💡 ಪ್ರಮುಖ ಹೈಲೈಟ್ಸ್: 5ನೇ ತಾರೀಖಿನೊಳಗೆ ವೇತನ ಕಡ್ಡಾಯ!
- ಗುತ್ತಿಗೆದಾರರು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಕಡ್ಡಾಯವಾಗಿ ನೌಕರರ ಬ್ಯಾಂಕ್ ಖಾತೆಗೆ ವೇತನ ಜಮಾ ಮಾಡಬೇಕು.
- 1 ದಿನಕ್ಕೆ 8 ಗಂಟೆಗಳ ಕೆಲಸ ಮಾತ್ರ. ಹೆಚ್ಚುವರಿ ಕೆಲಸ ಮಾಡಿದರೆ ದ್ವಿಗುಣ (Double) ಭತ್ಯೆ ನೀಡಬೇಕು.
- ಮಾಲೀಕರು ತಮ್ಮ ಪಾಲಿನ ESI ಮತ್ತು PF ಹಣವನ್ನು ಸೇರಿಸಿ ನೌಕರರ ಖಾತೆಗೆ ಕಡ್ಡಾಯವಾಗಿ ಜಮಾ ಮಾಡಬೇಕು.
ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ‘ಹೊರಗುತ್ತಿಗೆ’ (Outsourcing) ಆಧಾರದ ಮೇಲೆ ಲಕ್ಷಾಂತರ ಯುವಕ-ಯುವತಿಯರು ಹಗಲಿರುಳು ದುಡಿಯುತ್ತಿದ್ದಾರೆ. ಆದರೆ, ಗುತ್ತಿಗೆದಾರರು ಸರಿಯಾಗಿ ಸಂಬಳ ಕೊಡುತ್ತಿಲ್ಲ, ಪಿಎಫ್ (PF) ಕಟ್ಟುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದವು.
ಇದಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರವು ಹೊರಗುತ್ತಿಗೆ ನೌಕರರ ಕನಿಷ್ಠ ವೇತನ (Minimum Wage), ದುಡಿಮೆಯ ಗಂಟೆಗಳು, ಇ.ಎಸ್.ಐ (ESI) ಮತ್ತು ಪಿ.ಎಫ್ ಕಡಿತದ ಬಗ್ಗೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಮತ್ತು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಈ ಆದೇಶವನ್ನು ಉಲ್ಲಂಘಿಸುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದೆ.
ಹೊರಗುತ್ತಿಗೆ ನೌಕರರಾಗಿ ನೀವು ಕೆಲಸ ಮಾಡುತ್ತಿದ್ದರೆ, ಸರ್ಕಾರ ನಿಮಗಾಗಿ ರೂಪಿಸಿರುವ ಈ ಹೊಸ ನಿಯಮಗಳು ಕಡ್ಡಾಯವಾಗಿ ತಿಳಿದಿರಲೇಬೇಕು:
ಸರ್ಕಾರದ ಹೊಸ ಆದೇಶದ ಪ್ರಮುಖ ನಿಯಮಗಳು:
ಹೊರಗುತ್ತಿಗೆ ನೌಕರರನ್ನು ಶೋಷಣೆಯಿಂದ ರಕ್ಷಿಸಲು ಕಾರ್ಮಿಕ ಇಲಾಖೆಯ (Labour Department) ಕನಿಷ್ಠ ವೇತನ ಕಾಯ್ದೆಯಡಿ ಈ ಕೆಳಗಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಸೂಚಿಸಿದೆ:
- ರಜಾ ದಿನಗಳ ವೇತನ: ತಿಂಗಳ ವೇತನವನ್ನು ಲೆಕ್ಕ ಹಾಕುವಾಗ, ಆ ತಿಂಗಳ 4 ರಜಾದಿನಗಳನ್ನು (Holidays) ಕೂಡ ಪರಿಗಣಿಸಿ ವೇತನ ಪಾವತಿಸಬೇಕು.
- ರಜಾ ದಿನಗಳಲ್ಲಿ ಕೆಲಸ ಮಾಡಿದರೆ: ಒಂದು ವೇಳೆ ನೌಕರರು ತಿಂಗಳ 4 ರಜಾ ದಿನಗಳಲ್ಲಿಯೂ ಕೆಲಸ ಮಾಡಲು ಇಚ್ಛಿಸಿದರೆ, ಅವರಿಗೆ ಆ ದಿನಕ್ಕೆ ದ್ವಿಗುಣ ದಿನಭತ್ಯೆ (Double Pay) ನೀಡಬೇಕು.
- ಅರೆಕಾಲಿಕ ಕೆಲಸ: ಒಂದು ವೇಳೆ 8 ಗಂಟೆಗಳಿಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ, ಅವರು ಕೆಲಸ ಮಾಡಿದ ಗಂಟೆಗಳ ಲೆಕ್ಕದಲ್ಲಿ ಕನಿಷ್ಠ ವೇತನವನ್ನು ಪಾವತಿಸಬೇಕು.
- ಬಯೋಮೆಟ್ರಿಕ್ ಹಾಜರಾತಿ: ನೌಕರರ ಹಾಜರಾತಿಯನ್ನು ಆಧಾರ್ ಲಿಂಕ್ ಆಗಿರುವ AEBAS (ಬಯೋಮೆಟ್ರಿಕ್) ಮುಖಾಂತರವೇ ಕಡ್ಡಾಯವಾಗಿ ನಿರ್ವಹಿಸಬೇಕು.
- ಅಕ್ರಮ ಕಡಿತ ನಿಷೇಧ: ವೇತನದಲ್ಲಿ ಯಾವುದೇ ರೀತಿಯ ಕ್ರಮಬದ್ಧವಲ್ಲದ ಕಡಿತಗಳನ್ನು (Illegal Deductions) ಮಾಡುವಂತಿಲ್ಲ.
| ಟೆಂಡರ್ ಪಡೆಯುವ ಏಜೆನ್ಸಿಗಳಿಗೆ ಹೊಸ ಷರತ್ತುಗಳು |
|---|
| ಟೆಂಡರ್‌ನಲ್ಲಿ ಕನಿಷ್ಠ ವೇತನವನ್ನು ಬಿಟ್ಟು ಕೇವಲ ‘ಸೇವಾ ಶುಲ್ಕ’ (Service Charge) ಮಾತ್ರ ನಮೂದಿಸಲು ಅವಕಾಶ. |
| ಹಿಂದಿನ ವರ್ಷಗಳಲ್ಲಿ ನೌಕರರ ಇ.ಎಸ್.ಐ ಮತ್ತು ಪಿ.ಎಫ್ ವಂತಿಗೆಯನ್ನು ಸರಿಯಾಗಿ ಪಾವತಿಸಿರುವ ದಾಖಲೆ ಕಡ್ಡಾಯ. |
| ಈ ಹಿಂದೆ ಕಾರ್ಮಿಕ ಕಾನೂನಿನ ಉಲ್ಲಂಘನೆಗಾಗಿ ಯಾವುದೇ ನ್ಯಾಯಾಲಯದಿಂದ ದಂಡನೆಗೊಳಗಾಗಿರಬಾರದು. |
ಅಧಿಕೃತ ಪ್ರತಿಯ ಲೇಖನಗಳು ಸ್ಪಷ್ಟವಾಗಿ ಕಾಣದಿದ್ದಲ್ಲಿ ಪ್ರತಿಗಳ ಕೆಳಗಡೆ ಲೇಖನವಿದೆ ಓದಿಕೊಳ್ಳಬಹುದು




1) ಹೊರಗುತ್ತಿಗೆ ಸಿಬ್ಬಂದಿಗಳನ್ನು ಭದ್ರತಾ ಏಜೆನ್ಸಿ ಮುಖಾಂತರ ನೇಮಿಸಿಕೊಂಡಿದ್ದಲ್ಲಿ, “ಭದ್ರತಾ ಏಜೆನ್ಸಿಗಳಲ್ಲಿ ಉದ್ಯೋಗ (ಕಛೇರಿ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗಳನ್ನು ಏಜೆನ್ಸಿಯ
ಮೂಲಕ ನಿಯೋಜಿಸಿಕೊಳ್ಳುವ ಎಲ್ಲಾ ಸಂಸ್ಥೆಗಳು ಹಾಗೂ ಉದ್ದಿಮೆಗಳ ಸಹಿತ)”, ಅನುಸೂಚಿತ ಉದ್ದಿಮೆಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 18 ಎಲ್‌ಡಬ್ಲ್ಯೂಎ 2022, ದಿನಾಂಕ: 28.07.2022ರಲ್ಲಿ ನಿಗದಿಪಡಿಸಿರುವ ಕನಿಷ್ಠ ವೇತನ ದರಗಳನ್ನು ಪಾವತಿಸತಕ್ಕದ್ದು.
2) ಇತರೆ ಮಾನವ ಸಂಪನ್ಮೂಲ ಏಜೆನ್ಸಿಗಳಿಂದ ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇಮಿಸಿಕೊಂಡಲ್ಲಿ, ದಿನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು” ಅನುಸೂಚಿತ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 106 ಎಲ್‌ಡಬ್ಲ್ಯೂಎ 2021, ದಿನಾಂಕ: 28.07.2022ರಲ್ಲಿ ನಿಗದಿಪಡಿಸಿರುವ ಕನಿಷ್ಠ ದರಗಳನ್ನು ಪಾವತಿಸತಕ್ಕದ್ದು.
3) ಶೌಚಾಲಯಗಳು, ಸ್ನಾನಗೃಹಗಳು, ಒಳಚರಂಡಿಗಳನ್ನು ಶುಚಿ ಮಾಡುವ (Scavenging ಕೆಲಸಗಳಲ್ಲಿ ಉದ್ಯೋಗ (ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹೊರತುಪಡಿಸಿ)” ಅನುಸೂಚಿತ ಉದ್ದಿಮೆಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 105 ಎಲ್‌ಡಬ್ಲ್ಯೂಎ 2021, ದಿನಾಂಕ: 28.07.2022 ನಿಗದಿಪಡಿಸಿರುವ ಕನಿಷ್ಠ ವೇತನ ದರಗಳನ್ನು ಪಾವತಿಸತಕ್ಕದ್ದು.
4) ಕಾರ್ಮಿಕರ ಕೆಲಸದ ಸ್ವರೂಪದ ಬಗ್ಗೆ ಸ್ಪಷ್ಟತೆ ಇರದಿದ್ದಲ್ಲಿ, ಈ ಬಗ್ಗೆ ಸ್ಪಷ್ಟವಾಗಿ ನಿರ್ಣಯಕ್ಕೆ ಬರಲು ಆಯಾ ಇಲಾಖೆಗಳ ಹಂತದಲ್ಲಿ ಅಧಿಸೂಚನೆಯಲ್ಲಿ ನಮೂದಾಗಿರುವ ಕೆಲಸದ ಸ್ವರೂಪಗಳಿಗೆ ಸಮಾನವಾಗಿವೆಯೇ ಎಂಬುದನ್ನು ಅಧ್ಯಯನ ಮಾಡಿ, ನಿರ್ಣಯಕ್ಕೆ ಬಂದು ಅಯಾ ಸ್ವರೂಪದ ಕೆಲಸಗಳಿಗೆ ವೇತನ ಅನ್ವಯಿಸಿಕೊಳ್ಳಬಹುದಾಗಿರುತ್ತದೆ.
5) ಪ್ರತಿ ವರ್ಷ ಏಪ್ರಿಲ್ ಮಾಹೆಯಲ್ಲಿ ಏರಿಕೆಯಾಗುವ ವ್ಯತ್ಯಸ್ಥ ತುಟ್ಟಿಭತ್ಯೆ ದರಗಳನ್ನು ಸೇರಿಸಿ ಪಾವತಿಸತಕ್ಕದ್ದು.
6) ವಿರಾಮವು ಒಳಗೊಂಡಂತೆ ಒಂದು ದಿನಕ್ಕೆ ಎಂಟು ಘಂಟೆಗಳ ಕೆಲಸಕ್ಕಾಗಿ ಕನಿಷ್ಠ ವೇತನವಿದ್ದು, ಎಂಟು ತಾಸಿಗಿಂತಲೂ ಹೆಚ್ಚಿನ ಕೆಲಸಕ್ಕಾಗಿ ಹೆಚ್ಚುವರಿ ಭತ್ಯೆಯನ್ನು ಘಂಟೆಯು ಹೆಚ್ಚಾದಂತೆ ದ್ವಿಗುಣ ದರದಲ್ಲಿ ನೀಡುವುದು. ವೇತನವನ್ನು ಲೆಕ್ಕ ಹಾಕುವಾಗ, ಮಾಹೆಯ 4 ರಜಾದಿನಗಳನ್ನೂ ಕೂಡ ಪರಿಗಣಿಸತಕ್ಕದ್ದು.
ತಿಂಗಳ ವೇತನ = ದಿನದ ವೇತನ = ಘಂಟೆಯ ವೇತನ
26ದಿನ 8 ತಾಸು
7) ಒಂದು ದಿನದ ಕೆಲಸ ಎಂದರೆ ಎಂಟು (8) ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು, ಕಾರ್ಮಿಕರನ್ನು ಎಂಟು (8) ಗಂಟೆಗಳಿಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ಅಥವಾ ಕಾರ್ಮಿಕರು ಕೆಲಸ ನಿರ್ವಹಿಸಿದ್ದಲ್ಲಿ, ಅಂತಹ ಕಡಿಮೆ ಅವಧಿಯ ಪ್ರಮಾಣಕ್ಕನುಗುಣವಾಗಿ ಕನಿಷ್ಠ ವೇತನವನ್ನು ಕರ್ನಾಟಕ ಕನಿಷ್ಠ ವೇತನ ನಿಯಮಗಳು, 1958ರ ನಿಯಮ 27 ರನ್ವಯ ಆ ಕೆಲಸದ ವರ್ಗಕ್ಕೆ ನಿಗದಿಪಡಿಸಿರುವ ದಿನವೊಂದರ ಕನಿಷ್ಠ ವೇತನವನ್ನು ಗಂಟೆಗಳ ಕನಿಷ್ಠ ವೇತನವನ್ನಾಗಿ ಲೆಕ್ಕ ಹಾಕಿ, ಸಂಬಂಧಿಸಿದ ಕಾರ್ಮಿಕರಿಗೆ ಉದ್ಯೋಗದಾತರು ಪಾವತಿಸತಕ್ಕದ್ದು,
8) ಒಂದು ತಿಂಗಳಿನ ನಾಲ್ಕು ರಣಾ ದಿವಸಗಳಲ್ಲಿ ಕಾರ್ಮಿಕನು ಕೆಲಸ ಮಾಡಲು ಇಚ್ಛಿಸಿದಲ್ಲಿ ದ್ವಿಗುಣ ದಿನಭತ್ಯೆ ದರವನ್ನು ಹೆಚ್ಚಿನ ಭತ್ಯೆಯನ್ನಾಗಿ ಪ್ರತಿ ದಿನಕ್ಕೆ ಅವನು/ಅವಳು ಪಡೆಯುತ್ತಾರೆ.
9.) ಮಾಲೀಕರ ಭಾಗದ ಇ.ಎಸ್.ಐ./ಪಿ.ಎಫ್. ವಂತಿಗೆ ಹಣವನ್ನು ನೌಕರರ ಭಾಗದ ಇ.ಎಸ್.ಐ/ಪಿ.ಎಫ್ ವಂತಿಗೆಗೆ ಸೇರಿಸಿ, ಮಾಲೀಕರು ನೌಕರರ ಇ.ಎಸ್.ಐ / ಪಿ.ಎಫ್ ಖಾತೆಗೆ ಜಮಾ ಮಾಡತಕ್ಕದ್ದು
10) ಮಾನವ ಸಂಪನ್ಮೂಲ ಪೂರೈಸುವ ಗುತ್ತಿಗೆದಾರ ಸಂಸ್ಥೆಗಳ ಮೇಲೆ ಮೂಲ ಗುತ್ತಿಗೆದಾರರು ಈ ಕೆಳಕಂಡ ಅಂಶಗಳ ಬಗ್ಗೆ ನಿಗಾ ವಹಿಸತಕ್ಕದ್ದು.:-
ಅ) ಮೇಲಿನ ನಿಯಮಗಳಂತೆ, ವೇತನವನ್ನು ಪಾವತಿಸತಕ್ಕದ್ದು.
ಆ) ಪ್ರತಿ ತಿಂಗಳು 5ನೇ ದಿನಾಂಕದೊಳಗೆ ನೌಕರರ ಬ್ಯಾಂಕ್ ಖಾತೆಗೆ ವೇತನದ ಹಣವನ್ನು ಜಮಾ ಮಾಡತಕ್ಕದ್ದು.
ಇ) ಕ್ರಮಬದ್ಧವಲ್ಲದ ಯಾವುದೇ ಕಟಾವಣೆಗಳನ್ನು ಮಾಡಕೂಡದು.
ಈ) ನೌಕರರ ಇ.ಎಸ್.ಐ /ಪಿ.ಎಫ್ ನೊಂದಾಯಿಸಿದ ನೋಂದಾವಣೆ ಸಂಖ್ಯೆಗಳಿಗೆ ಅನುಗುಣವಾಗಿ ಇ.ಎಸ್.ಐ / ಪಿ.ಎಫ್ ವಂತಿಗೆ ಹಣವನ್ನು ಗುತ್ತಿಗೆದಾರ ಕಟಾಯಿಸಿ, ನಿರ್ವಹಿಸಿರುವ ದಾಖಲೆ ಪ್ರಸ್ತುತ ಅವಧಿಗಳಿಗೆ ಸಂಬಂಧಿಸಿರುವುದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
11) ನೌಕರರ ಹಾಜರಾತಿಯನ್ನು ಆಧಾರ ಸಂಖ್ಯೆಗೆ ಜೋಡಣೆಯಾಗಿರುವ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ (AEBAS)ಯ ಮುಖಾಂತರ ನಿರ್ವಹಿಸತಕ್ಕದ್ದು ಹಾಗೂ (AEBAS) ವ್ಯವಸ್ಥೆಯ ಮೂಲಕ ಹಾಜರಾತಿಯನ್ನು ನಿರ್ವಹಿಸಲಾಗದ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ನೌಕರರ ಹಾಜರಾತಿಯನ್ನು ಸೂಕ್ತ ವ್ಯವಸ್ಥೆಯ ಮೂಲಕ ನಿರ್ವಹಿಸತಕ್ಕದ್ದು.
12) ಕನಿಷ್ಠ ವೇತನ ದರಗಳು ಶಾಸನಬದ್ಧ ಪರಿಮಿತಿಯಾಗಿರುವುದರಿಂದ, ಕನಿಷ್ಠ ವೇತನ ದರಗಳನ್ನು ನಮೂದಿಸದೆ ಟೆಂಡರ್ ದಾಖಲೆಯಲ್ಲಿ ಕೇವಲ ಸೇವಾ ಶುಲ್ಕವನ್ನು” ಮಾತ್ರ ನಮೂದಿಸುವ ಅವಕಾಶವನ್ನು ಮಾನವ ಸಂಪನ್ಮೂಲ ಪೂರೈಕೆ ಸಂಸ್ಥೆಗಳಿಗೆ ಕಲ್ಪಿಸುವ ಷರತ್ತಿನೊಂದಿಗೆ ಟೆಂಡರನ್ನು ಪ್ರಕಟಿಸತಕ್ಕದ್ದು.
ಟೆಂಡರ್‌ನಲ್ಲಿ ಭಾಗವಹಿಸುವ ಎಲ್ಲಾ ಮಾನವ ಸಂಪನ್ಮೂಲ ಪೂರೈಕೆ ಸಂಸ್ಥೆಗಳ ಪೂರ್ವಾಪರಗಳನ್ನು ಪರಿಶೀಲಿಸಿ,
(ಅ) ಸದರಿ ಸಂಸ್ಥೆಗಳು ಈ ಹಿಂದೆ ನೌಕರರ ಇ.ಎಸ್.ಐ ಮತ್ತು ಪಿ.ಎಫ್ ವಂತಿಗೆಯನ್ನು ಸರಿಯಾಗಿ ಪಾವತಿಸಿರುವ ಕುರಿತು ಹಿಂದಿನ ಕೆಲವು ವರ್ಷಗಳ ದಾಖಲೆಗಳನ್ನು ಪರಿಶೀಲಿಸಬೇಕು
(ಆ) ಇತರೆ ಅನ್ವಯವಾಗುವ ಕಾರ್ಮಿಕ ಕಾನೂನುಗಳನ್ನು ಪಾಲಿಸಿವೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.
(ಇ) ಸದರಿ ಗುತ್ತಿಗೆದಾರರು ಈ ಹಿಂದೆ ಯಾವುದೇ ಸಕ್ಷಮ ನ್ಯಾಯಾಲಯದಿಂದ ಕಾರ್ಮಿಕ ಕಾನೂನಿನ ಉಲ್ಲಂಘನೆಗಾಗಿ ದಂಡನೆಗೊಳಗಾಗಿಲ್ಲದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಟೆಂಡರ್ ದಾಖಲೆಗಳಲ್ಲಿ ಮೇಲ್ಕಂಡ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಟೆಂಡರ್ ದಾಖಲೆಯನ್ನು ಪ್ರಕಟಿಸತಕ್ಕದ್ದು.
ಆದಾಗ್ಯೂ ಸಹ ಅನೇಕ ಸರ್ಕಾರಿ ಇಲಾಖೆಗಳು, ಸಂಘ-ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಅಂಗ-ಸಂಸ್ಥೆಗಳು ಈ ಸುತ್ತೋಲೆಯಲ್ಲಿನ ಅಂತಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವುದು, ನಿಗದಿಪಡಿಸಿರುವ ಕನಿಷ್ಠ ವೇತನಗಳನ್ನು ಪ್ರತಿ ತಿಂಗಳು ಪಾವತಿಸುತ್ತಿಲ್ಲದೆ ಇರುವುದು ಹಾಗೂ ನೌಕರರ ವೇತನದಿಂದ ಕಟಾಯಿಸಿದ ಪಿ.ಎಫ್, ಇ.ಎಸ್.ಐ ವಂತಿಗೆಗೆ ಮಾಲೀಕರ ಭಾಗದ ವಂತಿಗೆಯನ್ನು ಸೇರಿಸಿ ಇ.ಎಸ್.ಐ. ಪಿ.ಎಫ್ ಖಾತೆಗೆ ಜಮಾ ಮಾಡುತ್ತಿಲ್ಲದೆ ಇರುವುದು ಸರ್ಕಾರದ ಗಮನಕ್ಕೆ ಬಂದಲ್ಲಿ, ಸರ್ಕಾರವು ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದೆಂದು ಈ
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)
❓ ಹೊರಗುತ್ತಿಗೆ ನೌಕರರು ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು?
ಹೊಸ ನಿಯಮದ ಪ್ರಕಾರ, ಊಟದ ವಿರಾಮವೂ ಸೇರಿದಂತೆ ದಿನಕ್ಕೆ ಗರಿಷ್ಠ 8 ಗಂಟೆಗಳ ಕೆಲಸ ಮಾತ್ರ. ಒಂದು ವೇಳೆ ಅದಕ್ಕಿಂತ ಹೆಚ್ಚು ಸಮಯ ಕೆಲಸ ಮಾಡಿದರೆ ಪ್ರತಿ ಹೆಚ್ಚುವರಿ ಗಂಟೆಗೆ ‘ದ್ವಿಗುಣ ದರದಲ್ಲಿ’ (Double Rate) ಓವರ್ ಟೈಮ್ ಭತ್ಯೆ ನೀಡಬೇಕು.
❓ ಪ್ರತಿ ತಿಂಗಳು ಯಾವ ದಿನಾಂಕದೊಳಗೆ ಸಂಬಳ ಬರಬೇಕು?
ಮಾನವ ಸಂಪನ್ಮೂಲ ಪೂರೈಸುವ ಏಜೆನ್ಸಿಗಳು / ಗುತ್ತಿಗೆದಾರರು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಕಡ್ಡಾಯವಾಗಿ ನೌಕರರ ಬ್ಯಾಂಕ್ ಖಾತೆಗೆ ವೇತನದ ಹಣವನ್ನು ಜಮಾ ಮಾಡಬೇಕೆಂದು ಸರ್ಕಾರ ಆದೇಶಿಸಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




