Gemini Generated Image 436ckh436ckh436c 1 optimized 300

BIG NEWS: ರಾಜ್ಯ ಸರ್ಕಾರದಿಂದ `MLA, MLC’ ಗಳಿಗೆ ಬರೋಬ್ಬರಿ 299 ಕೋಟಿ ಅನುದಾನ ಬಿಡುಗಡೆ : ನಿಮ್ಮ ಕ್ಷೇತ್ರಕ್ಕೆಷ್ಟು.?

WhatsApp Group Telegram Group

📌 ಪ್ರಮುಖ ಮುಖ್ಯಾಂಶಗಳು

  • ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಗೆ ₹299 ಕೋಟಿ ಭರ್ಜರಿ ಅನುದಾನ.
  • ಪ್ರತಿ ಶಾಸಕರಿಗೆ ತಲಾ 1 ಕೋಟಿ ರೂ. ಹಣ ಬಿಡುಗಡೆ.
  • ಜಿಲ್ಲಾ ಮಟ್ಟದ ಗುತ್ತಿಗೆ ಸಿಬ್ಬಂದಿಗಳ ವೇತನಕ್ಕೂ ಹಣ ಮಂಜೂರು.

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಭರ್ಜರಿ ಕೊಡುಗೆಯನ್ನು ನೀಡಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ‘ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ’ಯಡಿ (KMLAD) ಬರೋಬ್ಬರಿ 299 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೀಗಿದೆ

ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯ ಮಾರ್ಗಸೂಚಿ ಕಂಡಿಕೆ 4.7 ರನ್ವಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಲೆಕ್ಕ ಶೀರ್ಷಿಕೆ 2575-60-265-0-02- 034 (ಗುತ್ತಿಗೆ/ಹೊರಗುತ್ತಿಗೆ) ರಡಿ 2025-26ನೇ ಸಾಲಿನಲ್ಲಿ ಒದಗಿಸಿರುವ ಅನುದಾನದ ಪೈಕಿ ರೂ.6.71 ಲಕ್ಷಗಳನ್ನು, 2024-25ನೇ ಸಾಲಿನಲ್ಲಿ ಕಾರ್ಯನಿರತ ಸಿಬ್ಬಂದಿಗಳ ವೇತನಕ್ಕೆ ಕೊರತೆಯಾಗಿದ್ದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪಧಾನ ಲೆಕ್ಕಶೀರ್ಷಿಕೆ 4575 ರಡಿ ಮೊದಲನೇ ಕಂತಿನ ಅನುದಾನವಾಗಿ 224 ವಿಧಾನ ಸಭಾ ಕ್ಷೇತ್ರಗಳಿಗೆ ಹಾಗೂ 71 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು-ಇವರುಗಳಿಗೆ (ಪದಾವಧಿಯನ್ನಾಧರಿಸಿ) ತಲಾ ರೂ.50.00 ಲಕ್ಷಗಳಂತೆ ಒಟಾರೆ ರೂ.147.50 ಕೋಟಿಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.

ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪಧಾನ ಲೆಕ್ಕಶೀರ್ಷಿಕೆ 2575 ರಡಿ ಕಂಡಿಕೆ 4.7 ರನ್ವಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಲೆಕ್ಕ ಶೀರ್ಷಿಕೆ 2575-60-265-0-02-034 (ಗುತ್ತಿಗೆ/ಹೊರಗುತ್ತಿಗೆ) ರಡಿ 2025-26ನೇ ಸಾಲಿನಲ್ಲಿ ಒದಗಿಸಿರುವ ಅನುದಾನದ ಪೈಕಿ ರೂ.112.26547 ಲಕ್ಷಗಳನ್ನು, ಬಿಡುಗಡೆ ಮಾಡಲಾಗಿರುತ್ತದೆ.

ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪ್ರಧಾನ ಲೆಕ್ಕಶೀರ್ಷಿಕೆ 4575 ರಡಿ ಎರಡನೇ ಕಂತಿನ ಅನುದಾನವಾಗಿ 224 ವಿಧಾನ ಸಭಾ ಕ್ಷೇತ್ರಗಳಿಗೆ ಹಾಗೂ 71 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು-ಇವರುಗಳಿಗೆ (ಪದಾವಧಿಯನ್ನಾಧರಿಸಿ) ತಲಾ ರೂ.50.00 ಲಕ್ಷಗಳಂತೆ ಒಟ್ಟಾರೆ ರೂ.147.50 ಕೋಟಿಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.

ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪಧಾನ ಲೆಕ್ಕಶೀರ್ಷಿಕೆ 2575 ರಡಿ ಕಂಡಿಕೆ 4.7 ರನ್ವಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಲೆಕ್ಕ ಶೀರ್ಷಿಕೆ 2575-60-265-0-02-034 (ಗುತ್ತಿಗೆ/ಹೊರಗುತ್ತಿಗೆ) ರಡಿ 2025-26ನೇ ಸಾಲಿನಲ್ಲಿ ಒದಗಿಸಿರುವ ಅನುದಾನದ ಪೈಕಿ ರೂ.56.13287 ಲಕ್ಷಗಳನ್ನು, ಬಿಡುಗಡೆ ಮಾಡಲಾಗಿರುತ್ತದೆ.

ಮುಂದುವರೆದು, ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025- 26 ನೇ ಸಾಲಿನಲ್ಲಿ, ಪ್ರಧಾನ ಲೆಕ್ಕಶೀರ್ಷಿಕೆ 4575 ರಡಿ ಮೂರು ಮತ್ತು ನಾಲ್ಕನೇ ಕಂತಿನ ಅನುದಾನವಾಗಿ 224 ವಿಧಾನ ಸಭಾ ಕ್ಷೇತ್ರಗಳಿಗೆ ಹಾಗೂ 75 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು-ಇವರುಗಳಿಗೆ (ಪದಾವಧಿಯನ್ನಾಧರಿಸಿ) ತಲಾ ರೂ.100.00 ಲಕ್ಷಗಳನ್ನು ಬಿಡುಗಡೆ ಮಾಡಲು ಸರ್ಕಾರವು ಉದ್ದೇಶಿಸಿದೆ. ಅದರಂತೆ ಈ ಕೆಳಕಂಡಂತೆ ಆದೇಶಿಸಿರುವುದಾಗಿ ಹೇಳಿದ್ದಾರೆ.

ಪುಸ್ತಾವನೆಯಲ್ಲಿ ವಿವರಿಸಿರುವಂತೆ, ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯಡಿ 2025-26ನೇ ಸಾಲಿನ ಪ್ರಧಾನ ಲೆಕ್ಕಶೀರ್ಷಿಕೆ 4575 ರಡಿ ಮೂರು ಮತ್ತು ನಾಲ್ಕನೇ ಕಂತಾಗಿ ತಲಾ ರೂ.1.00 ಕೋಟಿಗಳನ್ನು ಅನುಬಂಧ-1ರಲ್ಲಿರುವ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಕೆಳಕಂಡ ಲೆಕ್ಕ ಶೀರ್ಷಿಕೆಗಳಡಿ ಒಟ್ಟು ರೂ.299.00/- ಕೋಟಿಗಳನ್ನು (ಎರಡು ನೂರ ತ್ತೊಂಬತ್ತೊಂಬತ್ತು ಕೋಟಿ ರೂಪಾಯಿಗಳು ಮಾತ್ರ ಬಿಡುಗಡೆ ಮಾಡಿದೆ. ಅನುಬಂಧ-2ರಲ್ಲಿ 224 ವಿಧಾನ ಸಭಾ ಕ್ಷೇತ್ರಗಳು ಮತ್ತು ಅನುಬಂಧ-3 ರಲ್ಲಿ 75 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರ ವಿವರಗಳನ್ನು ಲಗತ್ತಿಸಿದೆ ಎಂದು ಹೇಳಿದ್ದಾರೆ.

WhatsApp Image 2026 01 26 at 11.36.02 AM
WhatsApp Image 2026 01 26 at 11.36.02 AM 1
WhatsApp Image 2026 01 26 at 11.36.03 AM
WhatsApp Image 2026 01 26 at 11.36.03 AM 1
WhatsApp Image 2026 01 26 at 11.36.04 AM
WhatsApp Image 2026 01 26 at 11.36.05 AM
WhatsApp Image 2026 01 26 at 11.36.05 AM 1
WhatsApp Image 2026 01 26 at 11.36.06 AM
WhatsApp Image 2026 01 26 at 11.36.06 AM 1
WhatsApp Image 2026 01 26 at 11.36.06 AM 2
WhatsApp Image 2026 01 26 at 11.36.06 AM 3
WhatsApp Image 2026 01 26 at 11.36.07 AM
WhatsApp Image 2026 01 26 at 11.36.07 AM 1

ಅನುದಾನದ ಸಂಪೂರ್ಣ ವಿವರ ಇಲ್ಲಿದೆ:

ವಿವರ ಒಟ್ಟು ಮೊತ್ತ / ಸಂಖ್ಯೆ
ಒಟ್ಟು ಬಿಡುಗಡೆಯಾದ ಹಣ ₹299 ಕೋಟಿ
ವಿಧಾನಸಭಾ ಕ್ಷೇತ್ರಗಳು 224 ಶಾಸಕರು
ವಿಧಾನ ಪರಿಷತ್ ಸದಸ್ಯರು 75 ಸದಸ್ಯರು
ಪ್ರತಿ ಸದಸ್ಯರಿಗೆ ಸಿಗುವ ಹಣ ₹1.00 ಕೋಟಿ
(3 & 4ನೇ ಕಂತು)
ಬಜೆಟ್‌ನಲ್ಲಿ ಮೀಸಲಿಟ್ಟ ಒಟ್ಟು ಹಣ ₹60,225.17 ಲಕ್ಷ

ಗಮನಿಸಿ: ಈ ಹಣವನ್ನು ಕೇವಲ ಆಯಾ ಕ್ಷೇತ್ರದ ಶಾಸಕರು ಸೂಚಿಸುವ ಅಭಿವೃದ್ಧಿ ಕಾಮಗಾರಿಗಳಿಗೆ (ರಸ್ತೆ, ಶಾಲೆ, ಆಸ್ಪತ್ರೆ ದುರಸ್ತಿ ಇತ್ಯಾದಿ) ಮಾತ್ರ ಬಳಸಲು ಅವಕಾಶವಿರುತ್ತದೆ.

ನಮ್ಮ ಸಲಹೆ

ನಿಮ್ಮ ಏರಿಯಾದಲ್ಲಿ ರಸ್ತೆ ಲೈಟ್, ಚರಂಡಿ ಅಥವಾ ಕುಡಿಯುವ ನೀರಿನ ಸಮಸ್ಯೆ ಇದ್ದರೆ ತಕ್ಷಣ ನಿಮ್ಮ ಶಾಸಕರ ಕಚೇರಿಗೆ ಹೋಗಿ ಲಿಖಿತ ಮನವಿ ನೀಡಿ. ಏಕೆಂದರೆ ಸರ್ಕಾರ ಈಗಷ್ಟೇ ಹಣ ಬಿಡುಗಡೆ ಮಾಡಿರುವುದರಿಂದ, ಶಾಸಕರು ಹೊಸ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸುತ್ತಿರುತ್ತಾರೆ. ಈ ಸಮಯದಲ್ಲಿ ಮನವಿ ನೀಡಿದರೆ ನಿಮ್ಮ ಕೆಲಸ ಬೇಗ ಆಗುವ ಸಾಧ್ಯತೆ ಹೆಚ್ಚು!

ಸಾಮಾನ್ಯ ಪ್ರಶ್ನೆಗಳು (FAQs)

ಪ್ರಶ್ನೆ 1: ಈ ಹಣವನ್ನು ಶಾಸಕರು ಯಾವುದಕ್ಕೆ ಬಳಸಬಹುದು?

ಉತ್ತರ: ಈ ಹಣವನ್ನು ಶಾಸಕರು ತಮ್ಮ ಕ್ಷೇತ್ರದ ಶಾಲೆಗಳ ಅಭಿವೃದ್ಧಿ, ಕುಡಿಯುವ ನೀರು, ಸಣ್ಣ ರಸ್ತೆಗಳು, ಸಮುದಾಯ ಭವನ ಮತ್ತು ಸಾರ್ವಜನಿಕ ಆಸ್ಪತ್ರೆಗಳ ಸೌಲಭ್ಯಕ್ಕಾಗಿ ಮಾತ್ರ ಬಳಸಬೇಕು.

ಪ್ರಶ್ನೆ 2: ನಮ್ಮ ಕ್ಷೇತ್ರದಲ್ಲಿ ಕೆಲಸವಾಗದಿದ್ದರೆ ಯಾರನ್ನು ಕೇಳಬೇಕು?

ಉತ್ತರ: ಶಾಸಕರ ಅನುದಾನದಡಿ ನಡೆಯುವ ಕೆಲಸಗಳ ಉಸ್ತುವಾರಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ (DC) ಬಳಿ ಇರುತ್ತದೆ. ಮಾಹಿತಿ ಹಕ್ಕು ಕಾಯ್ದೆಯಡಿ ನಿಮ್ಮ ಶಾಸಕರು ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬ ವಿವರವನ್ನೂ ನೀವು ಪಡೆಯಬಹುದು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories