ಮನೆಯಲ್ಲಿ ಮದುವೆ, ಮುಂಜಿ, ನಾಮಕರಣ ಇಟ್ಟುಕೊಂಡು ಬಂಗಾರ ಖರೀದಿಸಲು ಪ್ಲಾನ್ ಮಾಡ್ತಿದ್ದೀರಾ? ‘ವೀಕೆಂಡ್ ಮುಗಿದು ಸೋಮವಾರ ಯಾವಾಗ ಬರುತ್ತೆ, ಬಂಗಾರದ ರೇಟ್ ಯಾವಾಗ ಕಮ್ಮಿ ಆಗುತ್ತೆ’ ಅಂತ ಕಾಯ್ತಿದ್ದವರಿಗೆ ಇಲ್ಲಿದೆ ಒಂದು ಭರ್ಜರಿ ಗುಡ್ ನ್ಯೂಸ್!
ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆ, ಇಂದು (ಸೋಮವಾರ) ವಾರದ ಮೊದಲ ದಿನವೇ ಗ್ರಾಹಕರಿಗೆ ದೊಡ್ಡ ಸರ್ಪ್ರೈಸ್ ನೀಡಿದೆ. ಮದುವೆ ಸೀಸನ್ ಶುರುವಾಗುತ್ತಿರುವ ಈ ಹೊತ್ತಿನಲ್ಲಿ, ಜ್ಯುವೆಲ್ಲರಿ ಶಾಪ್‌ಗೆ ಹೋಗಲು ರೆಡಿಯಾಗುತ್ತಿರುವ ಸಾಮಾನ್ಯ ಜನರಿಗೆ ಮತ್ತು ಗೃಹಿಣಿಯರಿಗೆ ಈ ಹಠಾತ್ ಬೆಲೆ ಇಳಿಕೆ ನಿಜಕ್ಕೂ ನೆಮ್ಮದಿ ತಂದಿದೆ.
ವಾರದ ಮೊದಲ ದಿನವೇ ಬಿಗ್ ಸರ್ಪ್ರೈಸ್! (Sudden Price Drop)
ಸಾಮಾನ್ಯವಾಗಿ ವಾರಾಂತ್ಯದಲ್ಲಿ (ಶನಿವಾರ, ಭಾನುವಾರ) ಮಾರುಕಟ್ಟೆ ರಜೆ ಇರುವುದರಿಂದ ಚಿನ್ನದ ಬೆಲೆಯಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ಆದರೆ ಸೋಮವಾರ ಮಾರುಕಟ್ಟೆ ತೆರೆಯುತ್ತಿದ್ದಂತೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬದಲಾವಣೆಗಳಿಂದಾಗಿ ಬೆಂಗಳೂರಿನಲ್ಲಿ ಆಭರಣ ಚಿನ್ನದ (22 Carat) ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದೆ.
ಚಿನ್ನ-ಬೆಳ್ಳಿ ಬೆಲೆ ಇಂದು, ಮಾರ್ಚ್ 23, 2026: Gold Price Today
ಇಂದು ಬೆಳಿಗ್ಗೆ 7:00AM ಗಂಟೆಗೆ ನಾವು ಚಿನ್ನದ ಮಾರುಕಟ್ಟೆ ದರ ಪರಿಶೀಲಿಸಿದ ಪ್ರಕಾರ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ:₹1,45,960 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ₹1,33,790 ರೂ. ಬೆಳ್ಳಿ ಬೆಲೆ 1 ಕೆಜಿ: ₹2,44,900

ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:
ಒಂದು ಗ್ರಾಂ ಚಿನ್ನ (1GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹10,947
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹13,379
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹14,596
ಎಂಟು ಗ್ರಾಂ ಚಿನ್ನ (8GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹87,576
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,07,032
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹1,16,768
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಹತ್ತು ಗ್ರಾಂ ಚಿನ್ನ (10GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,09,470
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,33,790
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹1,45,960
ನೂರು ಗ್ರಾಂ ಚಿನ್ನ (100GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹10,94,700
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹13,37,900
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹14,59,600
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (1 ಗ್ರಾಂ)ನ ಬೆಲೆ
| ನಗರ | ಇಂದು 22K |
|---|---|
| ಚೆನ್ನೈ | ₹13,619 |
| ಮುಂಬೈ | ₹13,379 |
| ದೆಹಲಿ | ₹13,394 |
| ಕೋಲ್ಕತ್ತಾ | ₹13,379 |
| ಬೆಂಗಳೂರು | ₹13,379 |
| ಹೈದರಾಬಾದ್ | ₹13,379 |
| ಕೇರಳ | ₹13,379 |
| ಪುಣೆ | ₹13,379 |
| ವಡೋದರಾ | ₹13,384 |
| ಅಹಮದಾಬಾದ್ | ₹13,384 |
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆಜಿ)
| ನಗರ | 1 ಕೆಜಿ |
|---|---|
| ಚೆನ್ನೈ | ₹2,49,900 |
| ಮುಂಬೈ | ₹2,44,900 |
| ದೆಹಲಿ | ₹2,44,900 |
| ಕೋಲ್ಕತ್ತಾ | ₹2,44,900 |
| ಬೆಂಗಳೂರು | ₹2,44,900 |
| ಹೈದರಾಬಾದ್ | ₹2,44,900 |
| ಕೇರಳ | ₹2,44,900 |
| ಪುಣೆ | ₹2,44,900 |
| ವಡೋದರಾ | ₹2,44,900 |
| ಅಹಮದಾಬಾದ್ | ₹2,44,900 |
⚠️ ಪ್ರಮುಖ ಎಚ್ಚರಿಕೆ: ಮೇಲೆ ನೀಡಲಾದ ಬೆಲೆಗಳು ಇಂದಿನ ಆರಂಭಿಕ ಮಾರುಕಟ್ಟೆ ಬೆಲೆಗಳಾಗಿವೆ (Indicative Prices). ನೀವು ಆಭರಣ ಅಂಗಡಿಗೆ ಹೋದಾಗ, ಈ ಬೆಲೆಯ ಜೊತೆಗೆ 3% ಜಿಎಸ್‌ಟಿ (GST) ಮತ್ತು ಅಂಗಡಿಯವರ ಮೇಕಿಂಗ್ ಚಾರ್ಜ್ (ತಯಾರಿಕಾ ವೆಚ್ಚ) ಸೇರ್ಪಡೆಯಾಗುತ್ತದೆ. ಹಾಗಾಗಿ ಬಿಲ್ ಮಾಡುವ ಮುನ್ನ ಒಮ್ಮೆ ವಿಚಾರಿಸಿ.
ನೀವು ಇಂದು ಜ್ಯುವೆಲ್ಲರಿ ಶಾಪ್‌ಗೆ ಹೋಗುತ್ತಿದ್ದರೆ, ಬಂಗಾರದ ಬೆಲೆ ಕಮ್ಮಿ ಇದೆ ಎಂದು ಖುಷಿಯಲ್ಲಿ ಬಿಲ್ ಚೆಕ್ ಮಾಡುವುದನ್ನು ಮರೆಯಬೇಡಿ! ನೀವು ಖರೀದಿಸುವ ಪ್ರತಿಯೊಂದು ಒಡವೆಯ ಮೇಲೂ 6 ಅಂಕಿಯ HUID (Hallmark Unique Identification) ಕೋಡ್ ಇದೆಯಾ ಎಂಬುದನ್ನು ಕಡ್ಡಾಯವಾಗಿ ಚೆಕ್ ಮಾಡಿ. ಹಾಗೂ, ಅಡ್ವಾನ್ಸ್ ಕೊಟ್ಟು ಚಿನ್ನ ಬುಕ್ ಮಾಡುವುದಾದರೆ, ‘ಇಂದಿನ ಕಮ್ಮಿ ರೇಟ್‌ಗೇ ಬಿಲ್ ಮಾಡಿ’ ಎಂದು ಮೊದಲೇ ಬರೆಸಿಕೊಳ್ಳಿ, ಏಕೆಂದರೆ ಸಂಜೆಯ ಹೊತ್ತಿಗೆ ರೇಟ್ ಮತ್ತೆ ಏರಿಕೆಯಾಗುವ ಸಾಧ್ಯತೆಯೂ ಇರುತ್ತದೆ!
🚨 ಯಾವುದೇ ಬ್ರೇಕಿಂಗ್ ನ್ಯೂಸ್ ಮಿಸ್ ಮಾಡ್ಕೋಬೇಡಿ!
ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ ಹಾಗೂ ದಿನನಿತ್ಯದ ಪ್ರಮುಖ ಸುದ್ದಿಗಳನ್ನು ನೇರವಾಗಿ ನಿಮ್ಮ ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ.
22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನಕ್ಕೆ ಏನು ವ್ಯತ್ಯಾಸ?
ನ್ಯೂಸ್/ಆನ್‌ಲೈನ್ ರೇಟ್‌ಗೂ, ಅಂಗಡಿ ರೇಟ್‌ಗೂ ಯಾಕೆ ವ್ಯತ್ಯಾಸ ಇರುತ್ತೆ?
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಲಿಂಗರಾಜ್ ರಾಮಾಪುರ ಅವರು BCA, MCA ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (MA) ಪಡೆದಿದ್ದಾರೆ. ಈ ಹಿಂದೆ ಬೆಂಗಳೂರಿನ Infosys ಮತ್ತು Concentrix ಸಂಸ್ಥೆಗಳಲ್ಲಿ 6 ವರ್ಷಗಳ ಕಾಲ ವೃತ್ತಿಪರ ಅನುಭವ ಹೊಂದಿರುವ ಇವರು, ತಾಂತ್ರಿಕ ಜ್ಞಾನವನ್ನು ಪತ್ರಿಕೋದ್ಯಮಕ್ಕೆ ಅನ್ವಯಿಸಿದ ಪರಿಣತರು.
ವೃತ್ತಿಪರ ಹಾದಿ: 2017 ರಲ್ಲಿ ಐಟಿ ವೃತ್ತಿಜೀವನದ ಜೊತೆಗೇ ಡಿಜಿಟಲ್ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಇವರು, ಪ್ರಸ್ತುತ NeedsOfPublic.in ನ ಎಡಿಟೋರಿಯಲ್ ಸ್ಟ್ರಾಟಜಿಯನ್ನು ಮುನ್ನಡೆಸುತ್ತಿದ್ದಾರೆ. ಡೇಟಾ-ಆಧಾರಿತ ವರದಿಗಾರಿಕೆ, ಮಾರುಕಟ್ಟೆ ವಿಶ್ಲೇಷಣೆ ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗುವ ನಿಖರ ಮಾಹಿತಿಯನ್ನು ತಲುಪಿಸುವುದು ಇವರ ಮುಖ್ಯ ಗುರಿ. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಇವರಿಗೆ 9 ವರ್ಷಗಳ ಸುದೀರ್ಘ ಅನುಭವವಿದೆ.


WhatsApp Group




