ಬ್ಯಾಂಕ್ (bank) ವಲಯಗಳಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದೀರಾ? ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾ (state bank of India) ದಲ್ಲಿ ಖಾಲಿ ಇವೆ ಹಲವು ಹುದ್ದೆಗಳು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಇಂದು ವಾಣಿಜ್ಯ ವಿಭಾಗದಲ್ಲಿ (commerce department) ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿರುವ ಹಲವು ಯುವಕ ಯುವತಿಯರನ್ನು ನಾವು ಕಾಣಬಹುದು. ಬ್ಯಾಂಕ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಶಯವನ್ನು ಇಟ್ಟುಕೊಂಡು ಕೆಲಸ ಸಿಗದೆ ನಿರುದ್ಯೋಗಿಗಳಾಗಿದ್ದಾರೆ. ತುಂಬಾ ಡಿಮ್ಯಾಂಡ್ (demand) ಇರುವ ಬ್ಯಾಂಕ್ ವಲಯಗಳಲ್ಲಿ ಕೆಲಸ ಸಿಗುವುದು ಸ್ವಲ್ಪ ಕಷ್ಟ ಆದ್ದರಿಂದ ಹಲವು ಮಂದಿ ಕೆಲಸವನ್ನು ಹುಡುಕುತ್ತಿದ್ದಾರೆ. ಇನ್ನು ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಒಫ್ ಇಂಡಿಯ(SBI) ಬ್ಯಾಂಕ್ ನಲ್ಲಿ ಸಿಗಬಹುದು ನೀವು ಇಷ್ಟ ಪಟ್ಟ ಕೆಲಸ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಿಗಲಿದೆ ಉದ್ಯೋಗ :
ಹೌದು ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ (government bank) ಆಗಿರುವ ಸ್ಟೇಟ್ ಬ್ಯಾಂಕ್ ಒಫ್ ಇಂಡಿಯನ್ ಬ್ಯಾಂಕ್ ನಲ್ಲಿ 12,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯಲ್ಲಿದೆ. SBI ನೀಡಿರುವ ಮಾಹಿತಿ ಪ್ರಕಾರ ಒಟ್ಟು 12,000 ಉದ್ಯೋಗಿಗಳ ನೇಮಕಾತಿಯನ್ನು SBI ನ ಮಾಹಿತಿ ತಂತ್ರಜ್ಞಾನ (information technology) ಮತ್ತು ಇತರ ಉದ್ಯೋಗಳಿಗೆ (other jobs) ನೇಮಕಾತಿ ಪ್ರಕ್ರಿಯೆಯಲ್ಲಿದೆ.
ಸ್ಟೇಟ್ ಬ್ಯಾಂಕ್ ಒಫ್ ಇಂಡಿಯನ್ ಬ್ಯಾಂಕ್ ನಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಮುಖವಾಗಿತ್ತು. 2020ರ ನಂತರ ಎಲ್ಲಾ ವರ್ಷಗಳಲ್ಲಿಯೂ ಕೂಡ ಉದ್ಯೋಗಿಗಳ ಸಂಖ್ಯೆ ಇಳಿಮುಖವಾಗಿರುವುದನ್ನು ನಾವು ನೋಡಬಹುದು. 2020ರಲ್ಲಿ 2,49,448 ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021 ರಲ್ಲಿ 2,45,652 ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು. ಅಲ್ಲಿಗೆ ಬರೋಬ್ಬರಿ ಒಂದೇ ವರ್ಷದಲ್ಲಿ 3796 ಉದ್ಯೋಗಿಗಳ ನೇಮಕಾತಿಯನ್ನು ಕಡಿಮೆ ಮಾಡಿತ್ತು. ಅದೇ ರೀತಿ 2022 ರಲ್ಲಿ 2,44,250 ಉದ್ಯೋಗಿಗಳನ್ನು ನೇಮಿಸಿಕೊಂಡ SBI, 2023 ರಲ್ಲಿ 8392 ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿತ್ತು. ಅಂದರೆ 2023 ರ ಸಾಲಿನಲ್ಲಿ 2,35,858 ಉದ್ಯೋಗಿಗಳ ನೇಮಕಾತಿಯನ್ನು ಮಾಡಿಕೊಂಡಿತ್ತು. ಇನ್ನು ಪ್ರಸ್ತುತ ಸಾಲಿನಲ್ಲಿರುವ ಉದ್ಯೋಗಿಗಳ ಸಂಖ್ಯೆ 2,32,296.(ಇದು 2024ರ ವರ್ಷದ ಅಂತ್ಯದ ವೇಳೆಗೆ.)
ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾದ ಅಧ್ಯಕ್ಷ ದಿನೇಶ್ ಖಾರ (SBI bank president Dinesh Khara) ಅವರು ಹೇಳಿರುವ ಪ್ರಕಾರ ಈ ಹೊಸ ನೇಮಕಾತಿಗಳಿಗೆ ಬ್ಯಾಕಿಂಗ್ ವ್ಯವಸ್ಥೆಯಲ್ಲಿ ಸ್ವಲ್ಪ ಮಾನ್ಯತೆಯನ್ನು ನೀಡಲಾಗುವುದು. ನಂತರ ಇವರನ್ನು ಐಟಿ (information technology) ಮತ್ತು ಇತರ ಅಸೋಸಿಯೇಟ್ ಹುದ್ದೆಗಳಿಗೆ (other associate jobs) ಉದ್ಯೋಗಿಗಳನ್ನು ವರ್ಗಯಿಸಲಾಗುವುದು. ಈ ಬಾರಿ ಯ ನೇಮಕಾತಿಯಲ್ಲಿ 11,000 ದಿಂದ 12,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಇನ್ನು ಇದರಲ್ಲಿ ಹೆಚ್ಚಿನ ಹುದ್ದೆಗಳು ಟೆಕ್ ವಲಯದ ಇಂಜಿನಿಯರ್ ಗಳಿಗೆ (tech level engineers) ಸಂಬಂಧಿಸಿವೆ ಎಂದು ತಿಳಿಸಿದ್ದಾರೆ.
ಈ ಮಾಹಿತಿಗಳನ್ನು ಓದಿ
- ಪೆಟ್ರೋಲ್ ಬಂಕ್ ಶುರು ಮಾಡುವುದು ಹೇಗೆ? ತಿಂಗಳಿಗೆ 2 ರಿಂದ 3 ಲಕ್ಷ ಆದಾಯ ಬರುತ್ತೆ, How to Start A Petrol Bunk in India
- ರೈತರೇ ಗಮನಿಸಿ, ನಿಮ್ಮ ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಹಣದ ಜಮಾ ಸ್ಟೇಟಸ್ ಚೆಕ್ ಮಾಡಿ, ಇಲ್ಲಿದೆ ಡೈರೆಕ್ಟ್ ಲಿಂಕ್
- ಗಗನಕ್ಕೇರಿದ ತರಕಾರಿ ಬೆಲೆ; ಬೀನ್ಸ್, ಈರುಳ್ಳಿ, ಟೊಮೇಟೊ ದರ ಡಬಲ್!
- ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





