pending hana

Gruhalakshmi: ಗೃಹಲಕ್ಷ್ಮಿ 7ನೇ ಕಂತಿನ 2000/- ಹಣ ಬಿಡುಗಡೆ, ಪೆಂಡಿಂಗ್ ಹಣ ಪಡೆಯಲು ಹೊಸ ಮಾರ್ಗಸೂಚಿ ಪ್ರಕಟ

WhatsApp Group Telegram Group

ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಯೋಜನೆ (Gruha Lakshmi Scheme Karnataka) ಯನ್ನು ರೂಪಿಸಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಟುಂಬದ ನಿರ್ವಹಣೆಯಲ್ಲಿ ಮನೆ ಯಜಮಾನಿಯ ಪಾತ್ರ ಬಹುದೊಡ್ಡದು. ಆದ್ದರಿಂದ ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ರೂ.2,000 ಜಮಾ ಮಾಡಲು ಈ ಯೋಜನೆಯನ್ನು ಅನುಷ್ಠಾನ ಮಾಡಿದೆ.

ಇದುವರೆಗೂ ರಾಜ್ಯದಲ್ಲಿ 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಶೇಕಡ 90ರಷ್ಟು ಮಹಿಳೆಯರ ಖಾತೆಗೆ ಈಗಾಗಲೇ ಆರು ಕಂತಿನ ಹಣ ಬಿಡುಗಡೆಯಾಗಿದೆ ಆದರೆ ಈ ಕೆಳಗಿನ ಕಾರಣಗಳಿಂದ ಇನ್ನೂ 10% ಮಹಿಳೆಯರಿಗೆ ಹಣ ಜಮಾ ಆಗುತ್ತಿಲ್ಲ. ಈ ಕುರಿತು ಸಂಪೂರ್ಣ ಮಾಹಿತಿ ಕಳೆದು ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪೆಂಡಿಂಗ್ ಹಣ ಜಮಾ ಆಗದಿರಲು ಇಲ್ಲಿವೇ ಕಾರಣ

– ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯಲ್ಲಿ ಒಂದೇ ತರನಾಗಿ ಹೆಸರು ಮತ್ತು ಅಡ್ರೆಸ್ ಇಲ್ಲದೆ ಇರುವುದು.

– ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡದೆ ಇರುವುದು.

– ಬ್ಯಾಂಕ್ ಖಾತೆಗೆ ಎನ್ ಪಿ ಸಿ ಐ ಮ್ಯಾಪಿಂಗ್ ಮಾಡಿಸದೇ ಇರುವುದು.

– ಬ್ಯಾಂಕ್ ಖಾತೆಗೆ ಈ ಕೆವೈಸಿ ಮಾಡದೇ ಇರುವುದು

– ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇರುವುದು

–    ಅರ್ಜಿ ಸಲ್ಲಿಸುವಾಗ ತಾಂತ್ರಿಕ ದೋಷದಿಂದ ಅರ್ಜಿ ಸಲ್ಲಿಕೆ ಆಗದೆ ಇರುವುದು

ಪೆಂಡಿಂಗ್ ಹಣ ಪಡೆಯಲು ಇಲ್ಲಿದೆ ಪರಿಹಾರ

ಇದುವರೆಗೂ ಒಂದು ಕಂತಿನ ಹಣ ಬಂದೇ ಇಲ್ಲ ಎನ್ನುವ ಮಹಿಳೆಯರ ಬ್ಯಾಂಕ್ ಖಾತೆಯೇ ಕಾರಣ ಎನ್ನಬಹುದು, ಆದ್ದರಿಂದ ಅಂತಹ ಮಹಿಳೆಯರು ಕೂಡಲೇ ಬ್ಯಾಂಕಿಗೆ ಭೇಟಿ ನೀಡಿ ಖಾತೆಗೆ ಅಗತ್ಯ ಇರುವ ಎಲ್ಲಾ ಅಪ್ಡೇಟ್ಸ್ ಗಳನ್ನು ಮಾಡಿಸಿ, ಅದರಲ್ಲೂ ಮುಖ್ಯವಾಗಿ ಎನ್ಪಿಸಿಐ ಮ್ಯಾಪಿಂಗ್, ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಿಸಲೇಬೇಕು.

ಆಧಾರ್ ಕಾರ್ಡ್ ಹತ್ತು ವರ್ಷಗಳಷ್ಟು ಹಳೆಯದಾಗಿದ್ದರೆ ತಕ್ಷಣ ಅದನ್ನು ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರದಲ್ಲಿ ತಪ್ಪದೇ ಅಪ್ಡೇಟ್ ಮಾಡಿಸಿ. ಆಧಾರ್ ಕಾರ್ಡ್ ನಲ್ಲಿ ಹೆಸರು, ಅಡ್ರೆಸ್, ಲಿಂಗ, ಜನ್ಮ ದಿನಾಂಕ ಮೊದಲಾದ ವಿವರಗಳನ್ನು ನವೀಕರಣಗೊಳಿಸಬಹುದು.

ನಿಮ್ಮ ಮೊಬೈಲ್ ಮೂಲಕ ಆನ್ ಲೈನ್ ನಲ್ಲಿಯೂ ಆಧಾರ್ ಕಾರ್ಡ್ ನವೀಕರಣಕ್ಕೆ ಅವಕಾಶವಿದೆ. ಜೂನ್ 14ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಗೆ ಸರ್ಕಾರ ಅವಕಾಶ ಕೊಟ್ಟಿದೆ. ಇದು ಸಂಪೂರ್ಣ ಉಚಿತವಾಗಿದ್ದು ಜೂನ್ 14ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ದರೆ ನಿಮಗೆ ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

whatss

ಎಲ್ಲಾ ಸರಿ ಇದ್ರೂ ಹಣ ಬಂದಿಲ್ವಾ?

ಸಿಡಿಪಿಓ ಕಚೇರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿದ ದಾಖಲೆಗಳನ್ನು ನೀಡಬೇಕು (Visit CDPO office)

ಅದೆಷ್ಟೋ ಮಹಿಳೆಯರ ಖಾತೆಗೆ ಇನ್ನು ಒಂದು ಕಂತಿನ ಹಣವೂ ಬಂದಿಲ್ಲ. ಈ ರೀತಿಯ ಸಮಸ್ಯೆ ಇದ್ದರೆ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಎಲ್ಲವನ್ನು ಕೊಟ್ಟು ನಿಮ್ಮ ಖಾತೆಗೆ ಯಾಕೆ ಹಣ (Money Deposit) ಬಂದಿಲ್ಲ ಎನ್ನುವ ಮಾಹಿತಿಯನ್ನು ಪಡೆಯಿರಿ. ಯಾವ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಖಾತೆಗೆ (Bank Account) ಹಣ ಬಂದಿಲ್ಲ ಎನ್ನುವುದನ್ನು ತಿಳಿಸುತ್ತಾರೆ. ಅದರ ಮೂಲಕ ಆ ಸಮಸ್ಯೆಯನ್ನು ಬಗೆಹರಿಸಿ ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುವ ಹಾಗೆ ಮಾಡಬಹುದು.

ಸಿ ಡಿ ಪಿ ಓ ಕಚೇರಿಯಲ್ಲಿ ( CDPO Office ) ನಿಮ್ಮ ಅರ್ಜಿ ಅನುಮೋದನೆ ಬಾಕಿ ಇದ್ದರೆ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ. ಇದಾದ ಬಳಿಕ ನಿಮ್ಮ ಖಾತೆಗೆ ಕೆವೈಸಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದರೆ ಪೆಂಡಿಂಗ್ ಇರುವ ಹಣ ಕೂಡ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಯಾಕಂದ್ರೆ ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿರುತ್ತದೆ.

ಡಿಸೆಂಬರ್ ತಿಂಗಳಲ್ಲಿ ಆಧಾರ್ ಮತ್ತು ಬ್ಯಾಂಕ್ ಅಕೌಂಟ್ NPCI ಮ್ಯಾಪಿಂಗ್ ಮಾಡಿಸಿಕೊಂಡ ನಂತರ ಹಲವಾರು ಮಹಿಳೆಯರಿಗೆ ಜನವರಿ 23 24 ಮತ್ತು 25ನೇ ತಾರೀಕಿನಂದು ಸತತವಾಗಿ 2 ಸಾವಿರ ರೂಪಾಯಿಗಳಂತೆ ಒಟ್ಟು ಹತ್ತು ಸಾವಿರ ರೂಪಾಯಿಗಳನ್ನ ರಾಜ್ಯ ಸರ್ಕಾರದಿಂದ ಜಮಾ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಮಹಿಳೆಯೊಬ್ಬರಿಗೆ ಹಣ ಜಮಾ ಆಗಿರುವ ಡಿಬಿಟಿ ಸ್ಟೇಟಸ್ ಕೆಳಗೆ ನೀವು ನೋಡಬಹುದು.

sct

7ನೇ ಕಂತಿನ ಹಣ ಬಿಡುಗಡೆ

ಇನ್ನೇನು ಮಾರ್ಚ್ ತಿಂಗಳು ಮುಗಿಯುತ್ತ ಬಂದಿದೆ. ಆದ್ದರಿಂದ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಹೌದು ರಾಜ್ಯದ ಈ ಕೆಳಗಿನ ಜಿಲ್ಲೆಗಳಲ್ಲಿ ಈಗಾಗಲೇ ಹಣ ಬಿಡುಗಡೆಯಾಗಿದ್ದು, ಎಲ್ಲಾ ಮಹಿಳಾ ಫಲಾನುಭವಿಗಳು ನಿಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿಕೊಳ್ಳಿ.

ಶಿವಮೊಗ್ಗ, ಧಾರವಾಡ, ತುಮಕೂರು, ಚಾಮರಾಜನಗರ, ವಿಜಯಪುರ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ, ರಾಮನಗರ, ಕೊಪ್ಪಳ, ದಕ್ಷಿಣ ಕನ್ನಡ, ತುಮಕೂರು, ಹಾವೇರಿ, ಉತ್ತರ ಕನ್ನಡ, ಕೋಲಾರ, ಗದಗ, ವಿಜಯನಗರ, ಬೀದರ್, ರಾಯಚೂರು, ಮೈಸೂರು, ಚಿತ್ರದುರ್ಗ, ಹಾಸನ, ಬಳ್ಳಾರಿ, ಯಾದಗಿರಿ

ಈ ಮೇಲಿನ ಜಿಲ್ಲೆಯ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿದ್ದು. ತಿಂಗಳ 31ನೇ ತಾರೀಖಿನೊಳಗೆ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗೆ 7ನೇ ಕಂತಿನ ಹಣ ಜಮಾ ಆಗುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories