ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ IET India Scholarship Award 2026ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ₹20 ಲಕ್ಷ ಮೌಲ್ಯದ ಸ್ಕಾಲರ್‌ಶಿಪ್, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದ ನಗದು ಬಹುಮಾನ, ಅರ್ಹತೆ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ…
- *ಅರ್ಹತೆ: 1ನೇ ವರ್ಷದಿಂದ 4ನೇ ವರ್ಷದವರೆಗಿನ ಇಂಜಿನಿಯರಿಂಗ್ (UG) ವಿದ್ಯಾರ್ಥಿಗಳಿಗೆ ಅವಕಾಶ.
- *ವಿದ್ಯಾರ್ಥಿವೇತನ: ರಾಷ್ಟ್ರೀಯ ವಿಜೇತರಿಗೆ ಗರಿಷ್ಠ ₹6 ಲಕ್ಷದವರೆಗೆ ನಗದು ಬಹುಮಾನ.
- *ಕೊನೆಯ ದಿನಾಂಕ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 5, 2026 ಕಡೇ ದಿನ.
ಬೆಂಗಳೂರು: ಭಾರತದ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಪ್ರತಿಷ್ಠಿತ ‘ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ’ (IET) ಸಂಸ್ಥೆಯು ‘IET ಇಂಡಿಯಾ ಸ್ಕಾಲರ್‌ಶಿಪ್ ಅವಾರ್ಡ್ 2026’ ಅನ್ನು ಘೋಷಿಸಿದೆ.
ಈ ಬಾರಿಯ 10ನೇ ಆವೃತ್ತಿಯಲ್ಲಿ ಬಹುಮಾನದ ಮೊತ್ತವನ್ನು ದುಪ್ಪಟ್ಟು ಮಾಡಲಾಗಿದ್ದು, ಒಟ್ಟು ₹20 ಲಕ್ಷ ಮೌಲ್ಯದ ಸ್ಕಾಲರ್‌ಶಿಪ್‌ಗಳನ್ನು ವಿತರಿಸಲಾಗುತ್ತಿದೆ. ಕೇವಲ ಅಂಕಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಕ್ರಿಯಾಶೀಲತೆ, ನಾಯಕತ್ವ ಗುಣ ಹಾಗೂ ಸಮಸ್ಯೆ ಪರಿಹರಿಸುವ (Problem-solving) ಕೌಶಲ್ಯವನ್ನು ಆಧರಿಸಿ ಈ ಪ್ರತಿಷ್ಠಿತ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಇದರ ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ:.
ಬಹುಮಾನದ ವಿವರಗಳು (Scholarship Rewards)
ಈ ಸ್ಕಾಲರ್‌ಶಿಪ್ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ನಗದು ಬಹುಮಾನಗಳನ್ನು ವಿತರಿಸಲಾಗುತ್ತದೆ:
ರಾಷ್ಟ್ರೀಯ ಮಟ್ಟದ ವಿಜೇತರಿಗೆ (National Finals):
- ಪ್ರಥಮ ಸ್ಥಾನ: ₹6,00,000 (ಜೊತೆಗೆ ಟ್ರೋಫಿ, ಪ್ರಮಾಣಪತ್ರ ಹಾಗೂ 1 ವರ್ಷದ IET ಸದಸ್ಯತ್ವ).
- ದ್ವಿತೀಯ ಸ್ಥಾನ (First Runner-up): ₹3,00,000.
- ತೃತೀಯ ಸ್ಥಾನ (Second Runner-up): ₹2,00,000.
ಪ್ರಾದೇಶಿಕ ಮಟ್ಟದ ವಿಜೇತರಿಗೆ (Regional Rounds):
- ಪ್ರಾದೇಶಿಕ ವಿಜೇತರಿಗೆ: ₹1,00,000.
- ಪ್ರಾದೇಶಿಕ ರನ್ನರ್-ಅಪ್‌ಗೆ: ₹75,000. (ಸೂಚನೆ: ಪ್ರಾದೇಶಿಕ ಸುತ್ತಿನಲ್ಲಿ ಭಾಗವಹಿಸುವ ಎಲ್ಲರಿಗೂ ₹2000 ಮೌಲ್ಯದ ಗಿಫ್ಟ್ ಹ್ಯಾಂಪರ್ ನೀಡಲಾಗುತ್ತದೆ).
ಅರ್ಹತಾ ಮಾನದಂಡಗಳು (Eligibility Criteria)
- ವ್ಯಾಸಂಗ: AICTE ಅಥವಾ UGC ಯಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪೂರ್ಣಾವಧಿ (Full-time) ಎಂಜಿನಿಯರಿಂಗ್ ಓದುತ್ತಿರುವ 1ನೇ ವರ್ಷದಿಂದ 4ನೇ ವರ್ಷದವರೆಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ವಿಭಾಗ (Branch): ಯಾವುದೇ ಬ್ರ್ಯಾಂಚ್‌ನ ವಿದ್ಯಾರ್ಥಿಗಳು ಹಾಗೂ ಲ್ಯಾಟ್ರಲ್ ಎಂಟ್ರಿ (Lateral Entry) ಮೂಲಕ 2ನೇ ವರ್ಷಕ್ಕೆ ಸೇರಿದ ವಿದ್ಯಾರ್ಥಿಗಳೂ ಅರ್ಹರು.
- ಅಂಕಗಳು: ಇದುವರೆಗೂ ಪೂರ್ಣಗೊಂಡಿರುವ ಎಲ್ಲಾ ಸೆಮಿಸ್ಟರ್‌ಗಳಲ್ಲಿ ಕನಿಷ್ಠ ಶೇ. 60% ಅಂಕ ಅಥವಾ 6.0 CGPA ಪಡೆದಿರಬೇಕು.
- ಬ್ಯಾಕ್‌ಲಾಗ್: ಎಲ್ಲಾ ವಿಷಯಗಳನ್ನು ಮೊದಲ ಪ್ರಯತ್ನದಲ್ಲೇ (Single attempt) ಪಾಸ್ ಮಾಡಿರಬೇಕು. ಯಾವುದೇ ಸಕ್ರಿಯ ಬ್ಯಾಕ್‌ಲಾಗ್ ಇರಬಾರದು.
- ವಯೋಮಿತಿ: ಅರ್ಜಿ ಸಲ್ಲಿಸಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ (Evaluation Process)
ಆಯ್ಕೆ ಪ್ರಕ್ರಿಯೆಯು ನಾಲ್ಕು ಕಠಿಣ ಹಂತಗಳನ್ನು ಒಳಗೊಂಡಿರುತ್ತದೆ:
- ಅರ್ಜಿ ಪರಿಶೀಲನೆ: ಶೈಕ್ಷಣಿಕ ಅಂಕಗಳು (52%), ಪಠ್ಯೇತರ ಚಟುವಟಿಕೆಗಳು (20%), ವೃತ್ತಿಪರ ಚಟುವಟಿಕೆಗಳು (13%) ಹಾಗೂ IET ಸದಸ್ಯತ್ವದ (15%) ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
- ಆನ್‌ಲೈನ್ ಪರೀಕ್ಷೆ (STEM Test): ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಷಯಗಳ ಕುರಿತಾದ ತಾಂತ್ರಿಕ ಪರೀಕ್ಷೆ.
- ಪ್ರಾದೇಶಿಕ ಸುತ್ತು (Regional Rounds): ಸ್ಥಳೀಯ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಕಂಡುಕೊಂಡ ಪರಿಹಾರವನ್ನು ತೀರ್ಪುಗಾರರ ಮುಂದೆ ಮಂಡಿಸುವುದು.
- ರಾಷ್ಟ್ರೀಯ ಫೈನಲ್ಸ್: ಪ್ರಾದೇಶಿಕ ವಿಜೇತರು ರಾಷ್ಟ್ರಮಟ್ಟದ ಫೈನಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಪ್ರಮುಖ ದಿನಾಂಕಗಳು (Important Dates)
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 5, 2026.
- ಆನ್‌ಲೈನ್ ಟೆಸ್ಟ್ ಸ್ಲಾಟ್ ಕಾಯ್ದಿರಿಸುವಿಕೆ: ಜುಲೈ 8 ರಿಂದ ಜುಲೈ 10, 2026.
- ಆನ್‌ಲೈನ್ STEM ಪರೀಕ್ಷೆ ದಿನಾಂಕ: ಜುಲೈ 15 ರಿಂದ ಜುಲೈ 17, 2026.
- ಪ್ರಾದೇಶಿಕ ಸುತ್ತುಗಳು: ಜುಲೈ 22 ರಿಂದ ಸೆಪ್ಟೆಂಬರ್ 14, 2026.
- ರಾಷ್ಟ್ರೀಯ ಫೈನಲ್ಸ್: ಸೆಪ್ಟೆಂಬರ್ 2026 ರ ಅಂತ್ಯದಲ್ಲಿ.
ಅರ್ಜಿ ಸಲ್ಲಿಸುವ ವಿಧಾನ (How to Apply)
- ಅರ್ಜಿ ಸಲ್ಲಿಕೆಯು ಸಂಪೂರ್ಣ ಉಚಿತವಾಗಿದ್ದು, ಅಧಿಕೃತ IET ಪೋರ್ಟಲ್ ಅಥವಾ ‘ಬಡ್ಡಿ4ಸ್ಟಡಿ’ (Buddy4Study) ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
- ಆರಂಭಿಕ ಹಂತದಲ್ಲಿ ಯಾವುದೇ ದಾಖಲೆಗಳನ್ನು (Documents) ಅಪ್‌ಲೋಡ್ ಮಾಡುವ ಅಗತ್ಯವಿಲ್ಲ. ಕೇವಲ ನಿಖರವಾದ ಶೈಕ್ಷಣಿಕ ಮತ್ತು ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿದರೆ ಸಾಕು. ಮುಂದಿನ ಹಂತಕ್ಕೆ ಆಯ್ಕೆಯಾದ ನಂತರವಷ್ಟೇ ಅಂಕಪಟ್ಟಿ ಹಾಗೂ ಕಾಲೇಜು ದೃಢೀಕರಣ ಪತ್ರಗಳನ್ನು ಒದಗಿಸಬೇಕಾಗುತ್ತದೆ.
Step 1: ನೇರವಾಗಿ IET ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
Apply Now: IET India Scholarship Application Portal.

Step 2: ಪೋರ್ಟಲ್ HOME ಪೇಜ್ ನ ಬಲ ಭಾಗದ ಮೇಲೆ ಕಾಣಿಸುವ APPLY NOW ಮೇಲೆ ಕ್ಲಿಕ್ ಮಾಡಿ, ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ SUBMIT ಮಾಡಿ

Step 3: ಆರಂಭಿಕ ಹಂತದಲ್ಲಿ ಯಾವುದೇ ದಾಖಲೆಗಳನ್ನು (Documents) ಅಪ್‌ಲೋಡ್ ಮಾಡುವ ಅಗತ್ಯವಿಲ್ಲ. ಕೇವಲ ನಿಖರವಾದ ಶೈಕ್ಷಣಿಕ ಮತ್ತು ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿದರೆ ಸಾಕು. Step 4: ಮುಂದಿನ ಹಂತಕ್ಕೆ ಆಯ್ಕೆಯಾದ ನಂತರವಷ್ಟೇ ಅಂಕಪಟ್ಟಿ ಹಾಗೂ ಕಾಲೇಜು ದೃಢೀಕರಣ ಪತ್ರಗಳನ್ನು ಒದಗಿಸಬೇಕಾಗುತ್ತದೆ.
Step 5: ನಂತರ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳು Stem ಎಕ್ಸಾಮ್ online ಪರೀಕ್ಷೆ ಯಲ್ಲಿ ಉತ್ತೀರ್ಣರಾದಲ್ಲಿ ನಂತರ ಪ್ರಾದೇಶಿಕ ಸತ್ತು ಮತ್ತು ರಾಷ್ಟ್ರೀಯ ಫೈನಾನ್ಸ್ ನಲ್ಲಿ ಭಾಗವಹಿಸಬಹುದು.
ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೂ ಮುನ್ನವೇ ಅಗತ್ಯ ಮಾಹಿತಿಗಳನ್ನು ಕಲೆಹಾಕಿ, ಅಧಿಕೃತ ವೆಬ್‌ಸೈಟ್ ಮೂಲಕ ತಪ್ಪದೇ ಅರ್ಜಿ ಸಲ್ಲಿಸುವುದು ಉತ್ತಮ.
Apply Now for IET India Scholarship 2026
ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್
ಇದೇ ರೀತಿಯ ನಿಖರ ಸುದ್ದಿಗಳಿಗೆ ನಮ್ಮ ನೀಡ್ಸ್ ಪಬ್ಲಿಕ್ ಆಪ್ ಡೌನ್ಲೋಡ್ App ಮಾಡಿ
ಈ ಮಾಹಿತಿಗಳನ್ನು ಓದಿ

ಲಿಂಗರಾಜ ರಾಮಪುರ (Lingaraj Ramapur) ಅವರು NeedsOfPublic.in ನ ಸಂಸ್ಥಾಪಕರು ಮತ್ತು ಪ್ರಧಾನ ಸಂಪಾದಕರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಐಟಿ (BCA, MCA) ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ (M.A) ಪದವಿ ಪಡೆದಿರುವ ಇವರು ತಾಂತ್ರಿಕ ಮತ್ತು ಮಾಧ್ಯಮ ರಂಗದ ಅಪರೂಪದ ಸಂಗಮವಾಗಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮಕ್ಕೆ ಕಾಲಿಡುವ ಮುನ್ನ ಬೆಂಗಳೂರಿನ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ Infosys ಮತ್ತು Concentrix ನಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಕೆಲಸ ಮಾಡಿದ ಜಾಗತಿಕ ಅನುಭವ ಇವರಿಗಿದೆ. 2017 ರಿಂದ ಮಾಧ್ಯಮ ರಂಗದಲ್ಲಿದ್ದು, ಕಳೆದ 9 ವರ್ಷಗಳಿಂದ ಡೇಟಾ-ಆಧಾರಿತ ವರದಿಗಾರಿಕೆ, ನಿಖರವಾದ ಫ್ಯಾಕ್ಟ್-ಚೆಕಿಂಗ್ ಮತ್ತು ಸಾರ್ವಜನಿಕರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವ ಸಂಪಾದಕೀಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.


WhatsApp Group




Leave a Reply