yadgir zp recruitment apply now

Yadgir ZP Recruitment 2026:  12 ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯಾದಗಿರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 12 ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 27ರೊಳಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಸಂಪೂರ್ಣ ಮಾಹಿತಿ ಇಲ್ಲಿದೆ.,

Highlights:

  • ಹುದ್ದೆಯ ಹೆಸರು: ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 27, 2026.
  • ವಿದ್ಯಾರ್ಹತೆ: ಪಿಯುಸಿ (PUC) ಜೊತೆಗೆ ಲೈಬ್ರರಿ ಸೈನ್ಸ್ ಸರ್ಟಿಫಿಕೇಟ್ ಮತ್ತು ಕಂಪ್ಯೂಟರ್ ಕೋರ್ಸ್.

ಯಾದಗಿರಿ ಜಿಲ್ಲಾ ಪಂಚಾಯತ್ ನೇಮಕಾತಿ 2026: 12 ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

ಯಾದಗಿರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಲಭ್ಯವಾಗಿದೆ. ಯಾದಗಿರಿ ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ “ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕ” (Library Supervisor) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

yadgir zp recruitment 2026 notification

ಆಸಕ್ತ ಅಭ್ಯರ್ಥಿಗಳು 2026ರ ಜುಲೈ 27ರೊಳಗೆ ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಗ್ರಾಮ ಪಂಚಾಯತ್ ವಾರು ಖಾಲಿ ಇರುವ ಹುದ್ದೆಗಳ ವಿವರ

ಯಾವ ತಾಲೂಕಿನ ಯಾವ ಗ್ರಾಮ ಪಂಚಾಯತಿಯಲ್ಲಿ ಹುದ್ದೆ ಖಾಲಿ ಇದೆ ಹಾಗೂ ಅದರ ಮೀಸಲಾತಿ (ಲಂಬ ಮತ್ತು ಸಮತಳ) ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ತಾಲೂಕುಗ್ರಾಮ ಪಂಚಾಯತಿ ಹೆಸರುಹುದ್ದೆಗಳ ಸಂಖ್ಯೆಲಂಬ ಮೀಸಲಾತಿಸಮತಳ ಮೀಸಲಾತಿ
ಯಾದಗಿರಿವರ್ಕನಳ್ಳಿ1ಸಾಮಾನ್ಯಗ್ರಾಮೀಣ ಅಭ್ಯರ್ಥಿ
ಯಾದಗಿರಿಠಾಣಗುಂದಿ12ಎಮಹಿಳೆ
ಸುರಪುರಅರಕೇರಾ (ಕೆ) (ಬಿಜಾಸಪೂರ)1ಸಾಮಾನ್ಯಇತರೆ
ಗುರಮಿಠಕಲ್ಅನಪೂರ1ಪ.ಜಾಗ್ರಾಮೀಣ ಅಭ್ಯರ್ಥಿ
ವಡಗೇರಾವಡಗೇರಾ1ಸಾಮಾನ್ಯಮಹಿಳೆ
ಹುಣಸಗಿಮೂದುನೂರ (ಕೆ)13ಬಿಇತರೆ
ಯಾದಗಿರಿಬಂದಳ್ಳಿ1ಸಾಮಾನ್ಯಗ್ರಾಮೀಣ ಅಭ್ಯರ್ಥಿ
ಯಾದಗಿರಿಕಿಲ್ಲನಕೇರಾ13ಎಇತರೆ
ಹುಣಸಗಿನಾರಾಯಣಪೂರ1ಸಾಮಾನ್ಯಮಾಜಿ ಸೈನಿಕ
ಹುಣಸಗಿಅರಕೇರಾ.ಜೆ12ಎಗ್ರಾಮೀಣ ಅಭ್ಯರ್ಥಿ
ಗುರಮಿಠಕಲ್ಪುಟಪಾಕ1ಸಾಮಾನ್ಯಮಹಿಳೆ
ಹುಣಸಗಿರಾಜನಕೊಳ್ಳೂರು1ಪ.ಜಾಅಂಗವಿಕಲ

(ಸೂಚನೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಗ್ರಾಮ ಪಂಚಾಯತಿಯ ನಿವಾಸಿಯಾಗಿರತಕ್ಕದ್ದು. ನಿವಾಸಿ ಲಭ್ಯವಿಲ್ಲದಿದ್ದಲ್ಲಿ ತಾಲೂಕಿನ ಹತ್ತಿರದ ಗ್ರಾ.ಪಂ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.)

ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ

ಶೈಕ್ಷಣಿಕ ಅರ್ಹತೆ (Educational Qualification):

  • ಅಭ್ಯರ್ಥಿಗಳು ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ (ಪಿಯುಸಿ / PUC) ಉತ್ತೀರ್ಣರಾಗಿರಬೇಕು.
  • ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್‌ನಲ್ಲಿ (Library Science Course) ಪ್ರಮಾಣ ಪತ್ರ ಪಡೆದಿರತಕ್ಕದ್ದು.
  • ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ ಮೂರು ತಿಂಗಳ ಕಂಪ್ಯೂಟ‌ರ್ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ (Age Limit): ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ (10-06-2026 ರಂತೆ ಅನ್ವಯ) ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿಯ ವಿವರ ಹೀಗಿದೆ:

  • ಸಾಮಾನ್ಯ ವರ್ಗ (GM) ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷಗಳು.
  • ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ: ಗರಿಷ್ಠ 43 ವರ್ಷಗಳು.
  • ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1 ರ ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷಗಳು. (ಸರ್ಕಾರದ ನಿಯಮಗಳ ಪ್ರಕಾರ ಮಾಜಿ ಸೈನಿಕ, ಅಂಗವಿಕಲ, ವಿಧವಾ ಹಾಗೂ ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.)

ಅರ್ಜಿ ಶುಲ್ಕದ ವಿವರ (Application Fee)

ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿರುವುದರಿಂದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (ಉಚಿತ).

ಆಯ್ಕೆ ವಿಧಾನ (Selection Process)

  1. ಮೆರಿಟ್ ಪಟ್ಟಿ: ಶೈಕ್ಷಣಿಕ ಅರ್ಹತೆಯಲ್ಲಿನ (PUC) ಮೆರಿಟ್ ಮತ್ತು ರೋಸ್ಟರ್ ಮೀಸಲಾತಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
  2. ಆದ್ಯತೆ: ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪದವಿ ಪಡೆದಿರುವ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಮಾತ್ರ, ಕೇವಲ ಪಿಯುಸಿ ಅಂಕಗಳ ಆಧಾರದ ಮೇಲೆ ಆಯ್ಕೆ ಪರಿಗಣಿಸಲಾಗುವುದು.
  3. ಸಮಾನ ಅಂಕಗಳು: ಇಬ್ಬರು ಅಭ್ಯರ್ಥಿಗಳು ಸಮಾನ ಅಂಕ ಹೊಂದಿದ್ದರೆ, ವಯಸ್ಸಿನಲ್ಲಿ ಹಿರಿಯರಾದವರನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ (How to Apply)

Step 1: ಅಧಿಕೃತ ವೆಬ್‌ಸೈಟ್ ಭೇಟಿ ಮೊದಲಿಗೆ ಯಾದಗಿರಿ ಜಿಲ್ಲಾ ಪಂಚಾಯತ್‌ನ ಅಧಿಕೃತ ವೆಬ್‌ಸೈಟ್ https://zpyadgiri.karnataka.gov.in ಗೆ ಭೇಟಿ ನೀಡಿ.

Step 2: ಪರಿಷ್ಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.

Step 3: ನಿಮ್ಮ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ, ಲೈಬ್ರರಿ ಮತ್ತು ಕಂಪ್ಯೂಟರ್ ಸರ್ಟಿಫಿಕೇಟ್, ವಾಸಸ್ಥಳ ಪ್ರಮಾಣ ಪತ್ರ (ತಹಶೀಲ್ದಾರ್ ಅವರಿಂದ ಪಡೆದದ್ದು), ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರಗಳ ದೃಢೀಕೃತ (Attested) ಸ್ಕ್ಯಾನ್ ಪ್ರತಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

Step 4: ವೆಬ್‌ಸೈಟ್‌ನಲ್ಲಿ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ವಿವರಗಳನ್ನು ಭರ್ತಿ ಮಾಡಿ ಹಾಗೂ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

yadgir

Step 5: ಕೊನೆಯದಾಗಿ ಅರ್ಜಿಯನ್ನು ಸಬ್ಮಿಟ್ (Submit) ಮಾಡಿ, ಮುಂದಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

    ಪ್ರಮುಖ ದಿನಾಂಕಗಳು (Important Dates)

    • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 13-07-2026 PDF
    • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-07-2026 PDF

    (ವಿಶೇಷ ಸೂಚನೆ: ಅರ್ಜಿಗಳನ್ನು ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಸಲ್ಲಿಸಲು ಅವಕಾಶ ಇರುವುದಿಲ್ಲ. ಕೇವಲ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.)

    Zilla Panchayat Yadgiri Recruitment 2026: Important Links

    ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್



    WhatsApp Group Join Now
    Telegram Group Join Now

    Leave a Reply

    Your email address will not be published. Required fields are marked *


    Popular Categories