IMG 20240930 WA0000

ಈ ಜನರಿಗೆ ಸಿಗಲಿದೆ, ರಾಜ್ಯ ಸರ್ಕಾರದ ಈ ಯೋಜನೆಯಡಿ ಸಿಗಲಿದೆ 5000 ಆರ್ಥಿಕ ನೆರವು..!

Categories:
WhatsApp Group Telegram Group
ರಾಜ್ಯ ಸರ್ಕಾರದಿಂದ ನೇಕಾರರಿಗೆ ಭರ್ಜರಿ ಗುಡ್ ನ್ಯೂಸ್ : ನೇಕಾರರಿಗೆ ಸಿಗಲಿದೆ 5,000 ರೂ.ಗಳ ಸಹಾಯಧನ.

2020 ರಲ್ಲಿ ಕೋವಿಡ್ (Covid-19) ಸಾಂಕ್ರಾಮಿಕ ರೋಗ ರಾಜ್ಯದಲ್ಲೆಲ್ಲಾ ಹರಡಿತ್ತು. ಅಂದಿನ ಆ ಸಮಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕರ್ನಾಟಕ (karnataka) ನೇಕಾರ ಸಮ್ಮಾನ್ ಯೋಜನೆ ಎಂಬ ಮೆಗಾ ಯೋಜನೆಯನ್ನು ಪ್ರಾರಂಭಿಸಿದರು. ರಾಜ್ಯದ ಕೈಮಗ್ಗ ಮತ್ತು ಜವಳಿ ಉದ್ಯಮದಲ್ಲಿ ತೊಡಗಿರುವಂತಹ ನಿರ್ಗತಿಕ ನೇಕಾರರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕೆಂಬ ಸದುದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದರಿಂದ ರಾಜ್ಯದ ನೇಕಾರರಿಗೆ ಹಾಗೂ ಜವಳಿ ಉದ್ಯಮದಲ್ಲಿರುವವರಿಗೆ ಹಣಕಾಸಿನ ನೆರವಾಗುವುದರಿಂದ ಹೆಚ್ಚಿನ ಉತ್ಪನ್ನಗಳು ಕೂಡ ಮಾರುಕಟ್ಟೆಗೆ ಬರುತ್ತವೆ. ಇದೀಗ ಜವಳಿ ಇಲಾಖೆ ವತಿಯಿಂದ 2024- 25ನೇ ಸಾಲಿನ ನೇಕಾರ ಸಮ್ಮಾನ್ ಯೋಜನೆಗೆ (Nekara samman yojana) ಅರ್ಜಿ ಆಹ್ವಾನಿಸಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

2020 ರಲ್ಲಿ ಕರ್ನಾಟಕ ಸರ್ಕಾರವು 1610  ಕೋಟಿ ರೂ. ಕೋವಿಡ್ ಪರಿಹಾರ ಪ್ಯಾಕೇಜ್‌ (Covid relief package) ಬಿಡುಗಡೆ ಮಾಡಿತ್ತು. ಈ ಪ್ಯಾಕೇಜ್ ನ ಪ್ರಮುಖ ಭಾಗಗಳಲ್ಲಿ ನೇಕಾರ ಸಮ್ಮಾನ್ ಯೋಜನೆಯೂ ಕೂಡ ಇದೆ. ಆಗಿನ ಮುಖ್ಯಮಂತ್ರಿ (Chief minister) ಜುಲೈ 6ನೇ ತಾರೀಕು 2020 ರಂದು ಬೆಂಗಳೂರಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರು. ಕೈಮಗ್ಗ ಮತ್ತು ಜವಳಿ ಉದ್ಯಮದಲ್ಲಿ ತೊಡಗಿರುವ ಬಡ ನೇಕಾರರಿಗೆ ಈ ಯೋಜನೆ ಸಹಾಯವಾಗುತ್ತದೆ.

ಹೌದು, ಇದೀಗ ಜವಳಿ ಇಲಾಖೆ ವತಿಯಿಂದ 2024- 25ನೇ ಸಾಲಿನ ನೇಕಾರ ಸಮ್ಮಾನ್ ಯೋಜನೆಯಡಿ ರಾಜ್ಯದಲ್ಲಿರುವ ಪ್ರತಿ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಗೆ (power loom weavers) ವಾರ್ಷಿಕ ರೂ.5000/-ಗಳ ಆರ್ಥಿಕ ನೇರವನ್ನು ನೀಡುವ ಸಲುವಾಗಿ ಸೇವಾ ಸಿಂಧು ಪೋರ್ಟಲ್ (Seva sindhu portal) ನಲ್ಲಿ ಕೈಮಗ್ಗ, ವಿದ್ಯುತ್ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳ ನೇಕಾರರ ಮಾಹಿತಿಯನ್ನು ಆಪ್ ಲೋಡ್ ಮಾಡಲು ಅನುಕೂಲವಾಗುವಂತೆ ಬೆಂಗಳೂರು ನಗರ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೊದಮೊದಲು ಈ ಯೋಜನೆಯಡಿ ಫಲಾನುಭವಿಗಳಿಗೆ ವಾರ್ಷಿಕ ರೂ.2000 ಸಹಾಯವನ್ನು ನೀಡಲಾಗುತಿತ್ತು. ಆದರೆ ಇದೀಗ ಫಲಾನುಭವಿಗಳಿಗೆ ವಾರ್ಷಿಕ ರೂ.5000 ಸಹಾಯವನ್ನು ಮಾಡಲಾಗುತ್ತದೆ. DBT ಮೋಡ್ (DBT Mode) ಮೂಲಕ ಅವರ ನೋಂದಾಯಿತ ಬ್ಯಾಂಕ್ ಖಾತೆಗಳಿಗೆ ಮೊತ್ತವನ್ನು ವರ್ಗಾಯಿಸಲಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ  ?

ಆಸಕ್ತ ಅಭ್ಯರ್ಥಿಗಳು ಕೈಮಗ್ಗ, ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳ ಮಾಲೀಕರು, ನೇಕಾರರು ಹಾಗೂ ಕಾರ್ಮಿಕರು ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಎಸ್‌.ಜೆ.ಪಿ ಕಾಲೇಜು ಆವರಣ, ಐ.ಟಿ. ಬ್ಲಾಕ್ ಹತ್ತಿರ, ಕೆ.ಆರ್. ಸರ್ಕಲ್, ಬೆಂಗಳೂರು ಇಲ್ಲಿ ಅರ್ಜಿ ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ  :

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಕ್ಟೋಬ‌ರ್ 30 2024  ಕೊನೆಯ ದಿನಾಂಕವಾಗಿದೆ. ರಾಜ್ಯ ಸರ್ಕಾರವು (state government) ನಿರ್ಗತಿಕ ನೇಕಾರರಿಗೆ ಅವರ ಜೀವನೋಪಾಯವನ್ನು ಸುಧಾರಿಸಲು ಮತ್ತು ಅವರ ವ್ಯವಹಾರಗಳನ್ನು ಉತ್ತೇಜಿಸಲು ಈ ಯೋಜನೆಯನ್ನು ಬೆಂಬಲಿಸುತ್ತಿದ್ದು, ರಾಜ್ಯದಲ್ಲಿನ ಸಣ್ಣ ಜವಳಿ ಮತ್ತು ಕೈಮಗ್ಗ ವ್ಯವಹಾರಗಳಲ್ಲಿ ತೊಡಗಿರುವ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಕೆಲಸ ಮಾಡುತ್ತದೆ.

ಗಮನಿಸಿ (notice) :

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆಂದರೆ ದೂರವಾಣಿ ಸಂಖ್ಯೆ : 080-22341176 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories