IMG 20240628 WA0002

Railway Update: ಜುಲೈನಿಂದ ಈ ರೈಲುಗಳ ಸಂಚಾರ ರದ್ದು, ಮತ್ತು ಮಾರ್ಗ ಬದಲಾವಣೆಯ ಮಾಹಿತಿ ಇಲ್ಲಿದೆ!

WhatsApp Group Telegram Group
ರೈಲು ಸಂಚಾರಿಗಳೇ ಎಚ್ಚರ :ಜುಲೈನಿಂದ (July) ಹಲವು ರೈಲುಗಳ ಸಂಚಾರ ರದ್ದಾಗಲಿವೆ.

ದೇಶದಲ್ಲಿ ಇಂದು ಎಲೆಕ್ಟ್ರಿಕ್ ಸ್ಕೂಟರ್ ಗಳ ಜೊತೆಯಲ್ಲಿ ವಾಹನಗಳ ತಯಾರಿಕೆ ಹಾಗೂ ಬಳಸುವಿಕೆ ಎಷ್ಟೇ ಹೆಚ್ಚಾದರೂ, ಜನರು ರೈಲು ಪ್ರಯಾಣವನ್ನು (train journey) ನಿಲ್ಲಿಸಿಲ್ಲ. ರೈಲು ಪ್ರಯಾಣ ಮಾಡಿದರೆ  ಖರ್ಚು ಕಡಿಮೆಯಾಗುವದರ ಜೊತೆಯಲ್ಲಿ ಆರಾಮದಾಯಕ ಸಂಚಾರವನ್ನು ಮಾಡಬಹುದು. ಆದ್ದರಿಂದ ಹೆಚ್ಚು ಜನ ದೂರದ ಪ್ರಯಾಣಗಳಿಗೆ ರೈಲನ್ನು ಅವಲಂಬಿಸಿರುತ್ತಾರೆ. ಹೆಚ್ಚು ರೈಲಿನ ಪ್ರಯಾಣವನ್ನು ಇಷ್ಟಪಡುವ ಹಾಗೂ ಸಂಚರಿಸುವ ಜನರಿಗೆ ಸಂಕಷ್ಟ ಎದುರಾಗಿದೆ .ನೈಋತ್ಯ ರೈಲ್ವೆ ವಲಯ (South Western Railway) ವ್ಯಾಪ್ತಿಯಲ್ಲಿ ಕೆಲವು ವಿವಿಧ ರೈಲುಗಳ ಸಂಚಾರ ರದ್ದಾಗಿವೆ.ಯಾವ ರೈಲುಗಳು ರದ್ದಾಗಿವೆ? ಯಾಕೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಮಾಹಿತಿ ನೀಡಿರುವ ಪ್ರಕಾರ ಜುಲೈ ನಲ್ಲಿ  ನೈಋತ್ಯ ರೈಲ್ವೆ ವಲಯ (South Western Railway) ವ್ಯಾಪ್ತಿಯಲ್ಲಿ ಬರುವ ಹಲವು ರೈಲುಗಳ ಸಂಚಾರ ರದ್ದಾಗಲಿದ್ದು,ಕೆಲವು ರೈಲುಗಳು ಭಾಗಶಃ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ಹಾಗೂ ಒಂದಷ್ಟು ರೈಲುಗಳ ನಿಯಂತ್ರಣಮಾಡಲಾಗುತ್ತಿದ್ದು, ರೈಲು ಮಾರ್ಗಗಳ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ಜುಲೈನಿಂದ ಹಲವು ರೈಲುಗಳ ಸಂಚಾರ ರದ್ದಾಗಲು ಕಾರಣವೇನು?

ಕೆಂಗೇರಿ-ಹೆಜ್ಜಾಲ ನಿಲ್ದಾಣಗಳ ನಡುವಿನ ರೈಲ್ವೆ ಲೆವೆಲ್ ಕ್ರಾಸಿಂಗ್ (ರೈಲ್ವೆ ಗೇಟ್) ನಂ. 15 ಮತ್ತು ಕೆಎಸ್‌ಆರ್ ಬೆಂಗಳೂರು-ಬೆಂಗಳೂರು ಕ್ಯಾಂಟ್ ನಿಲ್ದಾಣಗಳ ನಡುವಿನ ಸೇತುವೆ ಸಂಖ್ಯೆ 855ರಲ್ಲಿ ತಾತ್ಕಾಲಿಕ ಗರ್ಡರ್‌ಗಳನ್ನು ಅಳವಡಿಸುವ ಮತ್ತು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ, ಜೊತೆಯಲ್ಲಿ ರೈಲ್ವೆ ಲೈನ್ ಬ್ಲಾಕ್ / ಪವರ್ ಬ್ಲಾಕ್ (Railway Rain block /power block) ಇರುವುದರಿಂದ ರೈಲ್ವೆ ಸಂಚಾರದಲ್ಲಿ ಹಲವು ಬದಲಾವಣೆಗಳು ಆಗಲಿವೆ.

ಯಾವೆಲ್ಲಾ ರೈಲುಗಳ ಸಂಚಾರ ರದ್ದು:

(ಸಂಖ್ಯೆ 16021) ಡಾ. ಎಮ್‌ಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲು ಸಂಚಾರ ಜುಲೈ 1, 2, 8 ಮತ್ತು 9, 2024 ರಂದು ರದ್ದಾಗಲಿದೆ.
(ಸಂಖ್ಯೆ 16022) ಮೈಸೂರು-ಡಾ ಎಮ್‌ಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 20623/20624 ಮೈಸೂರು-ಕೆಎಸ್‌ಆರ್ ಬೆಂಗಳೂರು-ಮೈಸೂರು ಮಾಲ್ಗುಡಿ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಜುಲೈ 2, 3, 9 ಮತ್ತು 10, 2024 ರಂದು ರದ್ದಾಗಲಿವೆ.
(ಸಂಖ್ಯೆ 16219) ಚಾಮರಾಜನಗರ-ತಿರುಪತಿ ದೈನಂದಿನ ಎಕ್ಸ್‌ಪ್ರೆಸ್ ರೈಲು ಸಂಚಾರ ಜುಲೈ 1 ಮತ್ತು 8, 2024 ರಂದು ರದ್ದಾಗಲಿದೆ.
(ಸಂಖ್ಯೆ 16203/16204) ಡಾ.ಎಮ್‌ಜಿಆರ್ ಚೆನ್ನೈ ಸೆಂಟ್ರಲ್-ತಿರುಪತಿ-ಡಾ ಎಮ್‌ಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್, ತಿರುಪತಿ-ಚಾಮರಾಜನಗರ ದೈನಂದಿನ ಎಕ್ಸ್‌ಪ್ರೆಸ್ (ಸಂಖ್ಯೆ 16220) ರೈಲು, ಅರಸೀಕೆರೆ-ಮೈಸೂರು ದೈನಂದಿನ ಪ್ಯಾಸೆಂಜರ್ ಸ್ಪೆಷಲ್ (ಸಂಖ್ಯೆ 06267) ರೈಲು, ಮೈಸೂರು-ಎಸ್‌ಎಂವಿಟಿ ಬೆಂಗಳೂರು ದೈನಂದಿನ ಪ್ಯಾಸೆಂಜರ್ ಸ್ಪೆಷಲ್ (ಸಂಖ್ಯೆ 06269) ರೈಲುಗಳು ಜುಲೈ 2 ಮತ್ತು 9, 2024 ರಂದು ರದ್ದಾಗಲಿದೆ. ಹಾಗೂ ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ಸ್ಪೆಷಲ್ (ಸಂಖ್ಯೆ 06560), ಎಸ್‌ಎಂವಿಟಿ ಬೆಂಗಳೂರು-ಮೈಸೂರು ದೈನಂದಿನ ಪ್ಯಾಸೆಂಜರ್ ಸ್ಪೆಷಲ್ (ಸಂಖ್ಯೆ 06270) ಹಾಗೂ ಕೆಎಸ್‌ಆರ್ ಬೆಂಗಳೂರು-ಡಾ ಎಮ್‌ಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ಸಂಖ್ಯೆ 12658) ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಮೈಸೂರು-ಅರಸೀಕೆರೆ ದೈನಂದಿನ ಪ್ಯಾಸೆಂಜರ್ ಸ್ಪೆಷಲ್ (ಸಂಖ್ಯೆ 06268), ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು ಸ್ಪೆಷಲ್ (ಸಂಖ್ಯೆ 06559), ಕೆಎಸ್‌ಆರ್ ಬೆಂಗಳೂರು-ಚನ್ನಪಟ್ಟಣ ಮೆಮು ಸ್ಪೆಷಲ್ (ಸಂಖ್ಯೆ 01763), ಡಾ ಎಮ್‌ಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ಸಂಖ್ಯೆ 12657) ರೈಲುಗಳ ಸಂಚಾರ ಜುಲೈ 3 ಮತ್ತು 10, 2024 ರಂದು ರದ್ದಾಗಲಿವೆ.

ಭಾಗಶಃ ರದ್ದಾದ ರೈಲುಗಳ ವಿವರ:

ಮೈಸೂರು ನಿಲ್ದಾಣದಿಂದ ಹೊರಡುವ (ಸಂಖ್ಯೆ 06526) ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ಸ್ಪೆಷಲ್ ರೈಲು ಅನ್ನು ಚನ್ನಪಟ್ಟಣ – ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಜುಲೈ 2 ಮತ್ತು 9 ರಂದು ಭಾಗಶಃ ರದ್ದಾಗಲಿದೆ.

ಹೊಸಪೇಟೆ ನಿಲ್ದಾಣದಿಂದ ಹೊರಡುವ (ಸಂಖ್ಯೆ 06244) ಹೊಸಪೇಟೆ-ಕೆಎಸ್‌ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ಸ್ಪೆಷಲ್ ರೈಲು ಯಶವಂತಪುರ-ಕೆಎಸ್‌ಆರ್ ಬೆಂಗಳೂರು ನಡುವೆ ಜುಲೈ 2 ಮತ್ತು 9 ರಂದು ಭಾಗಶಃ ರದ್ದುಗೊಳಿಸಲಾಗುತ್ತಿದೆ.

ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ (ಸಂಖ್ಯೆ17392) ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲು ಯಶವಂತಪುರ-ಕೆಎಸ್‌ಆರ್ ಬೆಂಗಳೂರು ನಡುವೆ ಜುಲೈ 2 ಮತ್ತು 9 ರಂದು ಭಾಗಶಃ ರದ್ದುಪಡಿಸಲಾಗಿದೆ.

ಬಂಗಾರಪೇಟೆ ನಿಲ್ದಾಣದಿಂದ ಹೊರಡುವ (ಸಂಖ್ಯೆ 16521) ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲು ಬಯ್ಯಪ್ಪನಹಳ್ಳಿ ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ ಜುಲೈ 2 ಮತ್ತು 9 ರಂದು ಭಾಗಶಃ ರದ್ದುಪಡಿಸಲಾಗುತ್ತದೆ.

(ಸಂಖ್ಯೆ 17391) ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಕೆಎಸ್‌ಆರ್ ಬೆಂಗಳೂರು – ಯಶವಂತಪುರ ನಡುವೆ ಜುಲೈ 3 ಮತ್ತು 10 ರಂದು ಭಾಗಶಃ ರದ್ದಗೊಂಡಿದೆ.

(ಸಂಖ್ಯೆ 06243) ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ ದೈನಂದಿನ ಪ್ಯಾಸೆಂಜರ್ ಸ್ಪೆಷಲ್ ರೈಲು ಕೆಎಸ್‌ಆರ್ ಬೆಂಗಳೂರು – ಯಶವಂತಪುರ ನಡುವೆ ಜುಲೈ 3 ಮತ್ತು 10 ರಂದು ಭಾಗಶಃ ರದ್ದುಪಡಿಸಲಾಗುತ್ತದೆ.

ನಿಯಂತ್ರಿಸಲಾಗುತ್ತಿರುವ ರೈಲುಗಳು :

ಮುಂಬೈನಿಂದ ಹೊರಡುವ (ಸಂಖ್ಯೆ 11301) ಸಿಎಸ್ಎಂಟಿ ಮುಂಬೈ-ಕೆಎಸ್‌ಆರ್ ಬೆಂಗಳೂರು ಉದ್ಯಾನ್ ದೈನಂದಿನ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗ ಮಧ್ಯೆ 30 ನಿಮಿಷಗಳವರೆಗೆ ಜುಲೈ 2 ಮತ್ತು 9 ರಂದು ನಿಯಂತ್ರಿಸಲಾಗುತ್ತದೆ.
ಮೈಲಾಡುತುರೈಯಿಂದ ಹೊರಡುವ (ಸಂಖ್ಯೆ 16231) ಮೈಲಾಡುತುರೈ-ಮೈಸೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗ ಮಧ್ಯೆ 15 ನಿಮಿಷಗಳವರೆಗೆ ಜುಲೈ 2 ಮತ್ತು 9 ರಂದು ನಿಯಂತ್ರಣಗೊಳ್ಳಲಿದೆ.
ಮುರುಡೇಶ್ವರ ನಿಲ್ದಾಣದಿಂದ ಹೊರಡುವ (ಸಂಖ್ಯೆ 16586) ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗ ಮಧ್ಯೆ 15 ನಿಮಿಷಗಳವರೆಗೆ ಜುಲೈ 2 ಮತ್ತು 9 ರಂದು ನಿಯಂತ್ರಿಸಲಾಗುತ್ತದೆ.
ತಾಳಗುಪ್ಪದಿಂದ ಪ್ರಾರಂಭವಾಗುವ (ಸಂಖ್ಯೆ 16228) ತಾಳಗುಪ್ಪ-ಮೈಸೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲನ್ನು ನಾಯಂಡಹಳ್ಳಿ ನಿಲ್ದಾಣದಲ್ಲಿ 10 ನಿಮಿಷಗಳವರೆಗೆ ಜುಲೈ 2 ಮತ್ತು 9 ರಂದು ನಿಯಂತ್ರಿಸಲಾಗುತ್ತದೆ.

ಮಾರ್ಗ ಬದಲಾವಣೆಗೊಂಡ ರೈಲುಗಳು :

ಜುಲೈ 2 ಮತ್ತು 9 ರಂದು (ಸಂಖ್ಯೆ 16593) ಕೆಎಸ್‌ಆರ್ ಬೆಂಗಳೂರು-ಹಜೂರ್ ಸಾಹಿಬ್ ನಾಂದೇಡ್ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಕೆಎಸ್‌ಆರ್ ಬೆಂಗಳೂರಿನಿಂದ 80 ನಿಮಿಷ ತಡವಾಗಿ ಪ್ರಾರಂಭವಾಗಲಿದೆ. ಈ ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಯಲಹಂಕ ಮಾರ್ಗದ ಮೂಲಕ ಸಂಚರಿಸಲಿದೆ, ಹೀಗಾಗಿ ಬೆಂಗಳೂರಿನ ಕ್ಯಾನ್ಟೋನ್‌ಮೆಂಟ್‌ನಲ್ಲಿ ನಿಲುಗಡೆ ಇರುವುದಿಲ್ಲ.
ಜುಲೈ 2 ಮತ್ತು 9 ರಂದು ಲೋಕಮಾನ್ಯ ತಿಲಕ್ ಟರ್ಮಿನಸ್ ದಿಂದ ಹೊರಡುವ (ಸಂಖ್ಯೆ 11013) ಲೋಕಮಾನ್ಯ ತಿಲಕ್ ಟರ್ಮಿನಸ್-ಕೊಯಮತ್ತೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲು ಗೌರಿಬಿದನೂರು, ಬಯ್ಯಪ್ಪನಹಳ್ಳಿ, ಎಸ್‌ಎಂವಿಟಿ ಬೆಂಗಳೂರು, ಬಯ್ಯಪ್ಪನಹಳ್ಳಿ ಮತ್ತು ಹೊಸೂರು ಮಾರ್ಗದ ಮೂಲಕ ಸಂಚರಿಸು ಕಾರಣದಿಂದ ಬೆಂಗಳೂರು ಪೂರ್ವ, ಬೆಂಗಳೂರು ಕ್ಯಾನ್ಟೋನ್‌ಮೆಂಟ್ ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಈ ರೈಲು ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಹೊಂದಿರಲಿದೆ ಎಂದು ರೈಲ್ವೆ ಅಧಿಕಾರಿ ಕನಮಡಿ ಅವರು ಮಾಹಿತಿ ನೀಡಿದ್ದಾರೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories