KSCCF recruitment 2026 scaled

KSCCF ನೇಮಕಾತಿ 2026: ದ್ವಿತೀಯ ಪಿಯುಸಿ, ಡಿಗ್ರಿ ಆದವರಿಗೆ ಬೆಂಗಳೂರಲ್ಲಿ ಕೆಲಸ! ₹52,000 ವರೆಗೆ ಸಂಬಳ; ಇಂದೇ ಅರ್ಜಿ ಹಾಕಿ.

Categories:
WhatsApp Group Telegram Group

ಉದ್ಯೋಗದ ಹೈಲೈಟ್ಸ್

  • ಹುದ್ದೆಗಳು: FDA (ಕ್ಲರ್ಕ್), ಸೇಲ್ಸ್ ಅಸಿಸ್ಟೆಂಟ್, ಫಾರ್ಮಸಿಸ್ಟ್.
  • ವಿದ್ಯಾರ್ಹತೆ: 12th (PUC), ಡಿಪ್ಲೊಮಾ, ಪದವಿ (Degree).
  • ಸ್ಥಳ: ಬೆಂಗಳೂರು (ಕರ್ನಾಟಕ).
  • ಕೊನೆಯ ದಿನಾಂಕ: 07-ಫೆಬ್ರವರಿ-2026.

ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಅಥವಾ ಸಹಕಾರಿ ವಲಯದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬ ಕನಸು ನಿಮಗಿದೆಯಾ? ಹಾಗಿದ್ದರೆ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (KSCCF) ನಿಮಗೊಂದು ಸುವರ್ಣಾವಕಾಶ ನೀಡಿದೆ. ಖಾಲಿ ಇರುವ ಕ್ಲರ್ಕ್, ಸೇಲ್ಸ್ ಅಸಿಸ್ಟೆಂಟ್ ಮತ್ತು ಫಾರ್ಮಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆ ಮತ್ತು ಸಂಬಳದ ವಿವರ (Vacancy & Salary)

ಒಟ್ಟು 34 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಹುದ್ದೆಗೆ ಅನುಗುಣವಾಗಿ ಸಂಬಳ ನಿಗದಿಪಡಿಸಲಾಗಿದೆ.

ಹುದ್ದೆಯ ಹೆಸರುಸಂಖ್ಯೆವಿದ್ಯಾರ್ಹತೆಸಂಬಳ (ತಿಂಗಳಿಗೆ)
ಫಾರ್ಮಸಿಸ್ಟ್ (Pharmacist)07Diploma in Pharmacy₹25,800 – ₹52,650
ಪ್ರಥಮ ದರ್ಜೆ ಸಹಾಯಕರು (FDA/Clerk)10ಯಾವುದೇ ಪದವಿ (Degree)₹21,400 – ₹45,300
ಸೇಲ್ಸ್ ಅಸಿಸ್ಟೆಂಟ್ (Sales Assistant)17ದ್ವಿತೀಯ ಪಿಯುಸಿ (12th)₹19,950 – ₹37,900

ವಯಸ್ಸಿನ ಮಿತಿ (Age Limit)

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ ವಿವರ ಇಲ್ಲಿದೆ (ದಿನಾಂಕ 07-02-2026 ಕ್ಕೆ ಅನ್ವಯವಾಗುವಂತೆ):

  • ಸಾಮಾನ್ಯ ವರ್ಗ (GM): 35 ವರ್ಷ.
  • 2A/2B/3A/3B ಅಭ್ಯರ್ಥಿಗಳು: 38 ವರ್ಷ (3 ವರ್ಷ ಸಡಿಲಿಕೆ).
  • SC/ST/Cat-1 ಅಭ್ಯರ್ಥಿಗಳು: 40 ವರ್ಷ (5 ವರ್ಷ ಸಡಿಲಿಕೆ).
ksccf jobs 2026
KSCCF ನೇಮಕಾತಿ 2026

ಅರ್ಜಿ ಶುಲ್ಕ (Application Fee)

  • SC/ST/Cat-I/PWD ಅಭ್ಯರ್ಥಿಗಳಿಗೆ: ₹500/-
  • ಸಾಮಾನ್ಯ ಮತ್ತು ಇತರೇ ಅಭ್ಯರ್ಥಿಗಳಿಗೆ: ₹1,000/-
  • ಪಾವತಿ ವಿಧಾನ: ಆನ್‌ಲೈನ್ ಮೂಲಕ ಮಾತ್ರ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Written Test) ಮತ್ತು ಸಂದರ್ಶನದ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ. ಮೆರಿಟ್ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

📅 Important Dates (ಪ್ರಮುಖ ದಿನಾಂಕಗಳು)

ಅರ್ಜಿ ಸಲ್ಲಿಕೆ ಆರಂಭ Start Date
✅ 09-01-2026
ಅರ್ಜಿ ಸಲ್ಲಿಸಲು ಕೊನೆಯ ದಿನ Last Date to Apply
⏳ 07-Feb-2026
ಪರೀಕ್ಷಾ ದಿನಾಂಕ Exam Date Update Soon…
⚠️ Don’t wait for the last date. Apply early!

How to Apply? (ಅರ್ಜಿ ಸಲ್ಲಿಸುವುದು ಹೇಗೆ?)

  1. KSCCF ನ ಅಧಿಕೃತ ವೆಬ್‌ಸೈಟ್ (ksccsf.org) ಗೆ ಭೇಟಿ ನೀಡಿ.
  2. “Recruitment 2026” ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ನೀಡಿ ರಿಜಿಸ್ಟರ್ ಆಗಿ.
  4. ಅಗತ್ಯ ದಾಖಲೆಗಳು (SSLC/PUC ಅಂಕಪಟ್ಟಿ, ಫೋಟೋ, ಸಹಿ) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  5. ನಿಗದಿತ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಸಬ್ಮಿಟ್ ಮಾಡಿ.
  6. ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳುವುದನ್ನು ಮರೆಯಬೇಡಿ.

ಗಮನಿಸಿ: ಇದು ಬೆಂಗಳೂರಿನಲ್ಲಿ ಇರುವ ಕೆಲಸವಾಗಿದೆ. ಸೇಲ್ಸ್ ಅಸಿಸ್ಟೆಂಟ್ ಹುದ್ದೆಗೆ ಕೇವಲ ಪಿಯುಸಿ ಪಾಸ್ ಆಗಿದ್ದರೆ ಸಾಕು. ಡಿಗ್ರಿ ಮುಗಿಸಿದವರು FDA ಹುದ್ದೆಗೆ ಟ್ರೈ ಮಾಡಬಹುದು. ಕೊನೆಯ ದಿನಾಂಕದವರೆಗೂ ಕಾಯಬೇಡಿ, ಸರ್ವರ್ ಬ್ಯುಸಿ ಆಗುವ ಮುನ್ನವೇ ಅರ್ಜಿ ಹಾಕಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories