ಸ್ಕಾಲರ್‌ಶಿಪ್ ಮುಖ್ಯಾಂಶಗಳು
- ಯೋಜನೆ: ಮಹೀಂದ್ರಾ ಸಾರಥಿ ಅಭಿಯಾನ 2025-26.
- ಯಾರಿಗೆ: ಟ್ರಕ್ ಚಾಲಕರ ಹೆಣ್ಣುಮಕ್ಕಳಿಗೆ ಮಾತ್ರ (11ನೇ ತರಗತಿಯಿಂದ ಪಿಜಿ ವರೆಗೆ).
- ವಿದ್ಯಾರ್ಥಿವೇತನ: ತಲಾ ₹10,000 ಗಳ ನಿಶ್ಚಿತ ಧನಸಹಾಯ.
- ಕೊನೆಯ ದಿನಾಂಕ: 15 ಫೆಬ್ರವರಿ 2026 (ಕೂಡಲೇ ಅರ್ಜಿ ಸಲ್ಲಿಸಿ).
ಹಗಲಿರುಳು ರಸ್ತೆಯಲ್ಲೇ ಜೀವನ ಕಳೆಯುವ ಟ್ರಕ್ ಚಾಲಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಪಡುವ ಕಷ್ಟ ಅಷ್ಟಿಷ್ಟಲ್ಲ. ಆರ್ಥಿಕ ಸಂಕಷ್ಟದಿಂದಾಗಿ ಎಷ್ಟೋ ಚಾಲಕರ ಹೆಣ್ಣುಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸುತ್ತಾರೆ. ಇಂತಹ ವಿದ್ಯಾರ್ಥಿನಿಯರ ನೆರವಿಗೆ ಈಗ ಪ್ರಸಿದ್ಧ ವಾಹನ ತಯಾರಕ ಕಂಪನಿ ‘ಮಹೀಂದ್ರಾ ಆಂಡ್ ಮಹೀಂದ್ರಾ’ (Mahindra & Mahindra) ಧಾವಿಸಿದೆ.

ಟ್ರಕ್ ಚಾಲಕರ ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ‘ಮಹೀಂದ್ರಾ ಸಾರಥಿ ಅಭಿಯಾನ 2025-26’ ಅಡಿ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ₹10,000 ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಫೆಬ್ರವರಿ 15 ಕಡೆಯ ದಿನಾಂಕವಾಗಿದ್ದು, ತಕ್ಷಣವೇ ಆನ್‌ಲೈನ್ ಮೂಲಕ ಅಪ್ಲೈ ಮಾಡಬಹುದಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು? (Eligibility)
- ಅರ್ಜಿದಾರರು ಟ್ರಕ್ ಚಾಲಕರ ಹೆಣ್ಣುಮಕ್ಕಳಾಗಿರುವುದು ಕಡ್ಡಾಯ.
- ಪ್ರಸ್ತುತ 11ನೇ ತರಗತಿ, 12ನೇ ತರಗತಿ (PUC), ಐಟಿಐ (ITI), ಡಿಪ್ಲೊಮಾ, ವೃತ್ತಿಪರ ಕೋರ್ಸ್‌ಗಳು, ಪದವಿ (Degree) ಅಥವಾ ಸ್ನಾತಕೋತ್ತರ (PG) ಕೋರ್ಸ್ ಓದುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
- ಭಾರತದ ಯಾವುದೇ ರಾಜ್ಯದ ವಿದ್ಯಾರ್ಥಿನಿಯರಾದರೂ ಅನ್ವಯಿಸುತ್ತದೆ (PAN India).
- ಸೂಚನೆ: ಮಹೀಂದ್ರಾ ಕಂಪನಿ ಅಥವಾ Buddy4Study ಉದ್ಯೋಗಿಗಳ ಮಕ್ಕಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
ಯೋಜನೆಯ ಪ್ರಯೋಜನಗಳು (Benefits)
- ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿನಿಗೂ ₹10,000 ನಿಶ್ಚಿತ ಮೊತ್ತವನ್ನು ನೀಡಲಾಗುತ್ತದೆ.
- ಈ ಹಣವನ್ನು ಶಾಲಾ/ಕಾಲೇಜು ಶುಲ್ಕ, ಪುಸ್ತಕಗಳು, ಹಾಸ್ಟೆಲ್ ಶುಲ್ಕ ಅಥವಾ ಇತರ ಶೈಕ್ಷಣಿಕ ವೆಚ್ಚಗಳಿಗೆ ಬಳಸಿಕೊಳ್ಳಬಹುದು.
- ಉನ್ನತ ಶಿಕ್ಷಣದ ಬಗ್ಗೆ ಮಾರ್ಗದರ್ಶನ ಮತ್ತು ಸಂಪನ್ಮೂಲಗಳನ್ನು ಸಹ ಒದಗಿಸಲಾಗುತ್ತದೆ.
ಅರ್ಜಿ ಹಾಕಲು ಬೇಕಾದ ದಾಖಲೆಗಳು (Documents Required)
ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿಟ್ಟುಕೊಳ್ಳಿ:
- ವಿದ್ಯಾರ್ಥಿನಿಯ ಪಾಸ್‌ಪೋರ್ಟ್ ಅಳತೆಯ ಫೋಟೋ.
- ಪ್ರಸ್ತುತ ವರ್ಷದ ಪ್ರವೇಶಾತಿ ಪುರಾವೆ (ಕಾಲೇಜು ಐಡಿ ಕಾರ್ಡ್ ಅಥವಾ Admission Letter).
- ಹಿಂದಿನ ವರ್ಷದ ಅಂಕಪಟ್ಟಿ (ಮಾರ್ಕ್ಸ್ ಕಾರ್ಡ್) ಹಾಗೂ 10ನೇ ತರಗತಿಯ ಅಂಕಪಟ್ಟಿ (ಫಲಿತಾಂಶ ಬಂದಿಲ್ಲದಿದ್ದರೆ ಹಿಂದಿನ ಸೆಮಿಸ್ಟರ್ ಮಾರ್ಕ್ಸ್ ಹಾಕಬಹುದು).
- ಶೈಕ್ಷಣಿಕ ವೆಚ್ಚದ ರಸೀದಿಗಳು (ಟ್ಯೂಷನ್ ಫೀ, ಹಾಸ್ಟೆಲ್, ಪುಸ್ತಕದ ಬಿಲ್).
- ಗುರುತಿನ ಚೀಟಿ (ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿ).
- ಪೋಷಕರ ಕಮರ್ಷಿಯಲ್ ಡ್ರೈವಿಂಗ್ ಲೈಸೆನ್ಸ್ ಪ್ರತಿ (LCV/ICV/HCV).
- ವಿದ್ಯಾರ್ಥಿನಿಯ ಬ್ಯಾಂಕ್ ಪಾಸ್‌ಬುಕ್.
ಅರ್ಜಿ ಸಲ್ಲಿಸುವುದು ಹೇಗೆ? (How to Apply)
- ವಿದ್ಯಾರ್ಥಿಗಳು Buddy4Study ಪೋರ್ಟಲ್‌ಗೆ ಭೇಟಿ ನೀಡಬೇಕು.
- ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆ ಅಥವಾ ಜಿಮೇಲ್ ಖಾತೆಯ ಮೂಲಕ ಲಾಗಿನ್ ಆಗಿ.
- ‘Mahindra Saarthi Abhiyaan 2025-26’ ಲಿಂಕ್ ಮೇಲೆ ಕ್ಲಿಕ್ ಮಾಡಿ “Apply Now” ಬಟನ್ ಒತ್ತಿ.
- ಅರ್ಜಿಯಲ್ಲಿ ಕೇಳಿರುವ ವೈಯಕ್ತಿಕ, ಶೈಕ್ಷಣಿಕ ಮತ್ತು ಕುಟುಂಬದ ವಿವರಗಳನ್ನು ಭರ್ತಿ ಮಾಡಿ.
- ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ, ‘Submit’ ಬಟನ್ ಕ್ಲಿಕ್ ಮಾಡಿ.
*ಮೇಲಿನ ಬಟನ್ ಕ್ಲಿಕ್ ಮಾಡಿ Buddy4Study ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ.
“ನಿಮ್ಮ ಪರಿಚಯದಲ್ಲಿ ಯಾರಾದರೂ ಲಾರಿ/ಟ್ರಕ್ ಓಡಿಸುವವರಿದ್ದರೆ ದಯವಿಟ್ಟು ಈ ಲೇಖನವನ್ನು ಅವರಿಗೆ ಶೇರ್ ಮಾಡಿ (WhatsApp ಮಾಡಿ). ಕೊನೆಯ ದಿನಾಂಕ ಹತ್ತಿರವಿರುವುದರಿಂದ (ಫೆಬ್ರವರಿ 15), ನಿಮ್ಮ ಒಂದು ಶೇರ್ ಅವರ ಮಗಳ ಭವಿಷ್ಯವನ್ನು ರೂಪಿಸಲು, ಓದಿನ ಆಸೆಯನ್ನು ಜೀವಂತವಾಗಿಡಲು ಸಹಾಯ ಮಾಡಬಹುದು.”
FAQs (ಸಾಮಾನ್ಯ ಪ್ರಶ್ನೆಗಳು)
Q1: ಹುಡುಗರು (ಗಂಡು ಮಕ್ಕಳು) ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದಾ?
ಉತ್ತರ: ಇಲ್ಲ, ಈ ಯೋಜನೆಯು ಕೇವಲ ಟ್ರಕ್ ಚಾಲಕರ ಹೆಣ್ಣುಮಕ್ಕಳ (Girl Students) ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಮಾತ್ರ ಸೀಮಿತವಾಗಿದೆ.
Q2: ನನಗೆ ಇನ್ನೂ ಈ ವರ್ಷದ ರಿಸಲ್ಟ್ ಬಂದಿಲ್ಲ, ನಾನು ಅರ್ಜಿ ಹಾಕಬಹುದಾ?
ಉತ್ತರ: ಹೌದು, ಖಂಡಿತ ಹಾಕಬಹುದು. ನಿಮ್ಮ ಇತ್ತೀಚಿನ ಪರೀಕ್ಷೆಯ ಫಲಿತಾಂಶ ಇನ್ನೂ ಬಂದಿಲ್ಲದಿದ್ದರೆ, ನಿಮ್ಮ ಹಿಂದಿನ ವರ್ಷದ ಅಥವಾ ಹಿಂದಿನ ಸೆಮಿಸ್ಟರ್‌ನ ಅಂಕಪಟ್ಟಿಯನ್ನು ಬಳಸಿ ಅರ್ಜಿ ಸಲ್ಲಿಸಲು ಅವಕಾಶವಿದೆ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




