ಪ್ರಧಾನ ಮಂತ್ರಿ ರೋಜ್ಗರ್ ಯೋಜನೆಯಡಿ(Pradhan Mantri Rozgar Yojana), ಫಲಾನುಭವಿಗಳಿಗೆ ರೂ 10 ಲಕ್ಷದವರೆಗೆ ಸಾಲ(loan).
ಪ್ರಧಾನ ಮಂತ್ರಿ ರೋಜ್‌ಗಾರ್ ಯೋಜನೆ ಅಥವಾ PMRY ಕೇಂದ್ರ ಸರ್ಕಾರದ ಉಪಕ್ರಮವಾಗಿದ್ದು, ನಿರುದ್ಯೋಗಿಯಾಗಿರುವ ವಿದ್ಯಾವಂತ ಯುವಕರಿಗೆ ಸ್ವಯಂ ಉದ್ಯೋಗ (Self Employe) ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. 1993 ರಲ್ಲಿ ಪ್ರಾರಂಭವಾದ ಈ ಯೋಜನೆಯು ಯುವಕರು ಮತ್ತು ಮಹಿಳೆಯರಿಗೆ ನಿರುದ್ಯೋಗಿ ಸಾಲವನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ, ಉದಯೋನ್ಮುಖ ಉದ್ಯಮಿಗಳು ಸೇವೆ, ವ್ಯಾಪಾರ, ಉತ್ಪಾದನೆ, ಇತ್ಯಾದಿ ಕ್ಷೇತ್ರಗಳಲ್ಲಿ ವ್ಯಾಪಾರ ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ಹಣವನ್ನು ಪಡೆಯಬಹುದಾಗಿದೆ.
ನಮ್ಮ ದೇಶದಲ್ಲಿರುವ ನಿರುದ್ಯೋಗ (Unemployment) ಸಮಸ್ಯೆಯನ್ನು ನಿವಾರಿಸಲು ಹಾಗೂ ಅವರು ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಭಾರತದಲ್ಲಿ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆಯನ್ನು ಜಾರಿಗೆ ತರಲಾಯಿತು. 2024 ರ ಪ್ರಧಾನ ಮಂತ್ರಿ ರೋಜ್ಗರ್ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡದವರು, ಮಹಿಳೆಯರು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಜನರಿಗೆ ಆದ್ಯತೆ ನೀಡಲಾಗಿದ್ದು, ಫಲಾನುಭವಿಗಳು ಪ್ರಧಾನ ಮಂತ್ರಿ ರೋಜ್ಗರ್ ಯೋಜನೆ ಗೆ ಅರ್ಜಿಗಳನ್ನು ಸಲ್ಲಿಸಬಹುದು. ಇದರ ಪ್ರಯೋಜನಗಳೇನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆಯ ಪ್ರಯೋಜನಗಳೇನು?
ನಿರುದ್ಯೋಗ ಯುವಕರನ್ನು ಪ್ರೋತ್ಸಾಹಿಸುತ್ತಿರುವ ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವವರಲ್ಲಿ ಯಾರೆಲ್ಲ ಅರ್ಹರೀರುತ್ತಾರೋ ಆ ಫಲಾನುಭವಿಗಳಿಗೆ ರೂ 10 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ.
ಇನ್ನು ಫಲಾನುಭವಿಗಳು ತೆಗೆದುಕೊಂಡ ಸಾಲದ ಮೇಲೆ ಶೇಕಡಾ 20 ರಷ್ಟು ಹಣವನ್ನು ಸರ್ಕಾರ ನೀಡುತ್ತದೆ.
ಕೋಳಿ ಸಾಕಾಣಿಕೆ, ಮೀನುಗಾರಿಕೆ, ಚಹಾ ತೋಟಗಳು ಸೇರಿದಂತೆ ತೋಟಗಾರಿಕೆ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡಲಾಗುವುದು.
ಬ್ಯಾಂಕ್ ಗಳಲ್ಲಿ ನೀಡುವ ಸಾಲದ ಮೇಲೆ ನಿಗದಿತ ಬಡ್ಡಿದರದ ವಿವರ :
2024 ರ ಪ್ರಧಾನ ಮಂತ್ರಿ ರೋಜ್ಗರ್ ಯೋಜನೆಯಡಿಯಲ್ಲಿ ರಿಸರ್ವ್ ಬ್ಯಾಂಕ್‌ನ (Reserve Bank) ಸೂಚನೆಗಳಿಂದ ಮಾರ್ಗದರ್ಶಿಸಲ್ಪಟ್ಟ ವಿವಿಧ ಸಾಲದ ಮೊತ್ತಗಳಿಗೆ ಸರ್ಕಾರವು ವಿಭಿನ್ನ ಬಡ್ಡಿ ದರ(interest rate)ಗಳನ್ನು ನಿಗದಿಪಡಿಸುತ್ತದೆ. ಇದೀಗ ನೀಡಿರುವ ಬಡ್ಡಿ ದರ ರೂ 25,000 ರ ವರೆಗೆ ಸಾಲವನ್ನು ತೆಗೆದುಕೊಂಡರೆ ಶೇಕಡಾ 12% ರಷ್ಟು ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ರೂ 25,000 ದಿಂದ ರೂ 10,00,000 ರವರೆಗೆ ಸಾಲವನ್ನು ತೆಗೆದುಕೊಂಡರೆ 15.5% ರಷ್ಟು ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಹಾಗೂ ಸಾಲದ ಮೊತ್ತ ಹೆಚ್ಚಾದ ಹಾಗೆ ಬಡ್ಡಿದರವೂ ಸಹ ಹೆಚ್ಚಾಗುತ್ತದೆ.
ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
ಆಧಾರ್ ಕಾರ್ಡ್ (Aadhaar Card)
ನಿವಾಸ ಪ್ರಮಾಣಪತ್ರ (Residence Certificate)
ಜನನ ಪ್ರಮಾಣಪತ್ರ (Birth Certificate)
ಬ್ಯಾಂಕ್ ಖಾತೆ ಪಾಸ್‌ಬುಕ್ (Bank Account Passbook)
ಜಾತಿ ಪ್ರಮಾಣಪತ್ರ (Caste certificate)
ಪಾಸ್ಪೋರ್ಟ್ ಗಾತ್ರದ ಫೋಟೋ
ಮೊಬೈಲ್ ಸಂಖ್ಯೆ
ಪ್ರಧಾನ ಮಂತ್ರಿ ರೋಜ್ಗರ್ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು?
ಕೇವಲ ನಿರುದ್ಯೋಗಿಗಳಿಗೆ ಮಾತ್ರ ಅವಕಾಶ.
ಅರ್ಜಿದಾರನ ವಯಸ್ಸು 18 ರಿಂದ 35 ವರ್ಷಗಳನ್ನು ಮೀರಿರಬಾರದು.
ಅರ್ಜಿದಾರರು ಕನಿಷ್ಠ 8 ನೇ ತರಗತಿಯನ್ನಾದರೂ ತೇರ್ಗಡೆಯಾಗಿರಬೇಕು.
ಕನಿಷ್ಠ 3 ವರ್ಷಗಳ ಕಾಲ ಒಂದೇ ಕಡೆ ವಾಸವಿರಬೇಕು.
ಕುಟುಂಬದ ವಾರ್ಷಿಕ ಆದಾಯ ರೂ 2 ಲಕ್ಷ ಮೀರಬಾರದು.
ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
https://labour.gov.in ಗೆ ಭೇಟಿ ನೀಡಬೇಕು.
ನಂತರ ನೀವು ಈ ಯೋಜನೆಯ ಅರ್ಜಿ ನಮೂನೆಯನ್ನು ಅಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.
ತದನಂತರ ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಳ್ಳಬೇಕು.
ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನೂ ಭರ್ತಿ ಮಾಡಬೇಕು.
ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಎಲ್ಲಾ ದಾಖಲೆಗಳನ್ನು ಅರ್ಜಿ ನಮೂನೆಯಲ್ಲಿ ಲಗತ್ತಿಸಬೇಕು.
ನಂತರ ಸಾಲವನ್ನು ತೆಗೆದುಕೊಳ್ಳವ ಬ್ಯಾಂಕ್‌ಗೆ ಹೋಗಬೇಕು.
ಬ್ಯಾಂಕ್‌ಗೆ ನೀವು ಭರ್ತಿಮಾಡಿದ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.
ಬ್ಯಾಂಕ್ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ನೀವು ಸಾಲ ಪಡೆಯಲು ಅರ್ಹರಾಗಿದ್ದರೆ ಎಂದು ತಿಳಿಸುತ್ತದೆ.
ಈ ಯೋಜನೆಯ ಪ್ರಮುಖ ಉದ್ದೇಶವೇ ನಿರುದ್ಯೋಗಿಗಳಿಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಆರ್ಥಿಕ ನೆರವನ್ನು ನೀಡುವುದಾಗಿದೆ. ಈ ಮೂಲಕ ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಸ್ವಾವಲಂಬಿಗಳಾಗಬಹುದು ಆದ್ದರಿಂದ ಅರ್ಹರಿರುವ ಎಲ್ಲಾ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




