
ಇಂದು ಆಧಾರ್ ಕಾರ್ಡ್, ರೇಷನ್ ಕಾರ್ಡ್,ಪ್ಯಾನ್ ಕಾರ್ಡ್ ಹೀಗೆ ಕೆಲವೊಂದು ದಾಖಲೆಗಳು ಜನರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಬಹುದಾದ ದಾಖಲೆಗಳಾಗಿವೆ. ಅದರಲ್ಲೂ ಹಣಕಾಸಿನ ವಹಿವಾಟು ಮಾಡುವಲ್ಲಿ ಪ್ಯಾನ್ ಕಾರ್ಡ್ ಅವಶ್ಯವಾಗಿ ಬೇಕಾಗಿರುವ ಒಂದು ದಾಖಲೆ. ಈ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ(income tax department)ಯಿಂದ ನೀಡಲಾಗಿದ್ದು, 10-ಅಂಕಿಯ ಈ ವಿಶಿಷ್ಟ ಗುರುತಿನ ಚೀಟಿ, ತೆರಿಗೆ ಪಾವತಿಗೆ ಹಾಗೂ ಬ್ಯಾಂಕ್ ಖಾತೆಗಳನ್ನು (bank accounts) ತೆರೆಯಲು, ₹50,000 ಮೀರಿದ ವಹಿವಾಟು ನಡೆಸಲು, ಆಸ್ತಿಯನ್ನು ಖರೀದಿಸುವುದು ಅಥವಾ ಮಾರಾಟ ಮಾಡಲು ಬೇಕಾಗಿರುವ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇನ್ನು ಸರ್ಕಾರ ಪ್ಯಾನ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಕಡ್ಡಾಯವಾಗಿ ಜನರೂ ಕೂಡ ಈ ನಿಯಮವನ್ನು ಪಾಲಿಸಬೇಕು. ಒಂದು ವೇಳೆ ಪಾಲಿಸದಿದ್ದಲ್ಲಿ ಅವರ ಪ್ಯಾನ್ ಕಾರ್ಡ್ ರದ್ದಾಗಬಹುದು. ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಯಾವ ನಿಯಮ ಜಾರಿಯಗಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರ ಹೊರಡಿಸಿರುವ ನಿಯಮದ ಪ್ರಕಾರ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಸಾರ್ವಜನಿಕರೂ ಕೂಡ ಈ ನಿಯಮವನ್ನು ಪಾಲಿಸಬೇಕು. ಇಲ್ಲವಾದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂಬ ಎಚ್ಚರಿಕೆ ನೀಡಿದೆ. ಈಗಾಗಲೇ ಹಲವು ಬಾರಿ ಈ ಕುರಿತು ಸಾರ್ವಜನಿಕರಿಗೆ ತಿಳಿಸಿದ್ದರೂ ಕೂಡ ಜನರು ಇದರ ಬಗ್ಗೆ ಹೆಚ್ಚಿನ ಗಮನಹರಿಸಿಲ್ಲ. ಆದ್ದರಿಂದ ಸರ್ಕಾರ (Government) ಸಾರ್ವಜನಿಕರಿಗೆ ತಿಳಿಸಿದೆ ಡಿಸೆಂಬರ್ 31 ರೊಳಗಾಗಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್(link PAN card with Aadhaar card) ಮಾಡಿಸದಿದಲ್ಲಿ ನಿಮ್ಮ ಆಧಾರ್ ಕಾರ್ಡ್ ರದ್ದಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಆಧಾರ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದಲ್ಲಿ ಯಾವ ಪರಿಣಾಮಗಳನ್ನು ಎದುರಿಸಬೇಕಾಗಬುದು?
ಈಗಾಗಲೇ ಹಲವು ಬಾರಿ ಸಾರ್ವಜನಿಕರಿಗೆ ಸರ್ಕಾರ ಎಚ್ಚರಿಸಿದ್ದರೂ ಕೂಡ ಜನರು ನಿರ್ಲಕ್ಷ್ಯತೋರುತ್ತಿರುವುದರಿಂದ ಸರ್ಕಾರ ಈ ಬಾರಿ ಖಡಕ್ ಎಚ್ಚರಿಕೆ ನೀಡಿದ್ದು, ಒಂದು ವೇಳೆ ನೀವು ಆಧಾರ್ ಗೆ ಪ್ಯಾನ್ ಲಿಂಕ್ (Pan card link) ಮಾಡದಿದ್ದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗುತ್ತದೆ. ಆರ್ಥಿಕ ವಂಚನೆಗಳನ್ನು ತಡೆಯುವ ಪ್ರಮುಖ ಮಾರ್ಗವೆಂದರೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವುದು. ಗಡುವು ಮೀರಿದ ಬಳಿಕ ನೀವು ಲಿಂಕ್ ಮಾಡಸಿಲ್ಲವೆಂದರೆ ದಂಡದೊಂದಿಗೆ ಲಿಂಕ್ ಮಾಡಿಸುವ ಸಾಧ್ಯತೆ ಇದೆ. ಅಥವಾ ಹೊಸ ಪ್ಯಾನ್ ಕಾರ್ಡ್ ಪಡೆದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲವೆಂದು ಹೇಳಿದೆ. ಅದೇ ರೀತಿಯಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ, ಹಾಗು ಬ್ಯಾಂಕ್ ಖಾತೆಗಳು, ಮ್ಯೂಚುಯಲ್ ಫಂಡ್ಗಳು (Mutual fund) ಇತ್ಯಾದಿಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಟಿಡಿಎಸ್ ದರಗಳು ದ್ವಿಗುಣಗೊಳ್ಳತ್ತವೆ. ಈ ರೀತಿಯ ತೊಂದರೆಗಳ ಜೊತೆಯಲ್ಲಿ ಇನ್ನು ಹಲವು ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಹೇಗೆ?
ಮೊದಲಿಗೆ ಆದಾಯ ತೆರಿಗೆ ವೆಬ್ ಸೈಟ್ (Website) www.incometax.gov.in ಗೆ ಭೇಟಿ ನೀಡಬೇಕು .
ಇಲ್ಲಿ ಲಿಂಕ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಸಂಖ್ಯೆಗಳನ್ನು ನಮೂದಿಸಿ ಒಟಿಪಿ (OTP)ಪರಿಶೀಲಿಸಿ ಸಲ್ಲಿಸಬೇಕು.
ಆಧಾರ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸುವು ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಯಿತು?
ಗ್ರಾಹಕರ ಅನುಮತಿಯಿಲ್ಲದೆ ಬಹಳಷ್ಟು ಫಿನ್ಟೆಕ್ ಕಂಪನಿಗಳು (Finect Companies) ಗ್ರಾಹಕರ ಪ್ಯಾನ್ ಕಾರ್ಡ್ ಗಳನ್ನು ಮನೋಇಚ್ಚೆ ಬಳಸಿಕೊಳ್ಳುತ್ತಿರುವ ಕಾರಣದಿಂದ ಹಲವಾರು ಆರ್ಥಿಕ ವಂಚನೆಗಳ ಪ್ರಕರಣಗಳು ಹೆಚ್ಚಾಗುತ್ತಿವೆ ಆದ್ದರಿಂದ ಕೇಂದ್ರ ಸರ್ಕಾರ (Central government) ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದೆ. ಇನ್ನು ಡಿಸೆಂಬರ್ 31 ರೊಳಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿಸದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗುತ್ತದೆ ಹಾಗೂ ಯಾವುದೇ ರೀತಿಯ ಡಿಜಿಟಲ್ ಪಾವತಿಗಳು (Digital transaction) ನಡೆಯುವುದಿಲ್ಲ. ಇನ್ನು ನೀವು ಹೊಸ ಪ್ಯಾನ್ ಕಾರ್ಡ್ ತೆಗೆದುಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಡಿಸೆಂಬರ್ 31 ರೊಳಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿಸಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




