ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಅಮೃತ ಮಹೋತ್ಸವ ಯೋಜನೆಯಡಿ ಉಚಿತ ಲ್ಯಾಪ್ಟಾಪ್(Free Laptops) ಪಡೆಯಲು ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಸೂಕ್ತ ದಾಖಲೆಗಳನ್ನು ಮತ್ತೊಮ್ಮೆ ಅಪ್ಲೋಡ್ ಮಾಡಲು 10 ದಿನಗಳ ಕಾಲಾವಕಾಶ ನೀಡಲಾಗಿದೆ. ಹಾಗಿದ್ದರೆ ಬನ್ನಿ, ಈ ವಿಷಯದ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
BBMP(Bruhat Bengaluru Mahanagara Palike) ಅಮೃತ ಯೋಜನೆ:
ಬಿಬಿಎಂಪಿ ಅಮೃತ ಯೋಜನೆ(BBMP Amruth yojana) ಯು ಬೆಂಗಳೂರು ನಗರದ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್(Laptops)ಗಳನ್ನು ಒದಗಿಸುವ ಒಂದು ಉಪಕ್ರಮವಾಗಿದೆ. ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ಒದಗಿಸುವ ಮೂಲಕ ಅವರ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ 2022-23ನೇ ಸಾಲಿನಲ್ಲಿ ಬಿಬಿಎಂಪಿ ಅಮೃತ ಮಹೋತ್ಸವ ಲ್ಯಾಪ್ಟಾಪ್ ಯೋಜನೆಯನ್ನು ಮಂಡನೆ ಮಾಡಲಾಯಿತು. ಈಗಾಗಲೇ ಈ ಯೋಜನೆಯಡಿ ಹಲವಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ವಿದ್ಯಾರ್ಥಿ ಗಳು ಅರ್ಜಿ ಸಲ್ಲಿಸಿದ್ದರು ಕೆಲವೊಂದು ಅಗತ್ಯ ದಾಖಲೆಗಳನ್ನು ಇನ್ನೂ ಅಪ್ಲೋಡ್ ಮಾಡಿಲ್ಲ. ಹೀಗರುವಾಗ, ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅರ್ಹ ದಾಖಲೆಗಳನ್ನು ಅಪ್ಲೋಡ್ ಮಾಡಲು ಅವಕಾಶ ನೀಡಲಾಗಿದೆ ಎಂದು ಕಲ್ಯಾಣ ವಿಭಾಗದ ಸಹಾಯಕ ಆಯುಕ್ತರು ತಿಳಿಸಿದ್ದಾರೆ.
ಅರ್ಜಿಯ ಸ್ಥಿತಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡುವ ವಿಧಾನ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವೆಬ್ಸೈಟ್ಗೆ ಭೇಟಿ ನೀಡಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ತಿದ್ದುಪಡಿ ಮಾಡಬಹುದು. ಪಾಲಿಕೆಯ ವೆಬ್ಸೈಟ್ಗೆ ಭೇಟಿ ನೀಡಲು ಈ ಲಿಂಕ್ ಕ್ಲಿಕ್ ಮಾಡಿ: https://welfare.bbmpgov.in/ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು, ನಿಮ್ಮ ಅರ್ಜಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಅರ್ಜಿಯಲ್ಲಿ ತಿದ್ದುಪಡಿ ಮಾಡಲು, “ಅರ್ಜಿ ತಿದ್ದುಪಡಿ” ಲಿಂಕ್ ಕ್ಲಿಕ್ ಮಾಡಿ. ಇದಲ್ಲದೆ, ಹೊಸದಾಗಿ ದಾಖಲೆಗಳನ್ನು ಅಪ್ಲೋಡ್ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿರುತ್ತದೆ.
ಕಾರ್ಯಕ್ರಮಕ್ಕೆ ಅಗತ್ಯ ದಾಖಲೆಗಳ ಅಪ್ಲೋಡ್ಗೆ ಅಂತಿಮ ಅವಕಾಶ
ಫೆಬ್ರವರಿ 19 ರಿಂದ ಫೆಬ್ರವರಿ 29 ರವರೆಗೆ ನೀಡಲಾಗಿದೆ. ಅಂತಿಮ ದಿನಾಂಕದ ನಂತರ ದಾಖಲೆಗಳನ್ನು ಸಲ್ಲಿಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ, ಸಂಬಂಧಪಟ್ಟ ವಲಯದ ಸಹಾಯಕ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಕಲ್ಯಾಣ ವಿಭಾಗದ ವಿಶೇಷ ಆಯುಕ್ತರು ಪತ್ರಿಕಾ ಪ್ರಕಟಣೆ(Press release)ಯ ಮೂಲಕ ತಿಳಿಸಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಸಾಲಕ್ಕೆ ಅರ್ಜಿ ಹಾಕುವ ತುಂಬಾ ಜನರಿಗೆ ಈ ಮಾಹಿತಿ ಗೊತ್ತಿಲ್ಲ, ಹೀಗೆ ಮಾಡಿ ಸಿಬಿಲ್ ಜಾಸ್ತಿ ಆಗುತ್ತೆ
- ಗೃಹಲಕ್ಷ್ಮಿ 2000/- ಹಣ ಪಡೆಯಲು ಹೊಸ ರೂಲ್ಸ್ ಜಾರಿ, 5ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






