- ಮಕ್ಕಳ ಶಿಕ್ಷಣಕ್ಕೆ ವಾರ್ಷಿಕ ₹25,000 ವರೆಗೆ ಸ್ಕಾಲರ್‌ಶಿಪ್ ಸೌಲಭ್ಯ.
- ಕಾರ್ಮಿಕರ ಅಥವಾ ಮಕ್ಕಳ ಮದುವೆಗೆ ₹50,000 ಹಣ ಸಹಾಯ.
- ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ₹2 ಲಕ್ಷದವರೆಗೆ ಆರ್ಥಿಕ ನೆರವು.
ಅನುಬಂಧ-1: ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು
ಪಿಂಚಣಿ ಮತ್ತು ಅಂಗವೈಕಲ್ಯ ಸೌಲಭ್ಯಗಳು
- ಪಿಂಚಣಿ ಸೌಲಭ್ಯ: 3 ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಕಾರ್ಮಿಕರಿಗೆ ಮಾಸಿಕ ₹1,000 ಪಿಂಚಣಿ.
- ದುರ್ಬಲತೆ ಪಿಂಚಣಿ: ಕಾಯಿಲೆ ಅಥವಾ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವೈಕಲ್ಯ ಹೊಂದಿದ್ದರೆ ಮಾಸಿಕ ₹1,000 ಪಿಂಚಣಿ ಹಾಗೂ ಶೇಕಡಾವಾರು ದುರ್ಬಲತೆಯ ಆಧಾರದ ಮೇಲೆ ₹2,00,000 ವರೆಗೆ ಅನುಗ್ರಹ ರಾಶಿ ಸಹಾಯಧನ.
ವಸತಿ ಮತ್ತು ಉಪಕರಣ ಸೌಲಭ್ಯ - ಟ್ರೈನಿಂಗ್-ಕಮ್-ಟೂಲ್ಕಿಟ್ (ಶ್ರಮ ಸಾಮರ್ಥ್ಯ): ವೃತ್ತಿ ತರಬೇತಿ ಮತ್ತು ಉಪಕರಣಗಳಿಗಾಗಿ ₹20,000 ವರೆಗೆ ಸೌಲಭ್ಯ.
- ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ): ಸ್ವಂತ ಮನೆ ನಿರ್ಮಾಣಕ್ಕೆ ₹2,00,000 ವರೆಗೆ ಮುಂಗಡ ಸಾಲ ಸೌಲಭ್ಯ.
ಕುಟುಂಬ ಕಲ್ಯಾಣ ಸೌಲಭ್ಯಗಳು - ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮಿ ಬಾಂಡ್): ಮಹಿಳಾ ಕಾರ್ಮಿಕರ ಮೊದಲ ಇಬ್ಬರು ಮಕ್ಕಳಿಗೆ; ಹೆಣ್ಣು ಮಗುವಿನ ಜನನಕ್ಕೆ ₹30,000 ಮತ್ತು ಗಂಡು ಮಗುವಿನ ಜನನಕ್ಕೆ ₹20,000.
- ಮದುವೆ ಸಹಾಯಧನ (ಗೃಹ ಲಕ್ಷ್ಮಿ ಬಾಂಡ್): ಕಾರ್ಮಿಕ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₹50,000.
- ತಾಯಿ ಮಗು ಸಹಾಯ ಹಸ್ತ: ಮಗುವಿನ 3 ವರ್ಷದವರೆಗೆ ಶಾಲಾಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ವಾರ್ಷಿಕ ₹6,000 ಸಹಾಯಧನ.
ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ)
ಕಾರ್ಮಿಕರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಿಗುವ ಧನಸಹಾಯ: - 1 ರಿಂದ 3ನೇ ತರಗತಿ: ₹2,000.
- 4 ರಿಂದ 6ನೇ ತರಗತಿ: ₹3,000.
- 7 ರಿಂದ 8ನೇ ತರಗತಿ: ₹4,000.
- 9, 10 ಮತ್ತು ಪಥಮ ಪಿಯುಸಿ: ₹6,000.
- ದ್ವಿತೀಯ ಪಿಯುಸಿ: ₹8,000.
- ಐಟಿಐ ಮತ್ತು ಡಿಪ್ಲೊಮಾ: ₹7,000.
- ಪದವಿ (Degree): ₹10,000.
- ಸ್ನಾತಕೋತ್ತರ ಪದವಿ: ಪ್ರವೇಶಕ್ಕೆ ₹20,000 ಮತ್ತು ವಾರ್ಷಿಕ ₹10,000.
- ಇಂಜಿನಿಯರಿಂಗ್: ಪ್ರವೇಶಕ್ಕೆ ₹25,000 ಮತ್ತು ವಾರ್ಷಿಕ ₹20,000.
- ವೈದ್ಯಕೀಯ: ಪ್ರವೇಶಕ್ಕೆ ₹30,000 ಮತ್ತು ವಾರ್ಷಿಕ ₹25,000.
- ಪಿಎಚ್ಡಿ (PhD): ವಾರ್ಷಿಕ ₹20,000 ಮತ್ತು ಪ್ರಬಂಧ ಸ್ವೀಕಾರದ ನಂತರ ₹20,000.
ಪ್ರತಿಭಾವಂತ ಮಕ್ಕಳಿಗೆ ಹೆಚ್ಚುವರಿ ಪುರಸ್ಕಾರ: - ಎಸ್‌ಎಸ್‌ಎಲ್ಸಿ/ಪಿಯುಸಿ (75% ಅಂಕ): ₹5,000 ರಿಂದ ₹7,000.
- ಪದವಿ/ಸ್ನಾತಕೋತ್ತರ (75% ಅಂಕ): ₹10,000 ರಿಂದ ₹15,000.
ಆರೋಗ್ಯ ಮತ್ತು ಅಪಘಾತ ಪರಿಹಾರ - ಸಾಮಾನ್ಯ ವೈದ್ಯಕೀಯ ನೆರವು: ಕಾರ್ಮಿಕರು ಮತ್ತು ಅವಲಂಬಿತರಿಗೆ ₹300 ರಿಂದ ₹10,000 ವರೆಗೆ.
- ಪ್ರಮುಖ ಶಸ್ತ್ರಚಿಕಿತ್ಸೆಗಳು: ಹೃದಯ, ಕಿಡ್ನಿ, ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ₹2,00,000 ವರೆಗೆ ಸಹಾಯಧನ.
- ಅಪಘಾತ ಪರಿಹಾರ: ಮರಣ ಹೊಂದಿದಲ್ಲಿ ₹5,00,000, ಶಾಶ್ವತ ಅಂಗವೈಕಲ್ಯಕ್ಕೆ ₹2,00,000 ಪರಿಹಾರ.
ಇತರ ಸೌಲಭ್ಯಗಳು - ಗ್ಯಾಸ್ ಸಂಪರ್ಕ: ಅನಿಲ ಭಾಗ್ಯ ಯೋಜನೆಯಡಿ ಎರಡು ಬರ್ನರ್ ಸ್ಟೌವ್ ಮತ್ತು ಗ್ಯಾಸ್ ಸಂಪರ್ಕ.
- ಬಸ್ ಪಾಸ್: ಬೆಂಗಳೂರಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಿಎಂಟಿಸಿ ಬಸ್ ಪಾಸ್ ಮತ್ತು ಮಕ್ಕಳ ಶಿಕ್ಷಣಕ್ಕೆ ಕೆಎಸ್‌ಆರ್ಟಿಸಿ ಬಸ್ ಪಾಸ್ ಸೌಲಭ್ಯ.
- ಅಂತ್ಯಕ್ರಿಯೆ ವೆಚ್ಚ: ಅಂತ್ಯಕ್ರಿಯೆಗಾಗಿ ₹4,000 ಮತ್ತು ಅನುಗ್ರಹ ರಾಶಿ ₹50,000 ಸಹಾಯಧನ.
ಲೇಬರ್ ಕಾರ್ಡ್ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ನಿಮ್ಮ ಲೇಬರ್ ಕಾರ್ಡ್ ಚಾಲ್ತಿಯಲ್ಲಿರಬೇಕು (Active).
ಅಗತ್ಯ ದಾಖಲೆಗಳು:
- ನವೀಕೃತ ಲೇಬರ್ ಕಾರ್ಡ್ ಸಂಖ್ಯೆ.
- ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಆಧಾರ್ ಕಾರ್ಡ್.
- ಸಂಬಂಧಪಟ್ಟ ದೃಢೀಕರಣ ಪತ್ರಗಳು (ಉದಾಹರಣೆಗೆ ಮದುವೆ ಕಾರ್ಡ್ ಅಥವಾ ಶಾಲಾ ವ್ಯಾಸಂಗ ಪ್ರಮಾಣಪತ್ರ).

ಅರ್ಜಿ ಸಲ್ಲಿಸುವ ಹಂತಗಳು:
- ಸೇವಾ ಸಿಂಧು (Seva Sindhu): ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್ ಅಥವಾ ಕಾರ್ಮಿಕ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಲಾಗಿನ್: ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿ ನೋಂದಾಯಿಸಿಕೊಳ್ಳಿ.
- ಸೇವೆ ಆಯ್ಕೆ: ಸರ್ಚ್ ಬಾಕ್ಸ್‌ನಲ್ಲಿ “Labour Department” ಎಂದು ಹುಡುಕಿದಾಗ ವಿವಿಧ ಸೌಲಭ್ಯಗಳ ಪಟ್ಟಿ ಕಾಣಿಸುತ್ತದೆ. ನಿಮಗೆ ಬೇಕಾದ ಯೋಜನೆಯನ್ನು ಆರಿಸಿ.
- ವಿವರ ಭರ್ತಿ: ಅರ್ಜಿಯಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ‘Submit’ ನೀಡಿ.
- ಸ್ವೀಕೃತಿ ಪತ್ರ: ಅರ್ಜಿ ಸಲ್ಲಿಸಿದ ನಂತರ ಸಿಗುವ ‘Acknowledgement Number’ ಅನ್ನು ಮುಂದಿನ ಪರಿಶೀಲನೆಗಾಗಿ ಕಾಪಾಡಿಕೊಳ್ಳಿ.
ಸಹಾಯಕ್ಕಾಗಿ ಎಲ್ಲಿಗೆ ಹೋಗಬೇಕು?
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ನಿಮ್ಮ ಹತ್ತಿರದ ಗ್ರಾಮ ಒನ್ (Gram One), ಕರ್ನಾಟಕ ಒನ್, ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಬಹುದು.
ನಮ್ಮ ಸಲಹೆ
ಅನೇಕರು ಲೇಬರ್ ಕಾರ್ಡ್ ಮಾಡಿಸಿರುತ್ತಾರೆ ಆದರೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಾಗ ಸರ್ವರ್ ಸಮಸ್ಯೆ ಎದುರಿಸುತ್ತಾರೆ. ಸಲಹೆ ಏನೆಂದರೆ: ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ರಾತ್ರಿ 9 ಗಂಟೆಯ ನಂತರ ಅಥವಾ ಮುಂಜಾನೆ 7 ಗಂಟೆಯ ಮೊದಲು ಪ್ರಯತ್ನಿಸಿ, ಆಗ ವೆಬ್‌ಸೈಟ್ ವೇಗವಾಗಿರುತ್ತದೆ. ಅರ್ಜಿ ಸಲ್ಲಿಸಿದ ನಂತರ ಸಿಗುವ ‘Acknoledgement Number’ ಅನ್ನು ಪ್ರಿಂಟ್ ತೆಗೆಸಿ ಜೋಪಾನವಾಗಿ ಇಟ್ಟುಕೊಳ್ಳಿ.
ಸಾಮಾನ್ಯ ಪ್ರಶ್ನೆಗಳು (FAQs)
ಪ್ರಶ್ನೆ 1: ನಾನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಉತ್ತರ: ನೀವು ಸ್ವತಃ ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಅಥವಾ ನಿಮ್ಮ ಹತ್ತಿರದ ‘ಗ್ರಾಮ ಒನ್’, ‘ಕರ್ನಾಟಕ ಒನ್’ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಪ್ರಶ್ನೆ 2: ಲೇಬರ್ ಕಾರ್ಡ್ ಇಲ್ಲದವರು ಹೊಸದಾಗಿ ಮಾಡಿಸಬಹುದೇ?
ಉತ್ತರ: ಹೌದು, ನೀವು ಕಟ್ಟಡ ನಿರ್ಮಾಣ ಅಥವಾ ಇತರ ನೋಂದಾಯಿತ ಕಾರ್ಮಿಕರಾಗಿದ್ದರೆ ಅಗತ್ಯ ದಾಖಲೆಗಳನ್ನು ನೀಡಿ ಕಾರ್ಮಿಕ ಇಲಾಖೆಯಲ್ಲಿ ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು.
ಈ ಮಾಹಿತಿಗಳನ್ನು ಓದಿ
- ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಬರೋಬ್ಬರಿ ₹1.5 ಲಕ್ಷ ಸಂಬಳ! KMF ಶಿಮುಲ್ನಲ್ಲಿ 194 ಹುದ್ದೆಗಳಿಗೆ ನೇಮಕಾತಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
- ವಾಷಿಂಗ್ ಮಷಿನ್ ತಗೊಳೋ ಮುನ್ನ ಇದನ್ನ ಓದಿ: ಕರೆಂಟ್ ಬಿಲ್ ಉಳಿಸೋದು ಫ್ರಂಟ್ ಲೋಡಾ? ಟಾಪ್ ಲೋಡಾ?
- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ನಿಯಮ: ಇನ್ಮುಂದೆ ‘ಜೀವಿತ ಪ್ರಮಾಣ ಪತ್ರ’ ಕಡ್ಡಾಯ; ಸಿಎಂ ಸಿದ್ದರಾಮಯ್ಯ ಮಹತ್ವದ ಆದೇಶ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




