bajaj cng

ಭರ್ಜರಿ ಎಂಟ್ರಿ ಕೊಡಲಿದೆ ವಿಶ್ವದ ಮೊದಲ ಬಜಾಜ್ ಸಿಎನ್‌ಜಿ ಬೈಕ್! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

WhatsApp Group Telegram Group

ಭಾರತದ ಪ್ರಸಿದ್ಧ ಬೈಕ್ ತಯಾರಿಕಾ ಕಂಪನಿಯ ಹೊಸ ಸಿ ಎನ್ ಜಿ ಬೈಕ್ ಫೋಟೋಗಳು ಬಿಡುಗಡೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದ್ದು ಸಿ ಎನ್ ಜಿ ಬೈಕ್ ಪ್ರಿಯರ ಕುತೂಹಲ ಕೆರಳಿಸಿವೆ. ಈ ಬೈಕ್ ಬಗ್ಗೆ ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.

ಪುಣೆಯಲ್ಲಿ ಹೊಸ ‘ಪಲ್ಸರ್ ಎನ್ಎಸ್400ಝಡ್’ ಮೋಟಾರ್‌ಸೈಕಲ್‌ ಲಾಂಚ್ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಜೀವ್ ಬಜಾಜ್ ಅವರು, ವಿಶ್ವದ ಮೊದಲ ಸಿಎನ್‌ಜಿ ಬೈಕ್‌ನ್ನು ಜೂನ್ 18ರಂದು ಪರಿಚಯಿಸುವುದಾಗಿ ಘೋಷಣೆ ಮಾಡಿದ್ದರು.

Bajajs Bruzer jpg

ಹೌದು, ದೇಶದಾದ್ಯಂತ ಸ್ಕೂಟರ್ ಹಾಗೂ ಬೈಕ್ ಗಳ ಮಾರಾಟದಲ್ಲಿ ಪ್ರಖ್ಯಾತಿಯನ್ನು ಹೊಂದಿರುವ ಬಜಾಜ್ ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಸಿ ಎನ್ ಜಿ ಚಾಲಿತ ಮೋಟರ್ ಸೈಕಲ್ (CNG motor cycle) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಭಾರತದಲ್ಲೇ ದ್ವಿಚಕ್ರ ವಾಹನ ಮಾರಾಟದಲ್ಲಿ ಹಾಗೂ ತಯಾರಿಕೆಯಲ್ಲಿ ಹೆಚ್ಚು ಪ್ರಚಲಿತವಾಗಿ ಕೇಳಿಬರುವ ಕಂಪನಿ ಬಜಾಜ್. ಇದೀಗ ಈ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಹಾಗೂ ಮಾರಾಟದಲ್ಲಿ ಹೊಸ ಕ್ರಾಂತಿಗೆ ಮುಂದಾಗಿರುವ ಬಜಾಜ್ ಮುಂದಿನ ತಿಂಗಳು ವಿಶ್ವದ ಮೊದಲ ಸಿಎನ್‌ಜಿ (gas ) ಚಾಲಿತ ಮೋಟಾರ್‌ಸೈಕಲ್ (ಬೈಕ್ ) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಪ್ರತಿ ತಿಂಗಳು 20 ಸಾವಿರ ಸಿಎನ್‌ಜಿ ಬೈಕ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. ವರದಿಗಳ ಪ್ರಕಾರ, ಬಜಾಜ್ ಆಟೋ 5-6 ಸಿಎನ್‌ಜಿ ಬೈಕ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದು, ಈ ಪೈಕಿ ಮೂರು ಮಾದರಿಗಳನ್ನು ಈ ವರ್ಷದ ಅಂತ್ಯದ ವೇಳೆಗೆ ಮತ್ತು ಉಳಿದ ಮಾದರಿಗಳನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಬಹುದು. ಬಜಾಜ್ ಈ ಬೈಕ್ ಅನ್ನು ಜೂನ್ 18 ರಂದು ಬಿಡುಗಡೆ ಮಾಡಲಿದೆ. ಇದರ ಬೆಲೆ 80-85 ಸಾವಿರ (ಎಕ್ಸ್ ಶೋ ರೂಂ) ನಡುವೆ ಇರಬಹುದು.

ಆದರೆ, ಈ ಬೈಕ್ ಬಿಡುಗಡೆಗೆ ಯಾವುದೇ ನಿರ್ದಿಷ್ಟ ದಿನಾಂಕವನ್ನು ರಾಜೀವ್ ಬಜಾಜ್ ಘೋಷಿಸಿಲ್ಲ, ಆದರೆ ಜೂನ್ 2024 ರ ವೇಳೆಗೆ ಇದನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು. ವರದಿಗಳನ್ನು ನಂಬುವುದಾದರೆ, ಬಜಾಜ್‌ನ ಸಿಎನ್‌ಜಿ ಬೈಕ್ ತನ್ನ ವಿಭಾಗದಲ್ಲಿ ಪೆಟ್ರೋಲ್ ಬೈಕ್‌ಗಿಂತ ದುಬಾರಿಯಾಗಬಹುದು. ಸಿಎನ್‌ಜಿ ಮತ್ತು ಡ್ಯುಯಲ್ ಇಂಧನ ತಂತ್ರಜ್ಞಾನದಿಂದಾಗಿ, ಈ ಬೈಕು ಆರಂಭದಲ್ಲಿ ದುಬಾರಿಯಾಗಬಹುದು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾ

WhatsApp Group Join Now
Telegram Group Join Now

Popular Categories