ಕೇಂದ್ರ ಸರ್ಕಾದಿಂದ ಗುಡ್ ನ್ಯೂಸ್, ಮನೆಯಲ್ಲೇ ಇದ್ದು ಜನನ, ಮರಣ ನೋಂದಣಿಗೆ ಮಾಡಿಕೊಳ್ಳಬಹುದು, ಇಲ್ಲಿದೆ ಮಾಹಿತಿ…!
ಈ ಹಿಂದೆ ಜನನ ಮತ್ತು ಮರಣ ನೋಂದಣಿಗಳನ್ನು(Birth and death certificate) ನಾಡ ಕಚೇರಿಗಳಲ್ಲಿ ಮಾಡಬೇಕಿತ್ತು. ಕೆಲವೊಂದು ಸಂದರ್ಭದಲ್ಲಿ ಹಲವು ಅಡೆತಡೆಗಳು (Obstacles) ಎದುರಾಗಿ ಕಚೇರಿಗಳ ತನಕ ಹೋಗಲು ಆಗದಿರಬಹುದು. ಹೀಗೆ ಹಲವಾರು ಕಾರಣಗಳಿಂದ ನೋಂದಣಿ ಮಾಡಿಕೊಳ್ಳಲು ವಿಫಲವಾಗುತ್ತದೆ. ಆದರೆ ಇದೀಗ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು, ಕೇಂದ್ರ ಸರ್ಕಾರವು (Central government) ಗುಡ್ ನ್ಯೂಸ್ ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರದಿಂದ ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಂ (CRS) ಮೊಬೈಲ್ ಆಪ್ ಬಿಡುಗಡೆ :
ಜನನ ಮತ್ತು ಮರಣ ನೋಂದಣಿಗಳನ್ನು ಮನೆಯಿಂದಲೇ ಮಾಡಿಸಲು ಅನುಕೂಲವಾಗುವಂತೆ ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಂ (Civil Registration system) ಮೊಬೈಲ್ ಆಪ್ ಅನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದು, ಜನನ ಮತ್ತು ಮರಣಗಳನ್ನು ಎಲ್ಲಿಂದಲಾದರೂ ಯಾವುದೇ ಸಮಯದಲ್ಲಿ ಸಿ.ಆರ್.ಎಸ್. ನ ಆಪ್ (CRS App) ಮೂಲಕ ನೋಂದಾಯಿಸಲುಬಹುದಾಗಿದೆ. ಇದರ ಮೂಲಕ ಜನರಿಗೆ ಹೆಚ್ಚು ಉಪಯೋಗವಾಗಲಿದೆ.
ಮೊಬೈಲ್ ಆ್ಯಪ್ ನಿಂದ ನೋಂದಣಿ ಮಾಡುವ ವಿಧಾನ (How to Register from in Mobile App) :
ಜನನ ಮತ್ತು ಮರಣಗಳನ್ನು ಎಲ್ಲಿಂದಲಾದರೂ ಯಾವುದೇ ಸಮಯದಲ್ಲಿ ಸಿ.ಆರ್.ಎಸ್. ಆ್ಯಪ್ ಮೂಲಕ ನೋಂದಾಯಿಸಲುಬಹುದಾಗಿದೆ.
ಹಂತ 1 : ನೋಂದಣಿಗೆ ಬಯಸುವವರು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಸಿ.ಆರ್.ಎಸ್. ಆ್ಯಪ್ ಡೌನೋಡ್ ಮಾಡಿಕೊಳ್ಳಬೇಕು.
ಹಂತ 2 : ನಂತರ ಯೂಸರ್ ಐಡಿ ಪಾಸ್ವರ್ಡ್ ಅನ್ನು ಮಾಡಿಕೊಳ್ಳಬೇಕು.
ಹಂತ 3 : ನಿಮ್ಮ ಮೊಬೈಲ್ ನಂಬರ್ ಪರಿಶೀಲನೆಗಾಗಿ ಮೊಬೈಲ್ ಗೆ ಎಸ್‌ಎಂಎಸ್ ಮೂಲಕ ಒಟಿಪಿ ಬರಲಿದ್ದು, ಅದನ್ನು ದೃಢೀಕರಿಸಬೇಕು.
(ಮುಖಪುಟದ ಪರದೆಯಲ್ಲಿ ಪ್ರೊಫೈಲ್, ಜನನ, ಸಾವು, ಶುಲ್ಕ ಆಯ್ಕೆಗಳು ಕಾಣಿಸುತ್ತದೆ.)
ಹಂತ 4 : ಜನ್ಮ ದಿನಾಂಕವನ್ನು ನೋಂದಾಯಿಸಲು ಜನನ ಮತ್ತು ನಂತರ ಜನನ ನೋಂದಣಿ ಆಯ್ಕೆ ಮಾಡಿ ಮಗುವಿನ ಜನ್ಮ ದಿನಾಂಕ, ವಿಳಾಸ, ಕುಟುಂಬದ ಮಾಹಿತಿ ನಮೂದಿಸಿ ಅಗತ್ಯ ದಾಖಲೆ ಲಗತ್ತಿಸಬೇಕು.
ಈ ಆಪ್ ಮೂಲಕ ಜನನ ಅಥವಾ ಮರಣದ ಪ್ರಮಾಣ ಪತ್ರವನ್ನು ಡೌನೋಡ್ (Download) ಮಾಡಿ ಇಟ್ಟುಕೊಳ್ಳಬಹುದು :
ಮರಣ ನೋಂದಾಯಿಸಲು ಇದೇ ರೀತಿ ಪ್ರಕ್ರಿಯೆ ಮಾಡಿ ಮರಣ ದಿನಾಂಕ, ವಿಳಾಸ ಇತರೆ ಮಾಹಿತಿ ದಾಖಲಿಸಿ ಆನ್ನೈನ್ ನಲ್ಲಿ ಶುಲ್ಕ ಪಾವತಿಸಿದರೆ ಜನನ ಅಥವಾ ಮರಣದ ಡಿಜಿಟಲ್ ಪ್ರಮಾಣ ಪತ್ರ ಬರಲಿದ್ದು ಅದನ್ನು ಡೌನೋಡ್ ಮಾಡಿ ಇಟ್ಟುಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




