ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 92 ವಿಜ್ಞಾನಿ/ಇಂಜಿನಿಯರ್ (Scientist/Engineer ‘SC’) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ವಿದ್ಯಾರ್ಹತೆ, GATE ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.,
ಮುಖ ಮುಖ್ಯಾಂಶಗಳು
- ಒಟ್ಟು 92 ವಿಜ್ಞಾನಿ/ಇಂಜಿನಿಯರ್ (Scientist/Engineer ‘SC’) ಹುದ್ದೆಗಳ ನೇಮಕಾತಿ.
- BE/B.Tech ಹಾಗೂ GATE 2025/2026 ಅಂಕ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ.
- ಆನ್‌ಲೈನ್ ಅರ್ಜಿ ಸಲ್ಲಿಸಲು ಆಗಸ್ಟ್ 17, 2026 ಕೊನೆಯ ದಿನಾಂಕ.
ISRO ನೇಮಕಾತಿ 2026: 92 ವಿಜ್ಞಾನಿ ಹಾಗೂ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 2026ನೇ ಸಾಲಿನ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ದೇಶದ ವಿವಿಧ ಇಸ್ರೋ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 92 ವಿಜ್ಞಾನಿ/ಇಂಜಿನಿಯರ್ ‘SC’ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಸಿವಿಲ್, ಎಲೆಕ್ಟ್ರಿಕಲ್, ರೆಫ್ರಿಜರೇಷನ್ & ಏರ್ ಕಂಡೀಷನಿಂಗ್ ಹಾಗೂ ಆರ್ಕಿಟೆಕ್ಚರ್ ವಿಭಾಗದಲ್ಲಿ BE/B.Tech ಪೂರ್ಣಗೊಳಿಸಿ GATE 2025 ಅಥವಾ GATE 2026 ಅಂಕಗಳನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರು, ಹಾಸನ, ಹೈದರಾಬಾದ್, ಅಹಮದಾಬಾದ್, ಶ್ರೀಹರಿಕೋಟಾ, ತಿರುವನಂತಪುರಂ, ಮಹೇಂದ್ರಗಿರಿ ಹಾಗೂ ವಲಿಯಮಲಾದ ಇಸ್ರೋ ಕೇಂದ್ರಗಳಲ್ಲಿ ನಿಯೋಜಿಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ 2026ರ ಆಗಸ್ಟ್ 17ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ (Vacancy Details)
- ನೇಮಕಾತಿ ಸಂಸ್ಥೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
- ಹುದ್ದೆಯ ಹೆಸರು: ವಿಜ್ಞಾನಿ / ಇಂಜಿನಿಯರ್ ‘ಎಸ್‌ಸಿ’ (Scientist/Engineer ‘SC’)
- ಒಟ್ಟು ಹುದ್ದೆಗಳು: 92
- ಮೂಲ ವೇತನ (Basic Pay): ₹ 56,100/- ಪ್ರತಿ ತಿಂಗಳಿಗೆ (Pay Matrix Level 10) ಜೊತೆಗೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಸಾರಿಗೆ ಭತ್ಯೆಗಳು ಅನ್ವಯಿಸುತ್ತವೆ.
ವಿಭಾಗವಾರು ಖಾಲಿ ಹುದ್ದೆಗಳ ವಿವರ:
| ವಿಭಾಗ (Discipline) | ಖಾಲಿ ಹುದ್ದೆಗಳ ಸಂಖ್ಯೆ |
|---|---|
| ಎಲೆಕ್ಟ್ರಾನಿಕ್ಸ್ (Electronics) | 34 |
| ಮೆಕ್ಯಾನಿಕಲ್ (Mechanical) | 26 |
| ಕಂಪ್ಯೂಟರ್ ಸೈನ್ಸ್ (Computer Science) | 13 |
| ಸಿವಿಲ್ (Civil) | 10 |
| ಎಲೆಕ್ಟ್ರಿಕಲ್ (Electrical) | 04 |
| ರೆಫ್ರಿಜರೇಷನ್ & ಏರ್-ಕಂಡೀಷನಿಂಗ್ (R&AC) | 02 |
| ಆರ್ಕಿಟೆಕ್ಚರ್ (Architecture) | 02 |
| ಸಿವಿಲ್ – ಸ್ವಾಯತ್ತ ಸಂಸ್ಥೆ [PRL] (Civil – Autonomous Body) | 01 |
| ಒಟ್ಟು ಹುದ್ದೆಗಳು | 92 |
ಶೈಕ್ಷಣಿಕ ಅರ್ಹತೆ (Educational Qualification)
ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗಗಳಲ್ಲಿ ಕನಿಷ್ಠ ಶೇ. 65% ಅಂಕಗಳೊಂದಿಗೆ (ಅಥವಾ 10 ಪಾಯಿಂಟ್ ಸ್ಕೇಲ್‌ನಲ್ಲಿ 6.84 CGPA) ಬಿ.ಇ / ಬಿ.ಟೆಕ್ (BE/ B.Tech) ಅಥವಾ ತತ್ಸಮಾನ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು.
- ಆರ್ಕಿಟೆಕ್ಚರ್ (Architecture) ಹುದ್ದೆಗೆ, ಶೇ. 65% ಅಂಕಗಳೊಂದಿಗೆ ಆರ್ಕಿಟೆಕ್ಚರ್‌ನಲ್ಲಿ ಸ್ನಾತಕೋತ್ತರ ಪದವಿ (B.Arch) ಹಾಗೂ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ನೊಂದಣಿಯಾಗಿರಬೇಕು.
- ಗಮನಿಸಿ: ಎಲ್ಲಾ ಹುದ್ದೆಗಳಿಗೂ ಸಂಬಂಧಿಸಿದ ವಿಭಾಗದಲ್ಲಿ ಮಾನ್ಯವಾದ GATE ಅಂಕಗಳನ್ನು (Valid GATE Score) ಹೊಂದಿರುವುದು ಕಡ್ಡಾಯವಾಗಿದೆ.
ವಯೋಮಿತಿ ವಿವರ (Age Limit & Relaxation)
- ಗರಿಷ್ಠ ವಯೋಮಿತಿ: 17-08-2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು.
- ವಯೋಮಿತಿ ಸಡಿಲಿಕೆ: ಭಾರತ ಸರ್ಕಾರದ ನಿಯಮಗಳ ಪ್ರಕಾರ, ಮೀಸಲಾತಿ ಕೋರುವ SC/ ST/ OBC ಹಾಗೂ ಅಂಗವಿಕಲ (PwBD) ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಅರ್ಜಿ ಶುಲ್ಕ (Application Fee)
- ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ: ₹ 250/-
- ಮಹಿಳಾ / SC / ST / PwBD / ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ನೀಡಲಾಗಿದೆ (ಉಚಿತ)
- ಪಾವತಿ ವಿಧಾನ: ಅರ್ಜಿ ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕ (Internet Banking, UPI, Debit/Credit Card) ಭಾರತ್‌ಕೋಶ್ (Bharatkosh) ಪೋರ್ಟಲ್ ಮುಖಾಂತರವೇ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ (Selection Process)
ನೇಮಕಾತಿ ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಎರಡು ಹಂತಗಳನ್ನು ಒಳಗೊಂಡಿರುತ್ತದೆ:
- ಶಾರ್ಟ್‌ಲಿಸ್ಟಿಂಗ್ (Shortlisting): ಅಭ್ಯರ್ಥಿಗಳು ಪಡೆದಿರುವ GATE ಅಂಕಗಳ ಆಧಾರದ ಮೇಲೆ 1:7 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗುವುದು.
- ಸಂದರ್ಶನ (Interview): ತಾಂತ್ರಿಕ ಜ್ಞಾನ, ಸಾಮಾನ್ಯ ಅರಿವು ಮತ್ತು ಸಂವಹನ ಕೌಶಲ್ಯಗಳನ್ನು ಪರೀಕ್ಷಿಸಲು ಸಂದರ್ಶನ ನಡೆಸಲಾಗುವುದು.
- ಅಂತಿಮ ಆಯ್ಕೆ: ಅಂತಿಮ ಆಯ್ಕೆ ಪಟ್ಟಿಯನ್ನು ತಯಾರಿಸುವಾಗ GATE ಅಂಕಗಳಿಗೆ ಶೇ. 50% ರಷ್ಟು ಮತ್ತು ಸಂದರ್ಶನದ ಅಂಕಗಳಿಗೆ ಶೇ. 50% ರಷ್ಟು ಪ್ರಾಮುಖ್ಯತೆ (Weightage) ನೀಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ? (How to Apply)
Step 1: ಇಸ್ರೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: www.isro.gov.in
Step 2: “Careers” ವಿಭಾಗಕ್ಕೆ ತೆರಳಿ, Scientist/Engineer ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ವಿವರವಾಗಿ ಓದಿಕೊಳ್ಳಿ.
Step 3: “Apply Online” ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಂದಣಿ (Registration) ಪ್ರಕ್ರಿಯೆ ಪೂರ್ಣಗೊಳಿಸಿ.
Click Here to Apply Now: Direct link

Step 4: ಆನ್‌ಲೈನ್ ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
Step 5: ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (ಗರಿಷ್ಠ 50kb, .jpg) ಹಾಗೂ ಸಹಿ (ಗರಿಷ್ಠ 50kb, .jpg) ಮತ್ತು GATE Score Card (PDF) ಅನ್ನು ಅಪ್‌ಲೋಡ್ ಮಾಡಿ.
Step 6: ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
Step 7: ಕೊನೆಯದಾಗಿ, ಅರ್ಜಿ ನಮೂನೆಯನ್ನು ‘Submit’ ಮಾಡಿ ಹಾಗೂ ಭವಿಷ್ಯದ ಉಲ್ಲೇಖಕ್ಕಾಗಿ ರಿಜಿಸ್ಟ್ರೇಷನ್ ನಂಬರ್ ಇರುವ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು (Important Dates)
- ಅಧಿಸೂಚನೆ ದಿನಾಂಕ / ಅರ್ಜಿ ಸಲ್ಲಿಕೆ ಪ್ರಾರಂಭ: 28 ಜುಲೈ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಆಗಸ್ಟ್ 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 19 ಆಗಸ್ಟ್ 2026
Download Official Notification PDF
Apply Online for 92 Scientist, Engineer Posts
ISRO Recruitment 2026 : Important Links
- Apply Online: Click Here
- Official Notification PDF: Click here
- Official Website: Click here
- Join Telegram Channel: Click Here
- Join WhatsApp Channel: Click Here
- Download Mobile App: Click Here
ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್
ಇದೇ ರೀತಿಯ ನಿಖರ ಸುದ್ದಿಗಳಿಗೆ ನಮ್ಮ ನೀಡ್ಸ್ ಪಬ್ಲಿಕ್ ಆಪ್ ಡೌನ್ಲೋಡ್ App ಮಾಡಿ
ಈ ಮಾಹಿತಿಗಳನ್ನು ಓದಿ:

ಲಿಂಗರಾಜ ರಾಮಪುರ (Lingaraj Ramapur) ಅವರು NeedsOfPublic.in ನ ಸಂಸ್ಥಾಪಕರು ಮತ್ತು ಪ್ರಧಾನ ಸಂಪಾದಕರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಐಟಿ (BCA, MCA) ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ (M.A) ಪದವಿ ಪಡೆದಿರುವ ಇವರು ತಾಂತ್ರಿಕ ಮತ್ತು ಮಾಧ್ಯಮ ರಂಗದ ಅಪರೂಪದ ಸಂಗಮವಾಗಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮಕ್ಕೆ ಕಾಲಿಡುವ ಮುನ್ನ ಬೆಂಗಳೂರಿನ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ Infosys ಮತ್ತು Concentrix ನಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಕೆಲಸ ಮಾಡಿದ ಜಾಗತಿಕ ಅನುಭವ ಇವರಿಗಿದೆ. 2017 ರಿಂದ ಮಾಧ್ಯಮ ರಂಗದಲ್ಲಿದ್ದು, ಕಳೆದ 9 ವರ್ಷಗಳಿಂದ ಡೇಟಾ-ಆಧಾರಿತ ವರದಿಗಾರಿಕೆ, ನಿಖರವಾದ ಫ್ಯಾಕ್ಟ್-ಚೆಕಿಂಗ್ ಮತ್ತು ಸಾರ್ವಜನಿಕರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವ ಸಂಪಾದಕೀಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.


WhatsApp Group




Leave a Reply